HOME » NEWS » District » GOVERNMENT WILL SOON SOLVED THE TOYOTA KIRLOSKAR LABORS PROBLEM SAYS HC BALAKRISHNA RHHSN ATVR

ಟೊಯೋಟಾ ಕಾರ್ಮಿಕರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು: ಹೆಚ್.ಸಿ.ಬಾಲಕೃಷ್ಣ ಒತ್ತಾಯ

ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಪರಸ್ಪರ ಮಾಡುತ್ತಿರುವ ಆರೋಪ- ಪ್ರತ್ಯಾರೋಪಕ್ಕೆ ಯಾವುದೇ ಸಾಕ್ಷಿಗಳು ಇಲ್ಲ. ಹಾಗಾಗಿ ಇವರಿಬ್ಬರ ಆರೋಪವನ್ನು ಸರ್ಕಾರ ತಿಳಿದು ಬಗೆಹರಿಸಲು ಮುಂದಾಗಬೇಕೆಂದು ಬಾಲಕೃಷ್ಣ ಒತ್ತಾಯಿಸಿದರು.

news18-kannada
Updated:December 17, 2020, 7:31 PM IST
ಟೊಯೋಟಾ ಕಾರ್ಮಿಕರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು: ಹೆಚ್.ಸಿ.ಬಾಲಕೃಷ್ಣ ಒತ್ತಾಯ
ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ
  • Share this:
ರಾಮನಗರ (ಬಿಡದಿ): ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಒಕ್ಕೂಟದ ಬಿಕ್ಕಟ್ಟು ಇನ್ನು ಬಗೆಹರಿದಿಲ್ಲ. ಕಳೆದ 39 ದಿನಗಳಿಂದ ಕಾರ್ಮಿಕ ಒಕ್ಕೂಟ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸುತ್ತಾ ಬಂದಿದೆ. ಈ ಕಾರಣ ಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಬಿಡದಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ, ಕಾರ್ಮಿಕರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ ಎಂದು ಆಗ್ರಹಿಸಿದ್ದಾರೆ. 

ಈ ಕೂಡಲೇ ರಾಜ್ಯ ಸರ್ಕಾರ ಹಾಗೂ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಆಡಳಿತ ಮಂಡಳಿಯವರು ಕಾರ್ಮಿಕ ಒಕ್ಕೂಟದವರ ಜೊತೆಗೆ ಮಾತುಕತೆ ನಡಸಿ ಸಂಧಾನ ಮಾಡಿಕೊಳ್ಳಬೇಕು. ಕಾರ್ಮಿಕರು ಕೆಲಸದ ವಿಚಾರದಲ್ಲಿ ತಪ್ಪಾಗಿ ನಡೆದುಕೊಂಡಿದ್ದರೆ ವಿಚಾರಣೆ ನಡೆಸಿ ಅಂತಹವರಿಗೆ ಎಚ್ಚರಿಕೆ ನೀಡಿ ಒಂದು ಅವಕಾಶ ಕೊಟ್ಟು ಕೆಲಸಕ್ಕೆ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಕಳೆದ 39 ದಿನಗಳಿಂದ ಕಂಪನಿಯ ಮುಂದೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಕಾರ್ಮಿಕರ ಕುಟುಂಬದವರು ದಿನನಿತ್ಯ ಮಾನಸಿಕವಾಗಿ ಹಿಂಸೆ ಪಡುವಂತಾಗಿದೆ. ಇನ್ನು ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿಎಂ ಆಗಿರುವ ಅಶ್ವಥ್ ನಾರಾಯಣ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಮಧ್ಯಸ್ಥಿಕೆ ವಹಿಸಿ ಕಾರ್ಮಿಕರ ಸಮಸ್ಯೆ ಬಗೆಹರಿಸಬೇಕೆಂದು ಬಾಲಕೃಷ್ಣ ಒತ್ತಾಯಿಸಿದರು.

ಇನ್ನು 60 ಜನ ಕಾರ್ಮಿಕರನ್ನು ಕಂಪನಿಯ ಆಡಳಿತ ಮಂಡಳಿ ಅಮಾನತ್ತು ಮಾಡಿದೆ ಎಂಬ ಮಾಹಿತಿ ಇದೆ. ಅವರನ್ನ ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು  ಆಗ್ರಹಿಸಿದರು.

ಇದನ್ನು ಓದಿ: ರಾಜಧಾನಿಯಲ್ಲಿ ಹೊಸ ವರ್ಷಕ್ಕೆ ಬ್ರೇಕ್; ಗೋಕರ್ಣ, ಗೋವಾದತ್ತ ಮುಖಮಾಡಿದ ಬೆಂಗಳೂರಿಗರು

ಕಾರ್ಮಿಕರು ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡ್ತಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ನಾವು ಪ್ರಶ್ನೆ ಮಾಡಿದರೆ ಪ್ರತಿಭಟನೆ, ಮುಷ್ಕರದ ಬೆದರಿಕೆ ಹಾಕುತ್ತಾರೆಂದು ಕಂಪನಿಯ ಆಡಳಿತ ಮಂಡಳಿಯವರು ಆರೋಪಿಸುತ್ತಾರೆ. ಇನ್ನು ಕಾರ್ಮಿಕರು ಸಹ ಆರೋಪ ಮಾಡಿ ಕಂಪನಿಯವರು ನಮಗೆ ಕಿರುಕುಳ ಕೊಡ್ತಾರೆ. ಶೌಚಾಲಯಕ್ಕೆ ಹೋದರೂ ಸಹ ನಮ್ಮ ಸಂಬಳಕ್ಕೆ ಕತ್ತರಿ ಬೀಳುತ್ತೆ. ಇದನ್ನೆಲ್ಲ ಪ್ರಶ್ನೆ ಮಾಡಿದರೆ ನಮ್ಮನ್ನು ಕೆಲಸದಿಂದ ತೆಗೆದುಹಾಕುವ ಭಯ ಹುಟ್ಟಿಸುತ್ತಾರೆಂದು ಕಾರ್ಮಿಕರು ಸಹ ಆರೋಪಿಸುತ್ತಾರೆ.

ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಪರಸ್ಪರ ಮಾಡುತ್ತಿರುವ ಆರೋಪ- ಪ್ರತ್ಯಾರೋಪಕ್ಕೆ ಯಾವುದೇ ಸಾಕ್ಷಿಗಳು ಇಲ್ಲ. ಹಾಗಾಗಿ ಇವರಿಬ್ಬರ ಆರೋಪವನ್ನು ಸರ್ಕಾರ ತಿಳಿದು ಬಗೆಹರಿಸಲು ಮುಂದಾಗಬೇಕೆಂದು ಬಾಲಕೃಷ್ಣ ಒತ್ತಾಯಿಸಿದರು.ವರದಿ : ಎ.ಟಿ.ವೆಂಕಟೇಶ್
Published by: HR Ramesh
First published: December 17, 2020, 7:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories