• Home
  • »
  • News
  • »
  • district
  • »
  • ಮಾಸ್ಕ್​​ ಬಗ್ಗೆ ಅರಿವು ಮೂಡಿಸುತ್ತಿರುವ ಕಾಫಿನಾಡಿನ ಅಧಿಕಾರಿಗಳು : ಒಂದು ದಿನದಲ್ಲಿ 10 ಸಾವಿರ ದಂಡ

ಮಾಸ್ಕ್​​ ಬಗ್ಗೆ ಅರಿವು ಮೂಡಿಸುತ್ತಿರುವ ಕಾಫಿನಾಡಿನ ಅಧಿಕಾರಿಗಳು : ಒಂದು ದಿನದಲ್ಲಿ 10 ಸಾವಿರ ದಂಡ

ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅಧಿಕಾರಿಗಳು

ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅಧಿಕಾರಿಗಳು

ನಗರಸಭೆಯ ಅಧಿಕಾರಿಗಳನ್ನೊಳಗೊಂಡ ಒಟ್ಟು ಐದು ತಂಡಗಳು ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಫೀಲ್ಡ್​​ನಲ್ಲಿ ಇರುತ್ತಾರೆ. ಮಧ್ಯಾಹ್ನ ಎರಡು ಗಂಟೆವರೆಗೂ ಮಾಸ್ಕ್ ಹಾಕದ ಜನ ಸಾಮಾನ್ಯರಿಗೆ ಮಧ್ಯಾಹ್ನ 2 ಗಂಟೆವರೆಗೆ ದಂಡ ಹಾಕುತ್ತಾರೆ.

  • Share this:

ಚಿಕ್ಕಮಗಳೂರು(ಅಕ್ಟೋಬರ್. 02): ಮಾಸ್ಕ್ ಹಾಕದವರಿಗೆ ಪ್ರತಿ ದಿನ ಎಂಟರಿಂದ ಹತ್ತು ಸಾವಿರ ರೂಪಾಯಿ ದಂಡ ಹಾಕಿ, ಜಾಗೃತಿ ಮೂಡಿಸಿದರು ಜನ ತಮ್ಮ ನಡೆಯನ್ನ ಬದಲಿಸಿಕೊಂಡಿಲ್ಲ ಎಂದು ಜಿಲ್ಲೆಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹಾಗೂ ಸಾವಿರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಷ್ಟಾದರೂ ಜನ ಮಾಸ್ಕ್ ಹಾಕುತ್ತಿಲ್ಲ. ಸಾಮಾಜಿಕ ಅಂತರ ಕೇಳುವುದು ಬೇಡವೆಂದು ಪ್ರತಿನಿತ್ಯ ಸರ್ಕಲ್​​​ಗಳಲ್ಲಿ ನಿಂತು ದಂಡ ಹಾಕುವ ಅಧಿಕಾರಿಗಳೇ ಅಸಮಾಧಾನ ಹೊರಹಾಕಿದ್ದಾರೆ. ದಿನ ದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಅಟ್ಟಹಾಸ ಕಂಡು ಸರ್ಕಾರ ಈಗ ಎರಡನೇ ಹಂತದಲ್ಲಿ ಮತ್ತಷ್ಟು ಕಠಿಣ ನಿಮಯ ಜಾರಿಗೆ ತಂದಿದೆ. ನಗರದಲ್ಲಿ ಮಾಸ್ಕ್ ಹಾಕದವರಿಗೆ 1 ಸಾವಿರ ದಂಡ. ಗ್ರಾಮೀಣ ಭಾಗದಲ್ಲಿ ಮಾಸ್ಕ್ ಹಾಕದವರಿಗೆ 500 ರೂಪಾಯಿ ಎಂದು ಆದೇಶ ಜಾರಿಗೆ ತಂದಿದೆ. ಆದರೆ, ಕೊರೋನಾ ಆರಂಭವಾದಾಗಿನಿಂದ ದಂಡ ಹಾಕುತ್ತಾ ಮೂಡಿಸಿದ ಜಾಗೃತಿ ಜನರಿಗೆ ನೆನಪೇ ಇಲ್ಲದಂತಾಗಿದೆ.


ಪೊಲೀಸರು, ಅಧಿಕಾರಿಗಳು ಕಂಡಾಗ ಮಾಸ್ಕ ಹಾಕುವುದು ಮತ್ತೆ ಜೇಬು, ಬ್ಯಾಗ್​​ನಲ್ಲಿ ಇಟ್ಟುಕೊಳ್ಳುವವರ ಸಂಖ್ಯೆಯೇ ಹೆಚ್ಚಿದೆ. ಹಾಗಾಗಿ, ನಿನ್ನೆ ಬೆಳ್ಳಂ ಬೆಳಗ್ಗೆಯೇ ಫೀಲ್ಡಿಗಿಳಿದ ನಗರಸಭೆ ಆಯುಕ್ತ ಬಸವರಾಜ್ ಐದು ತಂಡಗಳೊಂದಿಗೆ ನಗರದ ಪ್ರಮುಖ ವೃತ್ತಗಳಲ್ಲಿ ಮಾಸ್ಕ್ ಹಾಕದವರಿಗೆ ದಂಡ ಹಾಕಿದ್ದಾರೆ.


ಸರ್ಕಾರಿ ಬಸ್, ಆಟೋ, ಬೈಕ್, ಕಾರು ಯಾವುದನ್ನೂ ಬಿಡದೆ ಮಾಸ್ಕ್ ಇಲ್ಲದವರಿಗೆ ಯಾವುದೇ ರೀತಿಯ ಮುಲಾಜಿಲ್ಲದೆ ದಂಡ ಹಾಕಿದ್ದಾರೆ. ಸರ್ಕಾರದಿಂದ ನೂತನ ಆದೇಶ ಜಾರಿಯಾಗದೆ ಹಿನ್ನೆಲೆ ನೂರು ರೂಪಾಯಿ ದಂಡ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಬೇಜವಾಬ್ದಾರಿ ಮುಂದುವರೆಸಿದರೆ 1 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಬೆಳಗ್ಗೆ ಆರು ಗಂಟೆಗೆ ಫೀಲ್ಡಿಗಿಳಿದ ನಗರಸಭೆ ಅಧಿಕಾರಿಗಳು ನೈಟ್ ಡ್ರೆಸ್​​ ನಲ್ಲಿಯೇ ಜನಸಾಮಾನ್ಯರಂತೆ ನಿಂತು ಮಾಸ್ಕ್ ಹಾಕದವರಿಗೆ ದಂಡ ಹಾಕುತ್ತಾ, ಮತ್ತೊಮ್ಮೆ ಜಾಗೃತಿ ಮೂಡಿಸುತ್ತಿದ್ದಾರೆ. ಮತ್ತೊಮ್ಮೆ ಮಾಸ್ಕ್ ಇಲ್ಲದೆ ಸಿಕ್ಕಿದರೆ ಕ್ರಿಮಿನಲ್​​ ಕೇಸ್ ಹಾಕುವುದಾಗಿ ಹೇಳುತ್ತಿದ್ದಾರೆ.


ಇದನ್ನೂ ಓದಿ : ಖ್ಯಾತ ಕುಸ್ತಿಪಟು ರೇವುನಾಯಕ ಬೆಳಮಗಿಯನ್ನೇ ಹೈರಾಣಾಗಿಸಿದ ಕೊರೋನಾ - ಗದ್ಗದಿತರಾಗಿ ಕಣ್ಣೀರು ಹಾಕಿದ ಮಾಜಿ ಸಚಿವ


ನಗರಸಭೆಯ ಅಧಿಕಾರಿಗಳನ್ನೊಳಗೊಂಡ ಒಟ್ಟು ಐದು ತಂಡಗಳು ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಫೀಲ್ಡ್​​ನಲ್ಲಿ ಇರುತ್ತಾರೆ. ಮಧ್ಯಾಹ್ನ ಎರಡು ಗಂಟೆವರೆಗೂ ಮಾಸ್ಕ್ ಹಾಕದ ಜನ ಸಾಮಾನ್ಯರಿಗೆ ಮಧ್ಯಾಹ್ನ 2 ಗಂಟೆವರೆಗೆ ದಂಡ ಹಾಕುತ್ತಾರೆ. ತದನಂತರ ಆಫೀಸ್ ಕೆಲಸಕ್ಕೆ ಕಚೇರಿಗೆ ಹೋಗುತ್ತಾರೆ. ಜನರಿಗೆ ದಂಡ ಹಾಕುವುದರ ಜೊತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಬಗ್ಗೆ ಮತ್ತೊಮ್ಮೆ ಅರಿವು ಮೂಡಿಸುತ್ತಿದ್ದಾರೆ.


ಜನಸಾಮಾನ್ಯರಿಗೆ ಅವರ ಆರೋಗ್ಯದ ಮೇಲೆ ಯಾರಿಗೂ ಕಾಳಜಿಯೇ ಇಲ್ಲದಂತಾಗಿದೆ ಎಂದು ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ಅವರ ಆರೋಗ್ಯ ಅವರ ಕೈಯಲ್ಲಿ. ನಾಳೆ ಹೆಚ್ಚು ಕಡಿಮೆಯಾದರೆ ಅನುಭವಿಸುವವರು ಅವರೇ. ಆದರೆ, ನಮ್ಮ ಆರೋಗ್ಯದ ಜೊತೆ ಬೇರೆಯವರ ಆರೋಗ್ಯದ ದೃಷ್ಠಿಯಿಂದಲೂ ಮಾಸ್ಕ್ ಕಡ್ಡಾಯವಾಗಿದೆ. ಆದರೆ, ಮಾಸ್ಕ್ ಹಾಕಲ್ಲ. ಗುಂಪಾಗಿ ನಿಂತು ಅಲ್ಲಲ್ಲೇ ಉಗುಳುತ್ತಾ ಹರಟೆ ಹೊಡೆಯುತ್ತಾರೆ. ಇಂದು ಅಂತವರಿಗೂ ಗುಂಪಲ್ಲಿ ನಿಂತವರಿಗೂ, ಎಲ್ಲೆಂದರಲ್ಲಿ ಉಗುಳಿದವರಿಗೂ 200 ರೂಪಾಯ ದಂಡ ಹಾಕಿದ್ದಾರೆ.

Published by:G Hareeshkumar
First published: