ಹಾಸನ(ಆ.14): ಜಿಲ್ಲೆಯಲ್ಲಿ ಆಗಸ್ಟ್ 2ನೇ ತಾರೀಕಿನಿಂದ 8ರವರೆಗೂ ಹೆಚ್ಚಿನ ಮಳೆಯಾಗಿದೆ. ಹೀಗಾಗಿ ಹೆಚ್ಚಿನ ಪರಿಹಾರ ನೀಡಲು ಹಣ ಬೇಕಾದಲ್ಲಿ ವಿಶೇಷ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ. ಈ ಸಂಬಂಧ ಮಾಧ್ಯಮದವರೊಂದಿಗೆ ಮಾತಾಡಿದ ಅವರು, ಈ ಬಾರಿ ವಾಡಿಕೆ ಮಳೆ 54 ಮಿಲಿ ಮೀಟರ್ ಆಗಬೇಕಿತ್ತು. ಆದರೆ, 187 ಮಿಲಿ ಮೀಟರ್ ಆಗಿದೆ ಎಂದರು.
ಸಕಲೇಶ್ವರದಲ್ಲಿ ತಾಲೂಕಿನಲ್ಲಿ ಸಾಧಾರಣ ಮಳೆ ಆಗಬೇಕಿತ್ತು. ಈ ಬಾರಿ 185 ಮಿಲಿ ಮೀಟರ್ ಎಂದರೇ ಯಥೇಚ್ಚ ಮಳೆಯಾಗಿದೆ. ಕಳೆದ ಬಾರಿಗಿಂತ ಈ ಸಲ ಸುರಿದ ಮಳೆಗೆ ಸಕಲೇಶಪುರ, ಆಲೂರು, ಬೇಲೂರು ತತ್ತರಿಸಿದೆ. ಬೆಳೆ ಹಾನಿಯಾಗಿ ಸಮಸ್ಯೆಯಾಗಿದೆ ಎಂದರು ಡಿಸಿ ಗಿರೀಶ್.
ಕಳೆದ ವರ್ಷದ ಮಳೆಗೂ ಮತ್ತು ಈ ವರ್ಷದ ಮಳೆಗೂ ವ್ಯತ್ಯಾಸ ಎಂದರೆ ಗಾಳಿ ಹೆಚ್ಚಾಗಿ ಬಹಳಷ್ಟು ನಷ್ಟ ಉಂಟಾಗಿದೆ. 332 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. 700-800 ಎಲೆಕ್ಟ್ರಿಕಲ್ ಪೋಲ್ಸ್ ನಷ್ಟವಾಗಿದೆ. ಇವೆಲ್ಲವನ್ನೂ ರೀಪ್ಲೇಸ್ ಮಾಡಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ 330 ಗ್ರಾಮಗಳ ವಿದ್ಯುತ್ ರೀಸ್ಟೋರ್ ಮಾಡಲಾಗಿದೆ. ಇನ್ನು 30 ಗ್ರಾಮಗಳ ವಿದ್ಯುತ್ ಕೆಲಸ ಬಾಕಿ ಇದೆ. ಇಂದು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಈ ಸಲ ಜೋರು ಸುರಿದ ಮಳೆಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತ ಕುಟುಂಬಕ್ಕೆ 4 ಲಕ್ಷ ಪರಿಹಾರ ನೀಡಲಾಗಿದೆ. ಜತೆಗೆ ಎರಡು ಜಾನುವಾರುಗಳು ಬಕಿಯಾಗಿವೆ. ಎಷ್ಟು ಬೆಳೆ ನಷ್ಟವಾಗಿದ ಎಂದು ಮೊದಲನೇ ಸುತ್ತಿನ ಮಾಹಿತಿ ಸಂಗ್ರಹ ಮಾಡಲಾಗಿದೆ. ಅಗ್ರಿಕಲ್ಚರ್ ಭೂಮಿಯಲ್ಲಿ ಸುಮಾರು 4460 ಹೆಕ್ಟೇರ್ ಬೆಳೆ, ಆರ್ಟಿಕಲ್ಚರ್ ವಿಭಾಗದಲ್ಲಿ 940 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದರು.
ಇದನ್ನೂ ಓದಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಕೀಲ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್
ಶಾಲೆಗಳು, ರಸ್ತೆಗಳು, ಸರ್ಕಾರಿ ಕಟ್ಟಡಗಳು, ಸಾರ್ವಜನಿಕರ ಆಸ್ತಿ ಎಲ್ಲ ನಾಶವಾಗಿದೆ. ನಾವು ಸರ್ಕಾರ ಮುಂದೆ ಈ ಬಗ್ಗೆ ಪ್ರಸ್ತಾಪ ಇಟ್ಟು, ಎಲ್ಲರಿಗೂ ಪರಿಹಾರ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು ಜಿಲ್ಲಾಧಿಕಾರಿ ಗಿರೀಶ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ