HOME » NEWS » District » GOLD THEFT LADY ARREST IN BANGLORE KMTV MAK

Crime News: ಚಿನ್ನಾಭರಣ ಕದ್ದು ಕಾರು ಕೊಂಡುಕೊಂಡ ಮಹಿಳೆಯ ಬಂಧನ

ಈ ಸಂಬಂಧ 3.10 ಲಕ್ಷ ಮೌಲ್ಯದ 52 ಗ್ರಾಂ ಚಿನ್ನದ ಆಭರಣಗಳು ಹಾಗೂ ಓಮ್ನಿ ಕಾರನ್ನ ಆರ್ ಆರ್ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

news18-kannada
Updated:March 18, 2021, 7:20 AM IST
Crime News: ಚಿನ್ನಾಭರಣ ಕದ್ದು ಕಾರು ಕೊಂಡುಕೊಂಡ ಮಹಿಳೆಯ ಬಂಧನ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕದ್ದ ಮಹಿಳೆಯನ್ನ ರಾಜ ರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಆರ್ ಆರ್ ನಗರದ ಹಲಗೇವಡೇರಹಳ್ಳಿ ನಿವಾಸಿ 26 ವರ್ಷದ ಮಹಿಳೆ ಯನ್ನ ಪೊಲೀಸರು ಬಂಧಿಸಿದ್ದಾರೆ. ಈಕೆ ಆರ್ ಆರ್ ನಗರದ ಮನೆಯೊಂದರಲ್ಲಿ ಮನೆ ಕೆಲಸ ಮಾಡುತ್ತಿದ್ದರಂತೆ. ಈ ನಡುವೆ ಮನೆಯಲ್ಲಿದ್ದ ಚಿನ್ನದ ಆಭರಣಗಳನ್ನ ಕಳವು ಮಾಡಿ ಎಸ್ಕೇಪ್ ಆಗಿದ್ರಂತೆ. ಈ ಬಗ್ಗೆ ಮನೆ ಮಾಲೀಕರು ರಾಜ ರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರಂತೆ. ದೂರು ದಾಖಲಿಸಿದ ಆರ್ ಆರ್ ನಗರ ಪೊಲೀಸರು ಮನೆ ಕೆಲಸ ಮಾಡುತ್ತಿದ್ದ ಮಹಿಳೆಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಮನೆ ಕಳ್ಳತನ ಮಾಡಿದ ಬಾಯ್ಬಿಟ್ಟಿದ್ದಾರೆ. 

2020 ರ ಸೆಪ್ಟೆಂಬರ್ ನಲ್ಲಿ ನಡೆದ ಕಳ್ಳತನದ ಬಗ್ಗೆ ಆರೋಪಿ ಇದೀಗ ಬಾಯ್ಬಿಟ್ಟಿದ್ದು ಸುಮಾರು ಆರು ತಿಂಗಳ ಬಳಿಕ ಕಳ್ಳತನ ಹೊರ ಬಂದಿದೆ. ಇನ್ನೂ ಆರೋಪಿ ಮಹಿಳೆ ತಾನು ಕಳ್ಳತನ ಮಾಡಿದ ಚಿನ್ನದ ಆಭರಣಗಳನ್ನ ಮಾರಾಟ ಮಾಡಿದ್ದಳಂತೆ. ಅದರಲ್ಲಿ ಬಂದ ಹಣದಿಂದ ಒಂದು ಓಮ್ನಿ ಕಾರನ್ನ ಖರೀದಿ ಮಾಡಿದ್ದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಸಂಬಂಧ 3.10 ಲಕ್ಷ ಮೌಲ್ಯದ 52 ಗ್ರಾಂ ಚಿನ್ನದ ಆಭರಣಗಳು ಹಾಗೂ ಓಮ್ನಿ ಕಾರನ್ನ ಆರ್ ಆರ್ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯೊಬ್ಬನನ್ನ ಆರ್ ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಆರ್ ಆರ್ ನಗರದ ಪಟ್ಟಣಗೆರೆ ನಿವಾಸಿ 21 ವರ್ಷದ ವೇಣುಕುಮಾರ್ ಬಂಧಿತ ಆರೋಪಿ. ವೇಣುಕುಮಾರ್ ಆರ್ ಆರ್ ನಗರದ ಕಂಪ್ಯೂಟರ್ ಸೇಲ್ಸ್ ಆಂಡ್ ಸರ್ವೀಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದನಂತೆ. ದೂರುದಾರರ ಕಚೇರಿಯಲ್ಲಿ ಹೊಸ ಲ್ಯಾಪ್ ಟಾಪ್, ಕಂಪ್ಯೂಟರ್, ಡೆಸ್ಕ್‌ಟಾಪ್ ಗಳ ಸೇಲ್ಸ್ ಸರ್ವರ್ ಎಎಂಸಿ, ಫೀಲ್ಡ್ ಸರ್ವೀಸ್ ಮಾಡುತ್ತಿದ್ರಂತೆ. ಸೇಲ್ಸ್ ಆಂಡ್ ಸರ್ವೀಸ್ ಕಚೇರಿಯನ್ನ ಬಿಇಎಂಎಲ್ ಲೇಔಟ್ ನಿಂದ ಆರ್ ಆರ್ ನಗರಕ್ಕೆ ಶಿಫ್ಟ್ ಮಾಡಲು ಕಳೆದ ಡಿಸೆಂಬರ್ ಮತ್ತು ಜನವರಿಯಲ್ಲಿ ನಿರ್ಧರಿಸಿದ್ರಂತೆ.

ಇದನ್ನೂ ಓದಿ: ಪಕ್ಷದ ನೋಟಿಸ್‌ಗೆ ಉತ್ತರ ನೀಡಿದ ತನ್ವೀರ್ ಆಪ್ತ ಅಬ್ದುಲ್‌ ಖಾದರ್​: ಮೈಸೂರಿನ ಕೈ ಪಕ್ಷದ ಮುಂದಿನ ನಡೆ ಏನು?

ಕಚೇರಿ ಶಿಫ್ಟ್ ಮಾಡುವ ವೇಳೆ ಅಲ್ಲಿದ್ದ ಎಲ್ಲಾ ವಸ್ತುಗಳನ್ನ ಇನ್ವೆಂಟರಿ ಮಾಡಿ ನೋಡುವಾಗ ಬೇರೆ ಬೇರೆ ಕಂಪನಿಯ ಸುಮಾರು 25 ಲಕ್ಷ ಬೆಲೆ ಬಾಳುವ ಲ್ಯಾಪ್ ಟಾಪ್, ಗ್ರಾಫಿಕ್ ಕಾರ್ಡ್ ಗಳು, ವರ್ಕ್ ಸ್ಟೇಷನ್ಸ್, ಎಲ್ ಸಿ ಡಿ ಮಾನಿಟರ್ಸ್, ಡೆಸ್ಕ್ ಟಾಪ್ ಗಳು, ಸಿಪಿಯುಗಳು ಹಾಗೂ ಇತರೆ ಕಂಪ್ಯೂಟರ್ ಬಿಡಿ ಭಾಗಗಳು ಕಳುವಾಗಿರುವುದು ಪತ್ತೆಯಾಗಿದೆ. ಈ ವೇಳೆ ಕಚೇರಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ವೇಣುಕುಮಾರ್ ಮೇಲೆ ಸಂಶಯ ಬಂದಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಕಚೇರಿ ಮಾಲೀಕರು ದೂರು ನೀಡಿದ್ದು, ಪೊಲೀಸರು ವೇಣುಕುಮಾರ್ ವಿಚಾರಣೆ ನಡೆಸಿದ ವೇಳೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
Youtube Video

ಇನ್ನೂ ಆರೋಪಿ ವೇಣುಕುಮಾರ್ ಸುಮಾರು ಆರು ವರ್ಷಗಳಿಂದ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದನಂತೆ. ಸದ್ಯ ಆರೋಪಿ ವೇಣುಕುಮಾರ್ ನನ್ನ ಆರ್ ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 25 ಲಕ್ಷ ಬೆಲೆ ಬಾಳುವ ಮಾಲನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. 21 ಲ್ಯಾಪ್ ಟಾಪ್ ಗಳು, 21 ಮಾನಿಟರ್ ಗಳು, 71 ರ್ಯಾಮ್ ಗಳು, 2 ಸರ್ವರ್ ಗಳು, 43 ಹಾರ್ಡ್ ಡಿಸ್ಕ್ ಗಳು, 4 ಸಿಪಿಯುಗಳು, 18 ಕೀ ಬೋರ್ಡ್ ಗಳು, 21 ಪ್ರೊಸೆಸರ್ ಗಳು, 12 ಮದರ್ ಬೋರ್ಡ್ ಗಳು, 4 ಗ್ರಾಫಿಕ್ ಕಾರ್ಡ್ ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಸದ್ಯ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Published by: MAshok Kumar
First published: March 18, 2021, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories