ಅಭಿವೃದ್ಧಿ ಕಾಮಗಾರಿಗೆ ತಡೆ, ಸಿಎಂ ಮನೆ ಮುಂದೆ ಜೆಡಿಎಸ್ ಶಾಸಕರಿಂದ ಧರಣಿಗೆ ನಿರ್ಧಾರ; ಎಚ್.ಡಿ. ರೇವಣ್ಣ

ಖಾಸಗಿ ವಿದ್ಯಾಸಂಸ್ಥೆಗಳು ಲೂಟಿ ಮಾಡುತ್ತಿದ್ದಾರೆ. ಒಂದೊಂದು ಮಗುವಿನಿಂದ 3 ಲಕ್ಷಗಟ್ಟಲೆ ಹಣ ವಸೂಲಿ ಮಾಡಿದ್ದಾರೆ. ಕುಮಾರಸ್ವಾಮಿ​ ಇನ್ನೂ 5 ತಿಂಗಳು ಮುಖ್ಯಮಂತ್ರಿಯಾಗಿದ್ದರೆ ಹಾಸನ ಜಿಲ್ಲೆಗೆ 5 ಸಾವಿರ ಕೋಟಿ ಅನುದಾನ ತರತ್ತಿದ್ದೆ. ಶಿಕ್ಷಣ ಕ್ಷೇತ್ರಕ್ಕೆ 5 ಸಾವಿರ ಕೋಟಿ ಹಣ ಕೊಡಿಸಲು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಎಲ್.ಕೆ.ಜಿ ಯಿಂದ ಪಿ.ಯು.ಸಿ ವರೆಗೆ ಪ್ಲಬಿಕ್ ಶಾಲೆ ನಿರ್ಮಾಣ ಮಾಡುತ್ತಿದ್ದೆ ಎಂದು ಹೇಳಿದರು.

ಎಚ್​.ಡಿ.ರೇವಣ್ಣ ಮತ್ತು ಸಿಎಂ ಬಿಎಸ್ ಯಡಿಯೂರಪ್ಪ

ಎಚ್​.ಡಿ.ರೇವಣ್ಣ ಮತ್ತು ಸಿಎಂ ಬಿಎಸ್ ಯಡಿಯೂರಪ್ಪ

 • Share this:
  ಹಾಸನ ; ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳನ್ನು ತಡೆಹಿಡಿದಿರುವ ಬಗ್ಗೆ ಹಾಸನ ಜಿಲ್ಲೆಯ ಮತ್ತು ರಾಜ್ಯದ ಜನರಿಗೆ ವಸ್ತುಸ್ಥಿತಿ ತಿಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿ ಮನೆ ಮುಂದೆ ದರಣಿ ನಡೆಸಲು ನಿರ್ಧಾರ ಮಾಡಿರುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.

  ಹಾಸನದಲ್ಲಿ ಮಾತನಾಡಿದ‌ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವು ಕಾಮಗಾರಿಗಳನ್ನು ತಡೆಹಿಡಿದಿದೆ. ಹಾಸನ ಜಿಲ್ಲೆಯಲ್ಲಿ 6 ಜನ ಜೆಡಿಎಸ್ ಶಾಸಕರು ಇದ್ದೇವೆ. ಬಿ.ಜೆ.ಪಿ ಸರ್ಕಾರ ಬಂದು 16 ತಿಂಗಳಾದರೂ ಜಿಲ್ಲೆಗೆ ಒಂದು ಕಾಮಗಾರಿ ನೀಡಿಲ್ಲ. ಏರ್ ಪೋರ್ಟ್ ಸ್ಥಾಪಿಸಲು ಜಮೀನು ಭೂ ಸ್ವಾಧೀನ ಮಾಡಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಡಿಗಲ್ಲು ಹಾಕಿದ್ದರು. ರೈಟ್ಸ್ ಕಂಪನಿಗೆ ಅನುಮತಿ ಮಾಡಿಸಿ ಟೆಂಡರ್ ಕರೆದಿದ್ದನ್ನು ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದರು.

  ಚಿಕ್ಕಮಗಳೂರು-ಬೇಲೂರು-ಹಾಸನ​ ರೈಲ್ವೆ ಕಾಮಗಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಹಣಕಾಸು ನೆರವಿನ ಯೋಜನೆಯಡಿ ಹಣ ನೀಡಲಾಗಿರುವ ಕಾಮಗಾರಿಯನ್ನು​ ತಡೆಹಿಡಿದಿದ್ದಾರೆ. ಚನ್ನಪಟ್ಟಣ ಕೆರೆ ಕಳೆದ 10 ವರ್ಷಗಳಿಂದ ಹಾಳಾಗಿತ್ತು. ನಾನು 4 ಪಥದ ರಸ್ತೆ ನಿರ್ಮಾಣ ಮಾಡಿ, ಇಡಿ ಎಷ್ಯಾದಲ್ಲೇ ಅತ್ಯಾಧುನಿಕ ಬಸ್ ನಿಲ್ದಾಣ ಮಾಡಿಸಿದೆ. ಚನ್ನಪಟ್ಟಣ ಕೆರೆಗೆ ನಿಗದಿಪಡಿಸಿದ ಅನುದಾನವನ್ನು ಸ್ಥಳೀಯ ಶಾಸಕರು ಪತ್ರ ಬರೆದು ಕಾಮಗಾರಿ ತಡೆ ಹಿಡಿದಿದ್ದಾರೆ. ಸೋಮನಹಳ್ಳಿ ತೋಟಗಾರಿಕೆ ಕಾಲೇಜು ನಿರ್ಮಾಣಕ್ಕೆ 150 ಕೋಟಿ ಅನುದಾನ ನೀಡಿರುವುದನ್ನು ತಡೆಹಿಡಿದಿದ್ದಾರೆ. ಕಾರಾಗೃಹ ನಿರ್ಮಾಣ ಮಾಡಲು 199 ಕೋಟಿ ಅನುದಾನದಲ್ಲಿ ೪೦ ಎಕರೆ ಭೂಮಿಯನ್ನು ಖರೀದಿಸಲಾಗಿತ್ತು. ಗಂಧದ ಕೋಟಿ ಆವರಣದಲ್ಲಿ ಮಹಿಳೆಯರ ಪ್ರಥಮ ದರ್ಜೆ ಕಾಲೇಜು ಮತ್ತು ವಸತಿ ನಿಲಯ ಸ್ಥಾಪಿಸಲು ಹಣ ನೀಡಿರುವುದನ್ನು ತಡೆದು ಕೃಷ್ಣ ನಗರಕ್ಕೆ ಶಿಫ್ಟ್ ಮಾಡಿದ್ದಾರೆ. ಹಾಸನ ಬೇಲೂರು ರಸ್ತೆ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವರಾದ ಗಡ್ಕರಿ ಬಂದು ಅಡಿಗಲ್ಲು ಹಾಕಿರುವ ಕಾಮಗಾರಿ ತಡೆದಿದ್ದಾರೆ ಎಂದು ಆರೋಪ ಮಾಡಿದರು. ರಸ್ತೆ ಕಾಮಗಾರಿ ತಡೆ ಹಿಡಿದಿರುವ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೇಂದ್ರ ಭೂ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದಾರೆ.

  ಮುಖ್ಯಮಂತ್ರಿ ಮಕ್ಕಳಿಗೆ ಒಳ್ಳೆಯಾದಾಗಬೇಕಾದರೆ ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಮೂಲಭೂತ ಸೌಕರ್ಯ ಒದಗಿಸಲಿ. ಹಳ್ಳಿ ಮಕ್ಕಳ ಪರಿಸ್ಥಿತಿ ನೋಡಲು ಸಾಧ್ಯವಾಗುತ್ತಿಲ್ಲ. ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರಿಲ್ಲ. ಕೂಡಲೇ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವಂತೆ ಆಗ್ರಹಿಸಿದರು. ಶಾಲೆ ಕಾಲೇಜುಗಳಿಗೆ ಡೆಸ್ಕ್ ಮತ್ತು ಕಟ್ಟಡಗಳನ್ನು ಕಟ್ಟಿಸಲ್ಲಿ. ಮುಖ್ಯಮಂತ್ರಿಗಳು ದ್ವೇಷದ ರಾಜಕಾರಣ ಮಾಡಬಾರದು. ಬೇಕಾದರೇ ಗುತ್ತಿಗೆದಾರರ ಬಳಿ ವಸೂಲಿ ಮಾಡಿಕೊಳ್ಳಲಿ. ಶಾಲೆ -ಕಾಲೇಜುಗಳಿಗೆ ದಯವಿಟ್ಟು ಎರಡು ಸಾವಿರ ಕೋಟಿ ಹಣ ಮೀಸಲಿಡಿ ಎಂದು ಮುಖ್ಯಮಂತ್ರಿ ಅವರನ್ನು ಕೋರಿದರು.

  ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಬೋರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋದರೆ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಲು ಹೇಳುತ್ತಾರೆ. ವೀರಶೈವ ಸಮಾಜದವರೆಗೆ ಈ ರೀತಿ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

  ಇದನ್ನು ಓದಿ: ಸಾರ್ವಜನಿಕರು, ಸಚಿವರು, ಅಧಿಕಾರಿಗಳು, ವಿಪಕ್ಷಗಳ ವಿರೋಧ; ರಾತ್ರಿ ಕರ್ಫ್ಯೂ ಹಿಂಪಡೆದ ಸರ್ಕಾರ

  ಹೊಳೆನರಸೀಪುರ ಡಿಪ್ಲೊಮಾ ಕಾಲೇಜಿಗೆ ಬಿಡುಗಡೆಯಾಗಿರುವ ಹಣ ಕಾಲೇಜು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ತಡೆಹಿಡಿದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೂರು ಕಾಸಿನ ಬೆಲೆಯಿಲ್ಲ. ಹಾಸನ ನಗರದಲ್ಲಿ ಸುಮಾರು 5 ಸಾವಿರ ಜನ ಬಡವರಿಗೆ ವಸತಿ ನಿಡಲು ನಿರ್ಧಾರ ಮಾಡಿದ್ದೆವು. ಸರ್ಕಾರ ಅದನ್ನು ವಾಪಸ್ಸು ಪಡೆದಿದೆ. ಕೇಂದ್ರ ವಿಮಾನಯಾನ ಸಚಿವರಿಗೆ ದೇವೆಗೌಡರು ಫೋನ್ ಮುಖಾಂತರ ಕಾಮಗಾರಿ ಮಾಹಿತಿ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲಾ ಅಧಿಕಾರಿಗಳ ಹತ್ತಿರ ಹಣ ವಸೂಲಿ ಮಾಡಿ ಗ್ರಾಮ ಪಂಚಾಯತಿಯಲ್ಲಿ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳಿಗೆ ಹಣ ನೀಡಿದ್ದಾರೆ. ನಾವು ಯಾವುದೇ ಹಣ ನೀಡಿಲ್ಲ. ಗೆದ್ದು ಬಂದವರ ಜೊತೆ ಸೇರಿ ಕೆಲಸ ಮಾಡುತ್ತೇವೆ ಎಂದರು.

  ಖಾಸಗಿ ವಿದ್ಯಾಸಂಸ್ಥೆಗಳು ಲೂಟಿ ಮಾಡುತ್ತಿದ್ದಾರೆ. ಒಂದೊಂದು ಮಗುವಿನಿಂದ 3 ಲಕ್ಷಗಟ್ಟಲೆ ಹಣ ವಸೂಲಿ ಮಾಡಿದ್ದಾರೆ. ಕುಮಾರಸ್ವಾಮಿ​ ಇನ್ನೂ 5 ತಿಂಗಳು ಮುಖ್ಯಮಂತ್ರಿಯಾಗಿದ್ದರೆ ಹಾಸನ ಜಿಲ್ಲೆಗೆ 5 ಸಾವಿರ ಕೋಟಿ ಅನುದಾನ ತರತ್ತಿದ್ದೆ. ಶಿಕ್ಷಣ ಕ್ಷೇತ್ರಕ್ಕೆ 5 ಸಾವಿರ ಕೋಟಿ ಹಣ ಕೊಡಿಸಲು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಎಲ್.ಕೆ.ಜಿ ಯಿಂದ ಪಿ.ಯು.ಸಿ ವರೆಗೆ ಪ್ಲಬಿಕ್ ಶಾಲೆ ನಿರ್ಮಾಣ ಮಾಡುತ್ತಿದ್ದೆ ಎಂದು ಹೇಳಿದರು.

  ವರದಿ - ಡಿಎಂಜಿ ಹಳ್ಳಿಅಶೋಕ್
  Published by:HR Ramesh
  First published: