ಕೆಲಸ ಖಾಯಂಗೊಳಿಸಲು ಆಗ್ರಹಿಸಿ ಹಾಸನದಲ್ಲಿ ಆರೋಗ್ಯ ಸಹಾಯಕಿಯರ ಪ್ರತಿಭಟನೆ

ಸರ್ಕಾರಿ ಕೆಲಸ ಮಾಡುವ ಡಿ ಗ್ರೂಪ್ ನೌಕರರಿಗೆ ಆರೋಗ್ಯ ಸಹಾಯಕಿಯರಿಗೆ ನೀಡುವ ವೇತನಕ್ಕಿಂತಲೂ ಹೆಚ್ಚಿನ ವೇತನ ನೀಡಲಾಗುತ್ತಿದೆ. ಕೊರೋನಾ ವಾರಿಯರ್ಸ್​ಗಳಾಗಿ ಇಡೀ ಜಿಲ್ಲೆಯನ್ನು ಸುತ್ತಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಸಹಾಯಕಿಯರು ಆಗ್ರಹಿಸಿದ್ದಾರೆ.

ಹಾಸನದಲ್ಲಿ ಆರೋಗ್ಯ ಇಲಾಖೆ ಸಹಾಯಕಿಯರ ಪ್ರತಿಭಟನೆ.

ಹಾಸನದಲ್ಲಿ ಆರೋಗ್ಯ ಇಲಾಖೆ ಸಹಾಯಕಿಯರ ಪ್ರತಿಭಟನೆ.

  • Share this:
ಹಾಸನ; ಕೊರೋನಾ ಎಂಬ ಹೆಮ್ಮಾರಿ ರಾಜ್ಯಕ್ಕೆ ಕಾಲಿಟ್ಟ ಕ್ಷಣದಿಂದಲೂ ರಾಜ್ಯ ಸರ್ಕಾರಕ್ಕೆ ಒಂದಲ್ಲಾ ಒಂದು ಸಾವಲು ಎದುರಾಗುತ್ತಲೇ ಇದೆ. ಈ ಹಿಂದೆ ಕೊರೋನಾ ವಾರಿಯರ್ಸ್​ಗಳಾದ ಗುತ್ತಿಗೆ ಆಧಾರದ ಮೇಲಿನ ವೈದ್ಯರು, ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿ ಕೆಲಸ ಖಾಯಂಗೊಳಿಸುವಂತೆ ಒತ್ತಾಯಿಸಿ ಹೋರಾಟ ಮಾಡಿದ್ದರು. ಈಗ ಮತ್ತೆ ಕರೋನಾ ವಾರಿಯರ್ಸ್​ಗಳಾದ ಆರೋಗ್ಯ ಇಲಾಖೆ ಸಹಾಯಕಿಯರ ಸರದಿಯಾಗಿದ್ದು, ಆರೋಗ್ಯ ಇಲಾಖೆ ಸಹಾಯಕಿಯರು ಕೂಡ ಕೆಲಸ ಖಾಯಂ ಮತ್ತು ಸಮಾನ ವೇತನಕ್ಕೆ ಆಗ್ರಹಿಸಿ  ಹೋರಾಟ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಹಾಯಕಿಯರ ಪ್ರತಿಭಟನೆಯಿಂದಾಗಿ ಸರ್ಕಾರಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಹಾಸನ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಹಾಯಕಿಯರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕೆಲಸ ಖಾಯಂಗೊಳಿಸುವುದು ಮತ್ತು ಸಮಾನ ವೇತನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತಿದ್ದು, ಕಳೆದ ಹತ್ತಾರು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದೇವೆ ಆದರೂ ನಮ್ಮನ್ನ ಖಾಯಂಗೊಳಿಸಿಲ್ಲ ಎಂದು ನೋವು ತೋಡಿಕೊಂಡರು. ಸರ್ಕಾರ ನಮಗೆ ಕೇವಲ 8,800 ರೂಪಾಯಿ ಮಾತ್ರ ಮಾಸಿಕ ವೇತನ ನೀಡುತ್ತಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು 56 ಮಂದಿ ಆರೋಗ್ಯ ಇಲಾಖೆ ಸಹಾಯಕಿಯರಾಗಿ ಹಾಸನದ ಕೋವಿಡ್ ಆಸ್ಪತ್ರೆ ಸೇರಿ ವಿವಿಧ ಪ್ರಾಥಮಿಕ ಆರೋಗ್ಯ ಇಲಾಖೆ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಆರಂಭ ಆದಾಗಿನಿಂದಲೂ ರಜೆಯಿಲ್ಲದೇ ಪ್ರತಿದಿನ ಕೆಲಸ ಮಾಡುತ್ತಿದ್ದೇವೆ. ಸೋಂಕಿತರ ಮನೆಗೆ ಯಾರೂ ಭೇಟಿ ನೀಡಲ್ಲ. ಆದರೆ ನಾವು ಸೋಂಕಿತರ ಮನೆಗೆ ಭೇಟಿ ನೀಡುತ್ತಿದ್ದೇವೆ. ನಮಗೆ ಯಾವುದೇ ವಿಮೆ ಇಲ್ಲಾ. ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲಾ. ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಮಸ್ಯೆಯನ್ನು ಸರ್ಕಾರ ಆಲಿಸುತ್ತಿಲ್ಲಾ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನು ಓದಿ: ಹಲೋ ಸರ್ ನಿಮಗೆ ಪಾಸಿಟಿವ್ ಇದೆ ಎಲ್ಲಿದ್ದೀರಿ ? ಹೀಗಂತ ಡಿಸಿಗೆ ಫೋನ್ ಮಾಡಿದ ಸಿಬ್ಬಂದಿ; ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕಿತಾಪತಿ ಮಾಡಿದ ಸೋಂಕಿತ

ಸರ್ಕಾರಿ ಕೆಲಸ ಮಾಡುವ ಡಿ ಗ್ರೂಪ್ ನೌಕರರಿಗೆ ಆರೋಗ್ಯ ಸಹಾಯಕಿಯರಿಗೆ ನೀಡುವ ವೇತನಕ್ಕಿಂತಲೂ ಹೆಚ್ಚಿನ ವೇತನ ನೀಡಲಾಗುತ್ತಿದೆ. ಕೊರೋನಾ ವಾರಿಯರ್ಸ್​ಗಳಾಗಿ ಇಡೀ ಜಿಲ್ಲೆಯನ್ನು ಸುತ್ತಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಇಡೀ ರಾಜ್ಯಾದ್ಯಂತ ಸುಮಾರು 1500ಕ್ಕೂ ಹೆಚ್ಚು ಮಂದಿ ಆರೋಗ್ಯ ಇಲಾಖೆ ಸಹಾಯಕಿಯರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಆರೋಗ್ಯ ಸಹಾಯಕಿಯರ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
Published by:HR Ramesh
First published: