Dakshina Kannada: ಪಂಚಾಯತ್ ಕಟ್ಟಡದಲ್ಲಿ ಗೃಹಪ್ರವೇಶ ಮಾಡಿ ಕುಳಿತ ಪಂಚಾಯತ್ ಸದಸ್ಯೆ

ತೆಕ್ಕಾರು ಗ್ರಾಮಪಂಚಾಯತ್ ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡದ ಭೂಮಿ ತನ್ನ ಹೆಸರಲ್ಲಿದ್ದು, 1980 ರಲ್ಲಿ ಯಮುನಾ ಪತಿ ನೇಮು ನಾಯ್ಕರಿಗೆ ಸರಕಾರವು ಪರಿಶಿಷ್ಟ ಪಂಗಡ ಕೋಟಾದಡಿ ಈ ಜಾಗವನ್ನು ಮಂಜೂರು ಮಾಡಿದೆ.

ಪಂಚಾಯತ್ ಸದಸ್ಯೆಯ ಕುಟುಂಬ

ಪಂಚಾಯತ್ ಸದಸ್ಯೆಯ ಕುಟುಂಬ

  • Share this:
ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಪಂಚಾಯತ್ ಕಟ್ಟಡದಲ್ಲಿ (Panchayat Building) ಪಂಚಾಯತ್ ಸದಸ್ಯೆಯೋರ್ವರು (Panchayat Member) ಒಲೆ ಉರಿಸಿ ಗೃಹಪ್ರವೇಶ ಮಾಡಿದ ಅಪರೂಪದ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪಂಚಾಯತ್ ಆಡಳಿತವು ಅಧಿಕಾರಿಗಳೊಂದಿಗೆ ಸೇರಿ ತನ್ನ ಹೆಸರಿನಲ್ಲಿರುವ ಭೂಮಿಯಲ್ಲಿ ಅಕ್ರಮವಾಗಿ ಪಂಚಾಯತ್ ಕಟ್ಟಡ (Panchayat Building) ನಿರ್ಮಿಸಿದ್ದಾರೆ ಎಂದು ಆರೋಪಿಸಿರುವ ಈ ಮಹಿಳೆ ಯಾವುದೇ ಕಾರಣಕ್ಕೂ ತನ್ನ ಭೂಮಿಯನ್ನು ಪಂಚಾಯತ್ ಗೆ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮಪಂಚಾಯತ್ ವ್ಯಾಪ್ತಿಯ ಬಾಜಾರು ಎಂಬಲ್ಲಿ ತೆಕ್ಕಾರು ಗ್ರಾಮಪಂಚಾಯತ್ ಗಾಗಿ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಎರಡು ಅಂತಸ್ತಿನ ಕಟ್ಟಡ ನಿರ್ಮಾಣಗೊಂಡು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ಹಂತಕ್ಕೂ ತಲುಪಿದೆ. ಆದರೆ ಏಕಾಏಕಿ ಪಂಚಾಯತ್ ನ ಸದಸ್ಯೆ ಯಮುನಾ ನಾಯ್ಕ ಎಂಬವರು ಈ ಕಟ್ಟಡದಲ್ಲಿ ಒಲೆ ಉರಿಸಿ, ಗೃಹಪ್ರವೇಶ ಮಾಡಿ ತನ್ನ ಕುಟುಂಬ ಸದಸ್ಯರೊಂದಿಗೆ ವಾಸಿಸಲು ಆರಂಭಿಸಿದ್ದಾರೆ.

ಯಮುನಾ ನಾಯ್ಕರ ಪ್ರಕಾರ ತೆಕ್ಕಾರು ಗ್ರಾಮಪಂಚಾಯತ್ ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡದ ಭೂಮಿ ತನ್ನ ಹೆಸರಲ್ಲಿದ್ದು, 1980 ರಲ್ಲಿ ಯಮುನಾ ಪತಿ ನೇಮು ನಾಯ್ಕರಿಗೆ ಸರಕಾರವು ಪರಿಶಿಷ್ಟ ಪಂಗಡ ಕೋಟಾದಡಿ ಈ ಜಾಗವನ್ನು ಮಂಜೂರು ಮಾಡಿದೆ. ಯಮುನಾ ನಾಯ್ಕರಿಗೆ ಸರ್ವೆ ನಂಬರ್ 103/ 1 A ಯಲ್ಲಿ 69 ಸೆಂಟ್ಸ್ ಜಾಗ ಮತ್ತು 64 P 1/23 ಯಲ್ಲಿ 95 ಸೆಂಟ್ಸ್ ಜಾಗವಿದೆ.

ಸಾಮಾನ್ಯ ಸಭೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದ ಯಮುನಾ

103/1 A ಜಾಗದಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಯಮುನಾ ನಾಯ್ಕ ಜಾಗ ಬಿಟ್ಟು ಕೊಟ್ಟಿದ್ದು, ಇದೀಗ ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ತೆಕ್ಕಾರು ಗ್ರಾಮಪಂಚಾಯತ್ ತನ್ನ ನೂತನ ಕಛೇರಿಗಾಗಿ ಕಟ್ಟಡದ ಕಾಮಗಾರಿ ನಡೆಸುತ್ತಿದೆ. ಪಂಚಾಯತ್ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದ ಸಂದರ್ಭದಲ್ಲೇ ಯಮುನಾ ನಾಯ್ಕ ಪಂಚಾಯತ್ ನಿರ್ಧಾರಕ್ಕೆ ಸಾಮಾನ್ಯ ಸಭೆಯಲ್ಲೇ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

ಯಮುನಾ ಹೇಳಿದ್ದನ್ನೂ ಲೆಕ್ಕಿಸದೇ ಕಟ್ಟಡ ಕೆಲಸ ಶುರು

ಆದರೆ ಪಂಚಾಯತ್ ಆಡಳಿತ ಮಂಡಳಿ ಯಮುನಾ ಅವರ ಆಕ್ಷೇಪವನ್ನು ಮಾನ್ಯ ಮಾಡದೆ, 2019 ರಲ್ಲಿ ಕಟ್ಟಡ ಕಟ್ಟುವ ಕಾಮಗಾರಿ ಆರಂಭಿಸಿತ್ತು. ಈ ನಡುವೆ ಯಮುನಾ ಅವರು ಪುತ್ತೂರು ಸಹಾಯಕ ಆಯುಕ್ತರಿಗೆ ಈ ನಿರ್ಧಾರದ ವಿರುದ್ಧ ದೂರನ್ನೂ ಸಲ್ಲಿಸಿದ್ದರು. ಆದರೆ ಇದೀಗ ಕಟ್ಟಡದ ಎರಡಂತಸ್ತಿನ ಕಾಮಗಾರಿ ಮುಕ್ತಾಯಗೊಳ್ಳುವಂತೆಯೇ ಯಮುನಾ ಮತ್ತು ಅವರ ಕುಟುಂಬಸ್ಥರು ಕಟ್ಟಡದಲ್ಲಿ ವಾಸಿಸಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಶಿವರಾತ್ರಿ ದಿನ ದೇವರಿಗೆ ಕೋಳಿ, ಕುರಿ ಮಾಂಸದ ಬಾಡೂಟ ಅರ್ಪಣೆ, ಪ್ರಸಾದ ಚಪ್ಪರಿಸಿ ತಿನ್ನುವ ಭಕ್ತರು

ಜಮೀನು ಬಿಟ್ಟು ಕೊಡಲ್ಲ ಎನ್ನುವ ಪಟ್ಟು

ಯಾವುದೇ ಕಾರಣಕ್ಕೂ ತಮ್ಮ ಜಮೀನನ್ನು ಬಿಟ್ಟು ಕೊಡುವುದಿಲ್ಲ ಎಂದು ಯಮುನಾ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.    ವರ್ಷದ ಹಿಂದೆ ಬಾರ್ಯ ಗ್ರಾಮಪಂಚಾಯತ್ ನಲ್ಲೇ ಇದ್ದ ತೆಕ್ಕಾರು ಇದೀಗ ಗ್ರಾಮಪಂಚಾಯತ್ ಆಗಿ ಮಾರ್ಪಟ್ಟಿದೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಈ ಪಂಚಾಯತ್ ಗೆ ಸರಕಾರ ಸರ್ವೆ ನಂಬರ್ 64/ 1.P.1 ರಲ್ಲಿ 20 ಸೆಂಟ್ಸ ಜಾಗವನ್ನು ನೂತನ ಕಟ್ಟಡಕ್ಕೆಂದು ಮುಂಜೂರು ಮಾಡಿದೆ.

ಸರಕಾರ ಪಂಚಾಯತ್ ಗೆ ಮಂಜೂರು ಮಾಡಿದ ಜಾಗ

ಈ ಜಾಗವು ಸದ್ರಿ ಪಂಚಾಯತ್ ಕಟ್ಟುತ್ತಿರುವ ನೂತನ ಕಟ್ಟಡಕ್ಕಿಂದ 1 ಕಿಲೋ ಮೀಟರ್ ದೂರದಲ್ಲಿದ್ದು, ಯಮುನಾ ನಾಯ್ಕರ 103/1 ರಲ್ಲಿ ಕಟ್ಟುತ್ತಿರುವುದರ ಉದ್ದೇಶ ಗೊಂದಲಕ್ಕೆ ಕಾರಣವಾಗಿದೆ. ಈ ಸಂಬಂಧ ಪಂಚಾಯತ್ ಅಧ್ಯಕ್ಷರನ್ನು ಸಂಪರ್ಕಿಸಿದಾಗ ಕಟ್ಟಡ ಕಟ್ಟುತ್ತಿರುವ ಜಾಗವನ್ನು ಸರಕಾರ ಪಂಚಾಯತ್ ಗೆ ಮಂಜೂರು ಮಾಡಿದೆ. ಆದರೆ ಕಳೆದ ನಾಲ್ಕು ವರ್ಷದಿಂದ ಜಾಗದ ಬಗ್ಗೆ ಯಾವುದೇ ತಕರಾರು ಎತ್ತದ ಪಂಚಾಯತ್ ಸದಸ್ಯೆ ಯಮುನಾ ನಾಯ್ಕ ಇದೀಗ ಏಕಾಏಕಿ ಕಟ್ಟಡದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ.

ಜಮೀನು ಬಿಟ್ಟುಕೊಡಲೇ ಬೇಕು ಎನ್ನುತ್ತಿರುವ ಗ್ರಾಮ ಪಂಚಾಯತ್ ಸದಸ್ಯೆ

ಈ ಸಂಬಂಧ ಪೋಲೀಸರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಜಾಗ ಯಾರದ್ದೇ ಆಗಿರಲಿ, ಸರಕಾರ ಒರ್ವ ವ್ಯಕ್ತಿಗೆ ಜಮೀನು ಮಂಜೂರು ಮಾಡಿರುವ ಸಂದರ್ಭದಲ್ಲಿ ಪಹಣಿ ಪತ್ರದ ಹಿಂದೆ ಸರಕಾರ ಯಾವಾಗ ಕೇಳಿದರೂ, ಭೂಮಿ ನೀಡಬೇಕು ಎನ್ನುವುದನ್ನೂ ನಮೂದಿಸಿದೆ ಎನ್ನುವ ಮೂಲಕ ಜಮೀನನ್ನು ತಮಗೆ ಬಿಟ್ಟು ಕೊಡೋದು ಅನಿವಾರ್ಯ ಎನ್ನುವ ಮಾತನ್ನೂ ಹೇಳುತ್ತಾರೆ ತೆಕ್ಕಾರು ಗ್ರಾಮಪಂಚಾಯ್ ನ ಅಧ್ಯಕ್ಷ ಅಬ್ದುಲ್ ರಝಾಕ್.

ಇದನ್ನೂ ಓದಿ: Kodagu: ಶೀತದಿಂದ ಬಳಲುತ್ತಿದ್ದ ಎರಡು ತಿಂಗಳ ಮಗು ಸಾವು

ಸರಕಾರದ ವಿವಿಧ ಯೋಜನೆಯನ್ನು ಬಳಸಿಕೊಂಡು ತೆಕ್ಕಾರು ಗ್ರಾಮಪಂಚಾಯತ್ ಈ ಕಟ್ಟಡವನ್ನು ಕಟ್ಟಿದ್ದು, ತಮ್ಮ ಬಳಕೆಗೆ ಬರುವ ಮೊದಲೇ ಈ ಕಟ್ಟಡ ಪಂಚಾಯತ್ ನ ಕೈ ತಪ್ಪುವ ಲಕ್ಷಣ ಕಂಡು ಬರುತ್ತಿದೆ. ಊರಿಗೆಲ್ಲಾ ಬುದ್ಧಿ ಹೇಳುವ ಸ್ಥಳೀಯ ಅಧಿಕಾರಿಗಳು ಯಾರದೋ ಜಾಗದಲ್ಲಿ ಕಟ್ಟಡ ನಿರ್ಮಿಸಿ ಪೇಜಿಗೆ ಸಿಲುಕುವ ಲಕ್ಷಣದಲ್ಲಿದ್ದಾರೆ.
Published by:Divya D
First published: