ಬೈಕ್ ಸವಾರನನ್ನು ಸಾಯಿಸಿದ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತಿಯಾ, ನೀನು ಯಾವ್ ಸೀಮೆ ಕಮಿಷನರಯ್ಯ?: ಎಚ್. ವಿಶ್ವನಾಥ್ ವಾಗ್ದಾಳಿ

ಮೈಸೂರಿನ ಅಪಘಾತದ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿತ್ತು. ಆದರೆ ಅಂತಹ ವಿಚಾರದ ಚರ್ಚೆ ಬಿಟ್ಟು ಸಿಡಿಯನ್ನು ವಿಷ್ಣು ಚಕ್ರದಂತೆ ತಿರುಗಿಸಿದ್ದಾರೆ. ಆ ಸಿಡಿ ಹಿಡಿಯನ್ನ ವಿಷ್ಣುಚಕ್ರ ಅಂದುಕೊಂಡಿದ್ದಾರಾ? ಸದನದಲ್ಲಿ ಸಿಡಿ ಹಿಡಿದುಕೊಂಡು ಪ್ರದರ್ಶನ ಮಾಡಿದ್ದಾರೆ. ಇದರಿಂದ ಏನು ಸಿಕ್ತು‌ ಅಂತ ಪ್ರತಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದರು.

ಹೆಚ್‌. ವಿಶ್ವನಾಥ್.‌

ಹೆಚ್‌. ವಿಶ್ವನಾಥ್.‌

  • Share this:
ಮೈಸೂರು: ಮೈಸೂರು ರಿಂಗ್‌ ರಸ್ತೆ ಬಳಿ ವಾಹನ ತಪಾಸಣೆ ವೇಳೆ ಸಂಬಂಧಿಸಿದ ಅಪಘಾತ ಪ್ರಕರಣ ಸಂಬಂಧ, ಮೈಸೂರು ಪೊಲೀಸ್ ಆಯುಕ್ತರ ವಿರುದ್ದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಕ್ರೋಶ ಹೊರಹಾಕಿದ್ದಾರೆ. ಬೈಕ್ ಸವಾರನನ್ನು ಸಾಯಿಸಿದ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತಿಯಾ? ನೀನು ಯಾವ್ ಸೀಮೆ ಕಮಿಷನರಯ್ಯ..?. ಥೂ.. ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು ಅಂತ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ನಡೆದಿರುವ ಘಟನೆ ಖಂಡನೀಯ ಇಂತಹ ಘಟನೆಗಳಿಂದಾಗಿ ಜನರು ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಾರೆ, ಇದಕ್ಕೆ ಪೊಲೀಸರ ಅಚಾತುರ್ಯವೇ ಕಾರಣ ಅಂತ ಆರೋಪಿಸಿದರು. 

ಮೈಸೂರಿನ ಪೊಲೀಸ್ ಕಮಿಷನರ್ ಬೀದಿಗೆ ಬರಲ್ಲ. ಒಂದು ದಿನವು ಸಿಟಿ ರೌಂಡ್ ಹಾಕಲ್ಲ, ಆ ಮನುಷ್ಯ ಎಷ್ಟೊರ್ಷ ಆಯ್ತು ಮೈಸೂರಿಗೆ ಬಂದು ಎಂದು ಪ್ರಶ್ನೆ ಹಾಕಿದ ಹೆಚ್‌.ವಿಶ್ವನಾಥ್‌, ಅಷ್ಟು ಜನ ಟ್ರಾಫಿಕ್‌ ಡಿಸಿಪಿ, ಎಸಿಪಿಗಳಿದ್ದೀರಾ. ಏನ್ ಮಾಡ್ತಿದ್ದೀರಿ.? ಕೇವಲ ಟ್ರಾಫಿಕ್ ಪೊಲೀಸರಿಂದ ಟ್ರಾಫಿಕ್ ಕಂಟ್ರೋಲ್ ಆಗಲ್ಲ. ನೀವು ಅದರಲ್ಲಿ ಭಾಗಿಯಾಗಿ ವ್ಯವಸ್ಥೆಯನ್ನ ನಿಭಾಯಿಸಬೇಕು. ಮೈಸೂರಿನಲ್ಲಿ ಪೊಲೀಸರಿಗೆ ಜನಪ್ರತಿನಿಧಿಗಳು, ಜನರ‌ ಬಗ್ಗೆಯೂ ಗೌರವ ಇಲ್ಲ. ಇಂತಹ ಘಟನೆಗಳು ಪೊಲೀಸ್ ಫೇಲ್ಯೂರ್‌ಗಳನ್ನು ಬಿತ್ತರ ಮಾಡುತ್ತಿವೆ ಎಂದು ಗುಡುಗಿದರು.

ಮೈಸೂರಿನಲ್ಲಿ ಹಿನ್‌ಕಲ್‌ ರಿಂಗ್‌ರಸ್ತೆಯಲ್ಲಿ ನಡೆದ ಘಟನೆ ಖಂಡನೀಯ, ಇದು ಪೊಲೀಸರ ಅಚಾತುರ್ಯದಿಂದ ನಡೆದ ಘಟನೆಯಾಗಿದೆ. ಜನರನ್ನ ಓಡಾಡಿಸಿಕೊಂಡು ಬೈಕ್ ಹಿಡಿಯಿರಿ ಅಂತ ಕಾನೂನು ಎಲ್ಲಿದೆ? ಫೋಟೋ, ಸಿಸಿ ಕ್ಯಾಮೆರಾ ಇಲ್ವ, ಅದನ್ನ ಬಳಸಿಕೊಂಡು ಫೈನ್‌ ಹಾಕಿ. ಅದನ್ನು ಬಿಟ್ಟು, ಈ ಪೊಲೀಸರಿಗೆ  ಮಾನ ಮಾರ್ಯಾದೆ ಇಲ್ಲ. ಇವರೇನು ಪೊಲೀಸ್‌ಗಿರಿ ಮಾಡ್ತಿದ್ದಾರಾ ಅಥವಾ ಗೂಂಡಾಗಿರಿ ಮಾಡ್ತಿದ್ದಾರಾ. ಕಮಿಷನರ್ ಸುಮ್ಮನೆ ಕಚೇರಿ ಒಳಗೆ ಕೂರುವುದಲ್ಲ. ಹೊರಗೆ ಬರಬೇಕು. ಬೈಕ್ ಸವಾರನ ಸಾಯಿಸಿದ್ದಕ್ಕೆ ಪ್ರಶಂಸನಾ ಪತ್ರ ನೀಡ್ತಿಯಲ್ಲ, ನೀನು ಯಾವ ಸೀಮೆ ಕಮಿಷನರಯ್ಯ‌? . ಸಿಟಿ ಪೊಲೀಸ್ ಕಾಯ್ದೆ ಏನ್ ಹೇಳುತ್ತೆ ಗೊತ್ತಾ ನಿನಗೆ, ಓಡಿಸಿಕೊಂಡು ಬೈಕ್ ಹಿಡಿ ಅಂತ ಹೇಳುತ್ತಾ, ಸರ್ಕಾರದ ದುಡ್ಡಲ್ಲಿ ಕ್ಯಾಮೆರಾ, ಉಪಕರಣಗಳನ್ನು ಕೊಟ್ಟಿದ್ದೀವಿ. ಅದರಲ್ಲಿ ಪೋಟೋ ತೆಗೆದು ಫೈನ್ ಹಾಕು. ಅದು ಬಿಟ್ಟು ಇಂತಹ ವರ್ತನೆಯನ್ನು ಯಾರೂ ಕ್ಷಮಿಸಲ್ಲ‌ ಎಂದು ಅಸಮಾಧಾನ ಹೊರಹಾಕಿದರು.

ಇದನ್ನು ಓದಿ: ಸಿಡಿ ಶೂರರಿಗೆ ಧಿಕ್ಕಾರ – ಸುಧಾಕರ್ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕಿಯರಿಂದ ಪ್ರತಿಭಟನೆ, ಸಿಎಂ ಕಚೇರಿ ಮುತ್ತಿಗೆಗೆ ಯತ್ನ

ಮೈಸೂರು ಘಟನೆ ಬಗ್ಗೆ ಗೃಹಸಚಿವರು ಮಾತನಾಡಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, ಈ ಪೊಲೀಸರು ಸುದ್ದಿ ಕೊಟ್ಟರೆ ಅಲ್ವೆ ಗೃಹ ಸಚಿವರು ಮಾತನಾಡೋದು, ಇವರು ಸುದ್ದಿಯನ್ನೆ ಕೊಡೋದಿಲ್ಲ. ಮೈಸೂರಿನಲ್ಲಿ ಪೊಲೀಸರು ದಾರಿ ತಪ್ಪುತ್ತಿದ್ದಾರೆ. ಓಡಾಡಿಸಿಕೊಂಡು ವಾಹನ ಹಿಡಿಯೋದನ್ನ ಬಿಡಬೇಕು. ತಪ್ಪಿಸಿಕೊಂಡು ಓಡಿ ಹೋದರೆ ಕ್ಯಾಮೆರಾ, ಸಿಸಿ ಕ್ಯಾಮೆರಾ ಇದೆ ತಪಾಸಣೆ ಮಾಡಿ. ಈ ಸಂಬಂಧ ನಾನು ಗೃಹ ಸಚಿವರು, ಜಿಲ್ಲಾ ಮಂತ್ರಿ ಜೊತೆ ಮಾತನಾಡ್ತೀನಿ ಎಂದು ತಿಳಿಸಿದರು.

ಮೈಸೂರಿನ ಅಪಘಾತದ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿತ್ತು. ಆದರೆ ಅಂತಹ ವಿಚಾರದ ಚರ್ಚೆ ಬಿಟ್ಟು ಸಿಡಿಯನ್ನು ವಿಷ್ಣು ಚಕ್ರದಂತೆ ತಿರುಗಿಸಿದ್ದಾರೆ. ಆ ಸಿಡಿ ಹಿಡಿಯನ್ನ ವಿಷ್ಣುಚಕ್ರ ಅಂದುಕೊಂಡಿದ್ದಾರಾ? ಸದನದಲ್ಲಿ ಸಿಡಿ ಹಿಡಿದುಕೊಂಡು ಪ್ರದರ್ಶನ ಮಾಡಿದ್ದಾರೆ. ಇದರಿಂದ ಏನು ಸಿಕ್ತು‌ ಅಂತ ಪ್ರತಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದರು.
Published by:HR Ramesh
First published: