• Home
  • »
  • News
  • »
  • district
  • »
  • ನನಗೆ ಗಾಡ್ ಫಾದರ್ ಇಲ್ಲ; ನನ್ನ ಬಳಸಿಕೊಂಡು ಬೇರೆಯವರು ಮಂತ್ರಿಗಳಾದರು: ಗೂಳಿಹಟ್ಟಿ ಶೇಖರ್

ನನಗೆ ಗಾಡ್ ಫಾದರ್ ಇಲ್ಲ; ನನ್ನ ಬಳಸಿಕೊಂಡು ಬೇರೆಯವರು ಮಂತ್ರಿಗಳಾದರು: ಗೂಳಿಹಟ್ಟಿ ಶೇಖರ್

ಗೂಳಿಹಟ್ಟಿ ಶೇಖರ್

ಗೂಳಿಹಟ್ಟಿ ಶೇಖರ್

ಎಸ್​ಸಿ ಸಮುದಾಯದ ನನಗೆ ಪಕ್ಷದಲ್ಲಿ ಯಾರೂ ಗಾಡ್ ಫಾದರ್ ಇಲ್ಲ. ಕೇಂದ್ರ ಸಂಪುಟ ಮಾದರಿಯಲ್ಲಿ ಇಲ್ಲೂ ರಾಜ್ಯ ಸಂಪುಟ ರಚನೆ ಮಾಡಿದರೆ ನನಗೆ ಮಂತ್ರಿ ಸ್ಥಾನದ ಅವಕಾಶ ಸಿಗಬಹುದು ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.

  • Share this:

ಚಿತ್ರದುರ್ಗ: ನಾನು ಪಕ್ಷದ ಪರ ಇರುತ್ತೇನೆ, ಡಬಲ್ ಗೇಮ್ ಆಡಲ್ಲ. ಕೆಲವರು ಟೀ ಪಾರ್ಟಿ ಮಾಡಿಕೊಂಡು ನಮ್ಮ ಹೇಳಿಕೆ ಮಾಡಿಸಿ ಮಂತ್ರಿಗಳಾದರು. ಕೆಲವರು ಬ್ಲಾಕ್ ಮೇಲ್ ಮಾಡಿಕೊಂಡು ಮಂತ್ರಿ ಆಗುತ್ತಾರೆ. ಪಕ್ಷದಲ್ಲಿ ಇದ್ದು ನಾನು ಜಾಸ್ತಿ ಮಾತನಾಡುವುದಿಲ್ಲ. ಹೈಕಮಾಂಡ್ ನಾಯಕರು ಎಲ್ಲರೂ ಸೇರಿ ಕೇಂದ್ರ ಸರ್ಕಾರ ಮಾದರಿಯಲ್ಲಿ ಸಚಿವ ಸಂಪುಟ ಮಾಡಿದರೆ ನಮಗೆ ಅವಕಾಶ ಸಿಗುತ್ತದೆ. ಬೇಕಾ ಬಿಟ್ಟಿ ಸಂಪುಟ ರಚನೆ ಮಾಡಿದರೆ ನಮಗೆ ಅವಕಾಶ ಸಿಗಲ್ಲ. ಯಾವುದೇ ನಾಯಕರನ್ನ ನಾನು ಭೇಟಿ ಮಾಡಿಲ್ಲ. ಪಕ್ಷದಲ್ಲಿ ನನಗೆ ಗಾಡ್ ಫಾದರ್ ಇಲ್ಲ ಎಂದು ಚಿತ್ರದುರ್ಗದಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಬೇಸರದ ಹೇಳಿಕೆ ನೀಡಿದ್ದಾರೆ.


ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ದಕ್ಷಿಣ ಭಾರತದಲ್ಲಿ ಬಿಜೆಪಿ ತಂದ ಮೊದಲ ವ್ಯಕ್ತಿ ಗೂಳಿಹಟ್ಟಿ ಎಂದು ಎಲ್ಲರಿಗೂ ಗೊತ್ತು. ಆದರೆ ನನಗೆ 2008 ಮಂತ್ರಿ ಮಾಡುವಾಗ ಅನ್ಯಾಯ ಮಾಡಿದ್ರು. ನನ್ನನ್ನ ಕರೆದುಕೊಂಡು ಹೋದವರು ಮೂವರು ಮಂತ್ರಿಗಳಾದರು. ಗೂಳಿಹಟ್ಟಿ ಕೋಟಿ ಕೋಟಿ ಹಣ ಪಡೆದರು ಎಂದು ಬಿಂಬಿಸಿದರು ಎಂದು ಹೇಳಿದ್ದಾರೆ.


ಅಲ್ಲದೆ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದ ಎಸ್ಸಿ ಸಮುದಾಯದ ವ್ಯಕ್ತಿಯಾದ ನಾನು ಮೋದಿ ಅಲೆಯಲ್ಲೂ ನಾನು ಹಿಂದೆ ಜೆಡಿಎಸ್​ನಿಂದ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಎರಡು ಲಕ್ಷ ಮತ ಪಡೆದಿದ್ದೆ. ಆಗ ಬಿಜೆಪಿ ಕೂಡಾ ಸೋತಿತ್ತು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ನಾನು 30 ಸಾವಿರ ಲೀಡ್ ಕೊಟ್ಟಿದ್ದೇನೆ. ಮಂತ್ರಿ ಸ್ಥಾನ ವಿಚಾರದಲ್ಲಿ ಹಿಂದೆ ಅನ್ಯಾಯವಾಗಿದೆ. ಈಗ ಕೊಡಿ ಎಂದು ಕೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ: Olympics 2020 - ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಒಲಿಂಪಿಕ್ ನೆಲದಲ್ಲಿ ಭಾವುಕರಾಗಿದ್ದೇಕೆ?


ಇನ್ನು, ಹೈಕಮಾಂಡ್ ನಾಯಕರು ಎಲ್ಲರೂ ಸೇರಿ ಕೇಂದ್ರ ಸರ್ಕಾರದ  ಮಾದರಿಯಲ್ಲಿ ರಾಜ್ಯದಲ್ಲಿಯೂ ಸಚಿವ ಸಂಪುಟ ಮಾಡಿದರೆ ನಮಗೆ ಅವಕಾಶ ಸಿಗುತ್ತದೆ. ಬೇಕಾ ಬಿಟ್ಟಿ ಸಂಪುಟ ರಚನೆ ಮಾಡಿದರೆ ನಮಗೆ ಅವಕಾಶ ಸಿಗಲ್ಲ ಎಂದು ಟೀಕಿಸಿರುವ ಗೂಳಿಹಟ್ಟಿ ಶೇಖರ್,ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ನಾಯಕರನ್ನ ನಾನು ಭೇಟಿ ಮಾಡಿಲ್ಲ, ನನಗೆ ಪಕ್ಷದಲ್ಲಿ ಯಾವ ಗಾಡ್ ಫಾದರ್ ಇಲ್ಲ ಎಂದಿದ್ದಾರೆ.


ನಾನು ಯಾವಾಗಲೂ ಕೂಡಾ ಕ್ಷೇತ್ರದಲ್ಲಿ ಇರುತ್ತೇನೆ. ದೆಹಲಿ, ಬೆಂಗಳೂರಿಗೆ ನಾನು ಹೋಗಿಲ್ಲ. ಯಡಿಯೂರಪ್ಪ ಅವರನ್ನ ಭೇಟಿಯಷ್ಟೇ ಮಾಡಿದ್ದೆ. ಬೊಮ್ಮಾಯಿ ಅವರಿಗೂ ಅಭಿನಂದನೆ ಸಲ್ಲಿಸಿ ಬಂದಿದ್ದೇನೆ. ಆಪರೇಷನ್ ಕಮಲದಲ್ಲಿ ಬಂದ ಎಲ್ಲರಿಗೂ ಉತ್ತಮ ಸ್ಥಾನ ನೀಡುತ್ತಾರೆ. ನಾನು ಪಕ್ಷೇತರನಾಗಿ ಬಂದವನು. ಪಕ್ಷದಲ್ಲಿ ಇರುವವರೆಗೂ ನಿಯತ್ತಾಗಿ ಇರುವೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ದ, ಪಕ್ಷ ನಿಷ್ಠೆ ನಮ್ಮಲ್ಲಿ ಇದೆ. ನಮ್ಮ ಶಕ್ತಿಯನ್ನ ಜಿಲ್ಲಾ, ತಾಲ್ಲೂಕು ಪಂಚಾಯತ್​ನಲ್ಲಿ ತೋರಿಸುತ್ತೇನೆ. ನಮ್ಮ ಪಕ್ಷವನ್ನ ಗೆಲ್ಲಿಸುತ್ತೇವೆ, ಪಕ್ಷದ ಪರ ಇರುತ್ತೇವೆ, ಡಬಲ್ ಗೇಮ್ ಆಡಲ್ಲ ಎಂದು ಹೊಸದುರ್ಗದ ಶಾಸಕರು ನಿಷ್ಟೆಯ ಮಾತು ಹೇಳಿದ್ದಾರೆ.


ಇನ್ನು, ಶಾಸಕರನ್ನ ಸೇರಿಸಿ ಟೀ ಪಾರ್ಟಿ ಮಾಡಿಕೊಂಡು, ನಮ್ಮ ಬಳಿ ಹೇಳಿಕೆ ಕೊಡಿಸಿ, ಕೆಲವರು ಬ್ಲಾಕ್ ಮೇಲ್ ಮಾಡಿ ಮಂತ್ರಿ ಆಗುತ್ತಾರೆ. ಪಕ್ಷದಲ್ಲಿ ಇದ್ದು ನಾನು ಜಾಸ್ತಿ ಮಾತನಾಡುವುದಿಲ್ಲ, ಮಂತ್ರಿ ಸ್ಥಾನ ನೀಡಿಲ್ಲ ಎಂದರೂ ಪಕ್ಷದಲ್ಲಿ ಇರುತ್ತೇನೆ, ನನ್ನ ವಾಟ್ಸಪ್ ಸ್ಟೇಟಸ್ ನನ್ನ ಹಾಜರಾತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)


ವರದಿ: ವಿನಾಯಕ ತೊಡರನಾಳ್

Published by:Vijayasarthy SN
First published: