ಮೈಸೂರು: ನಿನ್ನೆ ಮೈಸೂರು ಮೈಮುಲ್ ಚುನಾವಣೆಯಲ್ಲಿ ಜಿಟಿಡಿ ಬಣಕ್ಕೆ ಭರ್ಜರಿ ಗೆಲುವು ಸಿಕ್ಕ ಹಿನ್ನೆಲೆಯಲ್ಲಿ, ಮೈಸೂರಿನಲ್ಲಿಂದು ಮಾಜಿ ಸಚಿವ ಸಾ.ರಾ.ಮಹೇಶ್ ಸುದ್ದಿಗೋಷ್ಠಿ ನಡೆಸಿ ಜಿಟಿಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಯವರನ್ನ ಸಹಕಾರಿ ಚುನಾವಣೆಗೆ ಕರೆತರಬಾರದು ಎಂಬ ಜಿಟಿಡಿ ಹೇಳಿಕೆಗೆ ತಿರುಗೇಟು ಕೊಟ್ಟ ಸಾ.ರಾ.ಮಹೇಶ್, "ಸಹಕಾರಿ ಕ್ಷೇತ್ರದಲ್ಲಿ ನೀವು ಮಾಡಿದ್ದು ಏನು? ನೀವು ರಾಜಕಾರಣ ಮಾಡಿದ್ರಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ನನ್ನ ಮಾತು ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ನೀವು ಪಾರ್ಟಿಯಲ್ಲಿ ಆಕ್ಟಿವ್ ಯಾಕೀಲ್ಲ. ನೀವೆ ಬಂದು ಪಾರ್ಟಿ ಕಟ್ಟಿ ಬೇಕಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ" ಎಂದು ಸುದ್ದಿಗೋಷ್ಠಿಯಲ್ಲಿ ಕಣ್ಣಿರಿಟ್ಟಿದ್ದಾರೆ.
ಮೊನ್ನೆ ನನ್ನನ್ನ ಶಕುನಿ ಮಂಥರೆ ಎಂದಿದ್ದೀರಾ?. ಶಕುನಿ ಇಲ್ಲದಿದ್ದರೆ ಮಹಾಭಾರತ ಆಗ್ತಿತ್ತಾ? ಶಕುನಿ ಇಲ್ಲದಿದ್ದರೆ ಧರ್ಮ ಸಂಸ್ಥಾಪನೆ ಆಗ್ತಿತ್ತಾ?. ಮಂಥರೆ ಇಲ್ಲದಿದ್ದರೆ ರಾಮಯಾಣ ಆಗ್ತಿತ್ತಾ? ಶಬರಿ ಶಾಪ ವಿಮೋಚನೆ ಆಗ್ತಿತ್ತಾ? ರಾವಣನ ನಿರ್ಣಾಮಾ ಆಗ್ತಿತ್ತಾ? ಹೇಳಿ ನೀವೆ ಅವರುಗಳು ಇದ್ದಿದ್ದರಿಂದಲೇ ಒಳ್ಳೆದಾಯಿತು. ನಾನು ಪಕ್ಷಕೊಸ್ಕರ ತ್ಯಾಗ ಮಾಡ್ತಿನಿ ನನಗು ರಾಜಕೀಯ ಸಾಕಾಗಿದೆ. ಜನ ನನ್ನನ್ನ ಮೂರು ಬಾರಿ ಆಯ್ಕೆ ಮಾಡಿದ್ದಾರೆ ಈ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಸೇರಿಸಿ ಯಾರನ್ನು ಮೂರು ಬಾರಿ ಗೆಲ್ಲಿಸಿಲ್ಲ, ನಿಮ್ಮನ್ಮು ಸೇರಿದಂತೆ ಯಾರನ್ನು ಗೆಲ್ಲಿಸಿಲ್ಲ. ಇದಕ್ಕೆಲ್ಲ ಜೆಡಿಎಸ್ ಕಾರಣ ಜೆಡಿಎಸ್ ನನ್ನ ಶಕ್ತಿ ಆದ್ರೆ ನೀವು ಜೆಡಿಎಸ್ ವಿರುದ್ದವೇ ಹೋರಾಟ ಮಾಡ್ತಿದ್ದೀರಾ ಯಾಕೇ ಅಂತ ಜಿಟಿಡಿಗೆ ಪ್ರಶ್ನೆಗಳ ಸುರಿಮಳೆಗೈದರು.
ಕೆಲವು ದಿನದ ಹಿಂದೆ ನಿಮ್ಮ ಕಾಲಿಗೆ ಬಿದ್ದು ಕೇಳಿಕೊಂಡನಲ್ಲ, ಗೆಸ್ಟ್ ಹೌಸ್‌ನಲ್ಲಿ ನಿಮ್ಮ ಕಾಲಿಗೆ ಬಿದ್ದಿದ್ದನಲ್ಲ. ಆದರೂ ಯಾಕೇ ನನ್ನ ಮೇಲೆ ಇಷ್ಟು ಕೋಪ. ನೀವು ಪಾರ್ಟಿ ಬಿಟ್ಟಿಲ್ಲ ಅಂತೀರಲ್ಲ ಹಾಗಾದ್ರೆ ಬನ್ನಿ ಜೆಡಿಎಸ್ ನೇತೃತ್ವ ವಹಿಸಿಕೊಳ್ಳಿ. ಯಾಕೇ ಪಾರ್ಟಿಯಿಂದ ದೂರ ಇದ್ದೀರಾ ನೀವು ಎಂದು ಜಿಟಿಡಿಗೆ ಸಾ.ರಾ.ಮಹೇಶ್ ಪ್ರಶ್ನೆ ಮಾಡಿದ್ದಾರೆ.
ನೀವು ವಾಪಸ್ ಪಾರ್ಟಿಗೆ ಬಂದು ಆಕ್ಟಿವ್ ಆದ್ರೆ ನಾನು ರಾಜಕೀಯ ನಿವೃತ್ತಿ ಆಗ್ತಿನಿ. ಬೇಕಿದ್ರೆ ಬಂದು ಕುಮಾರಸ್ವಾಮಿ ಜೊತೆ ಸೇರಿ ಪಾರ್ಟಿ ಕಟ್ಟಿ ಎಂದು ಸುದ್ದಿಗೋಷ್ಠಿಯಲ್ಲಿ ಕಣ್ಣಿರಿಟ್ಟ ಸಾ.ರಾ.ಮಹೇಶ್ ಜಿಟಿಡಿ ಹೇಳಿಕೆಗಳಿಗೆ ಭಾವುಕರಾದರು. ಯಾಕೇ ನನ್ನ ಮೇಲೆ ಇಷ್ಟು ದ್ವೇಷ, ಯಾಕಾಗಿ ನನ್ನನ್ನ ವಿರೋಧ ಮಾಡ್ತಿರಾ ನೀವು ಬರುವುದಾದರೆ ನಾನು ಪಾರ್ಟಿ ಬಿಡ್ತಿನಿ ಇನ್ನೆರಡು ವರ್ಷ ಆದ್ಮೆಲೆ ನಾನೆ ಸಾರ್ವಜನಿಕ ಜೀವನದಿಂದ ದೂರ ಇರ್ತಿನಿ ಎಂದು ಘೋಷಣೆ ಮಾಡಿದರು. ಒಬ್ಬರು ನನಗೆ ಚಾಮುಂಡಿಬೆಟ್ಟದಲ್ಲಿ ಕಣ್ಣಿರಾಕಿಸಿ ಅನುಭವಿಸುತ್ತಿದ್ದಾರೆ.
ಇವತ್ತು ನೀವು ಚಾಮುಂಡಿಬೆಟ್ಟದಲ್ಲಿ ನನ್ನ ಬಗ್ಗೆ ಮಾತನಾಡಿದ್ದೀರಿ. ನನ್ನ ನಿಷ್ಠೆ ಏನೆಂದು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಜೆಡಿಎಸ್ ಪಕ್ಷವನ್ನ ನಿರ್ಣಾಮಾ ಮಾಡಬೇಕು ಅನ್ನೋದೆ ನಿಮ್ಮ ಉದ್ದೇಶಾವ ಹೇಳಿ ನೀವು ಏನು ಮಾಡಲು ಹೊರಟಿದ್ದೀರಿ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ ಸಾ.ರಾ.ಮಹೇಶ್. ಮೈಮುಲ್ ಚುನಾವಣೆ ಫಲಿತಾಂಶ ನನಗೆ ಸಮಾಧಾನ ತಂದಿದೆ. ನಿಮಗೆ, ನಿಮ್ಮ ಟೀಮ್‌ಗೆ ಅಕ್ರಮ ನೇಮಕಾತಿಯ ಹಣ ಇತ್ತು, ನಮ್ಮ ಬಳಿ ಏನಿತ್ತು ? ಕೇವಲ ಕುಮಾರಸ್ವಾಮಿ ಅವರ ಶಕ್ತಿ ಮೇಲೆ ಚುನಾವಣೆ ಮಾಡಿದ್ದೇವೆ.
ಈಗ ಗಿಡ ನೆಡಲು ಶುರು ಮಾಡಿದ್ದೇವೆ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಸಲುವಾಗಿ ಸ್ಪರ್ಧೆ ಮಾಡಿದ್ದೇವೆ. ಜೆಡಿಎಸ್ ಚಿಹ್ನೆಯೇ ನಮಗೆ ದೇವರು. ಒಂದು ಸರ್ಕಾರ, ಮತ್ತೊಂದು ರಾಷ್ಟ್ರೀಯ ಪಕ್ಷ. ಸಹಕಾರ ದುರೀಣರು ಸೇರಿದರು. ನಾವು ಮೇಯರ್ ಚುನಾವಣೆ ಬಳಿಕ ಮೈಮುಲ್ ಬಗ್ಗೆ ಗಮನ ಹರಿಸಿದೆವು ಮೂರು ಸ್ಥಾನ ಗೆದ್ದಿದ್ದೇವೆ.ಒಂದು ವೇಳೆ ನಾವು ಸ್ಪರ್ಧಿಸದೆ ಇದ್ದರೆ ಅವಿರೋಧ ಆಯ್ಕೆ ಆಗುತ್ತಿತ್ತು. ನಿಮ್ಮ ನಾಗಾಲೋಟ ತಡೆಯಲು ನಾವು ಯಶಸ್ವಿಯಾಗಿದ್ದೇವೆ ಎಂದು ತಿರುಗೇಟು ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ