ಯಾದಗಿರಿ: ಮಹಾರಾಷ್ಟ್ರದ ಮಹಾಮಳೆಗೆ ಜಿಲ್ಲೆಯ ಜೀವನಾಡಿ ಬಸವಸಾಗರ ಜಲಾಶಯ ಭರ್ತಿಯಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ ಕೂಡ ವರುಣನ ಅರ್ಭಟ ಜೋರಾದ ಹಿನ್ನೆಲೆ ಜಿಲ್ಲೆಯ ಅಣೆಕಟ್ಟುಗಳು, ಕೆರೆ ಹಾಗೂ ಹಳ್ಳ-ಕೊಳ್ಳಗಳು ಭರ್ತಿಯಾಗಿ ಈಗ ಅಬ್ಬರಿಸುತ್ತಿವೆ. ಅದರಂತೆ ಯಾದಗಿರಿ ತಾಲೂಕಿನ ಹತ್ತಿಕುಣಿ ಆಣೆಕಟ್ಟು ಕೂಡ ಈಗ ಭರ್ತಿಯಾಗಿದೆ.
ಹತ್ತಿಕುಣಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರುವ ಹಿನ್ನೆಲೆ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮಹಾರಾಷ್ಟ್ರದ ಮಹಾಮಳೆಗೆ ಕೃಷ್ಣಾ ಹಾಗೂ ಭೀಮಾ ನದಿ ಪ್ರವಾಹ ಕಂಡರೂ ಕೂಡ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಹತ್ತಿಕುಣಿ ಆಣೆಕಟ್ಟು ಭರ್ತಿಯಾಗಿರಲಿಲ್ಲ. ಕಳೆದ ವರ್ಷ ಆಗಸ್ಟ್ 18 ರಂದು ಹತ್ತಿಕುಣಿ ಆಣೆಕಟ್ಟಿನಲ್ಲಿ ಕೇವಲ 3 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು. ಆದರೆ, ಈಗ ಜಿಲ್ಲೆಯಲ್ಲಿ ಭಾರೀ ಮಳೆ ಬರುತ್ತಿರುವ ಹಿನ್ನೆಲೆ ಭತ್ತಿ ಹೋಗಿದ್ದ ಜಲಾಶಯಕ್ಕೆ ಜೀವಕಳೆ ಬಂದಿದೆ.
ಹತ್ತಿಕುಣಿ ಅಣೆಕಟ್ಟು ಪ್ರದೇಶವು 0.352 ಟಿಎಂಸಿ ನೀರು ಸಂಗ್ರಹದ ಗರಿಷ್ಠ ಸಾಮರ್ಥ್ಯ ಹೊಂದಿದೆ. 30 ಅಡಿ ಆಳದ ಜಲಾಶಯದಲ್ಲಿ 0.306 ಟಿಎಂಸಿ ನೀರು ಸಂಗ್ರಹವಾಗಿದ್ದು, 27 ಅಡಿ ನೀರು ಸಂಗ್ರಹವಾಗಿದೆ. ಜಲಾಶಯವು 2145 ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿ ಹೊಂದಿದೆ. ಹತ್ತಿಕುಣಿ, ಬಂದಳ್ಳಿ, ಹೊನಗೇರಾ, ಯಡ್ಡಹಳ್ಳಿ, ಕಟಗಿ ಶಹಾಪುರ ಗ್ರಾಮಗಳ ನೀರಾವರಿ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕರ್ನಾಟಕ ನೀರಾವರಿ ನಿಗಮ ನಿಯಮಿತ ವ್ಯಾಪ್ತಿಗೆ ಅಣೆಕಟ್ಟು ಬರುತ್ತದೆ.
ಇದನ್ನು ಓದಿ: ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸಚಿವ ಸಿ.ಟಿ. ರವಿ ಒತ್ತಾಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ