HOME » NEWS » District » HASSANA ZP PRESIDENT SHWETHA DEVARAJ GETS THE TASTE OF JDS MEMBERS PRESSURE SNVS

ಹೆಚ್.ಡಿ. ರೇವಣ್ಣ ಮತ್ತು ಜೆಡಿಎಸ್ ಸದಸ್ಯರ ಕ್ಷಮೆ ಕೋರಿದ ಹಾಸನ ಜಿ.ಪಂ. ಅಧ್ಯಕ್ಷೆ ಶ್ವೇತಾ ದೇವರಾಜ್

ತಾನು ದಲಿತಳೆಂಬ ಕಾರಣಕ್ಕೆ ಜೆಡಿಎಸ್ನವರು ಜಿ.ಪಂ. ಸಭೆಗೆ ಮೂರು ಬಾರಿ ಬಂದಿರಲಿಲ್ಲ ಎಂದು ಹೇಳಿಕೆ ನೀಡಿದ್ದ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರಿಂದ ಹೆಚ್.ಡಿ. ರೇವಣ್ಣ ಹಾಗೂ ಇತರ ಜೆಡಿಎಸ್ ಸದಸ್ಯರು ಕ್ಷಮೆ ಯಾಚಿಸಿಸಿದರು.

news18-kannada
Updated:June 20, 2020, 11:12 PM IST
ಹೆಚ್.ಡಿ. ರೇವಣ್ಣ ಮತ್ತು ಜೆಡಿಎಸ್ ಸದಸ್ಯರ ಕ್ಷಮೆ ಕೋರಿದ ಹಾಸನ ಜಿ.ಪಂ. ಅಧ್ಯಕ್ಷೆ ಶ್ವೇತಾ ದೇವರಾಜ್
ಹೆಚ್.ಡಿ. ರೇವಣ್ಣ, ಭವಾನಿ ರೇವಣ್ಣ ಮತ್ತು ಜಿ.ಪಂ. ಅಧ್ಯಕ್ಷೆ ಶ್ವೇತಾ ದೇವರಾಜ್
  • Share this:
ಹಾಸನ(ಜೂನ್ 20): ಹಾಸನ ಜಿ.ಪಂ. ಅಧ್ಯಕ್ಷೆ ಶ್ವೇತಾ ದೇವರಾಜ್ ಅವರಿಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರು ತರಾಟೆ ತೆಗೆದುಕೊಂಡರು. ಹಾಸನ ಜಿಪಂ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರನ್ನ ಸಭೆಯುದ್ದಕ್ಕೂ ಇಕ್ಕಟ್ಟಿಗೆ ಸಿಲುಕಿಸಿದ್ರು. ಈ ವೇಳೆ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಜೆಡಿಎಸ್ ಸದಸ್ಯರ ಕ್ಷಮೆ ಯಾಚಿಸಿದ ಪ್ರಸಂಗ ನಡೆಯಿತು.

ಜೆಡಿಎಸ್​ನ 23 ಸದಸ್ಯರು ಗೈರಾದ ಕಾರಣ ಈ ಹಿಂದೆ ಮೂರು ಸಭೆಗಳು ರದ್ದಾಗಿದ್ದವು. ಈ ವಿಚಾರವನ್ನೇ ಮುಂದಿಟ್ಟುಕೊಂಡು ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ತಾನು ದಲಿತೆಯಾದ್ದರಿಂದ ಜೆಡಿಎಸ್ ನಾಯಕರು ಸಾಮಾನ್ಯ ಸಭೆಗೆ ಗೈರಾಗುತ್ತಿದ್ದಾರೆ ಎಂದು ಈ ಹಿಂದೆ  ನೇರಾ ನೇರ ಹೆಚ್.ಡಿ. ರೇವಣ್ಣ ಮೇಲೆ ಆರೋಪ ಮಾಡಿದ್ದರು.

ಅದ್ರೆ ಇದೇ ವಿಚಾರ ಇಂದಿನ ಸಭೆಯ ಸಮಯವನ್ನೇ ನುಂಗಿ ಹಾಕಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮಾತಿನ ಯುದ್ದವನ್ನೇ ನಡೆಸಿದರು. ಇದೇ ವೇಳೆ ಹೆಚ್.ಡಿ. ರೇವಣ್ಣ. ‘ಏಯ್ ನಿನ್ನ ಜೊತೆ ಮಾತಾಡ್ತಿಲ್ಲಮ್ಮ, ನಾನು ಸಿಇಒ ಜೊತೆ ಮಾತ್ನಾಡ್ತಿದಿನಿ’ ಅಂದಾಗಲೂ ಅಧ್ಯಕ್ಷೆ ಶ್ವೇತಾ ದೇವರಾಜ್ ಹೀಗೆ ಏಕವಚನ ನನ್ನ ಮೇಲೆ ಪ್ರಯೋಗಿಸಬೇಡಿ ಎಂದು ತಿರುಗಿಬಿದ್ರು. ಈ ವೇಳೆ ಭವಾನಿ ರೇವಣ್ಣ ತಮ್ಮ ಸ್ಥಾನದಿಂದ ಎದ್ದು ಬಂದು ಪತಿ ಪರ ನಿಂತರು. ಮೊದಲು ನೀವು ಗೌರವ ಕೊಡೋದನ್ನ ಕಲಿಯಿರಿ ಎಂದವರು ರೊಚ್ಚಿಗೆದ್ದರು. ಹೀಗೆ ಇಡೀ ಹಾಸನ ಸಮಾನ್ಯ ಸಭೆ ಗೊಂದಲದ ಗೂಡಾಯಿತು‌.

ಇದನ್ನೂ ಓದಿ: ಯಡಿಯೂರಪ್ಪ ಸರ್ಕಾರ 6 ತಿಂಗಳಲ್ಲಿ ಪತನ: ಬೇಳೂರು ಗೋಪಾಲಕೃಷ್ಣ ಭವಿಷ್ಯ

ಇದೇ ವೇಳೆ ಜೆಡಿಎಸ್ ಸದಸ್ಯರ ಗೈರಿನಿಂದ ಹಾಸನ ಜಿಲ್ಲಾ ಪಂಚಾಯತ್​ಗೆ ನೀಡಿದ್ದ 112 ಕೋಟಿ ವಾಪಾಸ್ ಆಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಆರೋಪ ಮಾಡಿದರು. ಇದರಿಂದ ಶ್ವೇತಾ ದೇವರಾಜ್ ವಿರುದ್ದ ಖಂಡನಾ ನಿರ್ಣಯ ಮಾಡಬೇಕು ಅಂತ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪಟ್ಟು ಹಿಡಿದರು. ಇದು ಸಭೆ ಇನ್ನಷ್ಟು ಗೊಂದಲಕ್ಕೆ ಕಾರಣವಾಯ್ತು.

ಇವತ್ತಿನ ಸಭೆಯ ಆರಂಭದಲ್ಲೇ ದಲಿತ ಮಹಿಳೆ ಹೇಳಿಕೆ ವಿಚಾರ ದೊಡ್ಡ ಸದ್ದು ಮಾಡಿತು. ಜೆಡಿಎಸ್ ಸದಸ್ಯ ಲೋಕೇಶ್ ಅಧ್ಯಕ್ಷೆಯನ್ನು ತರಾಟೆಗೆ ತೆಗೆದುಕೊಂಡರು. ಜೆಡಿಎಸ್​ನಿಂದ ಗೆದ್ದಿರುವ ತಾನೂ ದಲಿತನೇ. ನೀವು ಯಾಕೆ ವಿಶೇಷವಾಗಿ ದಲಿತ ಪದವನ್ನು ದುರ್ಬಳಕೆ ಮಾಡಿಕೊಂಡಿರಿ ಎಂದು ಪ್ರಶ್ನಿಸಿದರು. ದಲಿತ ಮಹಿಳೆಯ ಹೇಳಿಕೆ ನೀಡಿದ್ದ ಶ್ವೇತಾ ದೇವರಾಜ್ ಮೇಲೆ ಮುಗಿಬಿದ್ದ ಜೆಡಿಎಸ್ ಸದಸ್ಯರು ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಜೆಡಿಎಸ್​ನವರು ಹಿಡಿದ ಪಟ್ಟಿಗೆ ಬಗ್ಗಿದ ಜಿ.ಪಂ. ಅಧ್ಯಕ್ಷೆ ತಮ್ಮ ಮಾತಿಗೆ ಕೊನೆಗೆ ಕ್ಷಮೆ ಕೋರಬೇಕಾಯಿತು..

ಜೆಡಿಎಸ್ ಸದಸ್ಯರು ಇಷ್ಟಕ್ಕೆ ಸುಮ್ಮನಾಗದೆ, 112 ಕೋಟಿ ಹಣ ಎಲ್ಲಿಗೆ ಬಂದಿದೆ? ಯಾವಾಗ ಅನುದಾನ ಬಂದಿದೆ ತೋರಿಸಿ. ಆ ಹಣ ಯಾಕೆ ಸರ್ಕಾರಕ್ಕೆ ವಾಪಸ್ ಹೋಗಿತ್ತೆ ಎಂದು ತೋರಿಸಿ ಎಂದು ಸವಾಲು ಹಾಕಿದರು.ಇದನ್ನೂ ಓದಿ: ವೃತ್ತಿಯಲ್ಲಿ ಪ್ರಾಂಶುಪಾಲ ಪ್ರವೃತ್ತಿಯಲ್ಲಿ ರೈತ; ಬರಡು ಭೂಮಿಯನ್ನು ಬಂಗಾರವಾಗಿಸಿದ ಭಗೀರಥ ಈತ

ಜಿಪಂ ಗಲಾಟೆ ಮಾತಿನ ಚಕಮಕಿ ಡೀಟೇಲ್:
ರೇವಣ್ಣ: ಏಯ್ ನೋಡಮ್ಮ ನಿನ್ನ ಮಾತನಾಡಿಸುತ್ತಿಲ್ಲ ನಾನು.
ಶ್ವೇತಾ ದೇವರಾಜ್: ಮರ್ಯಾದೆ ಕೊಟ್ಟು ಮಾತನಾಡಿಸಿ.
ಭವಾನಿ ರೇವಣ್ಣ: ನೀನು ಮರ್ಯಾದೆ ಕೊಟ್ಟಿದ್ದರಲ್ಲವೆ ಅವರು ಕೊಡೋದು. (ಕುಳಿತಲ್ಲಿಂದ ಎದ್ದು ಬಂದ ಭವಾನಿ ರೇವಣ್ಣ)
ರೇವಣ್ಣ: ಏಯ್ ಸುಮ್ನೆ ಕುಳಿತುಕೊ ನೀನು. (ಪತ್ನಿಗೆ ಸೂಚನೆ ನೀಡಿದ ರೇವಣ್ಣ)
(*ಈ ವೇಳೆ ಮಧ್ಯೆ ಪ್ರವೇಶಿಸಿದ ಎಂಎಲ್‌ಸಿ ಗೋಪಾಲಸ್ವಾಮಿ.*)
ರೇವಣ್ಣ: ನೀವು ಸುಮ್ಮನಿರಿ ನಾನು ಹೇಳುತ್ತೇನೆ.
ಎಂಎಲ್‌ಸಿ ಗೋಪಾಲಸ್ವಾಮಿ: (ಭವಾನಿ ರೇವಣ್ಣ ಕಡೆ ಕೈ ತೋರಿಸಿ) ಅವರು ಮಾತನಾಡಬಹುದಾ ಎಂದು ಜೋರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ರು.



ದಳಪತಿಗಳ ಕೋಟೆಯಲ್ಲಿ ಅವರ ವಿರುದ್ದ ಯಾರಾದರು ಆರೋಪ ಮಾಡಿದ್ರೆ ಸಾಕ್ಷಿ ಸಮೇತ ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಈ ಸಭೆಯಿಂದ ಜೆಡಿಎಸ್ ವಿರೋಧಿಗಳಿಗೆ ಸೂಕ್ತ ಸಂದೇಶ ರವಾನೆಯಾಗಿದೆ. ಒಟ್ಟಾರೆ ಇಂದಿನ ಸಭೆಯಲ್ಲಿ ದಳಪತಿಗಳ ವಿರುದ್ದ ಧ್ವನಿ ಎತ್ತಿದರೆ ಏನೂ ನಡೆಯೋಲ್ಲಾ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ವರದಿ: ಡಿಎಂಜಿ ಹಳ್ಳಿ ಅಶೋಕ್
First published: June 20, 2020, 11:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories