• Home
 • »
 • News
 • »
 • district
 • »
 • ಬೀದರ್​​ನಲ್ಲಿ ನಿತ್ಯ ಕೋತಿಗಳ ಕಾಟಕ್ಕೆ ಬೆಳೆಗಳು ಹಾಳು..ರೈತರು ಕಂಗಾಲು!

ಬೀದರ್​​ನಲ್ಲಿ ನಿತ್ಯ ಕೋತಿಗಳ ಕಾಟಕ್ಕೆ ಬೆಳೆಗಳು ಹಾಳು..ರೈತರು ಕಂಗಾಲು!

ಕೋತಿಗಳ ಕಾಟ

ಕೋತಿಗಳ ಕಾಟ

ಪ್ರತಿದಿನ ವಾನರಸೈನ್ಯ ದಾಳಿಯಿಟ್ಟು ಅನ್ನದಾತರು  ಬೆಳೆದಿರೋ ಹೆಸರು, ಸೋಯಾ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಹಾಳುಗೆಡವುತ್ತಿವೆ. ಈ ಕೋತಿಗಳ ಕಾಟಕ್ಕೆ ರೈತರು ಹೈರಾಣಾಗಿದ್ದಾರೆ.

 • Share this:

  ಬೀದರ್:  ಕಪಿಗಳು ರೈತರ ಹೊಲಕ್ಕೆ ದಾಳಿ ಇಟ್ರೆ ಸಾಕು ಅನ್ನದಾತನ ಬೆಳೆಗಳೆಲ್ಲಾ ಸರ್ವನಾಶ. ಕೋತಿಗಳ ಕಾಟಕ್ಕೆ ರೈತರು ಬೇಸತ್ತು ಹೋಗಿದ್ದಾರೆ. ಅರಣ್ಯ ಇಲಾಖೆಗೆ ಕೋತಿಗಳ ಹಿಡ್ಕೊಂಡು ಹೋಗಿ ಅಂತ ಮನವಿ ಮಾಡಿದ್ರೂ ಕ್ಯಾರೇ ಎಂದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ರೈತರೀಗ ತಮ್ಮ ಬೆಳೆಗಳನ್ನು  ತಾವೇ ಖುದ್ದು ಕಾಪಾಡಿ ಕೊಳ್ಳುತ್ತಿದ್ದಾರೆ. ಆದ್ರೆ ಕೊತಿಗಳನ್ನಾದ್ರೂ  ಹಿಡಿದುಕೊಂಡು ಹೋಗಿ ಅಂದ್ರು ಸ್ಪಂದಿಸುತ್ತಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.


  ಬೀದರ್ ತಾಲೂಕಿನ ತಡಪಳ್ಳಿ ರಾಜಗಿರಾ ,ಶೇಖಾಪೂರ, ಸಿಂದೋಲ್, ಪಾತರಪಳ್ಳಿ, ಸಿಂದೋಲ್ ತಾಂಡ  ಗ್ರಾಮಗಳಲ್ಲಿ  ರೈತರ ಹೊಲಗಳಿಗೆ ಪ್ರತಿದಿನ ವಾನರಸೈನ್ಯ ದಾಳಿಯಿಟ್ಟು ಅನ್ನದಾತರು  ಬೆಳೆದಿರೋ ಹೆಸರು, ಸೋಯಾ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಹಾಳುಗೆಡವುತ್ತಿವೆ. ಈ ಕೋತಿಗಳ ಕಾಟಕ್ಕೆ ರೈತರು ಹೈರಾಣಾಗಿದ್ದಾರೆ. ಮಂಗಗಳ ಕಾಟ ತಪ್ಪಿಸಿ ಅಂತ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ  ಅಧಿಕಾರಿಗಳು  ತಲೆನೇ ಕೆಡೆಸಿಕೊಂಡಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.


  ಇದನ್ನೂ ಓದಿ: ಕೇರಳ ನಿವಾಸಿಗಳಿಗೆ ಕರ್ನಾಟಕ ಗಡಿಯಲ್ಲಿ ಕೋವಿಡ್ ಲಸಿಕೆಗೆ ಅವಕಾಶವಿಲ್ಲ; ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ


  ಮಿತಿ ಮೀರಿರುವ ಮಂಗಗಳ ಹಾವಳಿ  ತಡೆಯಲು ಹಲವಾರು ಬಾರಿ  ಗ್ರಾಮಸ್ಥರು  ಮನವಿಯನ್ನು  ಸಲ್ಲಿಸಿದ್ರೂ ಏನೂ ಪ್ರಯೋಜನವಾಗಿಲ್ಲ. ಕೊನೆಗೆ ಬೆಸತ್ತ ರೈತರು ತಾವೇ ತಮ್ಮ ಜಮೀನುಗಳಲ್ಲಿ ನಿಂತು ಬೆಳೆಗಳನ್ನು ಕಾಯುತ್ತಿದ್ದಾರೆ. ಇನ್ನು ಅರಣ್ಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ರೈತರು ಬೆಸತ್ತು ಹೋಗಿದ್ದಾರೆ. ಪ್ರತಿದಿನ ಜಮೀನುಗಳಲ್ಲಿ ಕೊತಿಗಳನ್ನು ಕಾಯೋದೆ ನಮ್ಮ ಕೆಲಸವಾಗಿ ಮಾರ್ಪಟ್ಟಿದೆ. ಹೀಗಾದ್ರೆ ರೈತರು ಜೀವನ ನಡೆಸುವುದು ಹೇಗೆ ರೈತರು ಅಷ್ಟೋ ಇಷ್ಟು ಸಾಲ ಶೂಲ ಮಾಡಿ ಬಿತ್ತಿದ ಬೆಳೆಗಳು ಉಳಿಸಿಕೊಳ್ಳುವುದರಲ್ಲಿ ಕಾಲಹರಣವಾಗುತ್ತಿದೆ. ಇದರಿಂದ ನಮ್ಮ ಕೆಲಸಗಳು ಆಗುತ್ತಿಲ್ಲ, ಮಂಗಗಳನ್ನು ಕಾಯೋದೆ ಆಗಿದೆ. ಇವುಗಳಿಂದ ರೈತರು ಹಾಳಾಗುತ್ತಿದ್ದಾರೆ.  ಕಳೆದ 15 ರಿಂದ 20  ದಿನಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹಗಲು ರಾತ್ರಿಯೆನ್ನದೇ ಕೈಯಲ್ಲಿ ಬಡಿಗೆಯನ್ನು ಹಿಡಿದು  ಮಂಗಗಳನ್ನು  ಕಾಯುವುದರಲ್ಲಿ  ಹರಸಾಹಸ ಪಡುತ್ತಿದ್ದಾರೆ ರೈತರು.


  ಈ ಕೋತಿಗಳಿಂದ ನಿತ್ಯ ಸಂಕಷ್ಟ ಎದುರಿಸುವಂತಾಗಿದೆ ರೈತರು ಈಗಲಾದ್ರೂ ಇವುಗಳನ್ನು  ದೂರದ  ಕಾಡಿಗೆ ಸುರಕ್ಷಿತವಾಗಿ ಕೋತಿಗಳನ್ನು ಸಾಗಿಸಿ ಅಂತ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ್ರೂ, ಅವರ್ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನೋದು ರೈತರ ಆರೋಪವಾಗಿದೆ. ಅದೇನೆ ಇರಲಿ ಮೊದಲೆ ರೈತರು ಪ್ರತಿ ವರ್ಷವು ಒಂದಿಲ್ಲಾ ಒಂದು ಸಂಕಷ್ಟವನ್ನು ಎದುರಿಸುತ್ತಿರುತ್ತಾರೆ. ಹೀಗಾಗಿ ಕೂಡಲೇ ಸಂಬಂದ ಪಟ್ಟ ಅಧಿಕಾರಿಗಳು ಕೋತಿಗಳನ್ನು  ಹಿಡಿದು ರೈತರ ಹಿತದೃಷ್ಟಿಯಿಂದಾದ್ರೂ ಈಗ   ಮಂಗಗಳನ್ನು ಕಾಡಿಗೆ ಬಿಡಬೇಕೆನ್ನೋದು ರೈತರ ಬೇಡಿಕೆಯಾಗಿದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.


  ವರದಿ: ಚಮನ್​ ಹೊಸಮನಿ

  Published by:Kavya V
  First published: