ಪ್ಲಾಸ್ಟಿಕ್ ಪಾಟ್​ ನಲ್ಲಿ ಅರಳಿದ ಹೂವು; ಪರಿಸರಕ್ಕಾಗಿ ಸರ್ಕಾರಿ ಶಿಕ್ಷಕನ ಶ್ಲಾಘನೀಯ ಕೆಲಸ

ಈ ಪಾಟ್​ಗಳಿಂದ ಹೊರಸೂಸುವ ಹೆಚ್ಚುವ ನೀರು ಭೂಮಿಗೆ ಹೋಗುವ ಬದಲು ಮತ್ತೊಂದು ಚಿಕ್ಕ ಬಾಟಲಿಯನ್ನು ನೀರು ಸಂಗ್ರಹಕ್ಕೆ ಕಟ್ಟಲಾಗಿದೆ. ಹೀಗೆ ಸಂಗ್ರಹವಾದ ನೀರು ಹಕ್ಕಿ ಪಕ್ಷಿಗಳಿಗೆ ಕುಡಿಯುವುದಕ್ಕೆ ಸಿಗುವಂತೆ ಮಾಡಲಾಗಿದೆ. ಆ ಮೂಲಕವೂ ಶಿಕ್ಷಕ ಸತೀಶ್ ಪರಿಸರಕ್ಕೆ ಪೂರಕವಾದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

news18-kannada
Updated:June 6, 2020, 7:44 AM IST
ಪ್ಲಾಸ್ಟಿಕ್ ಪಾಟ್​ ನಲ್ಲಿ ಅರಳಿದ ಹೂವು; ಪರಿಸರಕ್ಕಾಗಿ ಸರ್ಕಾರಿ ಶಿಕ್ಷಕನ ಶ್ಲಾಘನೀಯ ಕೆಲಸ
ಪ್ಲಾಸ್ಟಿಕ್‌ನಲ್ಲಿ ಹಸಿರು ಬೆಳೆಸಿರುವ ಶಿಕ್ಷಕ.
  • Share this:
ಕೊಡಗು: ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತಿದೆ. ಎಷ್ಟೋ ಜನ ಸರ್ಕಾರಿ ನೌಕರರು ನನ್ನ ಕೆಲಸ ಆದ್ರೆ ಸಾಕಪ್ಪಾ ಎನ್ನುವ ಕಾಲದಲ್ಲಿ ಇಲ್ಲೊಬ್ಬ ಸರ್ಕಾರಿ ಶಿಕ್ಷಕ ವೃತ್ತಿಯಲ್ಲಿ ಇದ್ದುಕೊಂಡೇ, ಕೇವಲ ವೃತ್ತಿಗೆ ಸೀಮಿತವಾಗುವ ಬದಲು ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ವಸ್ತುಗಳಿಗೆ ಹೊಸ ರೂಪ ನೀಡಿ ಅವುಗಳನ್ನು ಪಾಟ್ ಗಳಂತೆ ಬಳಸಿ ನೂರಾರು ಗಿಡಗಳನ್ನು ಬೆಳೆಸಿ ಪರಿಸರಕ್ಕೆ ತನ್ನದೇ ಕೊಡುಗೆ ನೀಡುತ್ತಿದ್ದಾರೆ.

ಹೌದು.. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್. ಸತೀಶ್ ಹೀಗೆ ಸದ್ಧಿಲ್ಲದೆ ಪರಿಸರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅಡುಗೆ ಎಣ್ಣೆಯ ಕ್ಯಾನ್‌ಗಳು, ನೀರಿನ ಬಾಟಲಿ ಹಾಗೂ ಕಂಫರ್ಟ್ ಡಬ್ಬಗಳನ್ನು ಬಳಸಿಕೊಂಡು ಅವುಗಳನ್ನು ವಿವಿಧ ಆಕೃತಿಗಳಾಗಿ ಕತ್ತಿರಿಸಿ ಹೂ ಕುಂಡಗಳನ್ನು ನಿರ್ಮಿಸಿದ್ದಾರೆ.

ಜೊತೆಗೆ ಅವುಗಳ ಮೇಲೆ ವಿವಿಧ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಆಯಿಲ್ ಪೈಯಿಂಟಿಂಗ್ ಮಾಡಿ ನೋಡಲು ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಬಳಿಕ ಅವುಗಳಲ್ಲಿ ಹತ್ತು ಹಲವು ವಿಧದ ಗಿಡಗಳನ್ನು ನೆಟ್ಟು ಸುಂದರ ಹೂದೋಟವನ್ನೇ ನಿರ್ಮಿಸಿದ್ದಾರೆ. ಕ್ಯಾನ್‌ಗಳಿಂದ ಕೇವಲ ನೆಲದ ಮೇಲೆ ಇಡುವ ಹೂಕುಂಡಗಳಷ್ಟೇ ಅಲ್ಲ, ಹ್ಯಾಂಗಿಂಗ್ ಪಾಟ್‌ಗಳು, ಗೋಡೆ ಮತ್ತು ಕಂಬಗಳಿಗೆ ಸಿಕ್ಕಿಸುವ ವಾಲ್ ಪಾಟ್‌ಗಳನ್ನಾಗಿಯೂ ಬಳಸುವಂತೆ ಮಾಡಿದ್ದಾರೆ.

ಈ ಪಾಟ್​​ಳಿಂದ ಹೊರಸೂಸುವ ಹೆಚ್ಚುವ ನೀರು ಭೂಮಿಗೆ ಹೋಗುವ ಬದಲು ಮತ್ತೊಂದು ಚಿಕ್ಕ ಬಾಟಲಿಯನ್ನು ನೀರು ಸಂಗ್ರಹಕ್ಕೆ ಕಟ್ಟಲಾಗಿದೆ. ಹೀಗೆ ಸಂಗ್ರಹವಾದ ನೀರು ಹಕ್ಕಿ ಪಕ್ಷಿಗಳಿಗೆ ಕುಡಿಯುವುದಕ್ಕೆ ಸಿಗುವಂತೆ ಮಾಡಲಾಗಿದೆ. ಆ ಮೂಲಕವೂ ಶಿಕ್ಷಕ ಸತೀಶ್ ಪರಿಸರಕ್ಕೆ ಪೂರಕವಾದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಳೆದ ಬಾರಿಯೂ ಪರಿಸರ ದಿನಾಚರಣೆಯಂದು ಶಾಲೆಯಲ್ಲಿ ವಿವಿಧ ಜಾತಿಯ ಹಣ್ಣಿನ ಬೀಜಗಳನ್ನು ಸಂಗ್ರಹಿಸಿ ಬಳಿಕ ಬೀಜದ ಉಂಡೆ ಮಾಡಿ ಕಾಡಿನಲ್ಲಿ ಬಿತ್ತನೆ ಮಾಡುವ ಕೆಲಸ ಮಾಡಿದ್ದರು. ಆದರೆ ಈ ಬಾರಿ ಲಾಕ್‌ಡೌನ್ ಸಮಸ್ಯೆಯಿಂದ ಸುಮ್ಮನೆ ಕೂರುವ ಬದಲು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಸಿ ನೂರಾರು ಗಿಡಗಳನ್ನು ಬೆಳೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

ಇದನ್ನೂ ಓದಿ : Kerala Elephant Death: ಕೇರಳದ ಆನೆ ಹತ್ಯೆಗೆ ಸಂಬಂಧಿಸಿದಂತೆ ’ಕೋಮುದ್ವೇಷದ’ ಹೇಳಿಕೆ; ಸಚಿವೆ ಮನೇಕಾ ಗಾಂಧಿ ವಿರುದ್ಧ ಎಫ್‌ಐಆರ್‌
First published: June 6, 2020, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading