ಕಲಬುರ್ಗಿ: ಕಲಬುರ್ಗಿಯಲ್ಲಿ ಮತ್ತೊಂದು ಅಶ್ಲೀಲ ಸಿಡಿ ಪ್ರಕರಣ ಬೆಳಕಿಗೆ ಬಂದಿದೆ. ಉದ್ಯೋಗ ಕೊಡಿಸುವುದಾಗಿ ಗುಲ್ಬರ್ಗಾ ವಿಶ್ವ ವಿದ್ಯಾಲಯದ ಗುತ್ತಿಗೆ ಆಧಾರಿತ ಮಹಿಳಾ ಸಿಬ್ಬಂದಿಯನ್ನು ಅದೇ ವಿಶ್ವವಿದ್ಯಾಲಯದ ಉದ್ಯೋಗಿಯೋರ್ವ ದುರ್ಬಳಕೆ ಮಾಡಿಕೊಂಡಿದ್ದಾನೆ. ಮಹಿಳೆಯ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿ ಈಗ ಕಂಬಿ ಎಣಿಸುತ್ತಿದ್ದಾನೆ.
ಗುಲ್ಬರ್ಗಾ ವಿ.ವಿ. ಯ ನೌಕರನೊಬ್ಬ ಬೆತ್ತಲೆ ವೀಡಿಯೋ ಶೂಟ್ ಮಾಡಿ ಮೊಬೈಲ್ಗೆ ಹಾಕಿದ್ರೆ ನೌಕರಿ ಪರ್ಮನೆಂಟ್ ಮಾಡಿಸೋದಾಗಿ ಮಹಿಳೆಗೆ ಆಮಿಷವೊಡ್ಡಿದ್ದ. ವಿ.ವಿ. ಯ ಉದ್ಯೋಗಿಯ ಮಾತಿಗೆ ಮರುಳಾಗಿ ತನ್ನದೇ ಬೆತ್ತಲೆ ವೀಡಿಯೋ ಶೂಟ್ ಮಾಡಿದ್ದ ಮಹಿಳೆ ಅದನ್ನು ಆತನಿಗೆ ಕಳುಹಿಸಿದ್ದಾಳೆ. ವಿ.ವಿ. ಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಅಶ್ಲೀಲ ದೃಶ್ಯಗಳನ್ನು ಕಳುಹಿಸಿಕೊಟ್ಟಿದ್ದಾಳೆ.
ಮೊಬೈಲ್ ಮೂಲಕ ಅಶ್ಲೀಲ ದೃಶ್ಯಗಳನ್ನು ತರಿಸಿಕೊಂಡ ಭೂಪ, ಅದನ್ನು ನೋಡಿ ಸಮ್ಮನಾಗದೆ ಬೇರೆ ಬೇರೆ ಗ್ರೂಪ್ ಗಳಿಗೆ ಶೇರ್ ಮಾಡಿದ್ದಾನೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ್ದಾನೆ. ಹೀಗೆ ಅಶ್ಲೀಲ ವೀಡಿಯೋ ಶೇರ್ ಮಾಡಿದಾತನನ್ನು ಗುಲ್ಬರ್ಗಾ ವಿ.ವಿ. ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕೊಂಡಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಮುಷ್ಕರನಿರತ ಸಾರಿಗೆ ನೌಕರರಿಗೆ ವೇತನ ಕಡಿತ; ಮಾರ್ಚ್ ತಿಂಗಳ ಸಂಬಳಕ್ಕೂ ತಡೆ ಸಾಧ್ಯತೆ
ಸದ್ಯ ಇತಿಹಾಸ ವಿಭಾಗದಲ್ಲಿ ಗುತ್ತಿಗೆ ನೌಕರಳಾಗಿರೋ ಮಹಿಳೆ ಗ್ರಂಥಾಲಯ ಅಧೀಕ್ಷಕನ ಮಾತಿಗೆ ಮರುಳಾಗಿ ಮೋಸ ಹೋಗಿದ್ದಾಳೆ. ಮಾರ್ಚ್ 22 ರಂದು ದೂರವಾಣಿ ಕರೆ ಮಾಡಿದ್ದ ಶರಣಪ್ಪ, ಅಶ್ಲೀಲ ವೀಡಿಯೋ ಕಳಿಸುವಂತೆ ಮಹಿಳೆಗೆ ಹೇಳಿದ್ದ ಎನ್ನಲಾಗಿದೆ. ಅದಕ್ಕೆ ಆಕೆ ಒಪ್ಪದೇ ಇದ್ದಾಗ, ನಾನು ಕೆಲವೇ ದಿನಗಳಲ್ಲೇ ಸೇವೆಯಿಂದ ನಿವೃತ್ತಿ ಆಗುತ್ತಿದ್ದೇನೆ. ನಾನು ಹೇಳಿದ ಹಾಗೆ ಕೇಳಿದರೆ ಎಷ್ಟೇ ಹಣ ಖರ್ಚಾದರೂ ಸರಿ ನಿನ್ನ ನೌಕರಿ ಖಾಯಂ ಮಾಡಿಸುತ್ತೇನೆ. ಜತೆಗೆ ಕಲಬುರ್ಗಿಯಲ್ಲಿ ಫ್ಲಾಟ್ ಕೊಡಿಸುತ್ತೇನೆ. ಅದಕ್ಕಾಗಿ ನಿನ್ನ ಬೆತ್ತಲೆ ವಿಡಿಯೋ ಮಾಡಿ ಕಳುಹಿಸು ಎಂದು ಹೇಳಿ ತನ್ನನ್ನು ಪುಸಲಾಯಿಸಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.
ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕುಂಡಿ ಮೇಲೆ ಮಹಿಳೆ ಈ ಆರೋಪ ಮಾಡಿದ್ದಾಳೆ. ಮಹಿಳೆಯ ದೂರನ್ನು ಆಧರಿಸಿ ಕಲಬುರ್ಗಿಯ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 292, 407, 420, 354 (ಎ) ಅಡಿ ಶರಣಪ್ಪ ಮಾಕುಂಡಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿ ಶರಣಪ್ಪನನ್ನು ಬಂಧಿಸಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿಶ್ವ ವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Haveri: ಹಾವೇರಿಯ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿದ ಚಿರತೆ ಹಾವಳಿ!
ಈ ಹಿಂದೆಯೂ ವಿಶ್ವವಿದ್ಯಾಲಯದಲ್ಲಿ ಹಲವು ಬಾರಿ ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬಂದಿದ್ದವು. ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ಇತ್ಯಾದಿ ಆರೋಪಗಳು ಕೇಳಿಬಂದು, ವಿಶ್ವವಿದ್ಯಾಲಯ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸದ್ದು ಮಾಡುತ್ತಿರೋ ಸಂದರ್ಭದಲ್ಲಿಯೇ ಗುಲ್ಬರ್ಗಾ ವಿವಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ವರದಿ - ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ