Crime News: ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನ ನುಂಗಿ ಸಿಕ್ಕಿಬಿದ್ದು ಎಡವಟ್ಟು ಮಾಡಿಕೊಂಡ ಕಳ್ಳ!

ನುಂಗಿದ್ದ ಚಿನ್ನದಲ್ಲಿ 25ಕ್ಕೂ ಹೆಚ್ಚು ಉಂಗುರ ಇದ್ದು, ಕಿವಿಯ ಆಭರಣವೂ ಕಂಡು ಬಂದಿದೆ. ಎಲ್ಲಾ ಚಿನ್ನಗಳನ್ನು ಪ್ಲಾಸ್ಟಿಕ್ ನಲ್ಲಿ ಹೊದಿಸಿ ನುಂಗಿದ್ದ ಚಿನ್ನವನ್ನು ವೈದ್ಯರು ಹೊರತೆಗೆದಿದ್ದಾರೆ ಎಂದು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಖುಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ.

ಕಳ್ಳನ ಹೊಟ್ಟೆಯಿಂದ ತೆಗೆದ ಚಿನ್ನಗಳು.

ಕಳ್ಳನ ಹೊಟ್ಟೆಯಿಂದ ತೆಗೆದ ಚಿನ್ನಗಳು.

  • Share this:
ದಕ್ಷಿಣ ಕನ್ನಡ (ಮೇ 31); ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಲು ಹಲವು ರೀತಿಯ ಪ್ರಯತ್ನ ಪಡುತ್ತಾರೆ. ಇಲ್ಲೊಬ್ಬ ಚಾಲಾಕಿ ಕಳ್ಳ  ಪೋಲೀಸರ ಕೈಗೆ ಸಿಕ್ಕಿಬಿದ್ದರೂ, ಕಾನೂನಿನ ಶಿಕ್ಷೆಯಿಂದ ಪಾರಾಗಲು ಕದ್ದ ಚಿನ್ನವನ್ನು ಐಸ್‌ಕ್ರೀಂ ಜೊತೆ ತಿಂದು ಸಿಕ್ಕಿ ಬಿದ್ದಿದ್ದಾನೆ. ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಈ ಖತರ್ನಾಕ್ ಕೃತ್ಯ ಬಯಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ಪೋಲೀಸರು ಮೇ 29 ರಂದು ಅಂತರ್ ರಾಜ್ಯ ಕಳ್ಳರಿಬ್ಬರನ್ನು ಬಂಧಿಸಿದ್ದರು. ಬಂಧನದ ವೇಳೆ ಈ ಕಳ್ಳರು ಇತ್ತೀಚೆಗೆ ಪುತ್ತೂರು ಹಾಗೂ ಸುಳ್ಯದಲ್ಲಿ ನಡೆದ ಸರಣಿ ಕಳ್ಳತನದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದರು. ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಅಂಬಳೂರಿನ ಶಿಬು ಮತ್ತು ತಂಗಚ್ಚನ್ ಬಂಧಿತ ಕಳ್ಳರು. ಈತನಲ್ಲಿ ಶಿಬು ಇದೀಗ ಕಳ್ಳತನದ ಜೊತೆಗೆ ಇನ್ನೊಂದು ವಿಚಾರದಲ್ಲಿ ಚರ್ಚೆಯಲ್ಲಿದ್ದಾನೆ. 

ಹೌದು ಈತ  ಅತೀ ಬುದ್ದಿವಂತ ಕಳ್ಳ ಎನ್ನುವುದನ್ನು ತೋರಿಸಲು ಹೋಗಿ ಸಂಕಷ್ಟಕ್ಕೆ ಬಿದ್ದಿದ್ದಾನೆ. ಮಾರ್ಚ್ 31 ರ ರಾತ್ರಿ ಸುಳ್ಯ ಹಳೆ ಬಸ್‌ ನಿಲ್ದಾಣದ ಬಳಿ ಇರುವ ಮೋಹನ ಜ್ಯುವೆಲ್ಲರಿ ಮಾರ್ಟ್‌ನಲ್ಲಿ ಹಾಗೂ ಪುತ್ತೂರಿನ ಶ್ರೀಧರ್ ಭಟ್ ಜ್ಯುವೆಲ್ಲರಿ ಸೇರಿದಂತೆ ಹಲವೆಡೆ ಸರಣಿ  ಕಳ್ಳತನ ನಡೆದಿತ್ತು. ಏಳೂವರೆ ಲಕ್ಷ ಮೌಲ್ಯದ 180 ಗ್ರಾಂ ಚಿನ್ನ ಹಾಗೂ 50 ಸಾವಿರ ನಗದು ಸಹಿತ ಕಳ್ಳರು ದೋಚಿದ್ದರು. ಪ್ರಕರಣ ಸಂಬಂಧ ಸುಳ್ಯ ಪೊಲೀಸರು ಕೇರಳದ ತಂಗಚ್ಚ@ಮ್ಯಾಥ್ಯೂ ಮತ್ತು ಶಿಬು ವನ್ನು ಬಂದಿಸಿದ್ದರು.

ಬಂಧನದ ಸಂದರ್ಭ ತನ್ನ ಬಳಿಯಿದ್ದ ಚಿನ್ನದಲ್ಲಿ 35 ಗ್ರಾಂ ಚಿನ್ನವನ್ನು ಶಿಬು ನುಂಗಿದ್ದಾನೆ. ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಿಸಿ ಎಕ್ಸ್ ರೇ ಮಾಡಿದ ಸಂದರ್ಭ ಚಿನ್ನ ನುಂಗಿರುವುದು ಬೆಳಕಿಗೆ ಬಂದಿದೆ.  ಪೋಲೀಸರ ಕೈಗೆ ಸಿಕ್ಕಿ ಬಿದ್ದ ಕಳ್ಳನಿಂದ ಚಿನ್ನಾಭರಣ ರಿಕವರಿ ಮಾಡಿದರಷ್ಟೇ ಕಾನೂನಿನ ಕುಣಿಕೆಗೆ ಬೀಳುವುದು ಸಲೀಸಾಗುತ್ತದೆ ಎಂದು ಅರಿತ ಈ ಕಳ್ಳ ತನ್ನ ಬಳಿಯಿದ್ದ ಚಿನ್ನವನ್ನು ನುಂಗುವ ಮೂಲಕ ಪೋಲೀಸರಿಗೆ ತನ್ನ ಬಳಿ ಚಿನ್ನ ಸಿಗದಂತೆ ನೋಡಿಕೊಳ್ಳುವ ಪ್ಲಾನ್ ಮಾಡಿದ್ದ.

ಇದನ್ನೂ ಓದಿ: ನಮ್ಮ ಕಣ್ಣು ಮುಚ್ಚಿಸಿ, ನಮ್ಮ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ; ಗೌತಮ್ ಗಂಭೀರ್​ಗೆ ದೆಹಲಿ ಹೈಕೋರ್ಟ್​ ಛೀಮಾರಿ

ಆದರೆ ಕಳ್ಳನ ದುರಾದೃಷ್ಟ ಚಿನ್ನ ನುಂಗಿದ ಕಳ್ಳ ಶಿಬುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ ಪೋಲೀಸರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಒಂದು ವೇಳೆ ಪೋಲೀಸರು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸದೇ ಇರುತ್ತಿದ್ದಲ್ಲಿ,  ಕಳ್ಳ ಶಿಬುವಿನ  ಪ್ರಾಣಕ್ಕೂ ಕುತ್ತಾಗುವ ಸಾಧ್ಯತೆಯ ಜೊತೆಗೆ ಪೋಲೀಸರಿಗೂ ಭಾರೀ ಕಂಟಕವಾಗುತ್ತಿತ್ತು.

ಪ್ರಾರಂಭದಲ್ಲಿ 147 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆ ಬಳಿಕ ಶಿಬು ಆರೋಗ್ಯದಲ್ಲಿ ಏರುಪೇರು ಆಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಎಕ್ಸ್ ರೇ ಮಾಡಿದ ಸಂದರ್ಭ ಹೊಟ್ಟೆಯಲ್ಲಿ ಆಭರಣ ಪತ್ತೆಯಾಗಿದೆ. ಹೀಗಾಗಿ ವೈದ್ಯರು ಆಪರೇಷನ್ ನಡೆಸಿ ಹೊಟ್ಟೆಯಿಂದ 35 ಗ್ರಾಂ ಚಿನ್ನವನ್ನು ಹೊರ ತೆಗೆದಿದ್ದಾರೆ.

ಇದನ್ನೂ ಓದಿ: Rahul Gandhi: ಜನತೆಗೆ ಲಸಿಕೆ ಕೊಡುವಲ್ಲಿ ಮೋದಿ ಸರ್ಕಾರದ ಸೋಲು ಭಾರತ ಮಾತೆಯ ಎದೆಗೆ ಇರಿದಂತೆ: ರಾಹುಲ್ ಗಾಂಧಿ ​​

ನುಂಗಿದ್ದ ಚಿನ್ನದಲ್ಲಿ 25ಕ್ಕೂ ಹೆಚ್ಚು ಉಂಗುರ ಇದ್ದು, ಕಿವಿಯ ಆಭರಣವೂ ಕಂಡು ಬಂದಿದೆ. ಎಲ್ಲಾ ಚಿನ್ನಗಳನ್ನು ಪ್ಲಾಸ್ಟಿಕ್ ನಲ್ಲಿ ಹೊದಿಸಿ ನುಂಗಿದ್ದ ಚಿನ್ನವನ್ನು ವೈದ್ಯರು ಹೊರತೆಗೆದಿದ್ದಾರೆ ಎಂದು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಖುಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ.

ಬಂಧನದ ಸಂದರ್ಭ ಪೊಲೀಸರಿಂದ ಮರೆಮಾಚುವುದಕ್ಕೆ ಶಿಬು ಆಭರಣ ನುಂಗಿದ್ದ ಎಂದು ವಿಚಾರಣೆ ಸಂದರ್ಭ ಗೊತ್ತಾಗಿದೆ. ಒಟ್ಟಿನಲ್ಲಿ ಆರೋಪಿ ಶಿಬು ಘನಂದಾರಿ ಕೆಲಸ ಮಾಡಿ, ಆಭರಣ ನುಂಗಿ ತನ್ನ ಆರೋಗ್ಯಕ್ಕೆ ಆಪತ್ತು ತಂದುಕೊಂಡಿದ್ದ. ಸದ್ಯ ಜೀವಾಪಾಯದಿಂದ ಶಿಬು ಪಾರಾಗಿದ್ದರು, ನ್ಯಾಯದ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
Published by:MAshok Kumar
First published: