ಹಾಸನದಲ್ಲಿ ಸಚಿವರ ಎದುರೇ ಕೈ-ಕೈ ಮಿಲಾಯಿಸಿದ BJP ಕಾರ್ಯಕರ್ತರು; K Gopalaiah ಕಕ್ಕಾಬಿಕ್ಕಿ!

ಬಿಜೆಪಿ ಮುಖಂಡ ಎನ್.ಆರ್ ಸಂತೋಷ್ ಅವರನ್ನು ವೇದಿಕೆ ಮೇಲೆ ಕೂರಿಸಿದ್ದಕ್ಕೆ ವಿಜಯ್ ಕುಮಾರ್ ಎಂಬುವರ ಬಣ ಆಕ್ಷೇಪ ತೆಗೆದಿದೆ. ನೋಡ ನೋಡುತ್ತಿದ್ದಂತೆಯೇ ಕೈ ಕೈ ಮಿಲಾಯಿಸಿದರು.

ಸಭೆ ಮಧ್ಯೆ ಗಲಾಟೆ

ಸಭೆ ಮಧ್ಯೆ ಗಲಾಟೆ

  • Share this:
ಹಾಸನ:  ಅರಸೀಕೆರೆ ಪಟ್ಟಣದಲ್ಲಿ ಇಂದು ಬಿಜೆಪಿ ಎಂಎಲ್‌ಸಿ ಚುನಾವಣಾ ಪ್ರಚಾರದ (MLC Election Campaign) ವೇಳೆ ಬಿಜೆಪಿಯ (BJP) ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಅರಸೀಕೆರೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಚುನಾವಣಾ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ(K. Gopalaiah) , ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್, ವಿಧಾನ ಪರಿಷತ್ ಬಿಜೆಪಿ ಚುನಾವಣೆ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಹಾಗೂ ಮುಖಂಡ ಮತ್ತು ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್, ಬಿಜೆಪಿ ಬೆಂಬಲದಿಂದ ಗೆದ್ದಿರುವ ಸ್ಥಳೀಯ ಸಂಸ್ಥೆಗಳ ಸದಸ್ಯರು, ತಾಲ್ಲೂಕು ಅಧ್ಯಕ್ಷರು,  ಮುಖಂಡರೂ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಸಚಿವರು ಮಾತನಾಡುವ ವೇಳೆ ಎರಡು ಬಣದ ಬೆಂಬಲಿಗರ ನಡುವೆ ದಿಢೀರ್ ಜಗಳ ಶುರುವಾಯಿತು.

ಸಚಿವರ ಎದುರೇ ಹೊಡೆದಾಟ-ಬಡಿದಾಟ

ಚುನಾವಣಾ ಬೆಂಬಲ ನೀಡುವ ವಿಚಾರದಲ್ಲಿ ನೋಡ ನೋಡುತ್ತಿದ್ದಂತೆಯೇ ಕೈ ಕೈ ಮಿಲಾಯಿಸಿದರು. ಕೆಲವರು ವಿರೋಧಿ ಬಣದವರಿಗೆ ಕಾಲಿನಿಂದ ಒದ್ದು ತಮ್ಮ ಆಕ್ರೋಶ ಹೊರಹಾಕಿದರು. ಈ ವೇಳೆ ಮೋಹನ್ ನಾಯ್ಕ ಸೇರಿದಂತೆ ಮೂರ‍್ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಸಭೆಯನ್ನು ಮೊಟಕು ಗೊಳಿಸಿದರೂ ಮುಗಿಯಲಿಲ್ಲ. ಇದರಿಂದಾಗಿ ಸಚಿವರು ಹಾಗೂ ಇತರರು ಕಕ್ಕಾಬಿಕ್ಕಿಯಾದರು.

ವೇದಿಕೆ ಮೇಲೆ ಕೂರಿಸಿದ್ದಕ್ಕೆ ಶುರುವಾದ ಜಗಳ 

ಬಿಜೆಪಿ ಮುಖಂಡ ಎನ್.ಆರ್ ಸಂತೋಷ್ ಅವರನ್ನು ವೇದಿಕೆ ಮೇಲೆ ಕೂರಿಸಿದ್ದಕ್ಕೆ ವಿಜಯ್ ಕುಮಾರ್ ಎಂಬುವರ ಬಣ ಆಕ್ಷೇಪ ತೆಗೆದಿದೆ. ಸಂತೋಷ್ ಅವರು ಮೂಲ ಬಿಜೆಪಿ ಮುಖಂಡರಿಗೆ ತೊಂದರೆ ಕೊಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮೂಲ ಬಿಜೆಪಿಗರ ಸುಳ್ಳು ಕೇಸು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಅಂಥವರಿಗೆ ವೇದಿಕೆಯಲ್ಲಿ ಮಣೆ ಹಾಕುವುದಾದರೆ ನಾವೇಕೆ ಬೆಂಬಲ ಕೊಡಬೇಕು ಎಂದು ತಗಾದೆ ತೆಗೆದಿದ್ದು, ಮಾರಾಮಾರಿಗೆ ಎಡೆ ಮಾಡಿಕೊಟ್ಟಿತು. ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ ಅವರ ಸಮ್ಮುಖದಲ್ಲಿ ಒಂದೇ ಪಕ್ಷದ ಎರಡು ಬಣದ ಕಾರ್ಯಕರ್ತರು, ಮುಖಂಡರು ಕೈ ಕೈ ಮಿಲಾಯಿಸಿ ಶಿಸ್ತಿನ ಪಕ್ಷದ ಅಶಿಸ್ತನ್ನು ಹೊರ ಹಾಕಿದರು.

ಹಾಸನದ ಬಿಜೆಪಿ ಬಣ ರಾಜಕೀಯ ಬಹಿರಂಗ 

ಇದನ್ನು ಕಂಡ ಸಚಿವರು ಎಷ್ಟೇ ಸಮಾಧಾನ ಪಡಿಸಿದರೂ, ಜಗಳಕ್ಕೆ ಇಳಿದಿದ್ದವರ ಸಿಟ್ಟು, ಆಕ್ರೋಶ ತಣಿಯಲಿಲ್ಲ. ಕಡೆಗೆ ಒಬ್ಬರ ಪರ ನಿಂತರೆ ಇನೊಬ್ಬರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಲ್ಲರೂ ಕಾಲಿಗೆ ಬುದ್ಧಿ ಹೇಳಿದರು. ಈ ಬೆಳವಣಿಗೆಯಿಂದ ಅರಸೀಕೆರೆ ಬಿಜೆಪಿಯಲ್ಲಿ ಬಣ ರಾಜಕೀಯ ಇರುವುದು ಬೀದಿಗೆ ಬಂದಿದೆ. ಇನ್ನೂ ಮತಯಾಚಿಸಲು ಬಂದಿದ್ದ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ದಿಕ್ಕುತೋಚದೆ ವೇದಿಕೆಯಲ್ಲಿ ಕೂರಬೇಕಾಯಿತು. ಅರಸೀಕೆರೆ ಬಿಜೆಪಿಯಲ್ಲಿ ಮೂರ್ನಾಲ್ಕು ಬಣಗಳಿದ್ದು ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ‌ ನೀಡಲಿದ್ದಾರೆ ಎಂಬುದು ಗೌಪ್ಯವಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಕುಡುಕ ಎಂದ ಈಶ್ವರಪ್ಪರನ್ನು DK Shivakumar ಮಹಿಷಾಸುರನಿಗೆ ಹೋಲಿಸಿದ್ದು ಏಕೆ?

ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ಗೆ ಚುನಾವಣೆ ಘೋಷಣೆಯಾಗಿದೆ. 2022ರ ಜನವರಿ 5ರಂದು 25 ಪರಿಷತ್​ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು. ಮೂರು ಪಕ್ಷಗಳ ಘಟಾನುಘಟಿ ನಾಯಕರು ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿವೆ.
Published by:Kavya V
First published: