ಕೊರೋನಾ ನಡುವೆಯೂ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಗುಡ್‌ನ್ಯೂಸ್; ಏನದು?

ಕೇಂದ್ರ ಸರ್ಕಾರದ MHRD ದೇಶದ ಐಐಟಿ, ಐಐಸಿಗಳ ಮಾಹಿತಿಯನ್ನ ಸಂಗ್ರಹಿಸಿ ಈ ರ್‍ಯಾಂಕ್ ನೀಡಲಾಗಿದ್ದು, ಇಡೀ ದೇಶದಲ್ಲೇ ಮೈಸೂರು ವಿವಿ 27ನೇ ಸ್ಥಾನದಲ್ಲಿದೆ. ಕಳೆದ ಹಲವು ವರ್ಷಗಳ ಬಳಿಕ ಮೈಸೂರು ವಿವಿಗೆ ಈ ಸ್ಥಾನ ಸಿಕ್ಕಿರೋದು ಹೆಮ್ಮೆಯ ಸಂಗತಿ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಮೈಸೂರು ವಿಶ್ವವಿದ್ಯಾಲಯ.

ಮೈಸೂರು ವಿಶ್ವವಿದ್ಯಾಲಯ.

  • Share this:
ಮೈಸೂರು; ಕೊರೋನಾ ನಡುವೆಯೂ ಮೈಸೂರು ವಿವಿಗೆ ಗುಡ್‌ನ್ಯೂಸ್ ಸಿಕ್ಕಿದ್ದು, ಕೇಂದ್ರ ಸರ್ಕಾರ MHRD ಅಡಿಯಲ್ಲಿ ಕೊಡಮಾಡುವ ನ್ಯಾಷನಲ್ ಇನ್ಸ್‌ಟಿಟ್ಯೂಷನಲ್ ರ್‍ಯಾಂಕಿಂಗ್ ಫ್ರೇಮ್ (NIRF) ಪ್ರಶಸ್ತಿಗೆ ಮೈಸೂರು ವಿಶ್ವ ವಿದ್ಯಾನಿಲಯ ಆಯ್ಕೆಯಾಗಿದೆ. ಕೇಂದ್ರ ಸರ್ಕಾರದ MHRD ದೇಶದ ಐಐಟಿ, ಐಐಸಿಗಳ ಮಾಹಿತಿಯನ್ನ ಸಂಗ್ರಹಿಸಿ ಈ ರ್‍ಯಾಂಕಿಂಗ್ ನೀಡಲಾಗಿದ್ದು, ದಶಕದ ಬಳಿಕ ಅತ್ಯುನ್ನತ ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾನಿಲಯ ಭಾಜನವಾಗಿದೆ.

ಮೈಸೂರು ವಿವಿ ಅಂದ್ರೆ ಸಾಕು ಇಡೀ ದೇಶವೇ ಒಂದು ಕ್ಷಣ ಇತ್ತ ತಿರುಗಿ ನೋಡುತ್ತೆ. ಸಾಧನೆಯ ಹಾದಿಯಲ್ಲಿ ಮುಂಚೂಣಿಯಲ್ಲಿರುವ ಮೈಸೂರು ವಿವಿ ಇದೀಗಾ ಮತ್ತೊಂದು ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಕೇಂದ್ರ ಸರ್ಕಾರ MHRD ಅಡಿಯಲ್ಲಿ ಕೊಡಮಾಡುವ ನ್ಯಾಷನಲ್ ಇನ್ಸ್ ಟಿಟ್ಯೂಷನಲ್ ರ್‍ಯಾಂಕಿಂಗ್ ಫ್ರೇಮ್ (NIRF) ಪ್ರಶಸ್ತಿಗೆ ಮೈಸೂರು ವಿಶ್ವ ವಿದ್ಯಾನಿಲಯ ಆಯ್ಕೆಯಾಗಿದೆ.

ಕೇಂದ್ರ ಸರ್ಕಾರದ MHRD ದೇಶದ ಐಐಟಿ, ಐಐಸಿಗಳ ಮಾಹಿತಿಯನ್ನ ಸಂಗ್ರಹಿಸಿ ಈ ರ್‍ಯಾಂಕ್ ನೀಡಲಾಗಿದ್ದು, ಇಡೀ ದೇಶದಲ್ಲೇ ಮೈಸೂರು ವಿವಿ 27ನೇ ಸ್ಥಾನದಲ್ಲಿದೆ. ಕಳೆದ ಹಲವು ವರ್ಷಗಳ ಬಳಿಕ ಮೈಸೂರು ವಿವಿಗೆ ಈ ಸ್ಥಾನ ಸಿಕ್ಕಿರೋದು ಹೆಮ್ಮೆಯ ಸಂಗತಿ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಕಳೆದ ಬಾರಿ ಮೈಸೂರು ವಿವಿ 54ನೇ ರ‌್ಯಾಂಕ್ ಬಂದಿತ್ತು. ಈ ಬಾರಿ 27ನೇ ರ‌್ಯಾಂಕ್ ಬಂದಿರುವುದು ನಿಜವಾದ ಗಣನೀಯ ಪ್ರಮಾಣದ ಸಾಧನೆಯಾಗಿದೆ. ಇದೇ ವರ್ಷ ನ್ಯಾಕ್ ಗೆ ಮೈಸೂರು ವಿವಿ ಹೋಗಲಿದ್ದು, ಇದು ಮೈಸೂರು ವಿವಿ ನ್ಯಾಕ್ ನಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗಲಿದೆ. ಇದಕ್ಕೆಲ್ಲ ಕಾರಣಕರ್ತರಾದ ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಅಂತಾರೆ ಕುಲಪತಿಗಳು.

ಇದನ್ನೂ ಓದಿ : ಕಳಪೆ ಪಡಿತರ ಸರಬರಾಜು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ: ಕೆ.ಗೋಪಾಲಯ್ಯ

ಒಟ್ಟಾರೆ ಕೊರೋನಾ ಕೊರೋನಾ ಎಂಬ ಆತಂಕದ ಮಧ್ಯೆ ಮೈಸೂರು ವಿವಿಗೆ ದೇಶದ ಪ್ರತಿಷ್ಠಿತ ರ್ಯಾಂಕ್ ಸಿಕ್ಕಿದ್ದು ಇದು ಮುಂದೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಸಹಕಾರಿಯಾಗಿದೆ ಎಂದರೆ ತಪ್ಪಾಗಲಾರದು.
First published: