• Home
  • »
  • News
  • »
  • district
  • »
  • ಸಿಂಪಲ್ ಮ್ಯಾರೇಜ್ ಸ್ಟೋರಿ: ಕೋವಿಡ್ ನಿಯಮಗಳನ್ನು ಪಾಲಿಸಿ ಸರಳವಾಗಿ ವಿವಾಹವಾದ ವಿಕಲಾಂಗಚೇತನ

ಸಿಂಪಲ್ ಮ್ಯಾರೇಜ್ ಸ್ಟೋರಿ: ಕೋವಿಡ್ ನಿಯಮಗಳನ್ನು ಪಾಲಿಸಿ ಸರಳವಾಗಿ ವಿವಾಹವಾದ ವಿಕಲಾಂಗಚೇತನ

ಸರಳ ವಿವಾಹ

ಸರಳ ವಿವಾಹ

ವಿಕಲಾಂಗ ಚೇತನ ಸರಳವಾಗಿ ಮತ್ತು ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ವಿವಾಹವಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.

  • Share this:

ಕೊಡಗು : ಕೊರೋನಾ ಸೋಂಕು ರಣವೇಗದಲ್ಲಿ ಎಲ್ಲರನ್ನೂ ಸುತ್ತಿಕೊಳ್ಳುತ್ತಿರುವುದರಿಂದ ಸರ್ಕಾರ ಮದುವೆಗೂ ಹೆಚ್ಚು ಜನರು ಸೇರುವಂತಿಲ್ಲ ಎಂದು ನಿರ್ಬಂಧಿಸಿದೆ. ಆದರೂ ಎಷ್ಟೋ ಜನರು ಅದನ್ನೆಲ್ಲಾ ಗಾಳಿಗೆ ತೂರಿ ಅದ್ಧೂರಿಯಾಗಿಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅದೆಷ್ಟೋ ಘಟನೆಗಳು ರಾಜ್ಯದಲ್ಲಿ ಕೋವಿಡ್ ಸೋಂಕು ಮತ್ತಷ್ಟು ಹೆಚ್ಚಳವಾಗುವುದಕ್ಕೆ ಕಾರಣವಾಗಿವೆ. ಆದರೆ ಇಲ್ಲೊಬ್ಬ ವಿಕಲಾಂಗ ಚೇತನ ಸರಳವಾಗಿ ಮತ್ತು ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ವಿವಾಹವಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.


ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾಮದ ಅಯ್ಯಪ್ಪ ಬಡಾವಣೆಯ ನಿವಾಸಿಗಳಾದ ನಾಗರಾಜ್ ಮತ್ತು ಶಾಂತಾ ದಂಪತಿಯ ಹಿರಿಯ ಪುತ್ರ ಪರುಷೋತ್ತಮ್ ಅದೇ ಗ್ರಾಮದ ಅಂತರ್ ಜಾತಿಯ ಹುಡುಗಿಯನ್ನು ತೀರಾ ಸರಳವಾಗಿ ವಿವಾಹವಾಗಿ ಎಲ್ಲರಿಗೂ ಮಾದರಿಯಾಗಿದ್ದಾನೆ. ನವವಿವಾಹಿತೆ ಗೀತಾ ಮಡಿಕೇರಿ ತಾಲ್ಲೂಕಿನ ನೀರುಕೊಲ್ಲಿ ಗ್ರಾಮದ ಸೋಮಣ್ಣ ಮತ್ತು ಜಾನಕಿಯ ಪುತ್ರಿ. ಆದರೆ ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಗೀತಾ ಅವರ ತಂದೆ, ತಾಯಿ ಇಬ್ಬರು ಮೃತಪಟ್ಟಿದ್ದರು. ಹೀಗಾಗಿ ಮರಗೋಡಿನಲ್ಲಿರುವ ಚಿಕ್ಕಮ್ಮನಾದ ಗೋಪಮ್ಮ ಅವರೇ ಗೀತಾ ಅವರನ್ನು ಸಾಕಿ ಸಲುಹುತ್ತಿದ್ದರು.


ಮದುವೆ ವಯಸ್ಸಿಗೆ ಬಂದಿದ್ದ ಗೀತಾಳನ್ನು ಪುರುಷೋತ್ತಮನಿಗೆ ಎರಡು ದಿನಗಳ ಹಿಂದೆಯೇ ಮದುವೆ ಮಾಡಿಕೊಡಲು ನಿಶ್ಚಯಿಸಿದ್ದರಂತೆ. ಆದರೆ ಕೊವಿಡ್ ದೇಶದಲ್ಲಿ ಮತ್ತೆ ಜಾಸ್ತಿಯಾಗಿ ಲಾಕ್ ಡೌನ್ ಜಾರಿಯಾಗಿದ್ದರಿಂದ ಮೊದಲೇ ನಿಗದಿಯಾಗಿದ್ದಂತೆ ಗುರುವಾರ ವಿವಾಹ ನೆರವೇರಿಸಿದ್ದಾರೆ. ಕಿವಿ ಕೇಳದ, ಮಾತು ಬಾರದ ಪುರಷೋತ್ತಮ್ ಲಾಕ್ ಡೌನ್ ಇದ್ದರಿಂದ ಕೇವಲ 20 ಜನರ ನಡುವೆ ವಧು ಗೀತಾಳ ಮನೆಯಲ್ಲಿಯೇ ಸರಳವಾಗಿ ವಿವಾಹವಾಗಿದ್ದಾರೆ. ವಧು-ವರರು ಮತ್ತು ಸಂಬಂಧಿಕರು ದೇವಾಲಯದಿಂದ ಬರುತ್ತಿದ್ದಂತೆ ಮನೆಯ ಎಂಟ್ರಿಯಲ್ಲೆ ಇರಿಸಿದ್ದ ಸ್ಯಾನಿಟೈಸರ್ ಬಳಸಿ ವಧುವಿನ ಮನಗೆ ಆಗಮಿಸಿದ್ರು. ಮೊದಲು ಸ್ಯಾನಿಟೈಸರ್ ಹಾಕಿ, ಮಾಸ್ಕ್ ಧರಿಸಿ ಮತ್ತು ದೈಹಿಕ ಅಂತರ ಕಾಯ್ದುಕೊಂಡು ಮನೆಗೆ ಕಾಲಿರಿಸಿದರು.

Published by:Kavya V
First published: