Corona Death: ಕೊನೆಗಾಲದಲ್ಲಿ ಜೊತೆಯಿದ್ದವರೇ ಬಂಧುಗಳು, ಹಾವೇರಿಯಲ್ಲಿ ಮೃತ ಸೋಂಕಿತರ ಅಂತ್ಯಸಂಸ್ಕಾರಕ್ಕೆ ನಿಂತ ಯುವಕರು !

ಮೃತ ಕೊರೊನಾ ಸೋಂಕಿತರ ಸಂಬಂಧಿಕರು ಬಡವರಾಗಿದ್ರೆ ಮೃತದೇಹ ತರಲು ವಾಹನ ವ್ಯವಸ್ಥೆ, ಕಟ್ಟಿಗೆ ವ್ಯವಸ್ಥೆ ಹೀಗೆ ಅಂತ್ಯಕ್ರಿಯೆಗೆ ಬೇಕಾದ ವ್ಯವಸ್ಥೆ ಮಾಡಿ ಅಂತ್ಯಕ್ರಿಯೆ ಮಾಡ್ತಾರೆ. ಆರೋಗ್ಯ ಇಲಾಖೆ ಜೊತೆ ಮಾತನಾಡಿ ಪಿಪಿಇ ಕಿಟ್ ಧರಿಸಿಕೊಂಡು ಸೋಂಕಿತರ ಮೃತದೇಹಗಳನ್ನ ಒಯ್ದು ಅಂತ್ಯಕ್ರಿಯೆ ಮಾಡ್ತಾರೆ.

ಅಂತ್ಯಸಂಸ್ಕಾರದಲ್ಲಿ ನಿರತರಾದ ಸ್ವಯಂಸೇವಕರು

ಅಂತ್ಯಸಂಸ್ಕಾರದಲ್ಲಿ ನಿರತರಾದ ಸ್ವಯಂಸೇವಕರು

 • Share this:
  ಹಾವೇರಿ: ಹೆಮ್ಮಾರಿ ಕೊರೊನಾ ಎರಡನೆ ಅಲೆ ಜನರಲ್ಲಿ ಸಾಕಷ್ಟು ಆತಂಕ ಸೃಷ್ಟಿಸ್ತಿದೆ. ಕೊರೊನಾದಿಂದ ಸಂಬಂಧಿಕರೆ ಮೃತಪಟ್ರೂ ಅದೆಷ್ಟೋ ಜನರು ಸಂಬಂಧಿಕರ ಅಂತ್ಯಕ್ರಿಯೆ ಮಾಡದಂಥಾ ಭಯದಲ್ಲಿದ್ದಾರೆ. ಆದ್ರೆ ಮೃತರ ಸಂಬಂಧಿಕರು ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಲು ಹಿಂದೇಟು ಹಾಕಿದ್ರೆ ಹಾವೇರಿಯ ಹತ್ತು ಜನ ಯುವಕರ‌ ತಂಡ ಮೃತ ಸೋಂಕಿತರ ಅಂತ್ಯಕ್ರಿಯೆ ಮಾಡೋ‌ ಮೂಲಕ ಮಾನವೀಯತೆ ಪ್ರದರ್ಶಿಸ್ತಿದೆ. ಹೌದು, ಹಾವೇರಿ ನಗರದ ಯುವಕರ ತಂಡ ಕೊರೊನಾ ಎರಡನೆ ಅಲೆಯ ಅಬ್ಬರ ಶುರುವಾದ್ಮೇಲೆ‌ ಕೊರೊನಾದಿಂದ ಸಾಕಷ್ಟು ಸಾವುಗಳು ಸಂಭವಿಸ್ತಿರೋದನ್ನ ಗಮನಿಸಿದ್ದಾರೆ. ಅಲ್ದೆ ಕೊರೊನಾದಿಂದ ಮೃತಪಟ್ಟ ಮೇಲೆ ಮೃತರ ಸಂಬಂಧಿಕರು ಭಯದಿಂದ ಮೃತದೇಹಗಳನ್ನ ಅಂತ್ಯಕ್ರಿಯೆಗೆ ಒಯ್ಯಲು ಹಿಂದೇಟು ಹಾಕೊದನ್ನು ನೋಡಿದ್ದರೆ. ಇಂಥಾ ಸಂದರ್ಭದಲ್ಲಿ ಮೃತರಿಗೆ ಗೌರವಯುತ ಅಂತ್ಯಸಂಸ್ಕಾರ ನೆರವೇಸೋಕೆ ಈ ಯುವಕರ ಪಡೆ ಸಜ್ಜಾಗಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟು, ಮೃತರ ಮನೆಯವರು ಅಂತ್ಯಕ್ರಿಯೆಗೆ ಮೃತದೇಹ ಒಯ್ಯದೆ ಇದ್ದಾಗ ಇವರೆ ಮೃತರ ಮನೆಯವರಂತೆ ನಿಂತು ಅಂತ್ಯಕ್ರಿಯೆ ನೆರವೇರಿಸ್ತಿದ್ದಾರೆ. ಈವರೆಗೆ ಕೊರೊನಾ ಸೋಂಕಿತ ಐವರ ಮೃತದೇಹಗಳನ್ನ ಅಂತ್ಯಕ್ರಿಯೆ ಮಾಡಿದ್ದಾರೆ.

  ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಅಂದಾಕ್ಷಣ ಮೃತರ ಸಂಬಂಧಿಕರು ಭಯದ ವಾತಾವರಣದಲ್ಲಿ ಮುಳುಗಿರ್ತಾರೆ. ಮೇಲಾಗಿ ಮೃತರ ಜೊತೆ ಒಡನಾಟ ಹೊಂದಿದ್ದರೆ ಅವರು ಸೋಂಕಿತರಾಗಿ ಅಥವಾ ಹೋಂ ಕ್ವಾರೈಂಟನ್ ನಲ್ಲಿ ಇರೋದ್ರಿಂದ ಅಂತ್ಯಕ್ರಿಯೆ ನೆರವೇರಿಸಲು ಹಿಂದೇಟು ಹಾಕ್ತಾರೆ. ಕೆಲವು ಸಂದರ್ಭಗಳಲ್ಲಿ ಮೃತರ ಸಂಬಂಧಿಕರು ಕೊರೊನಾ ಸೋಂಕಿನಿಂದ ಮೃತಪಟ್ಟ ತಮ್ಮ ಸಂಬಂಧಿಕರ ಅಂತ್ಯಕ್ರಿಯೆ ನೆರವೇರಿಸೋ ಇಚ್ಛೆ ಹೊಂದಿದ್ರೂ ಸೋಂಕಿತರ ಅಂತ್ಯಕ್ರಿಯೆಗೆ ಅವಕಾಶ ಸಿಗದಿರೋದು ಹೀಗೆ ಬೇರೆ ಬೇರೆ ಕಾರಣಗಳಿಂದ ಮೃತರ ಸಂಬಂಧಿಕರು ಸೋಂಕಿತರ ಅಂತ್ಯಕ್ರಿಯೆ ಮಾಡೋಕೆ ಹಿಂದೇಟು ಹಾಕ್ತಿರ್ತಾರೆ.

  ಅಂಥಾ ಸಂದರ್ಭದಲ್ಲಿ ಈ ಹತ್ತು ಜನ ಯುವಕರ ತಂಡ ಮುಂದೆ ನಿಂತು ಕೊರೊನಾ ಸೋಂಕಿತರ ಅಂತ್ಯಕ್ರಿಯೆ ನೆರವೇರಿಸುತ್ತೆ. ಮೃತ ಕೊರೊನಾ ಸೋಂಕಿತರ ಸಂಬಂಧಿಕರು ಬಡವರಾಗಿದ್ರೆ ಮೃತದೇಹ ತರಲು ವಾಹನ ವ್ಯವಸ್ಥೆ, ಕಟ್ಟಿಗೆ ವ್ಯವಸ್ಥೆ ಹೀಗೆ ಅಂತ್ಯಕ್ರಿಯೆಗೆ ಬೇಕಾದ ವ್ಯವಸ್ಥೆ ಮಾಡಿ ಅಂತ್ಯಕ್ರಿಯೆ ಮಾಡ್ತಾರೆ. ಆರೋಗ್ಯ ಇಲಾಖೆ ಜೊತೆ ಮಾತನಾಡಿ ಪಿಪಿಇ ಕಿಟ್ ಧರಿಸಿಕೊಂಡು ಸೋಂಕಿತರ ಮೃತದೇಹಗಳನ್ನ ಒಯ್ದು ಅಂತ್ಯಕ್ರಿಯೆ ಮಾಡ್ತಾರೆ.

  ಕೊರೊನಾ ಎರಡನೆ ಅಲೆಯ ಅಬ್ಬರ ಶುರುವಾದ್ಮೇಲೆ ಜನರಲ್ಲಿ ಸಾಕಷ್ಟು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮನೆಯವರೆ ಕೊರೊನಾದಿಂದ ಮೃತಪಟ್ಟಿದ್ರೂ ಭಯದಿಂದ ಸಂಬಂಧಗಳನ್ನೂ ಮರೆತು ಮೃತರ ಅಂತ್ಯಕ್ರಿಯೆ ಮಾಡಲು ಹಿಂಜರಿಯೋ ಸ್ಥಿತಿ ಇದೆ. ಅಂಥಾದ್ರಲ್ಲಿ ಬಿಜೆಪಿಯ ಕಾರ್ಯಕರ್ತರೂ ಆಗಿರುವ ಪ್ರದೀಪ್ ಮುಳ್ಳುರ್, ಶಿಕಾಂತ್ ಪೂಜಾರ್, ಸಂತೋಷ ಆಲದಕಟ್ಟಿ, ಅಭಿಷೇಕ್ ಗುಡಗೂರ್, ಅಭಿಷೇಕ್ ಬ್ಯಾಡಗಿ, ಸೋಮು ಅಂಗುರ್, ನಾಗರಾಜ್ ಹುಳ್ಳಿಕೋಪ್ಪಿ ಸೇರಿದಂತೆ ಹತ್ತು ಜನ ಯುವಕರ ತಂಡ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡೋ‌ ಮೂಲಕ ಮಾನವೀಯತೆ ಪ್ರದರ್ಶನ ಮಾಡ್ತಿದೆ.

  (ವರದಿ: ಮಂಜುನಾಥ್ ತಳವಾರ)
  Published by:Soumya KN
  First published: