ಮುಂದಿನ ವರ್ಷ ವಿಧಾನಸಭೆ ಚುನಾವಣೆ (Assembly Elections) ನಡೆಯಲಿದೆ. ಹೀಗಾಗಿ ಎಲ್ಲಾ ಪಕ್ಷಗಳು ತಯಾರಿ ಜೋರಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಜೊತೆಗೆ ಪಕ್ಷದ ಕಾರ್ಯಕರ್ತರು (Activist) ಹಾಗೂ ಮುಖಂಡರ ವಲಸೆ ಕೂಡ ಸಾಮಾನ್ಯವಾಗಿದೆ. ಚನ್ನಪಟ್ಟದಲ್ಲಿ ರೆಬೆಲ್ ಜೆಡಿಎಸ್ ಮುಖಂಡರು, ಮಾಜಿ ಸಿಎಂ ಹಾಗೂ ಚನ್ನಪಟ್ಟಣ ಶಾಸಕ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ವಿರುದ್ಧ ತಿರುಗಿ ಬಿದ್ದಿದ್ದಾರೆ. ಜೆಡಿಎಸ್ ಪಕ್ಷ ತೊರೆದು ಹಲವರು ಬಿಜೆಪಿ ಸೇರಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲಿ ಜೆಡಿಎಸ್ಗೆ ಕೊಂಚ ಹಿನ್ನೆಡೆಯಾಗಿದೆ.
ಮಾಜಿ ಸಿಎಂ ಹಾಗೂ ಚನ್ನಪಟ್ಟಣದ ಶಾಸಕರಾದ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಮುಖಂಡರಾದ ಕೂರಣಗೆರೆ ರವಿ (Cooranagere Ravi), ಜಯಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ರು. ಇಂದು ಈ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ರೆಬೆಲ್ಸ್ ವಿರುದ್ಧ ಗುಡುಗಿದ್ದಾರೆ
‘ನಾನು ವಿಚಲಿತನಾಗಿದ್ದೇನೆ ಎನ್ನಿಸುತ್ತಾ?’
ಪಕ್ಷ ಬಿಟ್ಟು ಹೋದವರ ಬಗ್ಗೆ ನಾನು ಮಾತಾಡಿಲ್ಲ. ಯಾವ ಕಾರ್ಯಕರ್ತರ ಬಗ್ಗೆ ಕೂಡ ಮಾತಾಡಿಲ್ಲ ಎಂದ್ರು. ಕಳ್ಳನ ಮನಸ್ಸು ಉಳ್ ಉಳ್ಗೆ ಅನ್ನೋ ಹಾಗೆ ಅವರಿಕೇಗೆ ಹಾಗೆ ಅನಿಸಿದೆ. ಅವರನ್ನೇ ಕೇಳ್ಬೇಕು ಎಂದ್ರು. ಈಗ ನನ್ನ ಬಗ್ಗೆ ಮಾತಾಡ್ತಾರೆ. ಇವರಿಗೆಲ್ಲಾ ರಾಜ್ಯದ ಖಜಾನೆ ಲೂಟಿ ಹೊಡೆದು ಇವರಿಗೆಲ್ಲಾ ದುಡ್ಡು ಹಂಚಬೇಕಿತ್ತಾ? ನಾಮಿನಿ ಹುದ್ದೆಗಳು ಕಾಂಗ್ರೆಸ್ ಕೈಯಲ್ಲಿತ್ತು, ನನ್ನ ಕೈಯಲ್ಲಿ ಇರಲಿಲ್ಲ. 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇನೆ. ಕ್ಷೇತ್ರದಲ್ಲಿ ನಾನು ಕೆಲಸ ಮಾಡಿಲ್ವಾ ಎಂದು ಕುಮಾರಸ್ವಾಮಿ ಹೇಳಿದ್ರು.
ಇದನ್ನೂ ಓದಿ: Press meet: ‘ಎಂಥಾ ಪಕ್ಷಕ್ಕೆ ದುಡಿದೆವು ಅಲ್ಲಿ ವಿಷ ಸರ್ಪವಿದೆ’, ಕುಮಾರಸ್ವಾಮಿ ವಿರುದ್ಧ ಮಾಜಿ JDS ಕಾರ್ಯಕರ್ತರ ಕಿಡಿ
‘ಚನ್ನಪಟ್ಟಣದ ಜನರೇ ಇದಕ್ಕೆಲ್ಲಾ ಉತ್ತರ ಕೊಡ್ತಾರೆ‘
ಯಾರ ಬಗ್ಗೆ ಕೂಡ ನಾನು ಮಾತಾಡೋದಿಲ್ಲ, ಇದಕ್ಕೆಲ್ಲಾ ಚನ್ನಪಟ್ಟಣದ ಜನರೇ ಉತ್ತರ ಕೊಡ್ತಾರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಕ್ಷೇತ್ರ ಜನರಿಗೆ ಶಾಸಕರು ಸಿಗೋದಿಲ್ಲ, ಎಷ್ಟು ಬಾರಿ ಚನ್ನಪಟ್ಟಣಕ್ಕೆ ಬಂದು ಸಭೆ ನಡೆಸಿದ್ದಾರೆಂದು ರೆಬೆಲ್ಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ ನಾನು ಕ್ಷೇತ್ರಕ್ಕಾಗಿ ಏನು ಕೆಲಸ ಮಾಡಿದ್ದೇನೆ ಅನ್ನೋದು ಜನರಿಗೆ ಗೊತ್ತಿದೆ. ಯಾರಿಗೂ ನಾನು ಉತ್ತರ ನೀಡಬೇಕಾಗಿಲ್ಲ ಎಂದ್ರು.
ಹೆಸರೇಳದೆ ಸಿ.ಪಿ ಯೋಗೇಶ್ವರ್ಗೂ ಕೊಟ್ರು ಟಾಂಗ್
ನಾನು ಮಂತ್ರಿಯಾಗ್ತೇನೆಂದು ಹೇಳಿಕೊಂಡು ಅಧಿಕಾರಿಗಳಿಗೆ ಹೆದರಿಸಿ ಏನೇನು ಮಾಡ್ತಿದ್ದಾರೆ ನಿಮಗೆ ಗೊತ್ತಿಲ್ವಾ ಅಂತ ಕುಮಾರಸ್ವಾಮಿ ಹೇಳಿದ್ರು. ಎಲ್ಲಾ ವಿಚಾರಗಳಲ್ಲೂ ಹಸ್ತಕ್ಷೇಪ ನಡೆಸುತ್ತಾರೆ. ಆದರೆ ಅದು ಎಲ್ಲಾ ಟೈಮ್ ನಲ್ಲೂ ನಡೆಯಲ್ಲ ಅಂತ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೆಸರು ಬಳಸದೇ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: Congress: ಸಿದ್ದರಾಮಯ್ಯ, ಡಿಕೆಶಿ ಜಂಟಿ ಸುದ್ದಿಗೋಷ್ಠಿ: ಫೆ. 27ರಿಂದ ಮೇಕೆದಾಟು ಪಾದಯಾತ್ರೆ: ಈಶ್ವರಪ್ಪ ವಿರುದ್ಧ ಕಿಡಿ
ನಿನ್ನೆ ಏನ್ ಹೇಳಿದ್ರು ರೆಬೆಲ್ಸ್ ಜೆಡಿಎಸ್ ಮುಖಂಡರು
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೂರಣಗೆರೆ ರವಿ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ. ಕುಮಾರಸ್ವಾಮಿ ಅವರೇ ನಾನು ಯಾವತ್ತು ಸಹ ನಿಮ್ಮ ಬಳಿ ಬಂದು ನನಗೆ ಸಾಲ ಇದೇ ಎಂದು ಕೈಚಾಚಿಲ್ಲ. ನನ್ನ ವೈಯಕ್ತಿಕ ವಿಚಾರವಾಗಿ ಯಾವತ್ತು ಸಹ ನಿಮ್ಮ ಬಳಿ ಬಂದಿಲ್ಲ. ಕೇವಲ ಅಭಿವೃದ್ಧಿ ವಿಚಾರವಾಗಿ ಮಾತ್ರ ನಾನು ನಿಮ್ಮನ್ನ ಸಂಪರ್ಕ ಮಾಡಿದ್ದೇನೆ. ಆದರೆ ಯಾರೋ ಹೇಳಿದ ಮಾತನ್ನ ಕೇಳಿಕೊಂಡ ನೀವು, ನನ್ನ ವಿರುದ್ಧ ಆಪಾದನೆ ಮಾಡ್ತೀರಾ , ಇದು ನಿಮ್ಮ ಘನತೆಗೆ ಸರಿ ಹೊಂದುವುದಿಲ್ಲ.
ನಾನು ಒಂದು ಕ್ಲಬ್ ನಲ್ಲಿ ಸದಸ್ಯನಾಗಿದ್ದೇನೆ. ಆದರೆ 3 ವರ್ಷದಿಂದ ಅಲ್ಲಿಗೂ ಸಹ ಹೋಗ್ತಿಲ್ಲ ಸ್ವಾಮಿ. ನಾನು ಜೂಜಾಡಿ ಹಣ ಕಳೆದಿದ್ದರೆ ಅದು ನನ್ನ ಜವಾಬ್ದಾರಿಯಾಗಲಿದೆ. ನನ್ನ ಕುಟುಂಬದ ಜವಾಬ್ದಾರಿ ಆಗಲಿದೆ. ನೀವೇಕೆ ಅದರ ಬಗ್ಗೆ ಚಿಂತೆ ಮಾಡ್ತೀರಿ ಎಂದು ಪ್ರಶ್ನೆ ಮಾಡಿದರು. ಮಾತು ಮುಂದುವರೆಸಿದ ರವಿ ನಾವು ಇಷ್ಟು ದಿನ ಎಂತಹ ಕಿತ್ತೋದ ಪಕ್ಷಕ್ಕೆ ದುಡಿದೆವು, ಅಲ್ಲಿ ಮಾನವೀಯತೆ, ಮನುಷ್ಯತ್ವ ಇಲ್ಲದ ವಿಷ ಸರ್ಪ ಇದೇ ಎಂದು ತಿಳಿದಿರಲಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ