ಬಳ್ಳಾರಿ (ಜೂನ್ 25): ವಿಜಯನಗರ ಜಿಲ್ಲೆಯಲ್ಲಿ ಅನ್ ಲಾಕ್ ಆಗಿರುವ ಹಿನ್ನೆಲೆಯಲ್ಲಿ, ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ನಿನ್ನೆಯಿಂದ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಎರಡನೇ ಅಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ, ಕಳೆದ ಏ. 15ರಂದು ಹಂಪಿ ಸ್ಮಾರಕ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಈಗ ಕೊರೊನಾ ಎರಡನೇ ಅಲೆ ಕಡಿಮೆಯಾದ ಹಿನ್ನೆಲೆಯಲ್ಲಿ ಸ್ಮಾರಕಗಳ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಒಂದೂವರೆ ತಿಂಗಳುಗಳ ಬಳಿಕ ಸ್ಮಾರಕಗಳ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಹಂಪಿ ವೀಕ್ಷಣೆ ಮಾಡಲು ಪ್ರತಿ ದಿನ ಮುಂಜಾನೆ 6 ರಿಂದ ಸಂಜೆ 5 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ.
ಪ್ರವಾಸಿಗರು ಆಫ್ಲೈನ್ ಸೇರಿದಂತೆ ಆನ್ಲೈನ್ ನಲ್ಲಿಯೂ ಟಿಕೆಟ್ ಪಡೆದು ಹಂಪಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಅನ್ವಯ ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ವೀಕ್ಷಣೆ ಮಾಡಬಹುದು. ಕಲ್ಲಿನ ತೇರು, ಕಮಲ್ ಮಹಲ್, ಲೋಟಸ್ ಮಹಲ್, ಮ್ಯೂಸಿಯಂ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಇನ್ನು ಮೊದಲ ದಿನವೇ ಹಂಪಿ ನೋಡಲು ಜನರ ಬರುತ್ತಿದ್ದು, ಕುಟುಂಬ ಸಮೇತರಾಗಿ ಹಂಪಿ ವೀಕ್ಷಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Bangalore Murder: ಬೆಂಗಳೂರಿನ ನಡುರಸ್ತೆಯಲ್ಲೇ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕತ್ತು ಸೀಳಿ ಬರ್ಬರ ಹತ್ಯೆ
ಐತಿಹಾಸಿಕ ಸ್ಥಳವಾದ ಹಂಪಿಯನ್ನ ವೀಕ್ಷಣೆ ಮಾಡಲು ಪ್ರವಾಸಿಗರು ಬರುತ್ತಿದ್ದು, ಹಂಪಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಪೌರ ಕಾರ್ಮಿಕರಿಂದ ಹಂಪಿಯನ್ನು ಸಂಪೂರ್ಣ ಸ್ವಚ್ಚಗೊಳಿಸಲು ನಿರ್ಧರಿಸಿ ನಿನ್ನೆ ಬೆಳಿಗ್ಗೆಯಿಂದಲೇ ವಿರೂಪಾಕ್ಷ ದೇವಸ್ಥಾನದಿಂದ ಪ್ರಮುಖ ಪ್ರವಾಸಿ ಸ್ಥಳಗನ್ನ ಸಂಪೂರ್ಣ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು.
ಮೊದಲ ದಿನವಾದ ಗುರುವಾರವೇ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿ ನೋಡಲು ಬಂದಿದ್ದು ಇನ್ನೂ ವಿಶೇಷವಾಗಿತ್ತು. ಎಲ್ಲ ಪ್ರವಾಸಿಗರು ತಪ್ಪದೆ ಮಾಸ್ಕ್, ಸ್ಯಾನಿಟೈಸ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿತ್ತು. ಅದರಂತೆ ಎಲ್ಲರೂ ಕೋವಿಡ್ ನಿಯಮಗಳನ್ನ ಕಡ್ಡಾಯವಾಗಿ ಪಾಲನೆ ಮಾಡತ್ತಿದ್ದರು. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆಯಿದ್ದು ಕೊರೊನಾ ನಿಯಮಗಳ ಪಾಲನೆ ಮಾಡುವುದು ಮುಖ್ಯವಾಗಿದೆ. ಪ್ರಮುಖವಾಗಿ ಕೇವಲ ಕರ್ನಾಟಕದಿಂದ ಮಾತ್ರ ಪ್ರವಾಸಿಗರು ಇಲ್ಲಿಗೆ ಬರುವುದಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಜನ ಹಂಪಿ ಸೌಂದರ್ಯ ಸವಿಯಲು ಬರುತ್ತಾರೆ.
ಇದನ್ನೂ ಓದಿ: Viral Video: ಮೀನಿನ ಹೊಟ್ಟೆಯಲ್ಲಿತ್ತು ಓಪನ್ ಮಾಡದ ವಿಸ್ಕಿ ಬಾಟಲ್; ಶಾಕ್ ಆದ ಮೀನುಗಾರ!
ಈ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ, ಪ್ರವಾಸಿ ಇಲಾಖೆ ಕಡ್ಡಾಯವಾಗಿ ಜನರು ಮಾಸ್ಕನ್ನ ಧರಿಸಿ ಅಂತ ಅಲ್ಲಲ್ಲಿ ಜಾಗೃತಿ ಫಲಕಗಳನ್ನು ಹಾಕುವುದರ ಮೂಲಕ ಮತ್ತು ಸೆಕ್ಯುರಿಟಿ ಗಾಡ್೯ ಮೂಲಕ ತಿಳಿಸುವ ಮೂಲಕ ಕೋವಿಡ್ ನಿಯಮಗಳ ಬಗ್ಗೆ ತಿಳಿಸುತ್ತಿದ್ದಾರೆ.
ಒಟ್ಟಾರೆಯಾಗಿ ಮೊದಲಿನ ಹಾಗೆ ಹಂಪಿ ಪ್ರವಾಸಿ ತಾಣವನ್ನ ನೋಡಲು ಜನ ಬರುತ್ತಿದ್ದು ಒಂದು ಕಡೆ ಖುಷಿ ಆದರೆ ಮತ್ತೊಂದು ಕಡೆ ಕೊರೊನಾ ಮಾರಿ ಬಗ್ಗೆ ಜನರಲ್ಲಿ ಭಯ ಇದ್ದಿದ್ದೇ.
(ವರದಿ: ವಿನಾಯಕ ಬಡಿಗೇರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ