HOME » NEWS » District » HAVERI FARMERS LOST THEIR CORN CROP AFTER HEAVY RAIN IN HAVERI SCT

Haveri: ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹಾವೇರಿ ರೈತರು ಕಂಗಾಲು; ಅಷ್ಟಕ್ಕೂ ಆಗಿದ್ದೇನು?

Haveri Farmers Problem: ಹಾವೇರಿ ಜಿಲ್ಲೆಯ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬೆಳೆಯನ್ನಾಗಿ ಜೋಳ ಬೆಳೆದಿದ್ದರು. ಆದರೆ ಕಳೆದ ತಿಂಗಳು ಅಕಾಲಿಕವಾಗಿ ಬಿದ್ದ ಮಳೆ ಜಮೀನಿನಲ್ಲಿ ಬೆಳೆದಿರೋ ಜೋಳವನ್ನ ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡಿದೆ.

news18-kannada
Updated:April 6, 2021, 7:45 AM IST
Haveri: ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹಾವೇರಿ ರೈತರು ಕಂಗಾಲು; ಅಷ್ಟಕ್ಕೂ ಆಗಿದ್ದೇನು?
ಮಳೆಯಿಂದ ಕಪ್ಪಾದ ಜೋಳದೊಂದಿಗೆ ಹಾವೇರಿ ರೈತ
  • Share this:
ಹಾವೇರಿ (ಏ. 6): ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾಗಿ ಶೇಂಗಾ, ಹತ್ತಿ, ಮೆಕ್ಕೆ ಜೋಳ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಇನ್ನು ಹಿಂಗಾರು ಬೆಳೆಯಾಗಿ ಬಹುತೇಕ ರೈತರು ಜೋಳವನ್ನು ಬೆಳೆಯುತ್ತಾರೆ. ಯಾಕೆಂದರೆ ರೈತರಿಗೆ ಜೋಳ ವರ್ಷವಿಡಿ ರೊಟ್ಟಿ ಊಟ ನೀಡಿದರೆ ಜೋಳದ ದಂಟು ವರ್ಷಪೂರ್ತಿ ರೈತರ ಮನೆಗಳಲ್ಲಿನ ಜಾನುವಾರುಗಳಿಗೆ ಆಹಾರವಾಗುತ್ತದೆ. ಹೀಗಾಗಿ, ಹಾವೇರಿ ಜಿಲ್ಲೆಯ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬೆಳೆಯನ್ನಾಗಿ ಜೋಳ ಬೆಳೆದಿದ್ದರು. ರೈತರ ನಿರೀಕ್ಷೆಯಂತೆ ಜೋಳ ಬಿತ್ತನೆ ಮಾಡಿದ ನಂತರದಿಂದ ಭರ್ಜರಿಯಾಗಿ ಬೆಳೆದಿದೆ. ಆದರೆ ಕಳೆದ ತಿಂಗಳು ಅಕಾಲಿಕವಾಗಿ ಬಿದ್ದ ಮಳೆ ಜಮೀನಿನಲ್ಲಿ ಬೆಳೆದಿರೋ ಜೋಳವನ್ನ ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡಿದೆ. ಬಿಳಿ ಬಣ್ಣದ ಬದಲಾಗಿ ಕಪ್ಪು ಬಣ್ಣಕ್ಕೆ ತಿರುಗಿರೋ ಜೋಳ‌ ತಿನ್ನಲೂ ಬಾರದಂತಹ ಪರಿಸ್ಥಿತಿಗೆ ಬಂದಿದೆ. ಇದು ವರ್ಷವಿಡೀ ಜೋಳದ ರೊಟ್ಟಿ ತಿನ್ನುತ್ತಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆ.

ಹಾವೇರಿ ಜಿಲ್ಲೆಯಲ್ಲಿ ರೈತರು ಹಿಂಗಾರಿನ ಬೆಳೆಯಾಗಿ ಬೆಳೆಯುತ್ತಿದ್ದ ಜೋಳ ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲ ಅವರವರ ಸಂಬಂಧಿಕರ ಕುಟುಂಬಗಳಿಗೂ ವರ್ಷವಿಡೀ ಜೋಳದ ರೊಟ್ಟಿ ಊಟಕ್ಕೆ ದೊರೆಯುತ್ತಿದ್ದವು. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬೆಳೆದ ರೈತರು ಮಾರ್ಕೆಟ್ನಲ್ಲಿ ಜೋಳ ಮಾರಾಟ ಸಹ ಮಾಡುತ್ತಿದ್ದರು. ಆದರೆ ಜೋಳ ಮಾತ್ರ ಬಿಳಿ ಬಣ್ಣದ ಬದಲು ಕಪ್ಪು ಬಣ್ಣಕ್ಕೆ ತಿರುಗಿದ್ದು, ರೈತರ ಮೊಗದಲ್ಲಿ ಅಸಮಾಧಾನ ಮೂಡಿಸಿದೆ. ಇನ್ನೂ ಜೋಳದ ತೆನೆಗಳು ಕಪ್ಪು ಬಣ್ಣಕ್ಕೆ ತಿರುಗಿದರೆ, ಜೋಳದ ದಂಟು ಅಕಾಲಿಕ‌ ಮಳೆಯಿಂದ ಕೊಂಚ ಪ್ರಮಾಣದಲ್ಲಿ ಹಾಳಾಗಿದೆ. ಹೀಗಾಗಿ ಹಿಂಗಾರಿನ ಬೆಳೆಯಾಗಿ ಬೆಳೆದ ಜೋಳ ರೈತರಿಗೆ ಆಹಾರವಾಗೋ ಬದಲು ಕಪ್ಪು ಬಣ್ಣಕ್ಕೆ ತಿರುಗಿ ತಿನ್ನಲು ಬಾರದಂತಾಗಿವೆ. ಮತ್ತೊಂದೆಡೆ ಮಾರ್ಕೆಟ್​ನಲ್ಲಿ ಜೋಳದ ಬೆಲೆ ಕ್ವಿಂಟಾಲ್‌ಗೆ ಎರಡರಿಂದ ಮೂರು ಸಾವಿರ ರೂ. ಇದೆ. ಹೀಗಾಗಿ ಜೋಳ‌ ಬೆಳೆದು ಅಕಾಲಿಕ‌ ಮಳೆಯಿಂದ ಹಾನಿಗೆ ಒಳಗಾದ ರೈತರಿಗೆ ಸರಕಾರ ಸೂಕ್ತ‌ ಪರಿಹಾರ ನೀಡಬೇಕು ಅಂತ ಜೋಳ ಬೆಳೆದ ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಆನೇಕಲ್: ಸ್ಕೈವಾಕ್-ಸಬ್ ವೇ ಬಳಕೆಗೆ ನಿರ್ಲಕ್ಷ್ಯ, ಪಾದಚಾರಿಗಳಿಂದಲೇ ಅಪಘಾತಕ್ಕೆ ಆಹ್ವಾನ

ಉತ್ತರ ಕರ್ನಾಟಕ ಭಾಗದ ರೈತರ ಪ್ರಮುಖ ಆಹಾರವೇ ಜೋಳದ ರೊಟ್ಟಿಯ ಊಟ. ಅದರಲ್ಲೂ ಹಾವೇರಿ ಜಿಲ್ಲೆಯ ಜನರು ವರ್ಷವಿಡೀ ಊಟ ಮಾಡಲೆಂದೇ ಹಿಂಗಾರಿನ ಬೆಳೆಯಾಗಿ ಜೋಳವನ್ನ ಬೆಳೆಯುತ್ತಾರೆ. ಅದರಂತೆ ಬೆಳೆದಿದ್ದ ಜೋಳ ಅಕಾಲಿಕ ಮಳೆಯಿಂದ‌ ಕಪ್ಪು ಬಣ್ಣಕ್ಕೆ ತಿರುಗಿದ್ದು, ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೆ ಸರಕಾರ ಜೋಳ ಬೆಳೆದು ಹಾನಿಗೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂಬುದು ಹಾವೇರಿ ಜಿಲ್ಲೆಯ ಜೋಳ ಬೆಳೆದ ರೈತರ ಮಾತಾಗಿದೆ.
Youtube Video

ಒಟ್ಟಿನಲ್ಲಿ ಕಳೆದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಸುರಿದ ಅಕಾಲಿಕ ಮಳೆ ಅವಾಂತರ ಸೃಷ್ಟಿಸಿದೆ. ಹಾವೇರಿ ಜಿಲ್ಲೆಯಲ್ಲಿ ರೈತರು ಬೆಳದ ಬೆಳೆದ ಅಲ್ಪ ಸ್ವಲ್ಪ ಜೋಳದ ಬೆಳೆ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

(ವರದಿ: ಮಂಜುನಾಥ್ ತಳವಾರ)
Published by: Sushma Chakre
First published: April 6, 2021, 7:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories