ಹಾಸನ ಕೋವಿಡ್ ಆಸ್ಪತ್ರೆಯ ಚಿಕಿತ್ಸೆ, ಉಟೋಪಚಾರದ ವಿಡಿಯೋ ಹಂಚಿಕೊಂಡ ಆಡಳಿತ ಮಂಡಳಿ

ಈಗ ಕೋವಿಡ್ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರು ತಮಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಆಹಾರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಕೋವಿಡ್ ಆಸ್ಪತ್ರೆಯ ಚಿಕಿತ್ಸೆ ಮತ್ತು ಊಟೋಪಚಾರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸೋಂಕಿತರು ಮಾತನಾಡಿರುವ ವೀಡಿಯೋವನ್ನು ಹಿಮ್ಸ್ ಆಸ್ಪತ್ರೆ ಬಿಡುಗಡೆ ಮಾಡಿದೆ.

ಹಾಸನ ಕೋವಿಡ್ ಕೇರ್ ಸೆಂಟರ್.

ಹಾಸನ ಕೋವಿಡ್ ಕೇರ್ ಸೆಂಟರ್.

  • Share this:
ಹಾಸನ; ಮಾರಕ ಕೊರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹಬ್ಬುತ್ತಿದ್ದು, ಇಡೀ ಜಗತ್ತಿನ ಜಂಘಾ ಬಲವನ್ನೇ ಹುದುಗಿಸಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಆಸ್ಪತ್ರೆಗೆ ಬರುವವರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಕೆಲವು ಕಡೆ ಉತ್ತಮವಾದ ಚಿಕಿತ್ಸೆ ದೊರಕಿದರೆ, ಇನ್ನು ಹಲವೆಡೆ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.

ಅದೇ ರೀತಿ ಹಾಸನದ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರೂ ಕೂಡ ತಮಗೆ ಸರಿಯಾದ ಚಿಕಿತ್ಸೆ ಮತ್ತು ಊಟ ತಿಂಡಿ ಸಿಗುತ್ತಿಲ್ಲ ಎಂದು ಆರೋಪಿಸಿ ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಬಾರೀ ಸುದ್ದಿಯಾಗಿತ್ತು. ಈ ಬಗ್ಗೆ ನ್ಯೂಸ್ 18 ಕನ್ನಡದಲ್ಲಿ ಸುದ್ದಿ ಪ್ರಸಾರವಾದ ಬಳಿಕ ಆಸ್ಪತ್ರೆಯವರೇ ಈಗ ಚಿಕಿತ್ಸಾ ವಿಧಿ ವಿಧಾನ ಮತ್ತು ಊಟೋಪಚಾರದ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಕೋವಿಡ್ ಆಸ್ಪತ್ರೆಯಿಂದಲೇ ವೀಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಹಾಸನದ ಹಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್​​ನಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಕೊಡದಿದರೆ ನಾವು ಕೊರೋನಾದಿಂದ ಹೇಗೆ ಹುಷಾರಾಗುತ್ತೇವೆ. ಬರೀ ಅನ್ನ ಬಿಟ್ರೆ ನಮಗೆ ಬೇರೆ ಆಹಾರ ಕೊಡುತ್ತಿಲ್ಲ. ಹೀಗೆ ಆರೋಪ ಮಾಡುತ್ತಿರೋರು  ಬೇರೆ ಯಾರೂ ಅಲ್ಲ. ಸ್ವತಃ ಕೊರೋನ ರೋಗಕ್ಕೆ ತುತ್ತಾಗಿ ಹಾಸನದ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ತಮ್ಮ ನೋವನ್ನು ಹೇಳಿಕೊಂಡಿದ್ದರು. ಹಾಸನದ ಕೋವಿಡ್-19 ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.

ನಮಗೆ ಆರಂಭದ ಐದು ದಿನ ಮಾತ್ರ ಮೆಡಿಸಿನ್ ಕೊಟ್ರು. ಈಗ ಮೆಡಿಸಿನ್ ಕೊಡ್ತಿಲ್ಲ. ಬರೀ ಅನ್ನ ಕೊಡ್ತಾರೆ. ಮೊಟ್ಟೆ- ಮುದ್ದೆ ಕೊಡ್ತಿಲ್ಲ. ಪ್ರತಿ ಟೆಸ್ಟ್‌ನಲ್ಲೂ ಪಾಸಿಟಿವ್ ಬರ್ತಿದೆ ಅಂತಾ ಹೊರಗೆ ಕಳುಹಿಸುತ್ತಿಲ್ಲ. ನಮಗೆ ಪೌಷ್ಟಿಕಾಂಶಯುಕ್ತ ಆಹಾರ ಕೊಡದಿದರೆ ನಾವು ಹೇಗೆ ಹುಷಾರಾಗುತ್ತೇವೆ ಎಂದು ವಿಡಿಯೋದಲ್ಲಿ ಅಸಮಾಧಾನ ಹೊರಹಾಕಿದ್ದರು. ಎರಡು ದಿನದ ಹಿಂದೆ ಈ ಬಗ್ಗೆ ನಿಮ್ಮ ನ್ಯೂಸ್ 18 ಕನ್ನಡ, ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿತ್ತು.

ಈ ಬಗ್ಗೆ ಸುದ್ದಿ ಪ್ರಸಾರವಾದಾಗ ಸ್ವತಃ ಹಿಮ್ಸ್ ಆಸ್ಪತ್ರೆಯ ಜಿಲ್ಲಾಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ ಮತ್ತು ಜಿಲ್ಲಾಧಿಕಾರಿ ಗಿರೀಶ್ ಪ್ರತಿಕ್ರಿಯಿಸಿದ್ದರು. ಇದು ಒಂದು ವಾರದ ಹಿಂದಿನ ವೀಡಿಯೋ ಆದರೆ ಈಗಿನ ವೀಡಿಯೋ ಅಲ್ಲಾ ಎಂದು ಡಾ.ಕೃಷ್ಣಮೂರ್ತಿ ಒಪ್ಪಿಕೊಂಡಿದ್ದರು. ಆದರೆ ಈಗ ಕೋವಿಡ್ ಆಸ್ಪತ್ರೆಯಿಂದಲೇ ರೋಗಿ ಊಟ ಮಾಡುತ್ತಿರುವ ವೀಡಿಯೋ, ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ರೋಗಿಯನ್ನು ಮಾತನಾಡಿಸುತ್ತಿರುವ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಗುಣಮಟ್ಟದ ಊಟ ಮತ್ತು ಸೂಕ್ತ ಚಿಕಿತ್ಸೆ ನೀಡುತ್ತಿರುವುದಾಗಿ ಡಾ.ಕೃಷ್ಣಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿನ ವಾರ್ಡ್, ರೋಗಿಗಳಿಗೆ ನೀಡುತ್ತಿರುವ ಊಟ ಮತ್ತು ಊಟದ ಮೆನು ಇರುವ ವೀಡಿಯೋ ಬಿಡುಗಡೆ ಮಾಡುವ ಮೂಲಕ ಹಿಂದೆ ಸೋಂಕಿತರು ಆರೋಪಿಸಿದ್ದ ಆರೋಪಕ್ಕೆ ಈಗ ಸ್ಪಷ್ಟನೆ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಕೆಲವರು ಹುಷಾರಾಗಿ ಹೋದರೆ ಮತ್ತೆ ಕೆಲವರು ಹೊಸ ರೋಗಿಗಳು ಬರುತ್ತಿದ್ದಾರೆ. ಹೀಗೆ ಬರುವ ಹೊಸ ರೋಗಿಗಳಿಗೆ ನಮ್ಮ ಜೊತೆ ಚಿಕಿತ್ಸೆ ಕೊಟ್ಟರೆ ನಮ್ಮ ಕಾಯಿಲೆ ಹೇಗೆ ಹುಷಾರಾಗುತ್ತೆ. ಸೋಂಕಿತರಲ್ಲಿ ನಾವು ಕೆಲವರು ರೈತರಿದ್ದೇವೆ. ಬೆಳೆದು ನಿಂತ ಬೆಳೆ ಕಟಾವಿಗೂ ಸಾಧ್ಯವಾಗದೆ ಆಸ್ಪತ್ರೆಯಲ್ಲಿ ಸಿಲುಕಿದ್ದೇವೆ. ದಯವಿಟ್ಟು ನಮಗೆ ಸೂಕ್ತ ರೀತಿಯಲ್ಲಿ ಸಹಾಯ ಮಾಡಿ ಎಂದು ಕೊರೋನಾ ಸೋಂಕಿತರು ಅಳಲು ತೋಡಿಕೊಂಡಿದ್ದರು. ಈಗ ಕೋವಿಡ್ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರು ತಮಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಆಹಾರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಕೋವಿಡ್ ಆಸ್ಪತ್ರೆಯ ಚಿಕಿತ್ಸೆ ಮತ್ತು ಊಟೋಪಚಾರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸೋಂಕಿತರು ಮಾತನಾಡಿರುವ ವೀಡಿಯೋವನ್ನು ಹಿಮ್ಸ್ ಆಸ್ಪತ್ರೆ ಬಿಡುಗಡೆ ಮಾಡಿದೆ.

ಇದನ್ನು ಓದಿ: ಹಾಸನ ಕೋವಿಡ್ ಆಸ್ಪತ್ರೆಯಲ್ಲಿ ಭಾರೀ ಅವ್ಯವಸ್ಥೆ; ವಿಡಿಯೋ ಮಾಡಿ ಸಂಕಷ್ಟ ತೋಡಿಕೊಂಡ ಸೋಂಕಿತರು

ಎರಡು ದಿನಗಳ ಹಿಂದೆ ಸುದ್ದಿ ಪ್ರಸಾರವಾದ ವಿಡಿಯೋದಲ್ಲಿ ಮಾತನಾಡಿರುವ ಕೆಲವರು ಈಗಾಗಲೇ ಗುಣಮುಖರಾಗಿ ಡಿಸ್ಟ್ಯಾರ್ಜ್ ಆಗಿದ್ದಾರೆ. ತಾವು ಆಸ್ಪತ್ರೆಯಲ್ಲಿ‌ ಇದ್ದಾಗ ವಿಡಿಯೋ ವೈರಲ್ ಮಾಡಲು ಹೆದರಿ, ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿದ್ದಂತೆ ತಾವು ಅನುಭವಿಸಿದ ಕಷ್ಟವನ್ನು ಹೊರಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ಈಗ ಸುದ್ದಿ ಪ್ರಸಾರವಾದ ಬಳಿಕ ಹಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡಂತಿದೆ. ಈಗ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಮತ್ತು ಉತ್ತಮ ಗುಣಮಟ್ಟದ ಊಟೋಪಚಾರವನ್ನು ನೀಡುತ್ತಿದೆ. ಆದರೆ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಉತ್ತಮ ಚಿಕಿತ್ಸೆ ಮತ್ತು ಗುಣಮಟ್ಟದ ಆಹಾರ ನೀಡಬೇಕಿದ್ದುಇದೇ ವಿಧಾನವನ್ನು ಮುಂದುವರೆಸಬೇಕಿದೆ. ಹೀಗೆ ಸೋಂಕಿತರಿಂದ ಉತ್ತಮ ಪ್ರತಿಕ್ರಿಯೆ ಬಂದರೆ ಸಾರ್ವಜನಿಕ ವಲಯದಲ್ಲಿಯೂ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಇರುವ ಕೆಟ್ಟ ಅಭಿಪ್ರಾಯ ದೂರವಾಗಲಿದೆ.
Published by:HR Ramesh
First published: