ಹುಬ್ಬಳ್ಳಿ: ಹೆಚ್. ವಿಶ್ವನಾಥ್ ನಮಗೆ ಹಿರಿಯರು. ಅವರು ಏನು ಹೇಳಿದ್ರೂ ನಾವು ಅದನ್ನು ಆಶಿರ್ವಾದ ಅಂತಾ ಭಾವಿಸ್ತೀವಿ. ಶೀಘ್ರದಲ್ಲೇ ಅವರಿಗೂ ರಾಜ್ಯ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸ್ಥಾನಮಾನ ನೀಡುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ಅವರಿಗೆ ಸಚಿವ ಸ್ಥಾನ ನೀಡಲಾಗಿಲ್ಲ. ಕಾನೂನು ಅಡೆತಡೆ ಬಗೆಹರಿದರೆ ತಕ್ಷಣ ಅವರನ್ನು ಮಿನಿಸ್ಟರ್ ಮಾಡ್ತೀವಿ. ಆದರೆ, ಹೆಚ್. ವಿಶ್ವನಾಥ್ ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಅವರೊಂದಿಗೆ ವೈಯಕ್ತಿಕವಾಗಿ ಚರ್ಚೆ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ಮಾತನಾಡಿರುವ ಅವರು, "ಮಾಜಿ ಸಚಿವ ಯತ್ನಾಳ್ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಬಹಿರಂಗವಾಗಿ ಹೇಳಿಕೆ ಕೊಡದಂತೆ ಮನವಿ ಮಾಡುತ್ತೇನೆ. ಯತ್ನಾಳ್ ಅವರಿಗೂ ಸ್ಥಾನಮಾನ ಸಿಗಬೇಕೆಂಬುದು ನಮ್ಮ ಆಗ್ರಹವಿದೆ. ಸಿ.ಪಿ. ಯೋಗೇಶ್ವರ್‌ಗೆ ಸ್ಥಾನಮಾನ ಕೊಟ್ಟಿದ್ದು ಯೋಗ್ಯವಿದೆ. ಯೋಗೇಶ್ವರ್ ಬಗ್ಗೆ ಏನೆ ದಾಖಲೆ ಇದ್ದರೆ ವರಿಷ್ಠರಿಗೆ ಕೊಡಲಿ, ತಪ್ಪಿದ್ದರೆ ಕ್ರಮ ಕೈಗೊಳ್ತಾರೆ.
ಇನ್ನೂ ಸಿಡಿ ಬಿಡುಗಡೆ ವಿಚಾರ ನನಗೆ ಗೊತ್ತಿಲ್ಲ. ವಿಜಯೇಂದ್ರ ಸರ್ಕಾರ ಆಡಳಿತದಲ್ಲಿ ಎಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ. ನಾನು ಸಚಿವನಾದರೂ ಇದುವರೆಗೆ ಯಾವುದೇ ಕೆಲಸಕ್ಕೆ ಕರೆ ಮಾಡಿಲ್ಲಾ. ಯಡಿಯೂರಪ್ಪ ಕುಟುಂಬ ರಾಜಕೀಯ ಮಾಡುತ್ತಿದ್ದಾರೆ ಅನ್ನೋದು ಸುಳ್ಳು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Covid-19 Vaccine: ಬೆಂಗಳೂರಿನ ಎಲ್ಲೆಲ್ಲಿ ಇಂದು ಕೊರೋನಾ ಲಸಿಕೆ ಲಭ್ಯ?; ಇಲ್ಲಿದೆ ಪೂರ್ತಿ ಮಾಹಿತಿ
ಬಿಜೆಪಿಯಲ್ಲಿ ಅನೇಕ ನಾಯಕರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ, ಮೊನ್ನೆ ನಡೆದ ಸಂಪುಟ ವಿಸ್ತರಣೆಯಲ್ಲಿ ಹಲವು ಹಿರಿಯರಿಗೆ ಅದರಲ್ಲೂ ಮೂಲ ಬಿಜೆಪಿ ನಾಯಕರಿಗೆ ಸಚಿವ ಸ್ಥಾನ ಸಿಗಲಿಲ್ಲ. ಹೀಗಾಗಿ ಸಾಮಾನ್ಯವಾಗಿ ಪಕ್ಷದಲ್ಲಿ ಅನೇಕರಿಗೆ ಅಸಮಾಧಾನ ಇದೆ. ಈ ಬಗ್ಗೆ ಹಲವರು ಬಹಿರಂಗವಾಗಿಯೇ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಹಿರಿಯ ನಾಯಕ ಸಂಸದ ಪ್ರಹ್ಲಾದ್ ಜೋಶಿ,
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ