HOME » NEWS » District » H NAGESH SAYS HE IS CONFIDENT OF GETTING BACK TO CABINET RRK SNVS

ನನ್ನ ರಾಜೀನಾಮೆಯಿಂದ ನಮ್ಮ ಬಾಂಬೆ ಟೀಂ ಸ್ನೇಹಿತರಿಗೆ ಬೇಸರ: ಮಾಜಿ ಸಚಿವ ನಾಗೇಶ್

ನಾನು ಅಚಾನಕ್ಕಾಗಿ ಶಾಸಕನಾದೆ. ಒಂದೊಳ್ಳೆ ಅವಕಾಶ ಸಿಕ್ಕಿ ಸಚಿವನೂ ಆದೆ. ಆದರೆ ಸಿಎಂಗೆ ಸಾಕಷ್ಟು ಒತ್ತಡ ಇರುವುದರಿಂದ ರಾಜೀನಾಮೆ ಪಡೆದಿದ್ದಾರೆ. ನನ್ನ ರಾಜೀನಾಮೆಯಿಂದ ನಮ್ಮ ಬಾಂಬೆ ಟೀಮ್ ಸ್ನೇಹಿತರಿಗೆ ಬೇಸರ ಇದೆ ಎಂದು ಮಾಜಿ ಸಚಿವ ಎಚ್ ನಾಗೇಶ್ ಹೇಳಿದ್ದಾರೆ.

news18-kannada
Updated:January 15, 2021, 9:38 AM IST
ನನ್ನ ರಾಜೀನಾಮೆಯಿಂದ ನಮ್ಮ ಬಾಂಬೆ ಟೀಂ ಸ್ನೇಹಿತರಿಗೆ ಬೇಸರ: ಮಾಜಿ ಸಚಿವ ನಾಗೇಶ್
ಹೆಚ್ ನಾಗೇಶ್
  • Share this:
ಕೋಲಾರ: ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ನೂತನವಾಗಿ  ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಚಿವ ಎಚ್ ನಾಗೇಶ್ ಅವರಿಗೆ ಮುಳಬಾಗಿಲು ತಾಲೂಕಿನಲ್ಲಿ ಅದ್ದೂರಿಯಾಗಿ ಬೆಂಬಲಿಗರು ಸ್ವಾಗತಿಸಿದ್ದಾರೆ. ಮುಳಬಾಗಿಲು ನಗರಕ್ಕೆ ಆಗಮಿಸಿ ಅಂಬೇಡ್ಕರ್ ವೃತ್ತದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಾಗೇಶ್ ಅವರನ್ನ ಪಟಾಕಿ ಸಿಡಿಸಿ ಹೂ ಸುರಿಮಳೆಗೈದ ಬೆಂಬಲಿಗರು ಭುಜದ ಮೇಲೆ ಎತ್ತಿಕೊಂಡು ಕುಣಿದಾಡುತ್ತಾ, ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಇದೇ ವೇಳೆ‌ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಸುಗಳಿಗೆ ಪೂಜೆ ಸಲ್ಲಿಸಿದ ನಾಗೇಶ್ ಅವರು, ಹಾಲು ಕೊಡುವ ಹಸುಗಳೆಂದರೆ ನನಗೆ ಪ್ರಾಣ, ಹಸುಗಳ ಸಂತತಿ ಇಲ್ಲದೆ ಹೋದರೆ ನಮಗೆ ಹಾಲಿನ ಕೊರತೆ ಎದುರಾಗಲಿದೆ. ಇವು ದೇವರ ಸಮಾನ ಎಂದು ತಿಳಿಸಿದರು.

ಮುಳಬಾಗಿಲು ಭೇಟಿ ನಂತರ ಕಾಂತರಾಜ್ ಸರ್ಕಲ್ ಬಳಿಯ ತಮ್ಮ‌ ಗೆಸ್ಟ್ ಗೌಸ್​ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಚ್ ನಾಗೇಶ್ ಅವರು, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರ ಬಗ್ಗೆ ಯಾವುದೇ ಬೇಸರವಿಲ್ಲ. ಸಿಎಂ ಯಡಿಯೂರಪ್ಪ ಅವರು ಕೇಳಿಕೊಂಡ ಬಳಿಕವೇ ರಾಜಿನಾಮೆ‌ ನೀಡಿದ್ದೇನೆ. ಈಗ ನೀಡಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡಿಕೊಂಡು ರಾಜ್ಯದ್ಯಂತ ಅಭಿವೃದ್ಧಿ ಕಾರ್ಯಗಳನ್ನ ನಡೆಸುವೆ ಎಂದರು.

ಇದನ್ನೂ ಓದಿ: DK Shivakumar: ಬಿಜೆಪಿ ಎಂಬುದು ಬ್ಲಾಕ್​ಮೇಲ್​ ಜನತಾ ಪಾರ್ಟಿ: ಡಿಕೆ ಶಿವಕುಮಾರ್​

ನಾನು ಅಚಾನಕ್ಕಾಗಿ ಶಾಸಕನಾದೆ ಎಂದ ನಾಗೇಶ್ ಅವರು, ಒಂದೊಳ್ಳೆ ಅವಕಾಶ ಸಿಕ್ಕಿ ಸಚಿವನೂ ಆದೆ. ಆದರೆ ಸಿಎಂಗೆ ಸಾಕಷ್ಟು ಒತ್ತಡ ಇರುವುದರಿಂದ ರಾಜೀನಾಮೆ ಪಡೆದಿದ್ದಾರೆ. ನನ್ನ ಬೆಂಬಲ ಕೂಡ ಮುಖ್ಯಮಂತ್ರಿಗಳಿಗೆ ಬೇಕಾಗಿತ್ತು. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಕೊಟ್ಟ ಮೊದಲನೆ ಮಂತ್ರಿ ನಾನು. ಮೊದಲು ನಾನು ರಾಜೀನಾಮೆ ಕೊಟ್ಟಾಗ ಸಾಕಷ್ಟು ಜನ ಆಡಿಕೊಂಡರು. ಮುಂದೆ ಬಿಜೆಪಿ ಸರ್ಕಾರ ರಚನೆಯಾದಾಗ ಒಳ್ಳೆಯ ಖಾತೆ ಕೊಟ್ಟಿದ್ದರು. ಅದಕ್ಕೆ ನಾನು ಎಂದಿಗೂ ಆಭಾರಿ. ನನಗೆ ಈಗಲೂ ಸಿಎಂ ಮಾತು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಸಿಗುತ್ತೆ ಎಂದಿದ್ದಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿ ಸಿಕ್ಕಿರುವುದು ತೃಪ್ತಿ ತಂದಿದೆ. ರಾಜ್ಯಾದಾದ್ಯಂತ ಸಮುದಾಯದ ಜನರ ಸೇವೆ ಮಾಡುತ್ತೇನೆ. ಯಾರೇ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದರೂ ಅವರಿಗೆ ನನ್ನ ಬೆಂಬಲ ಇರುತ್ತೆ. ಈ ವಿಚಾರದಲ್ಲಿ ಅಸಮಾಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Muniratna - ‘ನನ್ನ ಜೊತೆ ಬಂದವರು ಬ್ಯುಸಿಯಾಗಿದ್ದಾರೆ’ – ಮಿತ್ರಮಂಡಳಿ ಬಗ್ಗೆ ಮುನಿರತ್ನ ವ್ಯಂಗ್ಯ

ನನ್ನ ರಾಜಿನಾಮೆ, ಬಾಂಬೆ ಸ್ನೇಹಿತರಿಗೆ ಬೇಸರ ತಂದಿದೆ:

ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಸಿಎಂ ಯಡಿಯೂರಪ್ಪ ಕೇಳಿಕೊಂಡರು ಎಂದಿರುವ ನಾಗೇಶ್, “ನಮ್ಮ ಬಾಂಬೇ ಟೀಮ್​ನವರು ನನ್ನ ಕೈ ಬಿಡಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನನ್ನನ್ನ ಸಚಿವ ಸ್ಥಾನದಿಂದ ರಾಜಿನಾಮೆ ಪಡೆದಿದ್ದಕ್ಕೆ ಬಾಂಬೆ ಟೀಂ ಸ್ನೇಹಿತರಿಗೂ ಬೇಸರವಿದೆ. ಮುಂದೆ ನನಗೂ, ಮುನಿರತ್ನರಿಗೂ ಸಚಿವ ಸ್ಥಾನದ ಭರವಸೆಯನ್ನು ಸಿಎಂ ನೀಡಿದ್ದಾರೆ. ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆಯುತ್ತಾರೆ. ಆದರೆ, ಎಲ್ಲಾ ಬಿಟ್ಟು ಬಂದ ನಮಗೆ ಹೀಗಾದರೆ ಹೇಗೆಂದು ನಮ್ಮ ಬಾಂಬೆ ಮಿತ್ರ ಮಂಡಳಿ ಸದಸ್ಯರು ಮಾತನಾಡಿಕೊಂಡಿದ್ದಾರೆ. ಮುಂದೆ ಇಂತಹ ಬೆಳವಣಿಗೆ ಆಗದಂತೆ ನೋಡಿಕೊಳ್ಳುವುದಾಗಿಯು ಅವರು ತಿಳಿಸಿದ್ದಾರೆ.  ಸದ್ಯ ನಡೆದು ಹೋಗಿರುವ ಬೆಳವಣಿಗೆ ಒಳ್ಳೆಯದೇ ಆಗಿರಬಹುದು. ಮುಂದೆ ಕಾದು ನೋಡೋಣ” ಎಂದು ಮಾಜಿ ಅಬಕಾರಿ ಸಚಿವ ನಾಗೇಶ್ ತಿಳಿಸಿದರು.ವರದಿ: ರಘುರಾಜ್
Published by: Vijayasarthy SN
First published: January 15, 2021, 9:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories