ಹಾವೇರಿ; ದೇಶ–ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಹಾವೇರಿಯ ಏಲಕ್ಕಿ ಮಾಲೆ, ಈ ಬಾರಿ ಪುಟ್ಟಪರ್ತಿಯಲ್ಲೂ ಕಂಪು ಬೀರಲಿದೆ. ನ. 23ರಂದು ಆಂಧ್ರಪ್ರದೇಶದಲ್ಲಿ ನಡೆಯಲಿರುವ ಸತ್ಯಸಾಯಿ ಬಾಬಾ ಅವರ 95ನೇ ಜಯಂತಿ ಕಾರ್ಯಕ್ರಮಕ್ಕೆ ಹಾವೇರಿಯಿಂದ ಏಲಕ್ಕಿ ಮಾಲೆಗಳನ್ನು ನೀಡಲಿದ್ದೇವೆ ಎಂದು ಸತ್ಯಸಾಯಿ ಸಮಿತಿಯ ಸದಸ್ಯ ಬಾಬಣ್ಣ ಕೋರಿ ತಿಳಿಸಿದ್ದಾರೆ.
ಸಮಿತಿಯಿಂದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ 12 ಅಡಿ ಅಗಲ ಮತ್ತು 6 ಅಡಿ ಎತ್ತರದ ಬೃಹತ್ ಏಲಕ್ಕಿ ಹಾರಗಳನ್ನು ತಯಾರಿಸಲಾಗುತ್ತಿದೆ. ಸಮಿತಿಯಿಂದ ಹಾರಗಳಿಗೆ ತಗುಲುವ ಖರ್ಚನ್ನು ಮಾತ್ರ ಭರಿಸಲಾಗಿದೆ. ನಗರದ ಸಿದ್ದೇದೇವಪುರದ ಏಲಕ್ಕಿ ಮಾಲೆ ತಯಾರಕ ಸಂಜೀವಯ್ಯ ಅಂದಾನಿಮಠ ಅವರು ಯಾವುದೇ ಕೂಲಿ ಪಡೆಯದೆ ಉಚಿತವಾಗಿ ಮಾಲೆಗಳನ್ನು ತಯಾರಿಸಿಕೊಡಲು ಸ್ವಪ್ರೇರಣೆಯಿಂದ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ತಮಿಳುನಾಡು ರಾಜಕೀಯಕ್ಕೆ ಸ್ಟಾರ್ ನಟ ವಿಜಯ್?; ಈ ಬಗ್ಗೆ ದಳಪತಿ ಹೇಳುವುದೇನು?
ಈ ಬಾರಿ ಸತ್ಯಸಾಯಿ ಬಾಬಾ ಅವರ ಸಮಾಧಿಗೆ ಏಲಕ್ಕಿ ಹಾರಗಳನ್ನು ಸಮರ್ಪಿಸಲು ಸಮಿತಿಗೆ ಅವಕಾಶ ಸಿಕ್ಕಿರುವುದು ಹಾಗೂ ಭಕ್ತರ ಸಹಕಾರ ದೊರೆತಿರುವುದು ಎಲ್ಲವೂ ಬಾಬಾನ ಕೃಪೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ