ಹಾಸನದಲ್ಲಿ Suraj Revanna ನಾಮಪತ್ರ ಸಲ್ಲಿಕೆ; ಹಿರಿಯರ ಮನೆಗೆ ಕಿರಿಯರು ಹೋಗೋದು ಸರಿಯಲ್ಲ ಎಂದ BJP

BJP Candidate HM Vishwanath: ಇದು ಮೇಲ್ಮನೆ ಚುನಾವಣೆ ಹಿರಿಯರ ಮನೆ ಚುನಾವಣೆ. ಸ್ಪೀಕರ್ ಹೊರಟ್ಟಿ ಅವರು ಎಂಟು ಭಾರಿ ಆಯ್ಕೆಯಾಗಿದ್ದಾರೆ. ಹಾಸನದಿಂದ ಬಿ.ಬಿ.ಶಿವಪ್ಪ, ಬಿ.ಆರ್.ಕೃಷ್ಣಮೂರ್ತಿ ಆಯ್ಕೆಯಾಗಿ ಮೇಲ್ಮನೆಗೆ ಹೋಗಿದ್ದಾರೆ. ದೇವೇಗೌಡರೇ ರಾಜ್ಯಸಭೆಯಲ್ಲಿ ಹಿರಿಯರಾಗಿ ಇದ್ದಾರೆ. ಇಲ್ಲಿ ಹಿರಿಯರ ಸಭೆಗೆ ಕಿರಿಯರು ಏಕೆ?

ಸೂರಜ್​ ರೇವಣ್ಣ, ಎಚ್.ಎಂ.ವಿಶ್ವನಾಥ್

ಸೂರಜ್​ ರೇವಣ್ಣ, ಎಚ್.ಎಂ.ವಿಶ್ವನಾಥ್

  • Share this:
ಹಾಸನ: ಕರ್ನಾಟಕ ವಿಧಾನ ಪರಿಷತ್​​ನ (Karnataka Legislative Council Election) 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾದ್ದರಿಂದ ಜಿಲ್ಲೆಯಲ್ಲೂ ಚುನಾವಣಾ ರಾಜಕೀಯ ಜೋರಾಗಿತ್ತು. ಈ ಚುನಾವಣೆ ಮೂಲಕ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ (HD Deve Gowda) ಮತ್ತೊಬ್ಬ ಮೊಮ್ಮಗನ ರಾಜಕೀಯ ಪ್ರವೇಶವಾಗುತ್ತಿದೆ. ಮಾಜಿ ಸಚಿವ ಎಚ್​.ಡಿ.ರೇವಣ್ಣ ಪುತ್ರ ಸೂರಜ್​ (Suraj Revanna) ರೇವಣ್ಣಗೆ ಜೆಡಿಎಸ್​ ಟಿಕೆಟ್​ ನೀಡಿರುವ ಹಿನ್ನೆಲೆ ಇಂದು ಮತ್ತೊಂದು ನಾಮಪತ್ರ (Nomination Filled ) ಹಾಗೂ ಅಫಿಡೆವಿಟ್ ಸಲ್ಲಿಸಿದದರು. ತಂದೆ ಎಚ್.ಡಿ.ರೇವಣ್ಣ ಹಾಗೂ ತಾಯಿ ಭವಾನಿ ರೇವಣ್ಣ ಅವರೊಂದಿಗೆ ‌ಆಗಮಿಸಿ ಸೂರಜ್ ನಾಮಪತ್ರ ಸಲ್ಲಿಸಿದರು. ಕಳೆದ ಶುಕ್ರವಾರ ಎರಡು ನಾಮಪತ್ರ ಸಲ್ಲಿಸಿದ್ದರು. ಇಂದು ಚುನಾವಣಾಧಿಕಾರಿಗೆ ಅಫಿಡೆವಿಟ್ ಹಾಗೂ ಇನ್ನೊಂದು ನಾಮಪತ್ರ ಸಲ್ಲಿಸಲಾಯಿತು.

ಮೇಲ್ಮನೆಗೆ ಕಿರಿಯರನ್ನೇ ಏಕೆ ಕಳುಹಿಸುತ್ತೀರಾ?

ಇನ್ನು ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಕೂಡ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಸ್ಪರ್ಧಿ ಸೂರಜ್​ ರೇವಣ್ಣ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡಿದರು. ಪರಿಷತ್​ ಹಿರಿಯರು ಇರುವ ವಿಧಾನ ಮಂಡಲದ ಮೇಲ್ಮನೆಗೆ ಕಿರಿಯರನ್ನೇ ಏಕೆ ಕಳುಹಿಸುತ್ತೀರಾ, ಹಿರಿಯರನ್ನೇ ಕಳುಹಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಸಹಜವಾಗಿ ಜೆಡಿಎಸ್ ನಮ್ಮ ಪ್ರತಿಸ್ಪರ್ಧಿ. ಅಧಿಕಾರ ಒಂದೇ ಕಡೆ ಕೇಂದ್ರಿಕೃತವಾಗಬಾರದು, ಅದು ವಿಕೇಂದ್ರಿಕರಣವಾಗಬೇಕು ಎನ್ನುವ ಮೂಲಕ ಜೆಡಿಎಸ್​ ಕುಟುಂಬ ರಾಜಕಾರಣದ ವಿರುದ್ಧ ಪರೋಕ್ಷ ತಿರುಗೇಟು ನೀಡಿದರು.

ಹಿರಿಯರ ಸಭೆಗೆ ಕಿರಿಯರು ಏಕೆ?

ವಾಗ್ದಾಳಿ ಮುಂದುವರೆಸಿದ ಎಚ್.ಎಂ.ವಿಶ್ವನಾಥ್,  ಇದು ಮೇಲ್ಮನೆ ಚುನಾವಣೆ ಹಿರಿಯರ ಮನೆ ಚುನಾವಣೆ. ಸ್ಪೀಕರ್ ಹೊರಟ್ಟಿ ಅವರು ಎಂಟು ಭಾರಿ ಆಯ್ಕೆಯಾಗಿದ್ದಾರೆ. ನಲವತ್ತು ವರ್ಷದಿಂದ ಅವರು ಇದ್ದಾರೆ, ಅಂತಹ ಮನೆಯಲ್ಲಿ ಯಾರಿರಬೇಕು. ಹಾಸನದಿಂದ ಬಿ.ಬಿ.ಶಿವಪ್ಪ, ಬಿ.ಆರ್.ಕೃಷ್ಣಮೂರ್ತಿ ಆಯ್ಕೆಯಾಗಿ ಮೇಲ್ಮನೆಗೆ ಹೋಗಿದ್ದಾರೆ. ದೇವೇಗೌಡರೇ ರಾಜ್ಯಸಭೆಯಲ್ಲಿ ಹಿರಿಯರಾಗಿ ಇದ್ದಾರೆ. ಇಲ್ಲಿ ಹಿರಿಯರ ಸಭೆಗೆ ಕಿರಿಯರು ಏಕೆ? ಹಿರಿಯರು ಅಂದರೆ ಅನುಭವ, ತಿಳುವಳಿಕೆ ಇರುವವರು. ಪಂಚಾಯತ್ ರಾಜ್ ನಿಂದ ಆಯ್ಕೆ ಮಾಡುವ ಚುನಾವಣೆ. ಗಾಂಧಿ ವಿಚಾರಗಳನ್ನು ಇಟ್ಟುಕೊಂಡು ಹೋಗಿರುವುದು ವಿಕೇಂದ್ರಿಕರಣ. ಅಧಿಕಾರ ಕೇಂದ್ರಿಕೃತವಾಗುವಂತಹ ರಾಜಕಾರಣಕ್ಕೆ ಹಾಸನ ಜಿಲ್ಲೆ ಸೆಡ್ಡು ಹೊಡಿಯಬೇಕು. ಅದರ ವಿರುದ್ದ ಜನಶಕ್ತಿ ಎದ್ದು ನಿಂತಿದೆ ಎಂದು ವಿಶ್ವಾಸ ವ್ಯಕ್ತಪಡಸಿದರು.

ಒಂದು ಮನೆತನಕ್ಕಾಗಿ ಓಟು ಮಾಡಬೇಡಿ

ಆತ್ಮಸಾಕ್ಷಿಯಂತೆ ಓಟು ಮಾಡಿ. ಯಾವುದೇ ಹಣಕ್ಕಾಗಲಿ, ಅಧಿಕಾರಕ್ಕಾಗಲಿ, ಜಾತಿಯ ಬಲಕ್ಕಾಗಲಿ, ಒಂದು ಮನೆತನಕ್ಕಾಗಿ ಓಟು ಮಾಡಬೇಡಿ. ಹಾಗೇ ಮಾಡಿದ್ರೆ ನಮ್ಮನ್ನು ನಾವೇ ಆತ್ಮಹತ್ಯೆ ಮಾಡಿಕೊಂಡಂಗೆ. ಹಿರಿಯರ ಮನೆಗೆ ಹಿರಿಯರನ್ನು ಕಳುಹಿಸಿ. ಕಿರಿಯರಿಗೆ ಜಿ.ಪಂ., ತಾ.ಪಂ. ಇದೆ. ಜ್ಞಾನ, ಅನುಭವ ಇರುವವರನ್ನು ಕಳುಹಿಸಿದ್ರೆ ಈ ಜಿಲ್ಲೆಗೆ ಅನುಕೂಲವಾಗುತ್ತೆ ಎಂದು ಮತದಾರರಲ್ಲಿ ಎಚ್.ಎಂ.ವಿಶ್ವನಾಥ್ ಮನವಿ ಮಾಡಿಕೊಂಡರು.

ಅಪ್ಪ ಬಿಜೆಪಿಯಲ್ಲಿ, ಮಗ ಕಾಂಗ್ರೆಸ್​​ನಿಂದ ಸ್ಪರ್ಧೆ

ಮಂಥರ್ ಗೌಡ ಕೊಡಗಿನಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಬಿಜೆಪಿಯಲ್ಲಿರುವ ತಂದೆ ಮಾಜಿ ಸಚಿವ ಎ.ಮಂಜು ಸ್ಪಷ್ಟನೆ ನೀಡಿದರು. ಸೋನಿಯಾ ಗಾಂಧಿ, ಮೇನಕಾ ಗಾಂಧಿ ಯಾರೂ ಈ ದೇಶದಲ್ಲಿ. ಅವರು ಬಿಜೆಪಿ, ಇವರು ಕಾಂಗ್ರೆಸ್ ನಲ್ಲಿ ಇಲ್ವಾ. ದೇವೇಗೌಡರ ಕುಟುಂಬದವರೆಲ್ಲಾ ಜನತಾದಳ ಅಂತಿದ್ದಾರೆ ಅಷ್ಟೇ. ಎಲ್ಲಾ ಪಾರ್ಟಿನಲ್ಲೂ ಅವರೇ ಇದ್ದಾರೆ. ಅವರು ಒಳಒಪ್ಪಂದದ ಚುನಾವಣೆ ಮಾಡ್ತಾರೆ. ಈ ಕ್ಷೇತ್ರದಲ್ಲಿ ಡಾ.ಮಂಥರ್ ಗೌಡ ಬಿಜೆಪಿ ಅಭ್ಯರ್ಥಿ ಆಗಬೇಕಿತ್ತು. ಏತಕ್ಕೆ ತಪ್ಪಿ ಹೋಯಿತು ಎಂಬುದನ್ನ ಮುಂದಿನ ದಿನಗಳಲ್ಲಿ ಹೇಳ್ತಿನಿ ಎಂದು ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್​ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಇದನ್ನೂ ಓದಿ: ನಾನು ಯಾವತ್ತೂ ಹಲ್ಕಟ್ ರಾಜಕಾರಣ ಮಾಡುವುದಿಲ್ಲ: ಸಚಿವ ST Somashekhar

ಸಿದ್ದರಾಮಯ್ಯ ಅವರನ್ನು ನಾನು ಭೇಟಿ ಆಗಿಲ್ಲ, ಅವರಿಗೆ ಆರೋಗ್ಯ ಹದಗೆಟ್ಟಾಗ ಭೇಟಿಯಾಗಿದ್ದು. ನನ್ನ ಜೊತೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ, ರೇವಣ್ಣ ವಿಶ್ವಾಸದಲ್ಲಿ ಮಾತನಾಡಿದ್ದಾರೆ. ನಾನು ಮತ್ತೆ ಕಾಂಗ್ರೆಸ್ ಗೆ ಬರುವ ಪ್ರಶ್ನೆಯೇ ಇಲ್ಲ. ನಾನು ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರ ಪರ ಓಟು ಹಾಕಿಸುತ್ತೇನೆ. ಎಂ.ಎಲ್.ಸಿ. ಗ್ರಾ.ಪಂ.‌ ಸದಸ್ಯರು ಮತ ಹಾಕುವುದು. ಯಾರನ್ನ ಗೆಲ್ಲಿಸಬೇಕು, ಯಾರನ್ನ ಸೋಲಿಸಬೇಕು ಆ ಸದಸ್ಯರು ತೀರ್ಮಾನ ಮಾಡ್ತಾರೆ. ಕಳೆದ ಚುನಾವಣೆಯಲ್ಲಿ 900 ಓಟು ಜಾಸ್ತಿ ಜೆಡಿಎಸ್ ಗೆ ಇತ್ತು. ಕುಟುಂಬದ ವಿರುದ್ದವಾಗಿ ಓಟು ಹಾಕಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ರು. ಮೇಲ್ಮನೆಗೆ ಯಾರು ಹೋಗಬೇಕು ಅನ್ನೋದನ್ನ ಮತದಾರರು ಯೋಚನೆ ಮಾಡಬೇಕು. ಏನು ಅನುಭವವಿಲ್ಲದ, ಗ್ರಾ.ಪಂ. ಸದಸ್ಯನು ಆಗದೆ‌ ಇದ್ದಕ್ಕಿದ್ದಂತೆ ಚುನಾವಣೆಗೆ ನಿಂತಿರುವುದರಿಂದ ಜಿಲ್ಲೆಯ ಪ್ರಜ್ಞಾವಂತ ಮತದಾರರು ತಿರಸ್ಕಾರ ಮಾಡುತ್ತಾರೆ ಎಂದು ಜೆಡಿಎಸ್​ ಅಭ್ಯರ್ಥಿ ಸೂರಜ್​ ಗೌಡ ಬಗ್ಗೆ ಮಾತನಾಡಿದರು.
Published by:Kavya V
First published: