ಪಟಾಕಿ ನಿಷೇಧದ ನಡುವೆಯು ಹಸಿರು ಪಟಾಕಿ ಭರಾಟೆ; ಬೆಂಗಳೂರು ಹೊರವಲಯದಲ್ಲಿ ಭರ್ಜರಿ ವ್ಯಾಪಾರ

ಪಟಾಕಿ ಬ್ಯಾನ್ ಬಗ್ಗೆ ಬೆಂಗಳೂರಿನ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಎಲ್ಲೆಡೆ ಕೊರೋನಾ ಇರೋದ್ರಿಂದ ಇದು‌ ಒಳ್ಳೆ ನಿರ್ಧಾರ ಅಂತಿದ್ದಾರೆ ಕೆಲವರು. ಮತ್ತಷ್ಟು ಜನ ಮೊದಲೇ ನಿಷೇಧ ನಿರ್ಧಾರ ಮಾಡಿದ್ದರೆ ವ್ಯಾಪಾರಸ್ಥರು ಉಳಿದುಕೊಳ್ಳುತ್ತಿದ್ದರು ಎನ್ನುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನೇಕಲ್: ಕೊನಾ ಉಲ್ಬಣಿಸುತ್ತದೆ ಎಂಬ ತಜ್ಞರ ಅಭಿಪ್ರಾಯದಂತೆ ಸರ್ಕಾರ ಪಟಾಕಿ ನಿಷೇಧ ಮಾಡಿದೆ. ಜೊತೆಗೆ ಹಸಿರು ಪಟಾಕಿಗೆ ಅವಕಾಶ ನೀಡಿದೆ. ಇದನ್ನೇ ನೆಪ ಮಾಡಿಕೊಂಡ ಪಟಾಕಿ ಮಾರಾಟಗಾರರು ಎಂದಿನಂತೆ ಪಟಾಕಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ಸಹ ಪಟಾಕಿ ಖರೀದಿಸುತ್ತಿದ್ದಾರೆ.

ಹೌದು, ರಾಜ್ಯ ಸರ್ಕಾರ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧ ಮಾಡಿದ್ದರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹಲವು ಕಡೆ ಪಟಾಕಿ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ಗಡಿ ಅತ್ತಿಬೆಲೆ, ಚಂದಾಪುರ ಸೇರಿದಂತೆ ಹಲವು ಕಡೆ ಪಟಾಕಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಪಟಾಕಿ ಮಾರಾಟಗಾರರನ್ನು ಪ್ರಶ್ನಿಸಿದರೆ ರಾಜ್ಯ ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರವೇ ಹಸಿರು ಪಟಾಕಿಗೆ ವಿನಾಯಿತಿ‌ ನೀಡಿದೆ. ಅದರಂತೆ ಹಸಿರು ಪಟಾಕಿ ಮಾತ್ರ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ.

ಅಂದ ಹಾಗೆ, 2019 ರಲ್ಲಿಯೇ ಸುಪ್ರೀಂ ಕೋರ್ಟ್ ಆದೇಶದಂತೆ ಮಾಲಿನ್ಯ ರಹಿತ ಹಸಿರು ಪಟಾಕಿಗಳನ್ನು ತಯಾರಿಸಲಾಗುತ್ತಿದೆ‌. ಅವುಗಳನ್ನೇ ನಾವು ಸಹ ಮಾರಾಟ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಪಟಾಕಿ ಬ್ಯಾನ್ ಮಾಡಿದ ಬಳಿಕ ಗ್ರಾಹಕರು ಪಟಾಕಿ ಖರೀದಿಸಲು ಬರುತ್ತಿಲ್ಲ. ಪ್ರತಿ ವರ್ಷ ಇಷ್ಟೊತ್ತಿಗೆ ಭರ್ಜರಿ ವ್ಯಾಪಾರವಾಗುತ್ತಿತ್ತು ಎಂದು ಪಟಾಕಿ ಮಾರಾಟಗಾರ ಕೃಷ್ಣನ್ ಹೇಳಿದ್ದಾರೆ. ಆದರೆ, ಇವರು ಮಾರುತ್ತಿರುವುದು ಹಸಿರು ಪಟಾಕಿಯೋ, ಹಾನಿಕಾರಕ ಪಟಾಕಿಯೋ ಎಂಬುದು ಕೊಳ್ಳುವ ಗ್ರಾಹಕರಿಗೆ ಇನ್ನೂ ಸರಿಯಾಗಿ ಗೊತ್ತಾಗಿಲ್ಲ.

ಇನ್ನೂ ಗ್ರಾಹಕರು ಸಹ ಕೊರೋನಾ ದೃಷ್ಟಿಯಿಂದ ಸರ್ಕಾರದ ಕ್ರಮ ಸರಿಯಿದೆ. ಆದರೆ ಸರ್ಕಾರ ದಿಢೀರ್ ಅಂತ ಪಟಾಕಿ ನಿಷೇಧ ಮಾಡಬಾರದಿತ್ತು. ದೀಪಾವಳಿಯಲ್ಲಿ ಮಕ್ಕಳು ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಹಾಗಾಗಿ ಸ್ವಲ್ಪ ಸಡಿಲಿಕೆ ಮಾಡಬೇಕು. ಅಂಗಡಿಯವರು ಅಹ ಹಸಿರು ಪಟಾಕಿ ಎನ್ನುತ್ತಿದ್ದಾರೆ. ಇವರು ಮಾರಾಟ ಮಾಡುತ್ತಿರುವುದು ಹಸಿರು ಪಟಾಕಿಯೋ ಹಾನಿಕಾರಕ ಪಟಾಕಿಯೋ ಗೊತ್ತಿಲ್ಲ. ಅಂಗಡಿಯವರು ಹಸಿರು ಪಟಾಕಿ ಎಂದು ಹೇಳಿದರು ಅಂತಾ ಪಟಾಕಿ ಖರೀದಿ ಮಾಡುತ್ತಿದ್ದೇವೆ ಎಂದು ಗ್ರಾಹಕ ಶಂಕರ್ ಹೇಳಿದ್ದಾರೆ.

ಇನ್ನೂ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ದೀಪಾವಳಿ ಪಟಾಕಿ ನಿಷೇಧ ಹಿನ್ನೆಲೆ ಪಟಾಕಿ ಮಳಿಗೆಗಳಿಗೆ ಇನ್ನೂ ಅನುಮತಿ ನೀಡಿಲ್ಲ. ಇಂದು ಸರ್ಕಾರದಿಂದ ಪಟಾಕಿ ಮಾರಾಟ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗೆಡೆ ಸಾಧ್ಯತೆ ಇದ್ದು,  ಮಾರ್ಗಸೂಚಿ ಬಂದ ಬಳಿಕ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನು ಓದಿ: Bihar Exit Poll Results | ಮತದಾನೋತ್ತರ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟ್​ಬಂಧನ್​ಗೆ ಅಧಿಕಾರ ಸಾಧ್ಯತೆ

ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಪರಿಸರ ಪ್ರೇಮಿಗಳು ಪಟಾಕಿ ನಿಷೇಧ ಮಾಡಿರೋದು ಒಳ್ಳೆಯ ನಿರ್ಧಾರವಾಗಿದೆ. ಪ್ರತಿ ಬಾರಿ ಪಟಾಕಿಯಿಂದ ವಾಯುಮಾಲಿನ್ಯ ಆಗುತ್ತಿತ್ತು. ಪಟಾಕಿಯಿಂದಾಗುವ ಮಾಲಿನ್ಯದಿಂದ ಅಸ್ತಮಾ ಇರೋರಿಗೆ ಹೆಚ್ಚು ತೊಂದರೆಯಾಗುತ್ತದೆ. ಕೋವಿಡ್ ಕಮಿಟಿ ಸಲಹೆ ಪರಿಗಣಿಸಿ ಪಟಾಕಿ ನಿಷೇಧಿಸಿರೋದು ಒಳ್ಳೆಯ ನಿರ್ಧಾರ. ದೆಹಲಿಯಂತಹ ನಗರದಲ್ಲಿ ಪಟಾಕಿಯಿಂದ ಎಷ್ಟು ಮಾಲಿನ್ಯ ಆಗಿದೆ ಅನ್ನೋದು ಗೊತ್ತಿದೆ. ಕೋವಿಡ್​​ನಿಂದ ಬಳಲುತ್ತಿರುವವರಿಗೆ ಹೆಚ್ಚು ಸಮಸ್ಯೆಯಾಗುತ್ತೆಂಬ ಸಲಹೆ ಮೇರೆಗೆ ನಿರ್ಧಿರಿಸಿದ್ದಾರೆ. ಹೀಗಾಗಿ ಪಟಾಕಿ ಹೊಡೆಯೋದು ಬೇಡ ದೀಪ ಹಚ್ಚಿ ದೀಪಾವಳಿ ಹಬ್ಬ ಆಚರಿಸೋಣ. ಪಟಾಕಿಯಿಂದ ವಯಸ್ಸಾದವರಿಗೆ, ಮಕ್ಕಳಿಗೆ ಹೆಚ್ಚು ಸಮಸ್ಯೆಯಾಗುತ್ತೆ . ಹೀಗಾಗಿ ಸರ್ಕಾರದ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಪರಿಸರ ತಜ್ಞ ವಿಜಯ್ ನಿಶಾಂತ್ ಹೇಳಿದ್ದಾರೆ.

ಒಟ್ಟಿನಲ್ಲಿ ಪಟಾಕಿ ಬ್ಯಾನ್ ಬಗ್ಗೆ ಬೆಂಗಳೂರಿನ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಎಲ್ಲೆಡೆ ಕೊರೋನಾ ಇರೋದ್ರಿಂದ ಇದು‌ ಒಳ್ಳೆ ನಿರ್ಧಾರ ಅಂತಿದ್ದಾರೆ ಕೆಲವರು. ಮತ್ತಷ್ಟು ಜನ ಮೊದಲೇ ನಿಷೇಧ ನಿರ್ಧಾರ ಮಾಡಿದ್ದರೆ ವ್ಯಾಪಾರಸ್ಥರು ಉಳಿದುಕೊಳ್ಳುತ್ತಿದ್ದರು ಎನ್ನುತ್ತಿದ್ದಾರೆ. ಹಬ್ಬದ ಸಂಭ್ರಮಕ್ಕೆ ಈ ಕೊನೇ ಕ್ಷಣದ ಬದಲಾವಣೆ ಸರಿಯಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.

ವರದಿ: ಆದೂರು ಚಂದ್ರು
Published by:HR Ramesh
First published: