• Home
  • »
  • News
  • »
  • district
  • »
  • ಚಾಮರಾಜನಗರದಲ್ಲಿ ಹೊರಗುತ್ತಿಗೆ ವಂಚನೆ ಹಗರಣ ಬೆಳಕಿಗೆ

ಚಾಮರಾಜನಗರದಲ್ಲಿ ಹೊರಗುತ್ತಿಗೆ ವಂಚನೆ ಹಗರಣ ಬೆಳಕಿಗೆ

ಗುಂಡ್ಲುಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆ

ಗುಂಡ್ಲುಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಸಾರ್ವಜನಿಕರ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸಂಸ್ಥೆಯೊಂದು ನೌಕರರ ಸಂಖ್ಯೆಯಲ್ಲಿ ಗೋಲ್ಮಾಲ್ ನಡೆಸಿ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

  • Share this:

ಚಾಮರಾಜನಗರ: ಹೊರಗುತ್ತಿಗೆ ಸೇವೆಯಲ್ಲಿ ಸರ್ಕಾರಕ್ಕೆ ಹಾಗು ನೌಕರರಿಗೆ ನಿರಂತರವಾಗಿ ಮೋಸ ಎಸಗುತ್ತಿರುವ ಹಗರಣವೊಂದು ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬೆಳಕಿಗೆ ಬಂದಿದೆ. ಗುಂಡ್ಲುಪೇಟೆ ತಾಲೋಕು ಸಾರ್ವಜನಿಕ ಆಸ್ಪತ್ರೆ ಹಾಗು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೋಸ ಹಾಗು ವಂಚನೆಯ ಗಂಭೀರ ಆರೋಪ ಕೇಳಿ ಬಂದಿದ್ದು ಹೊರಗುತ್ತಿಗೆ ನೌಕರರೇ ಇದನ್ನು ಬಹಿರಂಗಪಡಿಸಿದ್ದಾರೆ.


ಗುಂಡ್ಲುಪೇಟೆ ತಾಲೋಕು ಸಾರ್ವಜನಿಕ ಆಸ್ಪತ್ರೆ ಹಾಗು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಇಂಡಿಯನ್ ಸೆಕ್ಯುರಿಟಿ ಅಂಡ್ ಪರ್ಸನಲ್ ಮ್ಯಾನೇಜ್ಮೆಂಟ್ ಎಂಬ ಹೊರಗುತ್ತಿಗೆ ಸಂಸ್ಥೆಯು ಡಾಟಾ ಎಂಟ್ರಿ ಆಪರೇಟರ್, ಜ್ಯೂನಿಯರ್ ಲ್ಯಾಬ್ ಟೆಕ್ನಿಷಿಯನ್, ಜ್ಯೂನಿಯರ್ ಫಾರ್ಮಸಿಸ್ಟ್, ಗ್ರೂಪ್ ಡಿ, ಸ್ವೀಪರ್ ಗಳ ಸೇವೆ ಒದಗಿಸಲು ಟೆಂಡರ್ ಪಡೆದಿದೆ. ಆದರೆ ಇಲ್ಲಿ ಹಾಜರಾತಿ ಪುಸ್ತಕದಲ್ಲಿ ಇರೋರೆ ಬೇರೆಯಾದರೆ ಕೆಲಸ ಮಾಡೊರೇ ಬೇರೆಯಾಗಿದ್ದಾರೆ. ಇಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸರ್ಕಾರ ನಿಗದಿಪಡಿಸಿರುವ ಸಂಬಳ ಪಾವತಿ ಮಾಡದೆ ಕಡಿಮೆ ಸಂಬಳ ನೀಡಲಾಗುತ್ತಿದೆ ಎಂದು ನೌಕರರೇ ಆರೋಪಿಸಿದ್ದಾರೆ.


ಇದನ್ನೂ ಓದಿ: ಮಕ್ಕಳ ಮಾರಾಟದ ಕೇಂದ್ರ ಬಿಂದುವಾಗಿದ್ದ ಕೊಂಚವರಂನಲ್ಲಿ ಇಂದು ಕಲಬುರ್ಗಿ ಡಿಸಿ ವಾಸ್ತವ್ಯ; ಗರಿಗೆದರಿದ ಕುತೂಹಲ


ಹಾಜರಾತಿ ಪುಸ್ತಕದಲ್ಲಿ ಇರೋರ ಸಂಖ್ಯೆ ಹಲವಾದರೆ ನಿಜವಾಗಿ ಕೆಲಸ ಮಾಡೋರು ಮಾತ್ರ ಕೆಲವೇ ಮಂದಿ. ಉದಾಹರಣೆಗೆ ಸಾರ್ವಜನಿಕ ಆಸ್ಪತ್ರೆಗೆ 20 ಮಂದಿ ನೌಕರರನ್ನು ಹಾಗು ತಾಯಿ‌ಮತ್ತು ಮಕ್ಕಳ ಆಸ್ಪತ್ರೆಗೆ 12 ಮಂದಿ ನೌಕರರ ಸೇವೆ ಒದಗಿಸಲು ಟೆಂಡರ್ ಪಡೆಯಲಾಗಿದೆ. ಸಾರ್ವಜನಿಕ ಆಸ್ಪತ್ರೆಯ ಹಾಜರಾತಿ ಪುಸ್ತಕದಲ್ಲಿ 20 ಜನ ನೌಕರರ ಹೆಸರು ಇದೆ ಆದರೆಕೆಲಸ ಮಾಡ್ತಾ ಇರೋದು 14 ಮಂದಿ  ಮಾತ್ರ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಾಜರಾತಿ ಪುಸ್ತಕದಲ್ಲಿ 12 ಮಂದಿ ಹೆಸರಿದೆ. ಆದರೆ ಕೆಲಸ ಮಾಡ್ತಾ ಇರೋದು 8 ಮಂದಿ  ಮಾತ್ರ ಎಂದು ಈ ಹಿಂದೆ ನೌಕರರಾಗಿದ್ದ ರಂಜಿತ್ ಆರೋಪಿಸುತ್ತಾರೆ.


ಇದರ‌ ಜೊತೆಗೆ ನಿಜವಾಗಿ ಕೆಲಸ ಮಾಡ್ತಾ ಇರೋರಿಗೆ ಪಿ.ಎಫ್, ಇಎಸ್ಐ ಸೌಲಭ್ಯ ಇಲ್ಲ ಯಾವುದನ್ನು ಕೊಡ್ತಾ ಇಲ್ಲ, ಹಾಜರಾತಿ ಪುಸ್ತಕದಲ್ಲಿರೋರ ಬೇನಾಮಿ ಹೆಸರಿಗೆ ಪಿ.ಎಫ್., ಇಎಸ್ಐ ಹಣ ಹೋಗ್ತಾ ಇದೆ ಎಂದು ನೌಕರರು ಆರೋಪಿಸಿದ್ದಾರೆ.


ಇದನ್ನೂ ಓದಿ: Kota Srinivas Poojary: ಕೋಟ ಶ್ರೀನಿವಾಸ್​ ಪೂಜಾರಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಪ್ರಾಣಾಪಾಯದಿಂದ ಸಚಿವರು ಪಾರು


ಕೊರೋನಾ ಸೋಂಕಿನ ನಡುವೆಯು ಪ್ರಾಣವನ್ನೇ ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇವೆ, ಕಳೆದ ಏಳು ತಿಂಗಳಿಂದ ವೇತನವನ್ನೇ ನೀಡಿಲ್ಲ, ಜೀವನ ನಡೆಸುವುದು ಹೇಗೆ ಎಂಬುದೇ ತಿಳಿಯುತ್ತಿಲ್ಲ ಎಂದು ಡಿ‌ ಗ್ರೂಪ್ ನೌಕರೆ ಮಂಜುಳಾ ಅಲವತ್ತುಕೊಂಡರು. ಬೇರೆ ಬೇರೆ ಕಡೆ ಸರ್ಕಾರ ನಿಗಧಿಪಡಿಸಿದ ಸಂಬಳ ನೀಡಲಾಗುತ್ತಿದೆ ಆದರೆ ನಮಗೆ ಕಡಿಮೆ ಸಂಬಳ ನೀಡಲಾಗುತ್ತಿದೆ ಪಿಎಫ್, ಇಎಸ್ಐ ಇದ್ಯಾವುದರ ಮಾಹಿತಿಯನ್ನು ತಮಗೆ ನೀಡುತ್ತಿಲ್ಲ ಎಂದು ಅವರು ನೌಕರರು ದೂರಿದರು.


ಈ ಬಗ್ಗೆ ಪ್ರತಿಕ್ರಿಯಿಸಿದ ಗುಂಡ್ಲುಪೇಟೆ ತಾಲೋಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ್ ತಾವು ಒಂದುವರೆ ತಿಂಗಳ ಹಿಂದಷ್ಟೆ ಅಧಿಕಾರ ವಹಿಸಿಕೊಂಡಿದ್ದೇನೆ. ಹೊರಗುತ್ತಿಗೆ ನೌಕರರ ವಿಚಾರದಲ್ಲಿ ಏನು ನಡೆದಿದೆ ಎಂಬುದು ತಮ್ಮ‌ಗಮನಕ್ಕೆ ಬಂದಿಲ್ಲ, ನೌಕರರ ಆರೋಪಗಳ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುತ್ತೇನೆ. ಅವರಿಗೆ ವೇತನ ಹಾಗು ಪಿ.ಎಫ್. ಇಎಸ್ಐ ಸೌಲಭ್ಯ ಗಳಲ್ಲಿ  ಯಾವುದೇ ರೀತಿಯ ವಂಚನೆಯಾಗದಂತೆ ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದರು.


ವರದಿ: ಎಸ್.ಎಂ.ನಂದೀಶ್

Published by:Vijayasarthy SN
First published: