ಕಾರವಾರ: ಬಾಂಗ್ಲಾ ವಿಮೋಚನಾ ಯುದ್ದದಲ್ಲಿ ಭಾಗವಹಿಸಿ ಕೆಚ್ಚೆದೆಯಿಂದ ಹೋರಾಡಿದ ಕಡಲ ನಗರಿ ಕಾರವಾರದ ಯೋಧ ಗೋವಿಂದ್ ಗಾಂವ್ಕರ್ ಬಾಂಗ್ಲಾ ಸರಕಾರ ತನ್ನ ಐವತ್ತನೆ ಸ್ವಾತಂತ್ರ ದಿನದಂದು ನೆನಪಿಸಿ ಗೌರವಿಸಿದೆ. ಕರುನಾಡಿನಿಂದ ಏಕೈಕ ಯೋಧ ಇವರಾಗಿದ್ದು ಅಂದಿನ ಹೋರಾಟದ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದು ಹೀಗೆ.
ಹೌದು, ಹೀಗೆ ಪುಸ್ತಕ ಓದುತ್ತಾ 1971 ರ ಬಾಂಗ್ಲಾ ವಿಮೋಚನೆ ಯುದ್ದದಲ್ಲಿ ಭಾಗಿಯಾಗಿ ಅಂದಿನ ಹೋರಾಟದ ಕಿಚ್ಚನ್ನು ಮತ್ತು ಜಯದ ಸಾಧನೆಯನ್ನು ವಿವರವಾಗಿ ನ್ಯೂಸ್ 18 ಕನ್ನಡದ ಜತೆ ಹೇಳುತ್ತಿರುವ ಇವರು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಗೋವಿಂದ್ ಗಾಂವ್ಕರ್. ಬರೋಬ್ಬರಿ 71 ವಯಸ್ಸಿನ ಮಾಜಿ ಯೋಧ. 21 ವರ್ಷಗಳ ಕಾಲ ಭಾರತ ಮಾತೆಗೆ ಸೇವೆ ಸಲ್ಲಿಸಿದ್ದು ಈಗಲೂ ಫುಲ್ ಆಕ್ಟಿವ್ ಆಗಿದ್ದಾರೆ.
1971 ರಲ್ಲಿ ಗೋವಿಂದ ಗಾಂವ್ಕರ್ 22ನೇ ಮೌಂಟೇನ್ ರೆಜಿಮೆಂಟ್ ನಲ್ಲಿ ತನ್ನ 19 ನೇ ವಯಸ್ಸಿನಲ್ಲೇ ಸೇನಾ ಟ್ಯಾಂಕರ್ ಸ್ಪೆಷಲಿಸ್ಟ್ ಆಗಿ ಸೇನೆ ಸೇರಿದ್ದರು. ಇದೇ ವರ್ಷ ಗೋವಿಂದ್ ಅವರಿಗೆ ಬಾಂಗ್ಲಾ ವಿಮೋಚನೆ ಯುದ್ದದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಇನ್ನೊಂದು ವಿಶೇಷ ಅಂದರೆ ಅಂದು ವಾಯು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗೋವಿಂದ್ ಗಾಂವ್ಕರ್ ತಂದೆ ರಾಯಾ ಗಾಂವ್ಕರ್ ಕೂಡಾ ಬಾಂಗ್ಲಾ ವಿಮೋಚನೆ ಯುದ್ದದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅತೀ ವೀರತೆಯಿಂದ ಹೋರಾಡಿದ ಗೋಂವಿಂದ್ ಸೇನಾ ಗ್ಯಾಲಂಟ್ರಿ ಪದಕ ಪಡೆದಿದ್ದರು. ಬಳಿಕ ಸೇನಾ ಹೆಲಿಕ್ಯಾಪ್ಟರ್ ಪೈಲೆಟ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾಗಿ ಈಗ ಕಾರವಾರ ಮತ್ತು ಮುಂಬೈಗೆ ಹೋಗಿ ಬಂದು ಜೀವನ ಮಾಡುತ್ತಿದ್ದಾರೆ.
ಈ ಎಲ್ಲ ಸಾಧನೆಯ ಫಲವಾಗಿ ಬಾಂಗ್ಲಾ ಸರಕಾರ ಐವತ್ತನೇ ಸ್ವಾತಂತ್ರ ಉತ್ಸವದ ಸಂದರ್ಭದಲ್ಲಿ ಗೋವಿಂದ ಅವರನ್ನು ನೆನಪಿಸಿ ಗೋವಿಂದ್ ದಂಪತಿಗೆ ಸನ್ಮಾನ ಮಾಡಿ ಗೌರವಿಸಿದೆ. ಢಾಕಾದಲ್ಲಿ ಮಾರ್ಚ್ 26ರಿಂದ 29ರವರೆಗೆ ನಡೆದ ಕಾರ್ಯಕ್ರಮದಲ್ಲಿ ಇವರನ್ನು ಗೌರವಿಸಿದೆ. ಒಟ್ಟು ಭಾರತೀಯ 30 ನಿವೃತ್ತ ಯೋಧರನ್ನು ನೆನಪಿಸಿ ಗೌರವಿಸಿದೆ. ಇದು ತನ್ನ ಸಾಧನೆಗೆ ಸಿಕ್ಕ ಗೌರವ ಅಂತಾರೆ ಗೋಂವಿದ್ ಗಾಂವ್ಕರ್.
ಇದನ್ನು ಓದಿ: Lockdown Guidelines: ಮೇ 12ರವರೆಗೆ ಲಾಕ್ಡೌನ್ ಟಫ್ ರೂಲ್ಸ್; ನಾಳೆಯಿಂದ ಇವೆಲ್ಲಾ ಕಂಪ್ಲೀಟ್ ಬಂದ್!
ಇನ್ನೂ ಇದಿಷ್ಟು ಅವರ ಸಾಧನೆಗೆ ತಕ್ಕ ಗೌರವವಾಗಿದೆ. ಐವತ್ತು ವರ್ಷ ಹೇಗೆ ಕಳೆಯಿತು ಅಂತಾನೆ ಗೊತ್ತಾಗುತ್ತಿಲ್ಲ. ಇನ್ನು ಅವಕಾಶ ನೀಡಿದರೆ ಮತ್ತೆ ಸೇನೆ ಸೇರಲು ಸಿದ್ದ ಎಂಬ ಮಾತು ಗೋವಿಂದ್ ಅವರದ್ದಾಗಿದೆ. ಅಂದಿನ ಹೋರಾಟದ ಕಥೆಯೇ ರೋಚಕ ಅಂತಾರೆ ಗೋವಿಂದ್, ಗುಂಡು, ಬಾಂಬುಗಳನ್ನು ಎದುರಿಸಿ ಬದುಕಿ ಜಯ ಸಾಧಿಸಿ ಬಂದ ಅವರ ಕಥೆ ಕೇಳುತ್ತಾ ಹೋದರೆ ಮೈ ಜುಮ್ ಎನ್ನುತ್ತದೆ. 1971ರ ನವೆಂಬರ್ 9ರಂದು ನಾಗಾ ರೆಜಿಮೆಂಟ್ ಗೆ ಬೆಂಬಲವಾಗಿ ಗನ್ ಪೋಜಿಷನ್ ಅಧಿಕಾರಿಯಾಗಿ ನೇಮಕವಾದ ಗಾಂವ್ಕರ್ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾ ದೇಶ) ಶಿಖರಪುರಕ್ಕೆ ನೇಮಕವಾಗುತ್ತಾರೆ. ತನ್ನ ಸಹಚರರ ಸೈನ್ಯದೊಂದಿಗೆ ಮಾರುವೇಷದಲ್ಲಿ ತೆರಳಿ ಬಾಗ್ಲಾ ಹೋರಾಟ ನಡೆಸಿದ್ದ ಮುಕ್ತಿ ಬಹಿನಿ ಜತೆ ಸೇರಿಕೊಳ್ಳುತ್ತಾರೆ. ಅಲ್ಲಿನ ಜನರಂತೆ ವಸ್ತ್ರ ಧರಿಸಿ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಬಳಿಕ ವೈವಾಹಿಕ ಜೀನವಕ್ಕೆ ಕಾಲಿಟ್ಟ ಮೇಲೆ ಪತ್ನಿ ಕೂಡ ಗಂಡನಿಗೆ ಸಾಥ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ