HOME » NEWS » District » HARASSMENT FOR THE MAN WHO WENT TO SAUDI ARABIA SEEKING EMPLOYMENT FAMILIES REQUEST TO RETURN TO INDIA HK

ಉದ್ಯೋಗ ಅರಸಿ ಸೌದಿಗೆ ಹೋದ ಕಾರವಾರದ ವ್ಯಕ್ತಿಗೆ ಬೇರೆ ಕೆಲಸ ನೀಡಿ ಕಿರುಕುಳ ; ವಾಪಸ್​ ಕರೆಸುವಂತೆ ಕುಟುಂಬಸ್ಥರ ಮನವಿ

ಬಾಲಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ತನ್ನ ಸಮಸ್ಯೆಯನ್ನ ಹೇಳಿಕೊಂಡು ವೀಡಿಯೋ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ದು ಇದೀಗ ಆತನ ಹೆಂಡತಿ ಸಹಾಯ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

news18-kannada
Updated:June 23, 2020, 4:25 PM IST
ಉದ್ಯೋಗ ಅರಸಿ ಸೌದಿಗೆ ಹೋದ ಕಾರವಾರದ ವ್ಯಕ್ತಿಗೆ ಬೇರೆ ಕೆಲಸ ನೀಡಿ ಕಿರುಕುಳ ; ವಾಪಸ್​ ಕರೆಸುವಂತೆ ಕುಟುಂಬಸ್ಥರ ಮನವಿ
ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಕುಟುಂಬ ಸದಸ್ಯರು
  • Share this:
ಕಾರವಾರ(ಜೂ.23): ವಿದೇಶಗಳಲ್ಲಿ ಕೆಲಸ ಸಿಕ್ಕರೆ ಉತ್ತಮ ವೇತನ ಸಿಗುತ್ತದೆ ಎನ್ನುವ ಉದ್ದೇಶದಿಂದ ಸಾಕಷ್ಟು ಮಂದಿ ಭಾರತೀಯರು ವಿದೇಶಕ್ಕೆ ತೆರಳುತ್ತಾರೆ. ಆದರೆ, ಕಾರವಾರದ ಮೂಲದ ವ್ಯಕ್ತಿಯೋರ್ವನಿಗೆ ಸೌದಿ ಅರೇಬಿಯಾದಲ್ಲಿ ಬಯಸಿದ ಉದ್ಯೋಗ ಸಿಗದೆ ಸಂಬಳವೂ ಸಮಯಕ್ಕೆ ಸಿಗದೆ ಸಮಸ್ಯೆ ಸುಳಿಯಲ್ಲಿ ಸಿಲುಕಿ ತವರಿಗೆ ಕರೆಯಿಸಿಕೊಳ್ಳಲು ಸಾಮಾಜಿಕ ಜಾಲತಾಣದ‌ ಮೂಲಕ ಮನವಿ ಮಾಡಿದ ಘಟನೆ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಮಾಜಾಳಿ ಗ್ರಾಮದ ನಿವಾಸಿ ಬಾಲಕೃಷ್ಣ 2019 ರ ಆಗಸ್ಟ್‌ನಲ್ಲಿ ಸೌದಿ ಅರೇಬಿಯಾದ ಕಂಪೆನಿಯೊಂದರಲ್ಲಿ ಡ್ರೈವರ್ ಕೆಲಸ ಖಾಲಿ ಇದೆ ಎಂದು ವಿದೇಶಕ್ಕೆ ತೆರಳಿದ್ದ. ಆದರೆ, ಡ್ರೈವರ್ ಕೆಲಸಕ್ಕೆಂದು ಕರೆಸಿಕೊಂಡವರು ಆತನನ್ನ ಪೇಪರ್ ತಯಾರಿಕಾ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಹಾಕಿದ್ದು ಆತನ ಪಾಸ್‌ಪೋರ್ಟ್‌ನ್ನು ಸಹ ಕಸಿದುಕೊಂಡು ಕೂಡಿ ಹಾಕಿದ್ದಾರೆ. ದಿನಕ್ಕೆ 10 ತಾಸುಗಳಿಗೂ ಅಧಿಕ ಸಮಯ ಕೆಲಸ ಮಾಡಲು ಒತ್ತಾಯಿಸುತ್ತಿದ್ದು, ಕಳೆದ ಕೆಲ ತಿಂಗಳಿನಿಂದ ಸರಿಯಾಗಿ ವೇತನವನ್ನೂ ನೀಡದೇ ಸತಾಯಿಸುತ್ತಿದ್ದಾರೆ. ಇದರಿಂದ ಬೇಸತ್ತ ಬಾಲಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ತನ್ನ ಸಮಸ್ಯೆಯನ್ನ ಹೇಳಿಕೊಂಡು ವೀಡಿಯೋ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ದು ಇದೀಗ ಆತನ ಹೆಂಡತಿ ಸಹಾಯ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಕೆಲಸ ಇದೆ ಎಂದು ಕರೆಸಿಕೊಂಡಿದ್ದ ಕಂಪೆನಿಯವರು ತನ್ನ ಗಂಡನಿಗೆ ಮೋಸ ಮಾಡಿದ್ದು ಇದೀಗ ಹೆಚ್ಚು ಕೆಲಸ ಮಾಡಿಕೊಳ್ಳುತ್ತಿರುವುದರ ಜೊತೆಗೆ ಊಟ, ತಿಂಡಿ ಸರಿಯಾಗಿ ನೀಡದೇ ತೊಂದರೆ ನೀಡುತ್ತಿದ್ದಾರೆ. ಫೋನ್ ಮಾಡಿ ಮಾತನಾಡುವ ವೇಳೆ ತನಗಾಗುತ್ತಿರುವ ಸಮಸ್ಯೆಯನ್ನ ಹೇಳಿಕೊಂಡು ಕಣ್ಣೀರಿಡುತ್ತಿದ್ದು, ಇದರಿಂದ ಆತನ ಹೆಂಡತಿ ಹಾಗೂ ಮಕ್ಕಳಿಗೂ ಆತಂಕ ಉಂಟಾಗಿದೆ. ಹೀಗಾಗಿ ತನ್ನ ಗಂಡನನ್ನು ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಡಿ ಅಂತಾ ಹೆಂಡತಿ ಮಂಗಳಾ ಬೇಡಿಕೊಂಡಿದ್ದಾರೆ.

ಇನ್ನು ಉತ್ತಮ ಕೆಲಸ ಹಾಗೂ ವೇತನ ಸಿಗುತ್ತದೆ ಎನ್ನುವ ಉದ್ದೇಶದಿಂದ ಸಾಕಷ್ಟು ಮಂದಿ ವಿದೇಶಕ್ಕೆ ಕೆಲಸಕ್ಕೆಂದು ತೆರಳುತ್ತಾರೆ. ಆದರೆ, ಇಂತಹ ಕಂಪೆನಿಗಳಿಂದಾಗಿ ಅಮಾಯಕರಿಗೆ ಅನ್ಯಾಯವಾಗುತ್ತಿದ್ದು ಜಿಲ್ಲಾಡಳಿತ ವಿದೇಶಾಂಗ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಆದಷ್ಟು ಬೇಗ ವಿದೇಶದಲ್ಲಿ ಸಿಲುಕಿರುವ ಬಾಲಕೃಷ್ಣನನ್ನ ವಾಪಸ್ ಕರೆತರಲು ಪ್ರಯತ್ನಿಸಬೇಕು ಅಂತಾ ಸ್ಥಳೀಯರು ಸಹ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಪೆನ್ನು, ಪುಸ್ತಕ ಹಿಡಿದ ಶಿಕ್ಷಕರ‌ ಕೈಗೆ ಸೌಟು ; ಜೀವನ ನಿರ್ವಹಣೆಗೆ ಆಹಾರ ಉದ್ಯಮಕ್ಕೆ ಇಳಿದ ಶಿಕ್ಷಕರು

ಇನ್ನು ಬಾಲಕೃಷ್ಣ ಈಗಾಗಲೇ ವಿದೇಶಾಂಗ ಇಲಾಖೆಗೂ ದೂರನ್ನ ನೀಡಿದ್ದು ಸಹಾಯಕ್ಕಾಗಿ ಕೇಳಿ ಕೊಂಡಿದ್ದಾನೆ. ಅದರಂತೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳೂ ಸಹಕರಿಸಿದಲ್ಲಿ ತಾನು ಆದಷ್ಟು ಬೇಗ ಭಾರತಕ್ಕೆ ಬರುವುದು ಸಾಧ್ಯವಾಗಲಿದ್ದು ದಯವಿಟ್ಟು ಸಹಾಯ ಮಾಡಿ ಅಂತಾ ಅಂಗಲಾಚಿಕೊಂಡಿದ್ದಾನೆ.
ಒಟ್ಟಾರೆ ವಿದೇಶಿ ಕೆಲಸದ ಆಸೆಯಿಂದ ತೆರಳಿದವನು ಇದೀಗ ಸಂಕಷ್ಟಕ್ಕೆ ಸಿಲುಕುವಂತಾಗಿರೋದು ನಿಜಕ್ಕೂ ದುರಂತವೇ. ಆದಷ್ಟು ಬೇಗ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ವಿದೇಶದಲ್ಲಿ ಸಿಲುಕಿದಾತನನ್ನ ಭಾರತಕ್ಕೆ ಕರೆತರಲು ಸಹಕರಿಸಬೇಕಿದೆ.
First published: June 23, 2020, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories