ಮದುವೆ ವಸ್ತ್ರದಲ್ಲಿ ಬಂದು ನಾಮಪತ್ರ ಸಲ್ಲಿಸಿ ಮತ್ತೆ ಮಂಟಪಕ್ಕೆ ತೆರಳಿ ಹೊಸ ಬಾಳಿಗೆ ಕಾಲಿರಿಸಿದ ನವವರ

ವಿಜಯಪುರ ಜಿಲ್ಲೆಯ ಬಿದರಕುಂದಿಯಲ್ಲಿ ಮೊದಲ ಹಂತದಲ್ಲಿ ಗ್ರಾ. ಪಂ. ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ತನ್ನ ರಾಜಕೀಯ ಭವಿಷ್ಯವನ್ನು ಅರಸಿರುವ ಮಕ್ಬೂಲ್ ಬನ್ನೆಟ್ಟಿ ಪಾಲಿಟಿಕ್ಸ್ ಗೆ ಧುಮಕಲು ಮ್ಯಾರೇಜ್ ದಿನವನ್ನೇ ಆಯ್ದುಕೊಂಡಿದ್ದಾರೆ. ಈ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಮದುವೆಯ ಗೆಟಪ್​ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ನವವರ.

ಮದುವೆಯ ಗೆಟಪ್​ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ನವವರ.

  • Share this:
ವಿಜಯಪುರ (ಡಿ. 10); ಮೈ ಮೇಲೆ ಹೊಸ ಬಟ್ಟೆ. ಸೂಟು ಬೂಟ್ , ತಲೆಗೊಂದು ಮಕ್ಮಲ್ ಟೋಪಿ, ಕೈಯಲ್ಲಿ ಹೂಗುಚ್ಛ, ಕೊರಳಲ್ಲಿ ಹೂವಿನ ಹಾರ ಹಾಕಿಕೊಂಡು ಕಲ್ಯಾಣ ಮಂಟಪಕ್ಕೆ ಹೋಗಬೇಕಾದ ವರ ನೇರವಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದಾನೆ. ಮದುವೆ ಗೆಟಪ್​ನಲ್ಲಿ ಬಂದ ವ್ಯಕ್ತಿಯನ್ನು ನೋಡಿದ ಅಧಿಕಾರಿಗಳು ಒಂದು ಕ್ಷಣ ಅವಾಕ್ಕಾಗಿದ್ದಾರೆ.

ಹಾಗೆ ಬಂದ ವ್ಯಕ್ತಿ ತನ್ನೊಂದಿಗೆ ತಂದಿದ್ದ ದಾಖಲಾತಿಗಳನ್ನು ನೀಡಿ, ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿ ಬಳಿಕ ಕಲ್ಯಾಣ ಮಂಟಪಕ್ಕೆ ತೆರಳಿ ಹೊಸ ಬಾಳಿಗೆ ಕಾಲಿರಿಸಿದ ಘಟನೆಗೆ ಬಸವನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಗುಂದಿ ಗ್ರಾಮ ಸಾಕ್ಷಿಯಾಯಿತು. ಈ ಒಂದು ದಿನದಲ್ಲಿ ಯುವಕನ ಬಾಳಲ್ಲಿ ಎರಡು ಪ್ರಮುಖ ಘಟನೆಗಳು ನಡೆದವು.

ಬಿದರಕುಂದಿ ಗ್ರಾಮದ ಯುವಕ ಮಕ್ಬೂಲ ಬನ್ನೆಟ್ಟಿ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಾನು ಇಷ್ಟಪಟ್ಟ ಮನದೆನ್ನೆಯ ಜೊತೆ ನಿಕಾಃ ಮಾಡಿಕೊಂಡಿದ್ದಾರೆ.  ಪರಸ್ಪರ ಹಾರ ಬದಲಾಯಿಸಿಕೊಂಡ ತಕ್ಷಣವೇ ಹಾಜರಾಗಿದ್ದು, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ. ಅಲ್ಲಿಗೆ ಬಂದವರೆ ನಾಮಪತ್ರ ಸಲ್ಲಿಸಿದರು. ಅದಕ್ಕೆ ಬೇಕಾದ ದಾಖಲಾತಿಗಳನ್ನು ಈತನ ಸ್ನೇಹಿತರು ಮತ್ತು ಸಂಬಂಧಿಕರು ಮೊದಲೇ ತಂದಿದ್ದರು.  ಅಲ್ಲಿ ನಾಮಪತ್ರ ಸಲ್ಲಿಸಿದ ತಕ್ಷಣವೇ ಮತ್ತೆ ಅದೇ ಮದುವೆ ಮಂಟಪಕ್ಕೆ ತೆರಳಿದರು.

ಇದನ್ನು ಓದಿ: ರಾಜ್ಯದ ಮೊದಲ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ವಿರೋಧ; ಎ.ಮಂಜು-ಹೆಚ್.ಸಿ.ಬಾಲಕೃಷ್ಣ ಶೀತಲ ಸಮರ

ಯುವಕ ಮಕ್ಬೂಲ ಬನ್ನೆಟ್ಟಿ ತನ್ನ ದಾಂಪತ್ಯ ಜೀವನ ಮತ್ತು ರಾಜಕೀಯ ಜೀವನಕ್ಕೆ ಮದುವೆಯಾದ ದಿನವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಒಂದೇ ದಿನ ಎರಡು ಪ್ರಮುಖ ಘಟನೆಗಳಿಗೆ ಸಾಕ್ಷಿಯಾದರು. ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ನವವರ, ಮದುವೆ ದಿನಾಂಕವನ್ನು ಮೊದಲೇ ನಿರ್ಧರಿಸಲಾಗಿತ್ತು. ಆದರೆ, ಈ ಮಧ್ಯೆ ಗ್ರಾ. ಪಂ. ಚುನಾವಣೆ ದಿನಾಂಕ ಘೋಷಣೆ ಆಯ್ತು. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಆದರೆ ಮದುವೆಯಾದ ದಿನದ ಶುಭ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದರು.

ವಿಜಯಪುರ ಜಿಲ್ಲೆಯ ಬಿದರಕುಂದಿಯಲ್ಲಿ ಮೊದಲ ಹಂತದಲ್ಲಿ ಗ್ರಾ. ಪಂ. ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ತನ್ನ ರಾಜಕೀಯ ಭವಿಷ್ಯವನ್ನು ಅರಸಿರುವ ಮಕ್ಬೂಲ್ ಬನ್ನೆಟ್ಟಿ ಪಾಲಿಟಿಕ್ಸ್ ಗೆ ಧುಮಕಲು ಮ್ಯಾರೇಜ್ ದಿನವನ್ನೇ ಆಯ್ದುಕೊಂಡಿದ್ದಾರೆ. ಈ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
Published by:HR Ramesh
First published: