ಹಾಸನ ಜಿಲ್ಲಾಡಳಿತ ಬಿಜೆಪಿ‌ ಮುಖಂಡರ ಕೈಗೊಂಬೆ ; ಮಾಜಿ ಸಚಿವ ಹೆಚ್​.ಡಿ ರೇವಣ್ಣ ಆರೋಪ 

ಮೀಸಲಾತಿ ಹಂಚಿಕೆ ಬಗ್ಗೆ ನಡೆದಿರುವ ಪ್ರಕ್ರಿಯೆ ಸಂಬಂಧ ಹಾಸನ ನಗರಸಭೆ ಜೆಡಿಎಸ್ ಸದಸ್ಯರಿಗೆ ಇದುವರೆಗೂ ಸಹ ಅಧಿಕೃತವಾಗಿ ಮಾಹಿತಿಯನ್ನು ನೀಡಿಲ್ಲ. ಆದರೆ, ಚುನಾವಣೆ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ.

ಹೆಚ್.ಡಿ. ರೇವಣ್ಣ

ಹೆಚ್.ಡಿ. ರೇವಣ್ಣ

  • Share this:
ಹಾಸನ(ಅಕ್ಟೋಬರ್​. 12): ಜಿಲ್ಲಾ ಮಟ್ಟದ ಅಧಿಕಾರಿಗಳು ಒಂದು ಪಕ್ಷದ ಮುಖಂಡರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾನೂನು ಮೀರಿ ಕೆಲಸ‌ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಆರೋಪಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು ಬೆಳಿಗ್ಗೆ 10 ರಿಂದ ಸಂಜೆ 4.30 ರವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರೆ ಹಾಸನದ ಜಿಲ್ಲಾಧಿಕಾರಿ ಕಚೇರಿ ಮಧ್ಯರಾತ್ರಿಯವರೆಗೂ ಹಾಸನ ಜಿಲ್ಲಾಧಿಕಾರಿ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದರು. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಚುನಾವಣೆಯನ್ನು ತರಾತುರಿಯಲ್ಲಿ ಮಾಡಲಾಗುತ್ತಿದೆ ಹಾಸನದಲ್ಲಿ ಕಾನೂನು ಮೀರಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಒಂದು ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಮೀಸಲಾತಿ ಸಂಬಂಧಿಸಿದಂತೆ ಎರಡನೇ ಶನಿವಾರವೂ ಅಧಿಕಾರಿಗಳು ಕಾರ್ಯನಿರ್ವಹಿಸಿ ಇದಕ್ಕೆ ಸಂಬಂಧಿಸಿದ ಕಡತ ವಿಲೇವಾರಿ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಒತ್ತಾಯಿಸಿದರು.

ಮೀಸಲಾತಿ ಪಟ್ಟಿಯನ್ನು ರೋಸ್ಟರ್ ಪದ್ಧತಿಯಲ್ಲಿ ಹಂಚಿಕೆಯಾಗುತ್ತದೆ. ಆದರೆ, 42ನೇ ಪಟ್ಟಿಯಲ್ಲಿರುವ ಅರಸೀಕೆರೆ 52ನೇ ಪಟ್ಟಿಯಲ್ಲಿರುವ ಹಾಸನಕ್ಕೆ ಎಸ್ಟಿ ಮೀಸಲಾತಿ ಯನ್ನು ನೀಡಲಾಗಿದ್ದು ಇದು ಕಾನೂನು ಬಾಹಿರ ನಿರ್ಣಯವಾಗಿದೆ.ಇದರ‌ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ರೇವಣ್ಣ ತಿಳಿಸಿದರು.

ಮೀಸಲಾತಿ ಹಂಚಿಕೆ ಬಗ್ಗೆ ನಡೆದಿರುವ ಪ್ರಕ್ರಿಯೆ ಸಂಬಂಧ ಹಾಸನ ನಗರಸಭೆ ಜೆಡಿಎಸ್ ಸದಸ್ಯರಿಗೆ ಇದುವರೆಗೂ ಸಹ ಅಧಿಕೃತವಾಗಿ ಮಾಹಿತಿಯನ್ನು ನೀಡಿಲ್ಲ. ಆದರೆ, ಚುನಾವಣೆ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ. ಕನಿಷ್ಠ 7 ದಿನವಾದರೂ ಕಾಲಾವಕಾಶ ನೀಡಿ ಚುನಾವಣೆಯನ್ನು ಘೋಷಣೆ ಮಾಡಬೇಕು, ಆದರೆ, ಏಕಾಏಕಿ ಅಧ್ಯಕ್ಷ ಚುನಾವಣೆಗೆ ನಿರ್ಧರಿಸಲಾಗಿದೆ.

ಇದನ್ನೂ ಓದಿ : ರಕ್ಕಸ ಮಳೆಗೆ ತತ್ತರಿಸಿದ ಹುಕ್ಕೇರಿ ಪಟ್ಟಣ ; 3 ಗಂಟೆಯ ಮಳೆಗೆ ಬದುಕು ಅಯೋಮಯ

ರಾಜ್ಯದಲ್ಲಿ ಉಪಚುನಾವಣೆ- ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರ ಚುನಾವಣೆಗಳು ನಡೆಯುತ್ತಿದ್ದು ಇಂತಹ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರ ಚುನಾವಣೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಹಾಗೂ ಎಲ್ಲಾ ಬೆಳವಣಿಗೆ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಕಾನೂನು ಸಚಿವರು ಗಮನಕ್ಕೆ ಬಾರದೆ ಹೇಗೆ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲಾ ಎಂದರು.

150 ವರ್ಷಗಳ ಇತಿಹಾಸ ಹೊಂದಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಕೈಜೋಡಿಸಿದ ಎಂದು ಆರೋಪಿಸಿದ ರೇವಣ್ಣ. ಕಳೆದ ಬಾರಿಯ ಚುನಾವಣೆಗಳಲ್ಲಿ ಮಂಡ್ಯ ಹಾಗು ತುಮಕೂರಿನಲ್ಲಿ ಜೆಡಿಎಸ್ ಸೋಲಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಹೊಂದಾಣಿಕೆಯೇ ಕಾರಣ ಎಂದು ಕಿಡಿಕಾರಿದರು.
Published by:G Hareeshkumar
First published: