HOME » NEWS » District » GOVERNMENT APPOINTED RAMESH JARKIHOLI AS BELAGAVI DISTRICT IN CHARGE MINISTER RH

ರಮೇಶ್ ಜಾರಕಿಹೊಳಿಗೆ ಕೊನೆಗೂ ಸಿಕ್ಕಿದ ಬೆಳಗಾವಿ ಉಸ್ತುವಾರಿ; ಸಚಿವ ಕೆ.ಗೋಪಾಲಯ್ಯಗೆ ಹಾಸನ ಜವಾಬ್ದಾರಿ

ಹಾಗೆಯೇ, ಆಹಾರ ಸಚಿವ ಕೆ ಗೋಪಾಲಯ್ಯಗೆ ಹಾಸನ ಉಸ್ತುವಾರಿ ನೀಡಲಾಗಿದೆ. ಈ ಮೊದಲು ಹಾಸನ ಸಚಿವ ಮಾಧುಸ್ವಾಮಿ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಆ ಜವಾಬ್ದಾರಿಯನ್ನು ಗೋಪಾಲಯ್ಯಗೆ ನೀಡಲಾಗಿದೆ.

news18-kannada
Updated:June 2, 2020, 1:25 PM IST
ರಮೇಶ್ ಜಾರಕಿಹೊಳಿಗೆ ಕೊನೆಗೂ ಸಿಕ್ಕಿದ ಬೆಳಗಾವಿ ಉಸ್ತುವಾರಿ; ಸಚಿವ ಕೆ.ಗೋಪಾಲಯ್ಯಗೆ ಹಾಸನ ಜವಾಬ್ದಾರಿ
ಸಚಿವ ರಮೇಶ್​ ಜಾರಕಿಹೊಳಿ
  • Share this:
ಬೆಂಗಳೂರು: ಇಬ್ಬರು ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಬೆಳಗಾವಿ ಜಿಲ್ಲಾ ಉಸ್ತುವಾರಿ ಪಡೆದುಕೊಳ್ಳುವಲ್ಲಿ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಕೊನೆಗೂ ಯಶಸ್ವಿಯಾಗಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ.

ಈ ಮೊದಲು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಂಚಿಕೆ ವೇಳೆ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಉಸ್ತುವಾರಿ ಜವಾಬ್ದಾರಿ ಸಿಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಉಸ್ತುವಾರಿ ವಹಿಸಲಾಗಿತ್ತು. ಇದೀಗ ಬೆಳಗಾವಿ ಉಸ್ತುವಾರಿ ಪಡೆಯುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಅಂದುಕೊಂಡ ಖಾತೆ ಜೊತೆಗೆ ತನ್ನ ಜಿಲ್ಲೆಯ ಉಸ್ತುವಾರಿಯನ್ನು ಬೆಳಗಾವಿ ಸಾಹುಕಾರ್ ಪಡೆದುಕೊಂಡಿದ್ದಾರೆ.

ಈ ಮೊದಲು ಜಿಲ್ಲಾ ಉಸ್ತುವಾರಿ ನೇಮಕ ಮಾಡಿದಾಗ ಬೆಳಗಾವಿಯನ್ನು ಸಿಎಂ ಬಿಎಸ್​ವೈ ಅವರು ಜಗದೀಶ್ ಶೆಟ್ಟರ್ ಗೆ ನೀಡಿದ್ದರು. ಬೆಳಗಾವಿ ಉಸ್ತುವಾರಿ ಸ್ಥಾನದ ಮೇಲೆ ಈ ಮೊದಲು ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಲಕ್ಷ್ಮಣ್ ಸವದಿ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಪೈಪೋಟಿ ಉಂಟಾಗಿದ್ದರಿಂದ ಬೆಳಗಾವಿಯನ್ನು ಇವರಿಗೆ ಕೊಡದೆ ಸಚಿವ ಜಗದೀಶ್ ಶೆಟ್ಟರ್ ಗೆ ಸಿಎಂ ವಹಿಸಿದ್ದರು. ಇದೀಗ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಉಸ್ತುವಾರಿ ನೀಡಲಾಗಿದೆ.

ಸರ್ಕಾರ ಹೊರಡಿಸಿರುವ ಅಧಿಸೂಚನೆ


ಇದನ್ನು ಓದಿ: ಖಂಡಿತವಾಗಿಯೂ ನಾವು ನಮ್ಮ ಅಭಿವೃದ್ಧಿಯನ್ನು ಮರಳಿ ಸಾಧಿಸುತ್ತೇವೆ; ಪ್ರಧಾನಿ ಮೋದಿ ವಿಶ್ವಾಸ

ಹಾಗೆಯೇ, ಆಹಾರ ಸಚಿವ ಕೆ ಗೋಪಾಲಯ್ಯಗೆ ಹಾಸನ ಉಸ್ತುವಾರಿ ನೀಡಲಾಗಿದೆ. ಈ ಮೊದಲು ಹಾಸನ ಸಚಿವ ಮಾಧುಸ್ವಾಮಿ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಆ ಜವಾಬ್ದಾರಿಯನ್ನು ಗೋಪಾಲಯ್ಯಗೆ ನೀಡಲಾಗಿದೆ.
 
First published: June 2, 2020, 1:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories