ಮೈಮುಲ್ ಗದ್ದುಗೆಗೆ ದಳಪತಿಗಳ ಕಿತ್ತಾಟ; ಜಿಟಿಡಿ ಭದ್ರಕೋಟೆ ಛಿದ್ರಕ್ಕೆ ಹೆಚ್​ಡಿಕೆ ಪಣ; ಸಂಜೆ 4ರ ನಂತರ ಮತ ಎಣಿಕೆ

ಮೈಸೂರಿನ ಮೈಮುಲ್ ಚುನಾವಣೆಯ ಅಖಾಡಕ್ಕೆ ಸ್ವತಃ ಹೆಚ್.ಡಿ. ಕುಮಾರಸ್ವಾಮಿ ಅವರೇ ಇಳಿದಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ತನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳುವ ಮಾಜಿ ಸಚಿವ ಜಿ.ಟಿ. ದೇವೇಗೌಡರಿಗೆ ಪಾಠ ಕಲಿಸಲು ಮಾಜಿ ಸಿಎಂ ರಣತಂತ್ರ ರೂಪಿಸಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ

ಹೆಚ್.ಡಿ. ಕುಮಾರಸ್ವಾಮಿ

  • Share this:
ಮೈಸೂರು: ಅರಮನೆ ನಗರಿಯಲ್ಲಿ ಮತ್ತೊಂದು ಲೋಕಲ್  ವಾರ್ ನಡೆಯುತ್ತಿದ್ದು, ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಂತರ ಪ್ರತಿಷ್ಠೆಯ ಕಣವಾದ ಮೈಸೂರು ಮೈಮುಲ್ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ವರ್ಸಸ್ ಜೆಡಿಎಸ್‌ ನಡುವೆ ಫೈಟ್ ಇತ್ತು, ಮೈಮುಲ್ ಚುನಾವಣೆಯಲ್ಲಿ ಜೆಡಿಎಸ್ ವರ್ಸಸ್ ಜೆಡಿಎಸ್‌ ನಡುವೆಯೇ ಫೈಟ್ ಇದ್ದು, ಮೈಮುಲ್ ಚುನಾವಣೆ ಇಂದು ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬೆ.9ರಿಂದ ಸಂಜೆ 4ಗಂಟೆಯವರೆಗೆ ಮತದಾನ ನಡೆಯುತ್ತಿದ್ದು, 4 ಗಂಟೆಯ ನಂತರ ಮತ ಎಣಿಕೆ ನಡೆಯಲಿದೆ. ಮಾಜಿ ಸಿಎಂ ಹಾಗೂ ಮಾಜಿ ಸಚಿವರ ಪ್ರತಿಷ್ಠೆಗೆ ಕಾರಣವಾದ ಸೊಸೈಟಿ ಚುನಾವಣೆ, ಮೈಸೂರಿನ ಮೆಗಾಡೈರಿ ಆವರಣದಲ್ಲಿ ನಡೆಯತ್ತಿದೆ.

ಜೆಡಿಎಸ್‌ನಲ್ಲೆ ಎರಡು ಬಣವಾಗಿ ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು,  ಮಾಜಿ ಸಿಎಂ ಕುಮಾರಸ್ವಾಮಿ ಬಣ, ಶಾಸಕ ಜಿ.ಟಿ.ದೇವೇಗೌಡ ಬಣದ ನಡುವೆ ಸ್ಪರ್ಧೆ ನಡೆಯುತ್ತಿದೆ. ಇದೆ ಮೊದಲ ಬಾರಿಗೆ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ನೇರವಾಗಿ ಭಾಗಿಯಾದ ಮಾಜಿ ಸಿಎಂ ಹೆಚ್‌ಡಿಕೆ‌ ಅವರು ಜಿ.ಟಿ.ದೇವೇಗೌಡ ವಿರುದ್ಧ ನಮ್ಮ ತಂಡದ ಸ್ಪರ್ಧೆ ಎಂದು ಬಹಿರಂಗ ಘೋಷಣೆ ಮಾಡಿದ್ದಾರೆ. ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಜೆಡಿಎಸ್ ಕಾರ್ಯಕರ್ತರ ವಿರುದ್ದವೇ ಪ್ರಚಾರ ಮಾಡಿರುವ ಹೆಚ್‌ಡಿಕೆ ಚುನಾವಣೆ ಗೆಲ್ಲಲೇ ಬೇಕು ಅಂತ ಪಣತೊಟ್ಟಿದ್ದಾರೆ.

ಇತ್ತ ಹೆಚ್‌ಡಿಕೆ ವಿರುದ್ದವೇ ತೊಡೆತಟ್ಟಿ ನಿಂತಿರುವ ಶಾಸಕ ಜಿ.ಟಿ.ಡಿ, ತಾನು ಸಹ ಚುನಾವಣೆ ಗೆಲ್ಲುತ್ತೇನೆ ಎಂದು ಶಪಥ ಮಾಡಿದ್ದಾರೆ. ಸಹಕಾರಿ ಕ್ಷೇತ್ರದ ಗದ್ದುಗೆಗಾಗಿ ದಳಪತಿಗಳ‌ ನಡುವೆಯೇ ಯದ್ದ ಆರಂಭವಾಗಿದ್ದು, ಸೋಸೈಟಿ ಚುನಾವಣೆಗಾಗಿ ಸ್ವಂತ ಪ್ರತಿಷ್ಠೆಯನ್ನೆ ಪಣಕ್ಕಿಟ್ಟಿರುವ ಜಿಟಿಡಿ-ಹೆಚ್‌ಡಿಕೆ ಮೊದಲ ಬಾರಿಗೆ ಲೋಕಲ್ ವಾರ್‌ಗಾಗಿ ತಲೆ ಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ: NIA Raid: ಬೆಂಗಳೂರು ಸೇರಿ 11 ಕಡೆ ಎನ್ಐಎ ದಾಳಿ; ಕೇರಳ ಮೂಲದ ಡಾಕ್ಟರ್ ಸೇರಿ ಮೂವರ ಬಂಧನ

ಮೈಮುಲ್ ನಿರ್ದೇಶಕ ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಒಟ್ಟು 15 ನಿರ್ದೇಶಕ ಸ್ಥಾನಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಬೇಕಿದೆ. ಇದರಲ್ಲಿ 15 ಸ್ಥಾನಗಳಿಗೆ ಸ್ಪರ್ಧಿಸಿರುವ ಜಿಟಿಡಿ ಬಣ ಒಂದಡೆಯಾದರೆ, 13 ಸ್ಥಾನಗಳಿಗೆ ಸ್ಪರ್ಧಿಸಿರುವ ಹೆಚ್‌ಡಿಕೆ ಬಣ ಮತ್ತೊಂದೆಡೆ ಇದೆ. ಮೈಸೂರು ಉಪವಿಭಾಗ ಹಾಗೂ ಹುಣಸೂರು ಉಪವಿಭಾಗಗಳಿಗೆ ಚುನಾವಣೆ ನಡೆಯುತ್ತಿದೆ. ಮೈಸೂರು ಉಪವಿಭಾಗದಲ್ಲಿ ಒಟ್ಟು 436 ಮತದಾರರು,  ಹುಣಸೂರು ಉಪವಿಭಾಗದಲ್ಲಿ ಒಟ್ಟು 638 ಮತದಾರರು ಇದ್ದಾರೆ. ಎರಡು ವಿಭಾಗಗಳಿಂದ ಒಟ್ಟು 1074 ಮತದಾರರಿಂದ ಹಕ್ಕು ಚಲಾವಣೆಗೆ ಅವಕಾಶ‌ ಇದ್ದು, ಮೈಸೂರು ಉಪವಿಭಾಗಗಕ್ಕೆ 7 ಮಂದಿ ನಿರ್ದೇಶಕರನ್ನ ಆಯ್ಕೆ ಮಾಡಬೇಕು. ಹುಣಸೂರು ಉಪವಿಭಾಗಗಕ್ಕೆ 8 ಮಂದಿ ನಿರ್ದೇಶಕರನ್ನ ಆಯ್ಕೆ ಮಾಡಬೇಕಾಗಿದೆ. ಓರ್ವ ಮತದಾರ 7 ನಿರ್ದೇಶಕರಿಗೆ ಮತಚಲಾಯಿಸಬಹುದು.

ಹುಣಸೂರು ಉಪ ವಿಭಾಗಕ್ಕೆ:

ಜಿ. ಟಿ. ದೇವೇಗೌಡರ ಬಣದ ಅಭ್ಯರ್ಥಿಗಳು:
1. ಪ್ರಸನ್ನ
2. ಈರೇಗೌಡ ಕೆ.
3. ಕುಮಾರ ಕೆ. ಎಸ್
4. ಎ. ಟಿ. ಸೋಮಶೇಖರ್
5. ಜಗದೀಶ್ ಉ. ಬಸಪ್ಪ
6. ರಾಜೇಂದ್ರ ಹೆಚ್. ಡಿ
7. ಶಿವಗಾಮಿ ಎ
8. ದ್ರಾಕ್ಷಯಿನಿ

ಹೆಚ್‌ಡಿಕೆ ಬಣದ ಅಭ್ಯರ್ಥಿಗಳು:
1. ಪುಷ್ಪಲತಾ
2. ಬಿ. ಎ. ಪ್ರಕಾಶ್
3. ಬಸವಣ್ಣ p
4. ಎಸ್. ಕೆ ಮಧುಚಂದ್ರ
5. ರಾಣಿ ಎಂ. ಕೆ
6. ಸಿ. ಎಸ್. ರುದ್ರೇಗೌಡ

ಇದನ್ನೂ ಓದಿ: CD Case: ಒಂದೇ ಪ್ರಕರಣ, ಎರಡು ದಿಕ್ಕಿನಲ್ಲಿ ತನಿಖೆ: ಸುಳ್ಳು ಹೇಳುತ್ತಿರುವುದು ಸಾಬೀತಾದರೆ ಯುವತಿ ವಿರುದ್ಧ ಎಫ್ಐಆರ್

ಮೈಸೂರು ಉಪವಿಭಾಗಕ್ಕೆ:

ಜಿ. ಟಿ. ದೇವೇಗೌಡ ಬಣದ ಅಭ್ಯರ್ಥಿಗಳು:  
1. ಜೆ. ಸುನೀತಾ ವೀರಪ್ಪಗೌಡ
2. ಎಸ್. ಸಿದ್ದೇಗೌಡ
3. ಕೆ. ಸಿ ಬಲರಾಮ್
4. ಸಿ. ಓಂಪ್ರಕಾಶ್
5. ಬಿ.ಎನ್. ಸದಾನಂದ
6. ಬಿ. ನೀಲಾಂಬಿಕೆ ಮಹೇಶ್
7. ಲೀಲಾ ನಾಗರಾಜು

ಹೆಚ್‌ಡಿಕೆ ಬಣದ ಅಭ್ಯರ್ಥಿಗಳು: 
1.ಕೆ.ಜಿ. ಮಹೇಶ್
2. ಕೆ. ಉಮಾಶಂಕರ್
3. ಶಿವಮೂರ್ತಿ ಬೆಳವಾಡಿ
4. ಚಲುವರಾಜು ಆರ್
5. ಜಿ. ಗುರುಸ್ವಾಮಿ
6. ಯಶೋದಮ್ಮ ಮುದ್ದೇಗೌಡ
7. ಮಂಗಳಮ್ಮ ಚಿನ್ನಸ್ವಾಮಿ

ವರದಿ: ಪುಟ್ಟಪ್ಪ
Published by:Vijayasarthy SN
First published: