ದೊಡ್ಡಬಳ್ಳಾಪು(ಜೂ. 11) : ಮೇ ಮತ್ತು ಜೂನ್ ತಿಂಗಳಲ್ಲಿ ದೊಡ್ಡಬಳ್ಳಾಪುರ-ದೇವನಹಳ್ಳಿ ಮಾರ್ಗವಾಗಿ ಸಂಚಾರಿಸುವ ವಾಹನ ಸವಾರರಿಗೆ ಸಂಭ್ರಮ, ದಾರಿಯುದ್ದಕ್ಕೂ ಅರಳಿ ನಿಂತಿರುವ ಗುಲ್ ಮೊಹರ್ ಹೂಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.
ರಾಷ್ಟ್ರೀಯ ಹೆದ್ದಾರಿ 207ರ ದೊಡ್ಡಬಳ್ಳಾಪುರ ಮಾರ್ಗವಾಗಿ ಜಗದೀಶ್ ಸರ್ಕಲ್ ನಿಂದ ಪ್ರಾರಂಭವಾಗುವ ಗುಲ್ ಮೊಹರ್ ಮರಗಳ ಸಾಲು ರಘುನಾಥಪುರದವರೆಗೂ ಸಾಗುತ್ತೆ ಸುಮಾರು ಮೂರೂವರೆ ಕಿ.ಮೀ ರಸ್ತೆಯೆಲ್ಲೆ ಕೆಂಪಾಗಿರುತ್ತದೆ.
ಮೇ ತಿಂಗಳಲ್ಲಿ ಹೂವು ಅರಳುವ ಕಾರಣಕ್ಕೆ ಮೇ ಎಂದು ಆಡು ಭಾಷೆಯಲ್ಲಿ ಕರೆಯಲಾಗುತ್ತದೆ. ಮೇ ತಿಂಗಳಿಂದ ಜೂನ್ ತಿಂಗಳಲ್ಲಿ ಮೇ ಫ್ಲವರ್ ಸೌಂದರ್ಯ ಸವಿಯಬಹುದು. ಉಷ್ಣ ವಲಯದಲ್ಲಿ ಗುಲ್ಮೊಹರ್ ಮರಗಳು ಹೆಚ್ಚಾಗಿ ಕಂಡು ಬರುತ್ತದೆ. ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಗುಲ್ ಮೊಹರ್ ಮರಗಳನ್ನ ಸಾಮಾನ್ಯವಾಗಿ ಕಾಣಬಹುದು.
ಇದನ್ನೂ ಓದಿ : ಎಸ್ಎಸ್ಎಲ್ಸಿ ಪ್ರಥಮ ಸ್ಥಾನಕ್ಕಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಸರತ್ತು ; ಕೊರೊನಾ ಆತಂಕದ ನಡುವೆ ಪರೀಕ್ಷೆಗೆ ಭರದ ಸಿದ್ಧತೆ
ಗ್ರಾಮೀಣ ಪ್ರದೇಶದಲ್ಲಿ ಮದುವೆ ಇನ್ನಿತರ ಶುಭ, ಸಮಾರಂಭಗಳಿಗೆ ಕಲ್ಯಾಣ ಮಂಟಪ ಹಾಗೂ ಮನೆಯ ಆವರಣವನ್ನು ಈ ಮರದ ಹೂಗಳನ್ನು ಬಳಸಿ ಸಿಂಗರಿಸುವುದನ್ನ ನಾವು ನೋಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ