• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಗ್ರಾಮ ಪಂಚಾಯತ್​ ಚುನಾವಣೆ: ವಿಜಯಪುರದಲ್ಲಿ 250 ಜನ ಅವಿರೋಧ ಆಯ್ಕೆ, ಕಣದಲ್ಲಿ 4997 ಅಭ್ಯರ್ಥಿಗಳು

ಗ್ರಾಮ ಪಂಚಾಯತ್​ ಚುನಾವಣೆ: ವಿಜಯಪುರದಲ್ಲಿ 250 ಜನ ಅವಿರೋಧ ಆಯ್ಕೆ, ಕಣದಲ್ಲಿ 4997 ಅಭ್ಯರ್ಥಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಜಯಪುರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ವಿಜಯಪುರ ಉಪವಿಭಾಗದ ಬಬಲೇಶ್ವರ, ತಿಕೋಟಾ, ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳಲ್ಲಿ ಚುನಾವಣೆ ನಡೆಯುತ್ತಿದೆ. 

  • Share this:

ವಿಜಯಪುರ(ಡಿಸೆಂಬರ್​. 15): ಬೇರು ಮಟ್ಟದಿಂದಲೇ ಚುನಾವಣೆಯ ಜಿದ್ದಾಜಿದ್ದಿಗೆ ಕಾರಣವಾಗುವ ಗ್ರಾಮ ಪಂಚಾಯಿತಿ ಚುನಾವಣೆ ಮೊದಲ ಹಂತಕ್ಕೆ ಬಸವನಾಡು ಸಜ್ಜಾಗಿದೆ. ಈಗಾಗಲೇ ಚುನಾವಣೆಗಾಗಿ ವಿಜಯಪುರ ಜಿಲ್ಲಾಡಳಿತ ಸಕಲ ರೀತಿಯಿಂದಲೂ ಸನ್ನದ್ಧವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 111 ಗ್ರಾಮ ಪಂಚಾಯಿತಿಗಳ 2126 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ಹಿಂಪಡೆಯುವ ದಿನಾಂಕ ಮುಕ್ತಾಯವಾಗಿದೆ. ಈ ಬಾರಿ ಮೊದಲ ಹಂತದ ಚುನಾವಣೆಯಲ್ಲಿ 250 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ. ಅದೇ ರೀತಿ ಒಂದು ಸ್ಥಾನಕ್ಕೆ ಯಾರೊಬ್ಬರೂ ಸಹ ನಾಮಪತ್ರ ಸಲ್ಲಿಸದಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ವಿಜಯಪುರ ಉಪವಿಭಾಗದ ಬಬಲೇಶ್ವರ, ತಿಕೋಟಾ, ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳಲ್ಲಿ ಚುನಾವಣೆ ನಡೆಯುತ್ತಿದೆ. 


ವಿಜಯಪುರ ತಾಲೂಕಿನ 17 ನಾನಾ ಗ್ರಾಮ ಪಂಚಾಯಿತಿಗಳ 355 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.  ಬಾಕಿ 343 ಸ್ಥಾನಗಳಿಗೆ 982 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಬಲೇಶ್ವರ ತಾಲೂಕಿನ 15 ಗ್ರಾಮ ಪಂಚಾಯಿತಿಗಳ 299 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 33 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ತಾಲೂಕಿನಲ್ಲಿ ಒಂದು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದಿರುವುದು ಗಮನಾರ್ಹವಾಗಿದೆ. 265 ಸ್ಥಾನಗಳಿಗೆ 649 ಜನ ಅಭ್ಯರ್ಥಿಗಳು ಈಗ ಕಣದಲ್ಲಿ ಉಳಿದಿದ್ದಾರೆ.


ತಿಕೋಟಾ ತಾಲೂಕಿನಲ್ಲಿ 14 ಗ್ರಾಮ ಪಂಚಾಯಿತಿಗಳ 287 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 44 ಜನ ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಈಗ 243 ಸ್ಥಾನಗಳಿಗೆ 622 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನಲ್ಲಿ 15 ಗ್ರಾಮ ಪಂಚಾಯಿತಿಗಳಿದ್ದು, 313 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.  ಈಗಾಗಲೇ 56 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, 257 ಸ್ಥಾನಗಳಿಗೆ 650 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.


ನಿಡಗುಂದಿ ತಾಲೂಕಿನ 8 ಗ್ರಾಮ ಪಂಚಾಯಿತಿಗಳ 144 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು 17 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗ ಬಾಕಿ ಇರುವ 127 ಸ್ಥಾನಗಳಿಗೆ 350 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೊಲ್ಹಾರ ತಾಲೂಕಿನ 8 ಗ್ರಾಮ ಪಂಚಾಯಿತಿಗಳ 144 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 14 ಜನ ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಈಗ 130 ಸ್ಥಾನಗಳಿಗೆ 345 ಜನ ಕಣದಲ್ಲಿ ಉಳಿದಿದ್ದಾರೆ.


ಇದನ್ನೂ ಓದಿ : ಪುತ್ತೂರಿನ ಜನವಸತಿ ಪ್ರದೇಶದಲ್ಲೇ ಚಿರತೆ ಓಡಾಟ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಸ್ಥಳೀಯರು

top videos


    ಮುದ್ದೇಬಿಹಾಳ ತಾಲೂಕಿನ 20 ಗ್ರಾಮ ಪಂಚಾಯಿತಿಗಳ 326 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 45 ಜನ ಅವಿರುೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಕಿ ಇರುವ 281 ಸ್ಥಾನಗಳಿಗೆ 738 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ತಾಳಿಕೋಟೆ ತಾಲೂಕಿನಲ್ಲಿ 14 ಗ್ರಾಮ ಪಂಚಾಯಿತಿಗಳ 258 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 29 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಿದಿದೆ. ಈ ಹಿನ್ನೆಲೆಯಲ್ಲಿ ಬಾಕಿ ಇರುವ 229 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 661 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.


    ಈ ಚುನಾವಣೆಯಲ್ಲಿ ಪರಿಶಿಷ್ಠ ಜಾತಿಯಿಂದ 1353 ಜನ, ಪರಿಶಿಷ್ಠ ಪಂಗಡದಿಂದ 188, ಹಿಂದುಳಿದ ವರ್ಗ ಅ ದಿಂದ 772, ಹಿಂದುಳಿದ ವರ್ಗ ಬ ಸಮುದಾಯದಿಂದ 166 ಮತ್ತು ಸಾಮಾನ್ಯ ವರ್ಗಗಳಿಂದ 2518 ಸೇರಿದಂತೆ ಒಟ್ಟು 4997 ಜನ ಅಭ್ಯರ್ಥಿಗಳು ತಮ್ಮ ರಾಜಕೀಯ ಭವಿಷ್ಯ ಅರಸಿ ಕಣಕ್ಕಿಳಿದಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

    First published: