ಶಿವಮೊಗ್ಗ (ಫೆ.4): ಮಲೆನಾಡಿನಲ್ಲಿ ದಿನೇ ದಿನೇ ನೆಟ್ವರ್ಕ್ (Network) ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಡಿಜಿಟಲ್ ಇಂಡಿಯಾ (Digital India) ದಲ್ಲಿ ಎಲ್ಲವನ್ನೂ ಡಿಜಿಟಲೈಸೇಷನ್ ಮಾಡಲಾಗುತ್ತಿದೆ. ಆದರೆ ಮಲೆನಾಡಿನಲ್ಲಿ 2ಜಿ ನೆಟ್ವರ್ಕ್ ಸಹ ಸರಿಯಾಗಿ ಸಿಗುತ್ತಿಲ್ಲ. ದೂರದ ಊರುಗಳಲ್ಲಿ ನೆಟ್ವರ್ಕ್ ಸಮಸ್ಯೆ ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಮಾತಾಡೋಕು ಸರಿಯಾಗಿ ನೆಟ್ವರ್ಕ್ ಸಿಗಲ್ಲ. ಇನ್ನು ಆನ್ಲೈನ್ ಕ್ಲಾಸ್ (Online class), ವರ್ಕ್ ಫ್ರಮ್ ಹೋಮ್ (Work from home) ಕಥೆ ಏನ್ ಕೇಳ್ತೀರಾ. ನೆಟ್ವರ್ಕ್ಗಾಗಿ ದೂರದ ಬೆಟ್ಟ ಹುಡುಕಿ ಹೋಗ್ಬೇಕು ಅಷ್ಟೆ. ಹೀಗಾಗಿ ಹಲವರು ದೂರದ ಬೆಟ್ಟ-ಗುಡ್ಡದ ಮೇಲೆ ಕುಳಿತು ಆನ್ಲೈನ್ ಕ್ಲಾಸ್ ಕೇಳ್ತಾರೆ. ನಿರ್ಜನ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ಏನ್ ರಕ್ಷಣೆ ಇದೆ. ಅಪಾಯ ಕಟ್ಟಿಟ್ಟಬುತ್ತಿ. ಹೀಗೆ ಆನ್ ಲೈನ್ ಕ್ಲಾಸ್ ಕೇಳಿದ್ದ ಹುಡುಗಿಗೆ ಕಿಡಿಗೇಡಿ ಯುವಕ ಕಿರುಕುಳ ನೀಡಿರೋ ಪ್ರಕರಣ ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿಗೆ ಕಿಡಿಗೇಡಿ ಕಿರುಕುಳ
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಾರಲಗೋಡು ಸಮೀಪ ಆನ್ಲೈನ್ ಕ್ಲಾಸ್ ಕೇಳಲು ಹೋಗಿದ್ದ ಹುಡುಗಿಗೆ ಕಿಡಿಗೇಡಿ ಯುವಕ ಕಿರುಕುಳ ನೀಡಿದ್ದಾನೆ. ಯುವತಿ ನೆಟ್ವರ್ಕ್ ಹುಡುಕಿಕೊಂಡು ದೂರದ ಪ್ರದೇಶಕ್ಕೆ ತೆರಳಿದ್ರು. ಆ ಸ್ಥಳಕ್ಕೆ ಬಂದ ಹುಡುಗ ಆಕೆಯನ್ನು ಅಡ್ಡಗಟ್ಟಿದ್ದಾನೆ. ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಯುವತಿ ಕೂಗಾಡ್ತಿದ್ದಂತೆ ಪರಾರಿಯಾಗಿದ್ದಾರೆ.
ಕಿಡಿಗೇಡಿಗಾಗಿ ಹುಡುಕಾಟ
ಘಟನೆ ಬಳಿಕ ವಿದ್ಯಾರ್ಥಿನಿ ಮನೆಯವರಿಗೆ ವಿಷಯ ಮುಟ್ಟಿಸಿದ್ದಾಳೆ. ಯುವತಿಯನ್ನು ದಾರಿಯಲ್ಲಿ ಅಡ್ಡ ಹಾಕಿ ಕಿರುಕುಳ ನೀಡಿರುವ ಕಿಡಿಗೇಡಿ ಯುವಕ ಮೊಬೈಲ್ ಹಾಗೂ ಬೈಕ್ನನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳೀಯರು ಆತನಿಗಾಗಿ ಹುಡುಕಾಡಿದ್ದಾರೆ. ಅಕ್ಕ-ಪಕ್ಕದ ಗ್ರಾಮದಲ್ಲೂ ಹುಡುಕಿದ್ದಾರೆ. ಆತ ಸಾಗರ ತಾಲೂಕಿನ ಅರಳಗೋಡು ಗ್ರಾಮದ ಯುವಕ ಎನ್ನಲಾಗಿದೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Family Fight: ಅನ್ನ ಮಾಡಿದ್ದಕ್ಕೆ ಅತ್ತೆ-ಸೊಸೆ ಜಗಳ, ಅತ್ತೆ ಮೇಲೆ ಬಿಸಿ ಅನ್ನದ ತಿಳಿ ಎರಚಿದ ಸೊಸೆ
ನೆಟ್ವರ್ಕ್ ಸಮಸ್ಯೆ ಇದಕ್ಕೆಲ್ಲಾ ಕಾರಣ!
ಕೊರೊನಅ ಕಾರಣದಿಂದ ಸಾವಿರಾರು ಉದ್ಯೋಗಿಗಳು ಮಲೆನಾಡಿನ ತಮ್ಮ ಕುಗ್ರಾಮಗಳಿಗೆ ಆಗಮಿಸಿದ್ದರು. ಆದರೆ ನೆಟ್ವರ್ಕ್ ಸಮಸ್ಯೆಯಿಂದಾಗಿ ಮನೆಯ ಸಮೀಪದಲ್ಲಿ ಎಲ್ಲಿ ನೆಟ್ವರ್ಕ್ ಸಿಗುತ್ತದೆಯೋ ಅಲ್ಲಿ ಟೆಂಟ್ ನಿರ್ಮಿಸಿಕೊಂಡು ಕೆಲಸ ಮಾಡುತ್ತಿದ್ದರು. ಹೀಗೆ ನಿರ್ಮಿಸಿಕೊಂಡಿರುವ ಟೆಂಟ್ಗಳಲ್ಲಿ ವಿದ್ಯಾರ್ಥಿಗಳೂ ಆನ್ಲೈನ್ ಶಿಕ್ಷಣ ಪಡೆಯುತ್ತಿದ್ದರು.
ಮಳೆಗಾಲದಲ್ಲಿ ಬೆಟ್ಟ-ಗುಡ್ಡ ಹತ್ತಿದ್ರು ಕೂಡ ನೆಟ್ವರ್ಕ್ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ನೆಟ್ವರ್ಕ್ ಸಮಸ್ಯೆಗೆ ಬೇಸತ್ತು ಹೋಗಿದ್ದಾರೆ. ಸಾಗರ ಹಾಗೂ ಹೊಸನಗರ ತಾಲೂಕಿನ ಕುಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ಹೇಳತೀರದಾಗಿದೆ. ನೆಟ್ವರ್ಕ್ ಸಿಗಲಿ ಎಂಬ ಕಾರಣಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬೂಸ್ಟರ್ಗಳನ್ನು ಅಳವಡಿಸಿಕೊಂಡರೂ ನೆಟ್ವರ್ಕ್ ಮಾತ್ರ ಸಿಗುತ್ತಿಲ್ಲ. ಹೀಗಾಗಿ ಬೆಟ್ಟದ ಮೇಲೆ ಕೂತು ಲ್ಯಾಪ್ಟ್ಯಾಪ್ ಹಿಡಿದು ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಲೆನಾಡಲ್ಲಿ ನೆಟ್ವರ್ಕ್ಗಾಗಿ ಪ್ರತಿಭಟನೆ
ಮಲೆನಾಡು ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಬಗೆಹರಿಯುತ್ತಿಲ್ಲ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೊದಲ ಅರಳಾಪುರ ಗ್ರಾಮ ಪಂಚಾಯತಿ ಎದುರು ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಗೃಹ ಸಚಿವರ ತವರಲ್ಲೇ ಸಮಸ್ಯೆಯಿದ್ರು ಯಾರು ಗಮನಹರಿಸಿಲ್ಲ, ದೂರುಕೊಟ್ರು ಪ್ರಯೋಜನವಾಗಿಲ್ಲ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: Talguppa Express: ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನ ಕಾಲೇ ತುಂಡಾಯ್ತು!
ನೆಲಕ್ಕುರುಳಿದ ಟವರ್
ಶಿವಮೊಗ್ಗದ ತೀರ್ಥಹಳ್ಳಿ ಬಳಿ ಮೊಬೈಲ್ ಟವರ್ ನೆಲಕ್ಕುರಳಿ 6 ತಿಂಗಳಾಗಿದೆ ಆದ್ರೆ ಯಾವ ಅಧಿಕಾರಿ ಗಮನಹರಿಸಿಲ್ಲ. ಸ್ಥಳಕ್ಕೆ ಯಾರು ಭೇಟಿಯೂ ನೀಡಿಲ್ಲ.ಕಳೆದ ಮಳೆಗಾಲದ ಸಂದರ್ಭದಲ್ಲಿ ಗಾಳಿ-ಮಳೆಗೆ ಉರುಳಿ ಬಿದ್ದಿದ್ದ ಬಿದ್ದಿದ್ದ ಬಿಎಸ್ಎನ್ಎಲ್ ಟವರ್ನನ್ನು 6 ತಿಂಗಳಾದರೂ ಸರಿಪಡಿಸಿಲ್ಲ. ನೆಟ್ವರ್ಕ್ ನೀಡದ ಬಿಎಸ್ಎನ್ ಎಲ್ ಅಧಿಕಾರಿ ಮತ್ತು ಸಿಬ್ಬಂದಿ ಕೇಳಿದ್ರೆ ಅವ್ರು ಸರಿಯಾಗಿ ಉತ್ತರಿಸ್ತಿಲ್ಲ ಅಂತ ಗ್ರಾಮಸ್ಥರು ಹೇಳ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ