ಸಾಗರ ಭಾಗದ ಜನರಿಗೆ ಹಂದಿಗೋಡು ಕಾಯಿಲೆಯಿಂದ ಮುಕ್ತಿ ಎಂದು?; ಏನೆ ಮಾಡಿದರೂ ಸರ್ಕಾರದಿಂದ ಸಿಗುತ್ತಿಲ್ಲ ಸ್ಪಂದನೆ

ಎಂಡೋಸಲ್ಫಾನ್ ಪೀಡತರಿಗೆ ನೀಡು ಸೌಲಭ್ಯಗಳನ್ನು ನಮಗೂ ನೀಡಬೇಕು ಎಂದು ಅರ್ಜಿ ಹಿಡಿದು ಸರ್ಕಾರಿ ಕಚೇರಿ ಅಲೆದು, ಅಲೆದು ಇವರಿಗೆ ಸಾಕಾಗಿ ಹೋಗಿದೆ. ಪ್ರತಿಭಟನೆಗಳು, ಹೋರಾಟಗಳು ಮಾಡಿದರೂ ಸರ್ಕಾರಗಳು ಇವರ ಕಡೆಗೆ ಇನ್ನು ಕಣ್ಣು ತೆರೆದಿಲ್ಲ.

ಕಾಯಿಲೆಯಿಂದ ಬಳಲುತ್ತಿರುವ ರೋಗಿ

ಕಾಯಿಲೆಯಿಂದ ಬಳಲುತ್ತಿರುವ ರೋಗಿ

  • Share this:
ಸಾಗರ (ಜೂ.1): ಇವರನ್ನು ನೋಡಿದರೆ ಎಂತವರ ಹೃದಯ ಸಹ ಮಿಡಿಯುತ್ತೆ. ಅವರ ನರಳಾಟ, ನಡೆದಾಡಲೂ, ಕೂರಲು, ನಿಲ್ಲಲು ಆಗದೇ ಇರುವ ಪರಿಸ್ಥಿತಿ. ಜೀವನವೇ ಸಾಕಪ್ಪ ಸಾವು ಬರಬಾರದ ಎಂಬ ಮಾತು ಅವರ ಬಾಯಲ್ಲಿ ಕೇಳಿದರೂ ಅಚ್ಚರಿ ಇಲ್ಲ. ಈ ಗೋಳು ಒಂದೇರಡು ದಿನಗಳ ಯಾತನೆಯಲ್ಲ. ಇಂತಹ ನೋವಿನ, ಕಷ್ಟದ ಜೀವನನ್ನು ಇವರು 5 ದಶಕಗಳಿಂದ  ನಡೆಸುತ್ತಾ ಬಂದಿದ್ದಾರೆ ಎಂಬುದು ವಿಪರ್ಯಾಸ.

ಈ ರೀತಿ ಕುಜ್ಜ ದೇಹವನ್ನು ಇವರು ಹುಟ್ಟಿದಾಗಿನಿಂದ ಪಡೆದಿಲ್ಲ. ನಮ್ಮ ನಿಮ್ಮ ರೀತಿಯೇ ಆರೋಗ್ಯವಾಗಿ  ಹುಟ್ಟಿ ಜೀವನ ನಡೆಸುತ್ತಿದ್ದರು. ಅದರೆ ಅದ್ಯಾವಾಗ ಅದೇನಾಯಿತೋ ನೋಡಿ, ಏಕಾಏಕಿ  ಮಹಾಮಾರಿ ರೋಗವನ್ನು ಇವರಿಗೆ ಅಪ್ಪಳಿಯಿಸೇ ಬಿಟ್ಟಿತು. 15 ರಿಂದ 18 ವರ್ಷ ವಯಸ್ಸಿನ  ಬಾಲಕರು ಮತ್ತು ಯುವಕರಲ್ಲಿ ಕಾಣಿಸಿಕೊಂಡ ಈ ರೋಗ ಈ ರೀತಿ ಕುಜ್ಜರನ್ನಾಗಿ ಮಾಡಿ ಬಿಟ್ಟಿದೆ.

ಒಂದು ಕಡೆ ಓಡಾಡುವುದು ಕಷ್ಟ, ದುಡಿಮೆ ಮಾಡಲು ಸಾಧ್ಯವಿಲ್ಲ. ಮತ್ತೊಂದು ಕಡೆ  ಹೊಟ್ಟೆ ತುಂಬಿಸಿಕೊಳ್ಳಲು ಕುಟುಂಬ ಸದಸ್ಯರನ್ನು ಅವಲಂಬಿಸುವ ಅನಿವಾರ್ಯತೆಯ ನಡುವೆ ಬುದುಕು ಸಾಗಿಸುತ್ತಾರೆ. ಈ ಒಂದು ಭೀಕರ ಕಾಯಿಲೆ ಇರೋದು ಸಾಗರ ತಾಲೂಕಿನಲ್ಲಿ. ಅದರಲ್ಲೂ ಪ್ರಮುಖವಾಗಿ ಹಂದಿಗೋಡು ಗ್ರಾಮದ ಸತ್ತಮುತ್ತಲು ಪ್ರದೇಶದಲ್ಲಿ.ಈ ರೋಗ ಏನು, ಯಾಕೆ ಬಂತು ಅಂತಾ ನಿಖರವಾಗಿ ಇನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. 1974 ರಲ್ಲಿ ಮೊದಲ ಬಾರಿಗೆ ಹಂದಿಗೋಡು ಗ್ರಾಮದಲ್ಲಿ ಕಂಡು ಬಂದ ಈ ಕಾಯಿಲೆಗೆ ಅದೇ ಹೆಸರನ್ನು ಕರೆಯುತ್ತಾ ಬಂದಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 450 ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಈ ಹಿಂದೆ ಸಾವಿರ ಜನರು ಇದರಿಂದ ನರಳುತ್ತಿದ್ದರು. ರೋಗಕ್ಕೆ ಚಿಕಿತ್ಸೆ ಇಲ್ಲದ ಕಾರಣ ಸಾಕಷ್ಟು ಜನ ಮೃತಪಟ್ಟಿದ್ದಾರೆ.

ಇದನ್ನೂ ಒದಿ: ಹುಬ್ಬಳ್ಳಿಯಲ್ಲಿ ಗಾಯಗೊಂಡಿದ್ದ ಹಾವಿನ ರಕ್ಷಣೆ; ಕಾಡಿಗೆ ಬಿಡೋ ಮೊದಲೇ 48 ಮರಿಗಳಿಗೆ ಜನ್ಮ ನೀಡಿದ ಕೊಳಕು ಮಂಡಲ

ಇತರೆ ವಿಕಲಚೇಚನರಿಗೆ ನೀಡುವಂತೆ ನಮಗೂ ತಿಂಗಳಿಗೆ 1400 ರೂಪಾಯಿ ಮಾಶಾಸನ ನೀಡುತ್ತಿದ್ದಾರೆ. ಇದರಿಂದ ನಮ್ಮ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂಬ ಅಳಲು ಇವರದ್ದು. ಈಗ ವೈದ್ಯರು ಪ್ರತಿ ತಿಂಗಳು ಮನೆ ಬಾಗಿಲಿಗೆ ಬಂದು, ನೋವು ನಿವಾರಕ, ಜ್ವರ ಮತ್ತು ಕಬ್ಬಿಣ ಅಂಶದ ಮಾತ್ರೆಗಳನ್ನು ಕೊಟ್ಟು ಹೋಗುತ್ತಿದ್ದಾರೆ. ಮಾತ್ರೆ ನುಂಗಿದ ಸಮಯದಲ್ಲಿ ಸ್ವಲ್ಪ ನೋವು ಕಡಿಮೆ ಇರುತ್ತೇ ಉಳಿದ ವೇಳೆ ನಮಗೆ ನರಕಯಾತನೆ ಎಂದು ಕಣ್ಣೀರು ಹಾಕುತ್ತಿದ್ದಾರೆ ಈ ಜನರು.

ಎಂಡೋಸಲ್ಫಾನ್ ಪೀಡತರಿಗೆ ನೀಡು ಸೌಲಭ್ಯಗಳನ್ನು ನಮಗೂ ನೀಡಬೇಕು ಎಂದು ಅರ್ಜಿ ಹಿಡಿದು ಸರ್ಕಾರಿ ಕಚೇರಿ ಅಲೆದು, ಅಲೆದು ಇವರಿಗೆ ಸಾಕಾಗಿ ಹೋಗಿದೆ. ಪ್ರತಿಭಟನೆಗಳು, ಹೋರಾಟಗಳು ಮಾಡಿದರೂ ಸರ್ಕಾರಗಳು ಇವರ ಕಡೆಗೆ ಇನ್ನು ಕಣ್ಣು ತೆರೆದಿಲ್ಲ.

ಜಿಲ್ಲೆಯವರೇ ಆದ ಯಡಿಯೂರಪ್ಪ ಈಗ ನಾಲ್ಕನೇ ಬಾರಿ ಸಿಎಂ ಆಗಿದ್ದಾರೆ. ಈಗಲಾದರೂ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಾ ಎಂಬ ಕೊನೆಯ ಆಶಾಭಾವನೆ ಹೊಂದಿದ್ದಾರೆ ಈ ಜನ. 5 ದಶಕಗಳಿಂದ ನರಳುತ್ತಿರುವ ಜನರಿಗೆ ಈಗಲಾದರೂ ಸರ್ಕಾರ ನೆರವಿನ ಹಸ್ತ ಚಾಚಬೇಕಿದೆ. ಅವರ ಬಾಳಿನಲ್ಲೇ ಮತ್ತೇ ನಗು ತರುವ ಕೆಲಸ ಮಾಡಬೇಕಿದೆ.
First published: