ಆನೆಕಲ್: ದೇಶದಲ್ಲಿಯೇ ಜಿಗಣಿ ಕೈಗಾರಿಕಾ ಪ್ರದೇಶ ಗ್ರಾನೈಟ್ ಮಾರುಕಟ್ಟೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ದೇಶದ ನಾನಾ ಕಡೆ ಇಲ್ಲಿನ ಗ್ರಾನೈಟ್ಗೆ ಉತ್ತಮ ಬೇಡಿಕೆ ಇದೆ. ಹಾಗಾಗಿ ನಿತ್ಯ ಸಾವಿರಾರು ಗ್ರಾನೈಟ್ ಕಲ್ಲುಗಳು ಇಲ್ಲಿನ ಕಾರ್ಖಾನೆಗಳಲ್ಲಿ ಕಟ್ ಆಗಿ ಶೋ ರೂಂಗಳಿಗೆ ಹೋಗುತ್ತವೆ. ಉಳಿದ ಗ್ರಾನೈಟ್ ತ್ಯಾಜ್ಯ ಕೆರೆ ಕುಂಟೆ, ರಾಜಕಾಲುವೆ, ಕಲ್ಲು ಕ್ವಾರಿಗಳು, ರಸ್ತೆ ಬದಿ ಹೀಗೆ ಕಂಡ ಕಂಡಲ್ಲಿ ಸುರಿದು ಪರಿಸರ ಮಾಲಿನ್ಯ ಮೀತಿ ಮೀರಿದೆ. ಕ್ರಮಕೈಗೊಳ್ಳ ಬೇಕಾದ ರಾಜ್ಯ ಪರಿಸರ ಮತ್ತು ವಾಯು ಮಾಲೀನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾತ್ರ ಕಂಡು ಕಾಣದಂತಿದ್ದಾರೆ. ಮನೆಯ ಅಂದ ಹೆಚ್ಚಿಸ್ತದೆ ಎಂದು ಇತ್ತೀಚೆಗೆ ಎಲ್ರು ಬಣ್ಣದ ಬಣ್ಣದ ಗ್ರಾನೈಟ್ಗಳಿಗೆ ಮಾರು ಹೋಗುತ್ತಿದ್ದಾರೆ. ಇದರಿಂದ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಗ್ರಾನೈಟ್ ಕಾರ್ಖಾನೆಗಳು ಆಣಬೆಗಳಂತೆ ಹುಟ್ಟಿಕೊಂಡಿದ್ದು, ಇಲ್ಲಿ ಉತ್ಪತ್ತಿಯಾಗುವ ಗ್ರಾನೈಟ್ ಸ್ಲರಿಯನ್ನು ಸುತ್ತಮುತ್ತಲಿನ ಕೆರೆ ಕುಂಟೆ, ರಾಜ ಕಾಲುವೆಗಳು. ರಸ್ತೆ ಬದಿ ಹೀಗೆ ಸಿಕ್ಕ ಸಿಕ್ಕ ಕಡೆ ಸುರಿದು ಹೋಗುತ್ತಿದ್ದಾರೆ.
ಇದರಿಂದ ಜಲಮೂಲಗಳು ಸೇರಿದಂತೆ ಇಡೀ ವಾತವರಣ ಮಲಿನಗೊಂಡಿದೆ. ಮಾತ್ರವಲ್ಲದೆ ಸಾರ್ವಜನಿಕರು ಜಾನುವಾರುಗಳು ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಾಲದಕ್ಕೆ ರಸ್ತೆ ಇಕ್ಕೆಲಗಳಲ್ಲಿಯು ಗ್ರಾನೈಟ್ ಸ್ಲರಿಯನ್ನು ಸುರಿದು ಹೋಗುತ್ತಿದ್ದಾರೆ. ಗ್ರಾನೈಟ್ ವೇಸ್ಟ್ ಸುರಿಯಲು ಪರವಾನಗಿ ಕೂಡ ಪಡೆದಿರುವುದಿಲ್ಲ. ಈ ಬಗ್ಗೆ ಹಲವು ಬಾರಿ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿಗೆ ದೂರು ಕೊಟ್ಟರು ಪ್ರಯೋಜನವಾಗಿಲ್ಲ ಎಂದು ಕಲ್ಲುಬಾಳು ಗ್ರಾಮ ಪಂಆಯ್ತಿ ಸದಸ್ಯ ಕಿರಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಗ್ರಾನೈಟ್ ತ್ಯಾಜ್ಯವನ್ನು ಬುಕ್ಕಸಾಗರ ಗ್ರಾಮದ ಸರ್ಕಾರಿ ಕಲ್ಲು ಕ್ವಾರಿಯಲ್ಲಿ ಜಯರಾಮ್ ಎಂಬುವವರು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದ್ದು, ಗ್ರಾನೈಟ್ ತ್ಯಾಜ್ಯದಿಂದ ಇಡೀ ಪರಿಸರ ಹಾಳಾಗುತ್ತದೆ. ತ್ಯಾಜ್ಯ ವಿಲೇವಾರಿಗೆ ಮೀಸಲಿಟ್ಟ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಮಾಡದೇ ಹೀಗೆ ಸರ್ಕಾರಿ ಕಲ್ಲು ಕ್ವಾರಿಯಲ್ಲಿ ತುಂಬಿಸುತ್ತಿರುವುದನ್ನು ಮಾಧ್ಯಮದವರು ಮತ್ತು ಸ್ಥಳೀಯರು ಪ್ರಶ್ನಿಸಿದಾಗ ಇದು ನಮ್ಮ ಜಾಗ. ನಮ್ಮ ಬಳಿ ಎಲ್ಲಾ ದಾಖಲೆಗಳು ಇವೆ. ನಮ್ಮ ಜಾಗದಲ್ಲಿರುವ ಕ್ವಾರಿ ಹಳ್ಳವನ್ನು ಸಮ ಮಾಡಲು ಗ್ರಾನೈಟ್ ವೇಸ್ಟ್ ತುಂಬಿಸಲಾಗುತ್ತಿದೆ ಎಂದು ಜಯರಾಮ್ ಎನ್ನುವ ದಂಧೆಕೋರ ತಿಳಿಸಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ