ಮೈಸೂರು: ಪ್ರವಾಸೋಧ್ಯಮದ ಅಭಿವೃದ್ದಿಗಾಗಿ ಹೆಲಿಟೂರಿಸರಂ ಆರಂಭಿಸುವುದಾಗಿ ಹೇಳಿದ್ದ ನೂತನ ಪ್ರವಾಸೋಧ್ಯಮ ಸಚಿವ ಸಿ.ಪಿ.ಯೋಗೇಶ್ವರ್, ಮೈಸೂರು ರಾಜಮನೆತನದ ಖಾಸಗಿ ಜಾಗದಲ್ಲೆ ಹೆಲಿಟೂರಿಸಂ ಆರಂಭಿಸಲು ರಾಜಮನೆತನದವರ ಜೊತೆ ಮಾತುಕತೆ ನಡೆಸಿದ್ದಾರೆ. ನೂತನ ಸಚಿವರ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಮ್ಮ ಖಾಸಗಿ ಜಾಗದಲ್ಲಿ ಹೆಲಿಟೂರಿಸಂ ನಡೆಸಲು ನಮ್ಮ ಒಪ್ಪಿಗೆ ಇದೆ ಎಂದು ಹೇಳಿದ್ದಾರೆ. ಈ ಬೆನ್ನಲ್ಲೆ ಮೈಸೂರು ಬೆಂಗಳೂರು ನಡುವೆ ಹೆಲಿಟೂರಿಸಂ ಯೋಜನೆಗೆ ನೀಲಿ ನಕ್ಷೆ ಸಿದ್ದತೆಯಾಗುವ ನಿರೀಕ್ಷೆ ಇದೆ. ಹೌದು ಮೈಸೂರು ಬೆಂಗಳೂರು ನಡುವೆ ಶೀಘ್ರದಲ್ಲೆ ಹೆಲಿಟೂರಿಸಂ ಆರಂಭವಾಗುವ ಸಾಧ್ಯತೆ ಇದೆ. ಹೆಲಿಟೂಸಿರಂಗಾಗಿ ಲಲಿತಮಹಾಲ್ ಹೆಲಿಪ್ಯಾಡ್ ಬಳಕೆಗೆ ರಾಜವಂಶಸ್ಥರು ಅನುಮತಿ ನೀಡಿದ್ದು, ಪ್ರವಾಸೋಧ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮನವಿಗೆ ಸಮ್ಮತಿಸಿದ ಪ್ರಮೋದಾದೇವಿ ಒಡೆಯರ್, ಬೆಂಗಳೂರಿನಲ್ಲು ರಾಜವಂಶ್ಥರ ಖಾಸಗಿ ಜಾಗದಲ್ಲೆ ಹೆಲಿಟೂರಸಂ ಮಾಡಿ ಎಂದಿದ್ದಾರೆ.
ಈ ಹಿನ್ನೆಯಲ್ಲಿ ಬೆಂಗಳೂರು ಅರಮನೆ ಮೈದಾನ ಹಾಗೂ ಮೈಸೂರಿನ ಲಲಿತಮಹಾಲ್ ಹೆಲಿಪ್ಯಾಡ್‌ನಲ್ಲಿ ಹೆಲಿಟೂರಿಸಂ ಆರಂಭಿಸಲು ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಹೆಲಿಟೂರಿಸಂ ಯೋಜನೆಯ ರೂಪುರೇಷೆ ನಿರ್ಮಾಣ ಮಾಡಲಿರುವ ಪ್ರವಾಸೋಧ್ಯಮ ಇಲಾಖೆ, ರಾಜಮನೆತನದ ಖಾಸಗಿ ಜಾಗ ಬಳಕೆಗೆ ಮನವಿ ಕೋರಿ ಪ್ರಮೋದಾ ದೇವಿಯವರಿಗೆ ಅಧಿಕೃತ ಹೆಲಿಟೂರಿಸಂ ಪ್ರಪೋಸಲ್ ರವಾನೆ ಮಾಡಲಿದೆ.
ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಇನ್ನೂ ಕೆಲವೇ ದಿನದಲ್ಲಿ ಹೆಲಿಟೂರಿಸಂ ಬಗ್ಗೆ ಪ್ರಪೋಸಲ್ ಕಳುಹಿಸುವುದಾಗಿ ತಿಳಿಸಿರುವ ಸಿ.ಪಿ.ಯೋಗೇಶ್ವರ್, ದಸರೆಗೂ ಮುನ್ನವೇ ಹೆಲಿಟೂರಿಸಂ ಆರಂಭಿಸುವ ಉದ್ದೇಶ ಹೊಂದಿದ್ದಾರೆ.
ಲಲಿತಮಹಾಲ್ ಹೆಲಿಪ್ಯಾಡ್ ಜಾಗದ ಸಂಬಂಧ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿತ್ತು. ಮೈಸೂರು ರಾಜಮನೆತನ ಹಾಗೂ ಮೈಸೂರು ಜಿಲ್ಲಾಡಳಿತದ ನಡುವಿನ 20 ವರ್ಷದ ವಾದವಿವಾದ ಬಳಿಕ. 2020 ಡಿಸೆಂಬರ್‌ನಲ್ಲಿ ಸರ್ಕಾರ ಹಾಗೂ ರಾಜವಂಶಸ್ಥರ ನಡುವಿನ ಕೇಸ್‌ನಲ್ಲಿ ರಾಜವಂಶಸ್ಥರ ಪರವಾಗಿ ತೀರ್ಪು ಬಂದಿತ್ತು. ತೀರ್ಪು ಬಂದ ನಂತರ ಹೆಲಿಪ್ಯಾಡ್ ಮೈದಾನದಕ್ಕೆ ತಂತಿಬೇಲಿ ಹಾಕಿದ್ದ ರಾಜಮನೆತನ, ಯಾರೋಬ್ಬರಿಗೂ ಪ್ರವೇಶ ನೀಡದೆ ಜಾಗದಲ್ಲಿ ಭದ್ರತಾ ಸಿಬ್ಬಂದಿಯನನ್ನು ನೇಮಕ ಮಾಡಿತ್ತು. ಅದಕ್ಕಾಗಿ ಲಲಿತಮಹಾಲ್ ಹೆಲಿಪ್ಯಾಡ್ ಜಾಗವನ್ನ ಹೆಲಿಟೂರಿಸಂಗಾಗಿ ಬಳಕೆಗೆ ಈ ಸ್ವತಹ ರಾಜವಂಶಸ್ಥೆ ಅನುಮತಿ ನೀಡಿದ್ದು, ಬೆಂಗಳೂರಿನ ಅರಮನೆ ಮೈದಾನವನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ.
ದಸರಾ ಸಂದರ್ಭದಲ್ಲಿ 10 ದಿನಗಳ ಕಾಲ ನಡೆಯುತ್ತಿದ್ದ ಹೆಲಿಕ್ಯಾಪ್ಟರ್ ರೈಡ್‌ನಿಂದ ಈ ಯೋಜನೆಯ ಉದ್ದೇಶ ರೂಪುಗೊಂಡಿದ್ದು, ಮೈಸೂರಿನ ದೃಶ್ಯ ವೈಭವವನ್ನ ಹೆಲಿಕ್ಯಾಪ್ಟರ್‌ನಿಂದ ನೋಡುವುದು, ಹಾಗೂ ಮೈಸೂರು ಬೆಂಗಳೂರು ನಡುವೆ ಹೆಲಿಕ್ಯಾಪ್ಟರ್ ಸೇವೆಯನ್ನು ನೀಡುವ ಮೂಲಕ ಹೊಸ ಪ್ರವಾಸೋಧ್ಯಮದ ಹಾದಿ ತೆರೆಯುವುದೇ ಈ ಹೆಲಿಟೂರಿಸಂನ ಮೂಲ ಉದ್ದೇಶವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ