Haveri : ಕಾಲಿಗೆ ಕಟ್ಟಿಗೆಯ ಗೂಟ ಹೊಡೆದುಕೊಂಡು ಸರಪಳಿ ಹರಿದುಕೊಂಡರು: ಈ ಆಚರಣೆ ನೋಡಿದ್ರೆ  ಮೈಜುಮ್ ಅನ್ನುತ್ತೆ ..!

ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಪ್ರತಿವರ್ಷ ಈ ಪವಾಡಗಳು ನಡೆಯುತ್ತವೆ. ಸುಮಾರು ವರ್ಷಗಳಿಂದ ಮಾಲತೇಶನ ಕೃಪೆಯಿಂದ ಈ ಪವಾಡಗಳು ನಡೆದುಕೊಂಡು ಬಂದಿವೆ. ದಸರಾಹಬ್ಬದ ಸಮಯದಲ್ಲಿ ದೇವರಗುಡ್ಡಕ್ಕೆ ಬರೋ ಭಕ್ತರ ದಂಡು ಆಯುಧ ಪೂಜೆ ದಿನ ನಡೆಯೋ ಕಾರ್ಣಿಕ ವಾಣಿ ಆಲಿಸ್ತಾರೆ.

ಪೂಜೆಯಲ್ಲಿ ತೊಡಗಿರುವ ಭಕ್ತಾದಿಗಳು

ಪೂಜೆಯಲ್ಲಿ ತೊಡಗಿರುವ ಭಕ್ತಾದಿಗಳು

 • Share this:
  ಅಲ್ಲಿ ನಡೆಯೋ ಪವಾಡಗಳನ್ನ ನೋಡಿದ್ರೆ ಮೈ ರೋಮಾಂಚನಗೊಳ್ಳುತ್ತೆ. ಕಾಲಲ್ಲಿ ಕಟ್ಟಿಗೆಯ ಗೂಟ‌ ಬಡಿದುಕೊಳ್ಳೋದು, ಕಾಲಲ್ಲಿ ಹೋಲು ಮಾಡಿದ ನಂತರ ಅದರಲ್ಲಿ ಮಿನಿ ತೆಗೆಯೋದು, ಮುಳ್ಳಿನ ಕಟ್ಟಿಗೆ ದಾಟಿಸೋದು, ಸರಪಳಿ ಹರಿಯೋದು ಹೀಗೆ ಅಲ್ಲಿನ ಪವಾಡಗಳು(Miracle) ನೋಡುಗರನ್ನ ಆಶ್ಚರ್ಯಚಕಿತರನ್ನಾಗಿಸುತ್ತವೆ. ಕಾಲು, ಕೈಯಲ್ಲಿ ರಕ್ತ ಬಂದ್ರೂ ಮಾಲತೇಶನ(Malatesha God) ಭಂಡಾರ ಹಚ್ಚಿದ್ರೆ ಮುಗೀತು ಯಾವುದೇ‌ ನೋವು ಆಗೋದಿಲ್ಲ, ಎಲ್ಲವೂ ಮಾಲತೇಶನ ಮಹಿಮೆ ಎನ್ನುತ್ತಾರೆ ಸ್ಥಳೀಯರು.

  ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಪ್ರತಿವರ್ಷ ವಿಜಯದಶಮಿಯ ಬನ್ನಿ ಮುಡಿಯೋ ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನದ ಆವರಣದಲ್ಲಿ ಮಾಲತೇಶನ ಪವಾಡಗಳು ನಡೆಯುತ್ತವೆ. ಕಂಚಾವೀರರ ಮನೆತನದವರು ಈ ಪವಾಡಗಳನ್ನ ಮಾಡುತ್ತಾರೆ. ಶಸ್ತ್ರ ಪವಾಡ, ಕನ್ನೆ ಪವಾಡ, ಗೂಟದ ಪವಾಡ, ಮುಳ್ಳಿನ ಪವಾಡ, ಸರಪಳಿ ಹೀಗೆ ವಿವಿಧ ಪವಾಡಗಳು‌ ನಡೆಯುತ್ತವೆ. ಸುಮಾರು ವರ್ಷಗಳ ಹಿಂದೆ ಪೂರ್ವಜರು ಇಲ್ಲಿ ಶಿರವನ್ನ ಕಡಿದು ಪವಾಡ ಮಾಡುತ್ತಿದ್ದರಂತೆ. ನಂತರದಲ್ಲಿ ಮೈಲಾರಲಿಂಗೇಶ್ವರನ ದಿವ್ಯದೃಷ್ಟಿಯಿಂದ ಶಸ್ತ್ರ ಪವಾಡ, ಗೂಟದ ಪವಾಡ, ಸರಪಳಿ ಪವಾಡದಂಥಾಹ ಈ ಪವಾಡಗಳು ನಡೆಯುತ್ತಿವೆ.

  ಪ್ರತಿವರ್ಷ ನಡೆಯುತ್ತದೆ ಈ ಪವಾಡ 

  ಪ್ರತಿವರ್ಷ ವಿಜಯದಶಮಿಯ ಬನ್ನಿ ಮುಡಿಯೋ ದಿನ ಸಂಜೆ ಈ ಪವಾಡಗಳು ನಡೆಯುತ್ತವೆ. ಕಾಲಲ್ಲಿ ಗೂಟ ಹೊಡೆದುಕೊಳ್ಳೋವಾಗ, ಸರಪಳಿ ಹರಿಯೋವಾಗ ಕಾಲು ಮತ್ತು ಕೈಯಲ್ಲಿ ರಕ್ತ ಬರುತ್ತದೆ. ಆದ್ರೆ ಇದ್ರಿಂದ ಯಾವುದೇ ನೋವು ಇರೋದಿಲ್ಲವಂತೆ. ಆಸ್ಪತ್ರೆಗೆ ಹೋಗೋದಿಲ್ಲ, ಔಷಧಿ ಸೇವನೆ ಕೂಡ ಮಾಡೋದಿಲ್ಲ. ಎಲ್ಲ ಪವಾಡಗಳು ಮಾಲತೇಶನ ಕೃಪೆಯಿಂದ ನಡೆಯುತ್ತವಂತೆ. ಹೀಗಾಗಿ ಯಾವುದೇ ನೋವು, ಅನಾಹುತ ಆಗೋದಿಲ್ಲ. ಕಂಚಾವೀರರ ಐದು ಮನೆತನದವರು ಈ ಪವಾಡಗಳನ್ನ ಮಾಡ್ತಾರೆ. ಪ್ರತಿ ವರ್ಷ ಕಂಚಾವೀರರ ಒಂದೊಂದು ಕುಟುಂಬದವರು ಪವಾಡ ಮಾಡ್ತಾರೆ ಎನ್ನುತ್ತಾರೆ ಪವಾಡ ಮಾಡಿದವರು.

  ಇದನ್ನು ಓದಿ: ಶಿಥಿಲಾವಸ್ಥೆಯತ್ತ ಸಾಗುತ್ತಿದ್ದ ಸರ್ಕಾರಿ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಹೈ ಟೆಕ್ ಸ್ಪರ್ಶ.

  ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಪ್ರತಿವರ್ಷ ಈ ಪವಾಡಗಳು ನಡೆಯುತ್ತವೆ. ಸುಮಾರು ವರ್ಷಗಳಿಂದ ಮಾಲತೇಶನ ಕೃಪೆಯಿಂದ ಈ ಪವಾಡಗಳು ನಡೆದುಕೊಂಡು ಬಂದಿವೆ. ದಸರಾ ಹಬ್ಬದ ಸಮಯದಲ್ಲಿ ದೇವರಗುಡ್ಡಕ್ಕೆ ಬರೋ ಭಕ್ತರ ದಂಡು ಆಯುಧ ಪೂಜೆ ದಿನ ನಡೆಯೋ ಕಾರ್ಣಿಕ ವಾಣಿ ಆಲಿಸ್ತಾರೆ. ವಿಜಯದಶಮಿ ಹಬ್ಬದ ಬನ್ನಿ‌ ಮುಡಿಯೋ ದಿನ ಪವಾಡಗಳು ನಡೆಯುತ್ತವೆ. ಸಂಜೆ ನಾಲ್ಕು ಗಂಟೆಯಿಂದ ಐದು ಗಂಟೆಯವರೆಗೆ ಪವಾಡಗಳು ನಡೆಯುತ್ತವೆ.

  ನೋಡುಗರ ಮೈ ಜುಮ್ಮೆನಿಸುವುದು ಸತ್ಯ 

  ಕಂಚಾವೀರ ಮನೆತನದವರು ಮಾಡೋ ಪವಾಡಗಳನ್ನ ನೋಡೋವಾಗ ಎಂಥವರೂ ರೋಮಾಂಚನಗೊಳ್ತಾರೆ. ಕೆಲವರಂತೂ ಆಶ್ಚರ್ಯಚಕಿತರಾಗಿ ಭಯದಿಂದ ಪವಾಡಗಳನ್ನ ನೋಡ್ತಾರೆ. ಯಾಕಂದ್ರೆ ಕಾಲಲ್ಲಿ ಗೂಡ ಹೊಡೆದುಕೊಳ್ಳೋದು, ಸರಪಳಿ ಹರಿಯೋದನ್ನ ಮಾಡೋವಾಗ ಕೈ ಮತ್ತು ಕಾಲಲ್ಲಿ ರಕ್ತ ಬರುತ್ತದೆ. ರಕ್ತ ಬಂದ ತಕ್ಷಣ  ರಕ್ತ ಬರೋ ಸ್ಥಳಕ್ಕೆ ಭಂಡಾರ ಹಚ್ಚಲಾಗುತ್ತದೆ.

  ಮೈಲಾರ ಲಿಂಗೇಶ್ವರನ ಕೃಪೆ ಇರೋದ್ರಿಂದ ಪವಾಡ ಮಾಡೋರಿಗೆ ರಕ್ತ ಬಂದ್ರೂ ಯಾವುದೇ ನೋವು ಇರೋದಿಲ್ವಂತೆ. ಪವಾಡ ಮಾಡಿದವರಿಗೆ ರಕ್ತ ಸುರಿದರೂ ಆಸ್ಪತ್ರೆಗೆ ಹೋಗುವುದಾಗಲಿ, ನೋವು ಅಂತಾ ಔಷಧಿ ತೆಗೆದುಕೊಳ್ಳುವುದಾಗಲಿ ಯಾವುದೂ ಮಾಡೋದಿಲ್ವಂತೆ. ಸುಮಾರು ವರ್ಷಗಳಿಂದ ಈ ರೀತಿಯಲ್ಲಿ ದೇವಸ್ಥಾನದಲ್ಲಿ ಪವಾಡಗಳು ನಡೆದುಕೊಂಡು ಬಂದಿವೆ ಎನ್ನುತ್ತಾರೆ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್.

  ಇದನ್ನೂ ಓದಿ: ವಿವಾದದ ಕಿಡಿ ಹೊತ್ತಿಸಿದ 2ನೇ ತರಗತಿಯ ಈ ಕವಿತೆ; ಅದರಲ್ಲಿ ಅಂತಹದ್ದೇನಿದೆ?

  ದೇವರಗುಡ್ಡ ಮಾಲತೇಶ ದೇವಸ್ಥಾನದಲ್ಲಿ‌ ನಡೆಯೋ ಪವಾಡಗಳನ್ನ ನೋಡೋಕೆ ರಾಜ್ಯ, ಹೊರರಾಜ್ಯಗಳಿಂದಲೂ ಭಕ್ತರ ದಂಡು ಆಗಮಿಸಿರುತ್ತೆ. ಪವಾಡಗಳನ್ನ ನೋಡೋವಾಗ ಒಂದು ರೀತಿಯಲ್ಲಿ ಆಶ್ಚರ್ಯ, ಭಯ ಉಂಟಾಗ್ತಿದ್ರೂ ಪವಾಡ ಮಾಡೋರು ಮಾತ್ರ ಡಮರುಗ, ಚಾಟಿ ಸದ್ದಿನ ಕರತಾಡನದ ನಡುವೆ ಪವಾಡಗಳನ್ನ ಮಾಡ್ತಾರೆ. ಎಲ್ಲವೂ ಮಾಲತೇಶನ ಮಹಿಮೆ ಅನ್ನುತ್ತಾ ಪವಾಡ ಮಾಡಿ ಮಾಲತೇಶನ ಆಶೀರ್ವಾದ ಪಡೆದು ಮನೆಯತ್ತ ಹೋಗ್ತಾರೆ.

  ವರದಿ: ಮಂಜುನಾಥ್ ತಳವಾರ 
  Published by:Sandhya M
  First published: