• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಸರ್ಕಾರ ಪಣ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಸರ್ಕಾರ ಪಣ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

ಡ್ರಗ್ಸ್ ಜಾಲದಲ್ಲಿ ಕನ್ನಡ ಚಿಂತ್ರರಂಗದ ಅನೇಕರು ಹೆಸರು ಕೇಳಿ ಬಂದಿದೆ. ಜತೆಗೆ ಉದ್ಯಮಿಗಳ ಮಕ್ಕಳು, ರಾಜಕಾರಣಿಗಳ ಮಕ್ಕಳು, ಅಧಿಕಾರಿಗಳ ಮಕ್ಕಳು ಇದ್ದಾರೆ ಎಂಬ ಅನುಮಾನ ಸಹ ಇದೆ. ಎಷ್ಟೇ ಪ್ರಭಾವಿಗಳು ಇದ್ದರು ಸರ್ಕಾರ ಇದನ್ನು ಭೇದಿಸಲಿದೆ.

  • Share this:

ಬೆಳಗಾವಿ(ಸೆಪ್ಟೆಂಬರ್ 11): ರಾಜ್ಯದಲ್ಲಿ ಮಾದಕ ಡ್ರಗ್ಸ್ ಜಾಲ ಅನೇಕ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದೆ. ಈಗಾಗಲೇ ನಟಿಯರಾದ ರಾಗಿಣಿ, ಸಂಜನಾ ಡ್ರಗ್ಸ್ ಕೇಸ್ ನಲ್ಲಿ ಜೈಲು ಪಾಲಾಗಿದ್ದು, ರಾಜ್ಯದಲ್ಲಿ ಬಹುದೊಡ್ಡ ಡ್ರಗ್ಸ್ ಜಾಲ ಇರುವುದು ಖಚಿತವಾಗಿದೆ. ರಾಜ್ಯದಲ್ಲಿ ಇರುವ ಈ ಜಾಲವನ್ನು ಭೇದಿಸಿ ಡ್ರಗ್ಸ್ ಮುಕ್ತ ರಾಜ್ಯವನ್ನು ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣದ ಬಗ್ಗೆ ತನಿಖೆಯನ್ನು ಮಾಡಲಾಗುತ್ತಿದೆ. ತನಿಖೆಯಲ್ಲಿ ಯಾರ ಒತ್ತಡಕ್ಕೂ ಮಣೆಯುವ ಪ್ರಶ್ನೆಯೆ ಇಲ್ಲ. ಈ ಬಗ್ಗೆ ಗೃಹ ಸಚಿವರು ಆಸಕ್ತಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಡ್ರಗ್ಸ್​ ಜಾಲ ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಇದೆ. ಇದನ್ನು ಮಟ್ಟ ಹಾಕಲು ಗೃಹ ಇಲಾಖೆ ಸಮರ್ಥವಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು


ಡ್ರಗ್ಸ್ ಜಾಲದಲ್ಲಿ ಕನ್ನಡ ಚಿಂತ್ರರಂಗದ ಅನೇಕರು ಹೆಸರು ಕೇಳಿ ಬಂದಿದೆ. ಜತೆಗೆ ಉದ್ಯಮಿಗಳ ಮಕ್ಕಳು, ರಾಜಕಾರಣಿಗಳ ಮಕ್ಕಳು, ಅಧಿಕಾರಿಗಳ ಮಕ್ಕಳು ಇದ್ದಾರೆ ಎಂಬ ಅನುಮಾನ ಸಹ ಇದೆ. ಎಷ್ಟೇ ಪ್ರಭಾವಿಗಳು ಇದ್ದರು ಸರ್ಕಾರ ಇದನ್ನು ಭೇದಿಸಲಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಎಲ್ಲಾ ರೀತಿಯ ಸಿದ್ದತೆ ನಡೆಸಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.


ಡ್ರಗ್ಸ್ ಹಣದಿಂದಲೇ ಸಮ್ಮಿಶ್ರ ಸರ್ಕಾರ ಪತನವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಹೆಚ್ ಡಿ ಕೆ ಮಾತು ಕೇಳಿದ್ರೆ ನಗು ಬರುತ್ತದೆ. ಡ್ರಗ್ಸ್ ಜಾಲ ನಿಭಾಯಿಸುವಲ್ಲಿ ಕುಮಾರಸ್ವಾಮಿ ವಿಫಲರಾಗಿದ್ರಾ ಎಂದು ಪ್ರಶ್ನಿಸಿದ್ದರು. ಆಡಳಿತಕ್ಕೆ ಬೇಸತ್ತು ಅನೇಕ ಶಾಸಕರು ಹೊರಗೆ ಬಂದಿದ್ದಾರೆ. ಕುಣಿಯೋಕೆ ಬರದೇ ಇರುವವರು ನೆಲ ಡೊಂಕು ಎನ್ನುವ ರೀತಿಯಲ್ಲಿ ಅವರ ಹೇಳಿಕೆ ಇದೆ. ಇಷ್ಟೆಲ್ಲ ಗೊತ್ತಿದ್ದರು ಒಂದು ವರ್ಷ ಯಾಕೆ ಸುಮ್ಮನೆ ಇದ್ದರು ಎಂದು ತಿರುಗೇಟು ನೀಡಿದರು.


ನಟಿ ರಾಗಿಣಿ ಹಾಗೂ ನಟಿ ಸಂಜನಾ ಇಬ್ಬರ ಜತೆಗೆ ಅನೇಕ ರಾಜಕೀಯ ಮುಖಂಡರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚುನಾವಣೆ ಸಂದರ್ಭದಲ್ಲಿ ಜನರನ್ನು ಸೆಳೆಯುವುದಕ್ಕೆ ಚಿತ್ರ ನಟ, ನಟಿಯರನ್ನು ಬಳಸುವುದು ಸಹಜ. ಡ್ರಗ್ಸ್ ಮಾಫಿಯಾದಲ್ಲಿ ಇರುತ್ತಾರೆ ಅಂತ ನಮಗೂ ಗೊತ್ತಿಲ್ಲ. ಈ ಚಿತ್ರ ನಟಿಯರು ನಿಜ ಬಣ್ಣ ಬಯಲಾಗಿದೆ. ತಪ್ಪು ಮಾಡಿರುವುದು ಖಚಿತವಾದ್ರೆ ಶಿಕ್ಷೆ ಆಗುತ್ತೆ ಎಂದರು.


ಇದನ್ನೂ ಓದಿ : ಪ್ರಶಸ್ತಿ ಪುರಸ್ಕೃತರ ಆಯ್ಕೆ ಬಗ್ಗೆ ಅಪಸ್ವರ ಬೇಡ ; 32 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ


ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವನ್ನು ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನೇ ಕೇಳಬೇಕು. ನಾನು ಸಂಪುಟದಲ್ಲಿ ಡಿಸಿಎಂ ಅಷ್ಟೇ, ಸಂಪುಟ ವಿಸ್ತರಣೆ ಮಾಡುವುದು ಸಿಎಂಗೆ ಇರುವ ಪರಮಾಧಿಕಾರ ಎಂದು ತಿಳಿಸಿದರು.


ಇನ್ನೂ ಸಂಪುಟಕ್ಕೆ ಶಾಸಕ ಉಮೇಶ್ ಕತ್ತಿ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿದ ಅವರು ಉಮೇಶ್ ಕತ್ತಿ ನನ್ನ ಹಳೆಯ ಸ್ನೇಹಿತರು. ಅವರು ಸಂಪುಟದಲ್ಲಿ ಇದ್ರೆ ನಮಗೆ ಖುಷಿ. ಅವರು ಸಂಪುಟ ಸೇರಿದರೆ ಸ್ವಾಗತ ಎಂದರು.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು