ಕಾರವಾರ| ಎಂಡೋಸಲ್ಫಾನ್ ಬಾಧಿತರ ಸ್ಥಿತಿ ಕಂಗಾಲು; ಚಿಕಿತ್ಸೆ‌ ನಿಲ್ಲಿಸಿದ ಸರ್ಕಾರ!

ಮನೆ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಿ ಎಂಡೋಸೆಲ್ಫಾನ್ ಬಾಧಿತರಿಗೆ ಆಶಾ ಕಿರಣವಾಗಿತ್ತು ಆದ್ರೆ ಈಗ ಎರಡು ತಿಂಗಳು ಚಿಕಿತ್ಸೆ ಸಿಗದೆ ದಿಕ್ಕೆ ತೋಚದಂತಾಗಿದ್ದಾರೆ. ಕೂಡಲೆ ಸರಕಾರ ಗುತ್ತಿಗೆ ಅವಧಿ ಮುಂದುವರೆಸಬೇಕು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲು ರೋಗಿಗಳ ಪಾಲಕರು ಆಗ್ರಹಿಸಿದ್ದಾರೆ.

ಎಂಡೋಸಲ್ಪಾನ್ ಬಾಧಿತರು.

ಎಂಡೋಸಲ್ಪಾನ್ ಬಾಧಿತರು.

  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋಸೆಲ್ಫಾನ್ ಪೀಡಿತರಿಗೆ ಚಿಕಿತ್ಸೆ ಸಿಗದೆ ಕಂಗಾಲಾಗಿದ್ದಾರೆ. ಒಟ್ಟೂ 1900 ಎಂಡೋಸೆಲ್ಫಾನ್ ಪೀಡಿತರು ಚಿಕಿತ್ಸೆಗಾಗಿ ಹಪಹಪಿಸುವ ಪರಿಸ್ಥಿತಿ ಎದುರಾಗಿದೆ..ಸರಕಾರ ಕಳೆದ ಮೂರು ವರ್ಷದಿಂದ ಎಂಡೋಸೆಲ್ಫಾನ್ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಲು ಜಿಲ್ಲೆಯ ಸ್ಕಾಡ್ ವೇಸ್ ಸಂಸ್ಥೆಗೆ ಗುತ್ತಿಗೆ ನೀಡಿತ್ತು ಗುತ್ತಿಗೆಯ ಅವಧಿ ಮೂರು ವರ್ಷದವರೆಗೆ ಇದ್ದಿದ್ದು ಈಗ ಕಳೆದ ಮಾರ್ಚ್ ತಿಂಗಳಲ್ಲಿ ಗುತ್ತಿಗೆ ಅವಧಿ ಮುಗಿದಿದೆ ಗುತ್ತಿಗೆ ಅವಧಿ ಮುಂದುವರೆ ಯದ ಹಿನ್ನಲೆಯಲ್ಲಿ ಚಿಕಿತ್ಸೆ ಸ್ಥಗಿತಗೊಂಡಿದೆ. ಭಟ್ಕಳ ಭಾಗದಲ್ಲಿ ಅತೀ ಹೆಚ್ಚು ಎಂಡೋಸೆಲ್ಫಾನ್ ಬಾದೀತರಿದ್ದಾರೆ ಇವರ ಸ್ಥಿತಿ ಕಂಗಾಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ ನಾಲ್ಕು ಅಂಬುಲೆನ್ಸ್ ಗಳ ಮೂಲಕ ಮೊಬೈಲ್ ಚಿಕಿತ್ಸೆ ನೀಡಲಾಗುತ್ತಿತ್ತು.

ಮನೆ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಿ ಎಂಡೋಸೆಲ್ಫಾನ್ ಬಾಧಿತರಿಗೆ ಆಶಾ ಕಿರಣವಾಗಿತ್ತು ಆದ್ರೆ ಈಗ ಎರಡು ತಿಂಗಳು ಚಿಕಿತ್ಸೆ ಸಿಗದೆ ದಿಕ್ಕೆ ತೋಚದಂತಾಗಿದ್ದಾರೆ. ಕೂಡಲೆ ಸರಕಾರ ಗುತ್ತಿಗೆ ಅವಧಿ ಮುಂದುವರೆಸಬೇಕು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲು ರೋಗಿಗಳ ಪಾಲಕರು ಆಗ್ರಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ರಿಂದ ಸರಕಾರ ವಿಸೇಷ ಕಾಳಜಿ ವಹಿಸಿ ಮೊಬೈಲ್ ಚಿಕಿತ್ಸೆ ಸರ್ವಿಸ್ ಮಾಡಿತ್ತು ಆದ್ರೆ ಈಗ ಗುತ್ತಿಗೆ ಅವಧಿ ಮುಗಿದ್ರಿಂದ ರೋಗಿಗಳು ಪರದಾಟ ನಡೆಸುವಂತಾಗಿದೆ.

ಕಷ್ಟದ ದಿನಗಳು ಮತ್ತೆ‌ ಎದುರಾಗಿವೆ:

ಎಂಡೋಸಲ್ಫಾನ್ ಭಾದಿತ ಜಿಲ್ಲೆಗಳಲ್ಲಿ ಉತ್ತರಕನ್ನಡ ಸಹ ಒಂದಾಗಿದ್ದು ಜಿಲ್ಲೆಯಾದ್ಯಂತ ಸುಮಾರು ಎರಡು ಸಾವಿರ ಪೀಡಿತರು ಇದ್ದಾರೆ. ಅವರಿಗೆ ಅಗತ್ಯ ಚಿಕಿತ್ಸೆಯನ್ನ ಮನೆಬಾಗಿಲಲ್ಲೇ ಒದಗಿಸಬೇಕು ಎನ್ನುವ ಉದ್ದೇಶದಿಂದ 2018ರಲ್ಲಿ ಖಾಸಗಿ ಸಂಸ್ಥೆ ಸ್ಕಾಡವೇಸ್ ಸಹಯೋಗದಲ್ಲಿ ಎಂಡೋಸಲ್ಫಾನ್ ಪೀಡಿತರಿಗಾಗಿ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿತ್ತು.

ಜಿಲ್ಲೆಯ ಆರು ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಭಾದಿತರಿಗಾಗಿ ಒಟ್ಟೂ 4 ಅಂಬ್ಯುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದು ಇದರಿಂದಾಗಿ ಎಂಡೋಸಲ್ಫಾನ್ ಪೀಡಿತರಿಗೆ ಸಾಕಷ್ಟು ಅನುಕೂಲ ಉಂಟಾಗಿತ್ತು. ಆದರೆ ಇದೀಗ ಸಂಸ್ಥೆಯೊಂದಿಗಿನ ಒಪ್ಪಂದದ ಅವಧಿ ಮುಗಿದಿದ್ದು ಅಂಬ್ಯುಲೆನ್ಸ್ ಸೇವೆ ಸ್ಥಗಿತಗೊಂಡಿದೆ.ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ ಹಾಗೂ ಸಿದ್ಧಾಪುರ ಸೇರಿ ಒಟ್ಟೂ 1972 ಮಂದಿ ಎಂಡೋಸಲ್ಫಾನ್ ಪೀಡಿತರು ಜಿಲ್ಲೆಯಲ್ಲಿದ್ದಾರೆ.

ಇದನ್ನೂ ಓದಿ: Arvind Kejriwal: ದೆಹಲಿಯಲ್ಲಿ ಮತದಾನ ಕೇಂದ್ರಗಳನ್ನು ಲಸಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಮುಂದಾದ ಕೇಜ್ರಿವಾಲ್ ಸರ್ಕಾರ

ಆಯಾ ತಾಲ್ಲೂಕಗಳಿಗೆ ನಿಗಧಿಯಾಗಿದ್ದ ಅಂಬ್ಯುಲೆನ್ಸ್ ಸಿಬ್ಬಂದಿ ತಿಂಗಳಿಗೆ ಒಂದು ಬಾರಿಯಂತೆ ಪ್ರತಿಯೊಬ್ಬ ಎಂಡೋಸಲ್ಫಾನ್ ಭಾದಿತರ ಮನೆಗೂ ತೆರಳಿ ಅಗತ್ಯ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಿಗಳನ್ನ ಒದಗಿಸುತ್ತಿದ್ದರು. ಇದರಿಂದಾಗಿ ಎಂಡೋಸಲ್ಫಾನ್ ಪೀಡಿತರಿಗೂ ಸಾಕಷ್ಟು ಅನುಕೂಲವಾಗಿದ್ದು ಹಲವರಲ್ಲಿ ಚೇತರಿಕೆ ಸಹ ಕಂಡುಬಂದಿತ್ತು. ಆದ್ರೆ ಕಳೆದೆರಡು ತಿಂಗಳಿನಿಂದ ಎಂಡೋಸಲ್ಫಾನ್ ಪೀಡಿತರಿಗೆ ಚಿಕಿತ್ಸೆ ಸಿಗುತ್ತಿಲ್ಲವಾಗಿದ್ದು ಕೊರೊನಾ, ಲಾಕ್ ಡೌನ್ ಜಾರಿಯಾಗಿರುವ ಈ ಸಂದರ್ಭದಲ್ಲಿ ಪೀಡಿತರ ಕುಟುಂಬಸ್ಥರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಇನ್ನು ಎಂಡೋಸಲ್ಫಾನ್ ಪೀಡಿತರಿಗೆ ಸರಿಯಾದ ಸಮಯಕ್ಕೆ ಔಷಧಗಳನ್ನ ಒದಗಿಸಬೇಕಾಗಿರುವುದು ಅತ್ಯಗತ್ಯವಾಗಿದ್ದು ಇದು ಅವರ ಆರೋಗ್ಯ ಸ್ಥಿರವಾಗಿರುವಂತೆ ನೋಡಿಕೊಳ್ಳಲು ಅನುಕೂಲಕರವಾಗಿತ್ತು. ಆದರೆ ಇದೀಗ ಮನೆ ಬಾಗಿಲಲ್ಲೇ ಸಿಗುತ್ತಿದ್ದ ಆರೋಗ್ಯ ಸೇವೆ ಸ್ಥಗಿತಗೊಂಡಿದ್ದು ಬಹುತೇಕ ಗ್ರಾಮೀಣ ಪ್ರದೇಶಗಳಲ್ಲೇ ಇರುವ ಪೀಡಿತರನ್ನ ಆಸ್ಪತ್ರೆಗಳಿಗೆ ಕೊಂಡೊಯ್ಯುವುದೂ ಸಹ ಕುಟುಂಬಸ್ಥರಿಗೆ ಸವಾಲಾಗಿದೆ.

ಇದನ್ನೂ ಓದಿ: CoronaVirus: ಕೊಡಗಿನ 80 ಕ್ಕೂ ಹೆಚ್ಚು ಗ್ರಾಮಗಳು ಈಗ ಕೋವಿಡ್-19 ಸೋಂಕು ಮುಕ್ತ!

ಅಲ್ಲದೇ ಎಂಡೋಸಲ್ಫಾನ್ ಭಾದಿತರಿಗೆ ನೀಡುವ ಔಷಧಗಳು ಎಲ್ಲೆಡೆ ಸಿಗುವುದು ಸಹ ಕಷ್ಟಕರವಾಗಿದ್ದು ದುಬಾರಿ ಬೆಲೆಯ ಔಷಧಗಳನ್ನ ಕೊಂಡುತರುವುದು ಹಲವು ಕುಟುಂಬಸ್ಥರಿಗೂ ಆರ್ಥಿಕ ಹೊರೆಯಾಗಿದೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ ಎಂಡೋಸಲ್ಫಾನ್ ಸಂಚಾರಿ ಆರೋಗ್ಯ ಸೇವೆಯ ಒಂದು ಅಂಬ್ಯುಲೆನ್ಸ್ ಗೆ ಸುಮಾರು 3 ಲಕ್ಷ ರೂಪಾಯಿಗಳಂತೆ ತಿಂಗಳಿಗೆ 12 ಲಕ್ಷ ರೂಪಾಯಿಗಳನ್ನ ವ್ಯಯಿಸಲಾಗುತ್ತಿತ್ತು. ಅದನ್ನ 1 ಲಕ್ಷಕ್ಕೆ ಇಳಿಸಬೇಕು ಎನ್ನುವುದು ಸರ್ಕಾರದ ನಿರ್ದೇಶನವಾಗಿದ್ದು ನಮ್ಮ ಜಿಲ್ಲೆಯಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಸಂಚಾರಿ ಸೇವೆಯನ್ನೇ ಪುನರಾರಂಭಿಸುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ ಅಂತಾರೇ.

ಒಟ್ಟಾರೇ ಮನೆಬಾಗಿಲಲ್ಲೇ ಸಿಗುತ್ತಿದ್ದ ಆರೋಗ್ಯ ಸೇವೆಯಿಂದಾಗಿ ಕೊಂಚ ನೆಮ್ಮದಿಯಾಗಿದ್ದ ಎಂಡೋಸಲ್ಪಾನ್ ಭಾದಿತರ ಕುಟುಂಬಸ್ಥರಿಗೆ ಇದೀಗ ಅಂಬ್ಯುಲೆನ್ಸ್ ಸೇವೆ ಸ್ಧಗಿತಗೊಂಡಿರೋದು ಸಂಕಷ್ಟ ಉಂಟುಮಾಡಿದೆ.
Published by:MAshok Kumar
First published: