Birthday : ರಾಕ್ಷಸನ ಹುಟ್ಟು ಹಬ್ಬಕ್ಕೆ 10 ಕೆಜಿ ಕೇಕ್:  ಅಭಿಮಾನಿಗಳಿಂದ ರಕ್ತದಾನ..! -ಯಾರಿದು ರಾಕ್ಷಸ ? ಈ ಸ್ಟೋರಿ ಓದಿ

Bull Birthday: ಇನ್ನು ಈ ಹೋರಿಯ ಮತ್ತೊಂದು ವಿಶೇಷ ಅಂದ್ರೆ  ಅಖಾಡದ ಹೊರಗೆ ಇದ್ದಾಗ ಎಂಥಾ ಸಣ್ಣಪುಟ್ಟ ಮಕ್ಕಳು ಮುಟ್ಟಿದ್ರೂ ಯಾರಿಗೂ ಏನೂ ಮಾಡೋದಿಲ್ಲ. ಧೂಳೆಬ್ಬಿಸಿಕೊಂಡು ಅಖಾಡಕ್ಕೆ ಇಳಿದ್ರೆ ಮಾತ್ರ ಯಾರನ್ನೂ ಮುಟ್ಟಿಸಿಕೊಳ್ಳೋದಿಲ್ವಂತೆ. ಅಕ್ಷರಶಃ ರಾಕ್ಷಸನ ಅವತಾರ ತಾಳಿಬಿಡುತ್ತಂತೆ.

ಹೋರಿ ಜನ್ಮದಿನ ಹಿನ್ನೆಲೆ ರಕ್ತದಾನ ಮಾಡಿದ ಅಭಿಮಾನಿಗಳು

ಹೋರಿ ಜನ್ಮದಿನ ಹಿನ್ನೆಲೆ ರಕ್ತದಾನ ಮಾಡಿದ ಅಭಿಮಾನಿಗಳು

 • Share this:
  ಹಾವೇರಿ(Haveri) ಜಿಲ್ಲೆಯಲ್ಲಿ ರಾಕ್ಷಸನ  ಬರ್ತ್ ಡೇ (Birthday)ಯನ್ನ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲಾಗಿದೆ. ಬರೋಬ್ಬರಿ ಹತ್ತು ಕೆ.ಜಿ ತೂಕದ ಕೇಕ್  ಕತ್ತರಿಸಿ, ಪಟಾಕಿ ಸಿಡಿಸಿ ಬರ್ತ್ ಡೇ ಸೆಲೆಬ್ರೇಟ್ ಮಾಡಲಾಗಿದೆ.  ರಾಕ್ಷಸನ ಹುಟ್ಟು ಹಬ್ಬಕ್ಕೆ ಅಂತ ಬೇರೆ ಬೇರೆ ಊರುಗಳಿಂದ ಅಭಿಮಾನಿಗಳು ಕೇಕ್‌  ತಿನ್ನಿಸಿ ಖುಷಿ ಪಟ್ಟರು. ಅರೇ ಏನಪ್ಪಾ ರಾಕ್ಷಸನ ಬರ್ತ್​ ಡೇ ಆಚರಣೆ ಮಾಡ್ತಾರಾ ಎಂದು ಯೋಚನೆ ಮಾಡ್ತಿದ್ರೆ , ಈ ಸ್ಟೋರಿ ಓದಿ

  ಹಾವೇರಿ ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ರಾಕ್ಷಸ ಎನ್ನೋ ಹೆಸರಿನ ಹೋರಿ ಇದೆ. ರಾಕ್ಷಸ ಹೆಸರಿನ ಈ ಹೋರಿಗೆ ಅಪಾರವಾದ ಅಭಿಮಾನಿಗಳ ಬಳಗ ಇದೆ.  ಕಳೆದ‌ ಆರು ವರ್ಷಗಳ ಹಿಂದೆ ಗ್ರಾಮದ ಕೆಲವು ಹೋರಿ ಅಭಿಮಾನಿಗಳು, ತಮಿಳುನಾಡಿನಿಂದ ಹೋರಿಯನ್ನ ಖರೀದಿಸಿ ತಂದಿದ್ದಾರೆ.  ಹೋರಿಗೆ ಕೊಬ್ಬರಿ ಕಟ್ಟಿ, ಅಲಂಕಾರ ಮಾಡಿ  ಕೊಬ್ಬರಿ ಹೋರಿ ಬೆದರಿಸೋ ಸ್ಪರ್ಧೆಗಳಿಗೆ ತಯಾರು ಮಾಡುತ್ತಿದ್ದರಂತೆ. ಅಂದಿನಿಂದ ಈ ಹೋರಿ ಕಾಲಿಟ್ಟ ಅಖಾಡಗಳಲ್ಲೆಲ್ಲ‌ ಧೂಳೆಬ್ಬಿಸಿಕೊಂಡು ಓಡಿ ಪ್ರಶಸ್ತಿಗಳನ್ನ ಪಡೆದುಕೊಂಡೆ ಬರ್ತಿದೆ.

  ಆರು ವರ್ಷಗಳ ಹಿಂದೆ ಅಕ್ಟೋಬರ್ 6ರಂದು ಈ ಹೋರಿಯನ್ನ ಗ್ರಾಮಕ್ಕೆ ತಂದಿದ್ರಿಂದ  ಪ್ರತೀ ವರ್ಷ ಹೋರಿಯ ಬರ್ತ್ ಡೇ ಆಚರಿಸಲಾಗುತ್ತೆ. ಈ ಬಾರಿ  ಹತ್ತು ಕೆ.ಜಿ ತೂಕದ ಕೇಕ್ ಮಾಡಿಸಿ, ಕೇಕ್‌ ಕತ್ತರಿಸಿ ಹೋರಿಗೆ ಕೇಕ್‌ ತಿನ್ನಿಸಿ ಅಭಿಮಾನಿಗಳು ರಾಕ್ಷಸ ಹೋರಿಯ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.

  ಇದನ್ನೂ ಓದಿ: ಒಂದು ಕಾಲದ ವಿಲನ್ ಈಗ ದಸರಾ ಹೀರೋ..ಅಶ್ವತ್ಥಾಮನ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳು ಇಲ್ಲಿವೆ

  ಇನ್ನು ಈ ಹೋರಿಯ ಮತ್ತೊಂದು ವಿಶೇಷ ಅಂದ್ರೆ  ಅಖಾಡದ ಹೊರಗೆ ಇದ್ದಾಗ ಎಂಥಾ ಸಣ್ಣಪುಟ್ಟ ಮಕ್ಕಳು ಮುಟ್ಟಿದ್ರೂ ಯಾರಿಗೂ ಏನೂ ಮಾಡೋದಿಲ್ಲ. ಧೂಳೆಬ್ಬಿಸಿಕೊಂಡು ಅಖಾಡಕ್ಕೆ ಇಳಿದ್ರೆ ಮಾತ್ರ ಯಾರನ್ನೂ ಮುಟ್ಟಿಸಿಕೊಳ್ಳೋದಿಲ್ವಂತೆ. ಅಕ್ಷರಶಃ ರಾಕ್ಷಸನ ಅವತಾರ ತಾಳಿಬಿಡುತ್ತಂತೆ. ಹೀಗಾಗಿ ಈ ಹೋರಿಗೆ ಅಭಿಮಾನಿಗಳು ರಾಕ್ಷಸ ಅನ್ನೋ ಹೆಸರು ಕೊಟ್ಟಿದ್ದಾರಂತೆ. ರಾಕ್ಷಸ ಹೆಸರಿನ ಜೊತೆಗೆ ಅಭಿಮಾನಿಗಳ ಜೀವ ಸೇರಿದಂತೆ ಹೋರಿಗೆ ಅನೇಕ ಹೆಸರುಗಳಿವೆ. ರಾಕ್ಷಸ ಹೆಸರಿನ ಹೋರಿಯ ಮೂಲಕ ಗ್ರಾಮದ ಹೆಸರು ರಾಜ್ಯದಲ್ಲಿ ಫೇಮಸ್ ಆಗಿದೆಯಂತೆ. ಹೀಗಾಗಿ ಹೋರಿ ತಂದಾಗಿನಿಂದ ಪ್ರತಿವರ್ಷ ಹೋರಿಗೆ ಬರ್ತ್ ಡೇ ಮಾಡಲಾಗ್ತಿದೆ. ಆದ್ರೆ, ಈ ಬಾರಿ ರಾಕ್ಷಸನ ಬರ್ತ್ ಡೇ ಜೊತೆ ಜೊತೆಗೆ ಜನರ ಜೀವ ಉಳಿಸೋ ಮಹತ್ವದ ಕೆಲಸಕ್ಕೂ ಹೋರಿ ಅಭಿಮಾನಿಗಳು ಕೈ ಹಾಕಿದ್ದಾರೆ. ಜಿಲ್ಲಾ ರಕ್ತನಿಧಿಗೆ ರಾಕ್ಷಸನ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಮಾಡ್ತಿದ್ದಾರೆ.

  ಹುಟ್ಟುಹಬ್ಬಕ್ಕೆ ಬಂದ ಹೋರಿ ಅಭಿಮಾನಿಗಳಲ್ಲಿ ನಲವತ್ತು ಜನರು ರಕ್ತದಾನ ಮಾಡಿದ್ದಾರೆ. ರಾಕ್ಷಸನ ಬರ್ತ್ ಡೇ ಗೆ ಬಂದ ಅಭಿಮಾನಿಗಳಿಗೆ ಬೂಂದಿ, ಬದನೆಕಾಯಿ ಪಲ್ಯ, ಅನ್ನ ಸಾಂಬಾರು ಊಟದ ವ್ಯವಸ್ಥೆ ಮಾಡಲಾಗಿದೆ. ಹೋರಿ ಹುಟ್ಟುಹಬ್ಬಕ್ಕೆ ಬೇರೆ ಬೇರೆ ಊರುಗಳಿಂದ ಬಂದ ಅಭಿಮಾನಿಗಳು ತಾವೂ ಸಹಿತ ಒಂದು, ಎರಡು ಕೆ.ಜಿ ತೂಕದ ಕೇಕ್ ಗಳನ್ನ ಮಾಡಿಸಿಕೊಂಡು ಬಂದು ಕೇಕ್ ಕತ್ತರಿಸಿ ರಾಕ್ಷಸನ ಜೊತೆ ಫೋಟೋ ತೆಗೆಸಿಕೊಂಡು ಬರ್ತ್ ಡೇ ಸಂಭ್ರಮಿಸಿದ್ದಾರೆ.

  ಇದನ್ನೂ ಓದಿ: ನಬಾರ್ಡ್ ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ: ಬೊಮ್ಮಾಯಿ

  ಸಾಮಾನ್ಯವಾಗಿ ಮನುಷ್ಯರಿಗೆ ಬರ್ತ್ ಡೇ ಸೆಲೆಬ್ರೇಟ್ ಮಾಡೋದನ್ನ ನಾವೆಲ್ಲ ನೋಡಿದ್ದೇವೆ. ಆದ್ರೆ ತಮ್ಮ ನೆಚ್ಚಿನ ಹೋರಿಗೆ  ಅಭಿಮಾನಿಗಳು ಭರ್ಜರಿಯಾಗಿ ಬರ್ತ್ ಡೇ ಆಚರಿಸಿದ್ದಾರೆ. ಹೋರಿ ಬರ್ತ್ ಡೇ ಜೊತೆಗೆ ಹೋರಿಯ ಅಭಿಮಾನಿಗಳು ರಕ್ತದಾನ ಮಾಡಿ ಸಾಮಾಜಿಕ‌ ಕಳಕಳಿ ಮೆರೆದಿದ್ದಾರೆ.

  (ವರದಿ: ಮಂಜುನಾಥ್ ತಳವಾರ )
  Published by:Sandhya M
  First published: