ಬುಟ್ಟಿ ನೇಯುವವರ ಆರ್ಥಿಕ ಸ್ಥತಿ ಗಂಭೀರ, ಮೂಲೆ ಸೇರಿತು ತಯಾರಾದ ಬುಟ್ಟಿಗಳು..!

ಎಂದೂ ಕೇಳಿಕಂಡರಿಯದ ಈ ಕೊರೋನಾ ಲಾಕ್ ಡೌನ್ ಬುಟ್ಟಿ ನೇಯುವ ಶ್ರಮಿಕ ಕುಟುಂಬದ ಮೇಲೆ ಆಗಾದ ಪರಿಣಾಮ ಬೀರಿದೆ.

news18-kannada
Updated:May 29, 2020, 1:13 AM IST
ಬುಟ್ಟಿ ನೇಯುವವರ ಆರ್ಥಿಕ ಸ್ಥತಿ ಗಂಭೀರ, ಮೂಲೆ ಸೇರಿತು ತಯಾರಾದ ಬುಟ್ಟಿಗಳು..!
ಪ್ರಾತಿನಿಧಿಕ ಚಿತ್ರ
  • Share this:
ಕಾರವಾರ: ಕೊರೋನಾ ಲಾಕ್ ಡೌನ್ ನಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರ ಶ್ರಮಿಕ ಕುಟುಂಬಗಳು ಲೆಕ್ಕಕ್ಕೆ ಸಿಗಲ್ಲ ಕೆದಕಿ ತೆಗೆದ್ರೆ ಅದಷ್ಟೊ ಕುಟುಂಬ ಇವತ್ತು ಬೀದಿಗೆ ಬೀಳುವ ಆತಂಕ ದಲ್ಲಿ ಇದ್ದಾರೆ.

ಹಾಗೆಯೇ ಕಾರವಾರದಲ್ಲಿ ನೂರಕ್ಕೂ ಹೆಚ್ಚು ಬುಟ್ಟಿ ನೇಯುವ ಕುಲಕಸುಬಿನ ಕುಟುಂಬ ಆರ್ಥಿಕ ಸಮಸ್ಯೆ ಎದುರಿಸುತ್ತಿವೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಂದನಗದ್ದಾ ಅಂಬೇಡ್ಕರ ಕಾಲೋನಿಯಲ್ಲಿ ಸುಮಾರು ನೂರಕ್ಕು ಹೆಚ್ಚು ಶ್ರಮಿಕ ಕುಟುಂಬ ಬಿದಿರಿನ ಬುಟ್ಟಿ ನೇಯುವ ಕುಲಕಸುಬನ್ನ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ,  ಇದು ಅನುವಂಶಿಯವಾಗಿ ಬಂದತ್ತ ಕಸುಬು ಈ ಕಸುಬನ್ನೆ ನೆಚ್ಚಿಕೊಂಡು ಸಂಸಾರದ ನೌಕೆ ಸಾಗಿಸುತ್ತಿದ್ದ ನೂರಕ್ಕೂ ಹೆಚ್ಚು ಕುಟುಂಬಗಳು ಇವತ್ತು ಲಾಕ್ ಡೌನ್ ನಿಂದ ತಾವು ತಯಾರಿಸಿದ ಬುಟ್ಟಿ ಮಾರಾಟ ಮಾಡಲಾಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ..ಮದುವೆ ಮುಂಜಿ ಮತ್ತು ಇನ್ನಿತರೆ ಶುಭ ಕಾರ್ಯಕ್ಕೆ ಬಳಸುವ ಈ ಬಿದಿರಿನ ಬುಟ್ಟಿಗಳು ಇವತ್ತು ಬುಟ್ಟಿ ತಯಾರಕರ ಮನೆಯ ಮೂಲೆ ಸೇರಿವೆ.

ಇನ್ನೂ ಈ ಕುಟುಂಬಸ್ಥರು  ಈ ಬಿದಿರಿನ ಬುಟ್ಟಿ ನೆಯ್ದು ಮಾರಾಟ ಮಾಡಿ ಅದ್ರಿಂದ ಬಂದ ಹಣದಲ್ಲಿ ಸಂಸಾರ ಸಾಗಿಸುವವದು ನೂರಾರು ವರ್ಷದಿಂದ ನಡೆದುಕೊಂಡು ಬಂದಿದೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಭಿನ್ನಮತೀಯರ ಕಹಳೆ; ಕೊರೋನಾ ಸಂಕಷ್ಟದಲ್ಲೂ ಬಿಎಸ್‌ವೈ ಸ್ಥಾನಕ್ಕೆ ಸಂಚಕಾರ?

ಆದರೆ ಈ ವರ್ಷ ಎಂದೂ ಕೇಳಿಕಂಡರಿಯದ ಈ ಕೊರೋನಾ ಲಾಕ್ ಡೌನ್ ಬುಟ್ಟಿ ನೇಯುವ ಶ್ರಮಿಕ ಕುಟುಂಬದ ಮೇಲೆ ಆಗಾದ ಪರಿಣಾಮ ಬೀರಿದೆ.

ನೇರವಾಗಿ ಈ ಕುಟುಂಬದ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಕೊಟ್ಟಿದ್ದು ಈ ಕುಟುಂಬ ಮುಂದೇನು ಎನ್ನುವಂತಾಗಿದೆ.ಇದನ್ನೂ ಓದಿ: ಜೂನ್ ಅಂತ್ಯದೊಳಗೆ ರಾಜ್ಯ ಸಂಪುಟ ವಿಸ್ತರಣೆ; ಹೆಚ್ಚುವರಿಯಾಗಿ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ?

ಕೊರೋನಾ ಲಾಕ್ ಡೌನ್ ನಿಂದ ಬಿದಿರಿನ ಬುಟ್ಟಿ ನೇಯುವ ಕುಟುಂಬ ಬೀದಿಗೆ ಬೀಳುವ ಆತಂಕದಲ್ಲಿವೆ..ಕೂಡಲೆ ಶುಭ ಕಾರ್ಯಗಳು ಆರಂಭವಾಗಿ ಇವರು ತಯಾರಿಸಿದ ಬಿದಿರಿನ ಪರಿಕರಗಳಿಗೆ ಉತ್ತಮ ಬೆಲೆ ಸಿಗಲಿ..ಇಲ್ಲವಾದಲ್ಲಿ ಇವರ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ.
First published: May 29, 2020, 1:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading