HOME » NEWS » District » GRANNY OF 90YRS AGE DIES AFTER VOTING IN CHITRADURGA VTC SNVS

ಕೋಟೆನಾಡಿನಲ್ಲಿ ಮತದಾನ ಶಾಂತಿಯುತ; ವೋಟ್ ಮಾಡಿದ ಬಳಿಕ ಜೀವ ಬಿಟ್ಟ 90ರ ಅಜ್ಜಿ

ಹಿರಿಯೂರು ತಾಲ್ಲೋಕಿನ ಶಿವಪುರ ಗ್ರಾಮದ ಸರೋಜಮ್ಮ ಎಂಬ 90 ವರ್ಷದ ವೃದ್ದೆ ತನ್ನ ಇಳಿ ವಯಸ್ಸನ್ನೂ ಲೆಕ್ಕಿಸದೇ ಮತ ಚಲಾಯಿಸಿದರು. ಆದರೆ ಮತ ಚಲಾಯಿಸಿ ವಾಪಾಸ್ ಮನೆಗೆ ತೆರಳುವ ವೇಳೆ ಆ ಹಿರಿ ಜೀವ ಸಾವನ್ನಪ್ಪಿದೆ.

news18-kannada
Updated:December 28, 2020, 8:18 AM IST
ಕೋಟೆನಾಡಿನಲ್ಲಿ ಮತದಾನ ಶಾಂತಿಯುತ; ವೋಟ್ ಮಾಡಿದ ಬಳಿಕ ಜೀವ ಬಿಟ್ಟ 90ರ ಅಜ್ಜಿ
ಚಿತ್ರದುರ್ಗದಲ್ಲಿ ಮತದಾನ ಮಾಡಿ ಸಾವನ್ನಪ್ಪಿದ 90ರ ಅಜ್ಜಿ
  • Share this:
ಚಿತ್ರದುರ್ಗ: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಹಿನ್ನಲೆ ಚಿತ್ರದುರ್ಗ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ 89 ಗ್ರಾಮ ಪಂಚಾಯಿತಿಗಳ 1475 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಮತದಾನ ಪ್ರಕ್ರಿಯೆ ಎಲ್ಲೆಡೆ ಶಾಂತಿಯುತವಾಗಿ ನಡೆಯಿತು. ಹಿರಿಯೂರು ತಾಲ್ಲೂಕಿನಲ್ಲಿ 80.56%, ಚಳ್ಳಕೆರ ತಾಲ್ಲೂಕಿನಲ್ಲಿ 88.53% ಮೊಳಕಾಲ್ಮುರು ತಾಲ್ಲೂಕಿನಲ್ಲಿ 86.92 % ಮತ ಚಲಾವಣೆಯಾಗಿ ಮೂರು ತಾಲ್ಲೂಕುಗಳು ಸೇರಿ ಒಟ್ಟು 85.34% ಮತದಾನವಾಗಿದೆ.

ಹಿರಿಯೂರಿನ 33, ಚಳ್ಳಕೆರೆಯ 40 ಹಾಗೂ ಮೊಳಕಾಲ್ಮುರಿನ 16 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 89 ಗ್ರಾಮ ಪಂಚಾಯಿತಿಗಳ 1668 ಸ್ಥಾನಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ಷೋಷಣೆಯಾಗಿತ್ತು. ಇದರಲ್ಲಿ 189 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 4 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಆದ್ದರಿಂದ 1475 ಸದಸ್ಯ ಸ್ಥಾನಗಳಿಗೆ ಮತದಾನ ನಡೆಸಲು ಜಿಲ್ಲೆಯಲ್ಲಿ 774 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 1475 ಸದಸ್ಯ ಸ್ಥಾನಗಳಿಗೆ ಮೊಳಕಾಲ್ಮುರಿನ 689, ಚಳ್ಳಕೆರೆಯ, 1756 ಹಾಗೂ ಹಿರಿಯೂರಿನ 1372 ಅಭ್ಯರ್ಥಿಗಳು ಸೇರಿದಂತೆ ಒಟ್ಟು 3817 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇದನ್ನೂ ಓದಿ: ಗ್ರಾ.ಪಂ. ಚುನಾವಣೆ ಅಂತ್ಯ: 2ನೇ ಹಂತದಲ್ಲಿ ಶೇ. 80.71 ಮತದಾನ – ಡಿ. 30ಕ್ಕೆ ಫಲಿತಾಂಶ

ನಿಗದಿಯಂತೆ ಭಾನುವಾರ ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಸಂಜೆ 5 ರವರೆಗೆ ನಡೆದು, ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಭಾಗವಹಿಸಿದರು. ಅಲ್ಲದೇ ಇಡೀ ದಿನ ಎಲ್ಲಾ ಗ್ರಾಮಗಳಲ್ಲೂ ಹಿರಿಯ ವಯಸ್ಸಾದ ಮತದಾರು ಮತ ಚಲಾವಣೆಯ ಕರ್ತವ್ಯ ಪ್ರಜ್ಞೆಯಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಆದರೆ ಜಿಲ್ಲೆಯ ಹಿರಿಯೂರು ತಾಲ್ಲೋಕಿನ ಶಿವಪುರ ಗ್ರಾಮದ ಸರೋಜಮ್ಮ ಎಂಬ 90 ವರ್ಷದ ವೃದ್ದೆ ತನ್ನ ಇಳಿ ವಯಸ್ಸನ್ನೂ ಲೆಕ್ಕಿಸದೇ ಮತ ಚಲಾಯಿಸಿದರು. ಆದರೆ ಮತ ಚಲಾಯಿಸಿ ವಾಪಾಸ್ ಮನೆಗೆ ತೆರಳುವ ವೇಳೆ ಆ ಹಿರಿ ಜೀವ ಸಾವನ್ನಪ್ಪಿದೆ. ಇದರಿಂದ ಸಾವಿಗೂ ಮುನ್ನ ಕರ್ತವ್ಯ ಮುಗಿಸಿ ತೆರಳಿದ ಅಜ್ಜಿ ಎಂಬ ಚರ್ಚೆಗೆ 90 ವರ್ಷದ ಮೃತ ಸರೋಜಮ್ಮ ಗ್ರಾಸವಾಗಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರ ಮನ್ ಕೀ ಬಾತ್ ನಲ್ಲಿ ಮತ್ತೆ ಮಂಡ್ಯ ನೆನಪು ; ಜಿಲ್ಲೆಯ ಯುವಕರ ತಂಡದ ಸಾಧನೆಗೆ ಪ್ರಶಂಸೆ

ಕೊರೆಯುವ ಚಳಿಯಲ್ಲಿ ಮುಂಜಾನೆ ವೇಳೆಯಲ್ಲಿ ಮಂದಗತಿಯಲ್ಲಿ ಆರಂಭಗೊಂಡ ಮತದಾನ ಬೆಳಿಗ್ಗೆ 9ರ ನಂತರ ಎಳೆಬಿಸಿಲಿಗೆ ಮತದಾನ ಚುರುಕುಗೊಂಡಿತು. ಮಧ್ಯಾಹ್ನ 3ರ ವೇಳೆಗೆ 493775 ಮತದಾರರ ಪೈಕಿ 320182 ಮತದಾರರು ಹಕ್ಕು ಚಲಾಯಿಸಿದರು. ಮುಕ್ತಾಯದ ವೇಳೆಗೆ 85.34% ಮತ ಚಲಾವಣೆ ಆಗಿವೆ.ಇನ್ನೂ ಕೋವಿಡ್ ಹಿನ್ನಲೆಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿ, ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಪ್ರತಿ ಮತದಾರನ ಜ್ವರ ತಪಾಸಣೆ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಲಾಗುತ್ತಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಭದ್ರತೆಗಾಗಿ ನಿಯೋಜಿಸಿದ ಸಿಬ್ಬಂದಿ ಮತದಾರರಿಗೆ ನಿರಂತರ ಸೂಚನೆ ನೀಡುತ್ತಿರುವುದು ಕಂಡು ಬಂತು. ಒಟ್ಟಾರೆ ಪ್ರತೀ ಸಾರಿಯೂ ಚಿತ್ರುದರ್ಗದಲ್ಲಿ ಜಿದ್ದಿನಿಂದ ವೈಷಮ್ಯಗಳ ಮೂಲಕ ನಡೆಯುತ್ತಿದ್ದ ಚುನಾವಣೆ ಈ ಬಾರಿ ಯಾವುದೇ ಗಲಾಟೆ ಗದ್ದಲಗಳಿಲ್ಲದೇ ನಡೆದಿರುವುದು ಗಮನಾರ್ಹ.

ವರದಿ: ವಿನಾಯಕ ತೊಡರನಾಳ್ 
Published by: Vijayasarthy SN
First published: December 28, 2020, 8:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories