ಕಡಲ ಕೊರೆತಕ್ಕೆ ಸೌಂದರ್ಯ ಕಳೆದುಕೊಂಡ ಗೋಕರ್ಣ ಮುಖ್ಯ ಕಡಲತೀರ; ಅಬ್ಬರದ ಅಲೆಗಳಿಗೆ ತೀರದ ಜನ ಕಂಗಾಲು

ಪ್ರವಾಸಿಗರ ಸ್ವರ್ಗ ಎಂಬ ಪ್ರಸಿದ್ದಿ ಜತೆಗೆ ವಿವಿಧ ಧಾರ್ಮಿಕ ಕಾರ್ಯಗಳು ಕೂಡಾ ಕಡಲತೀರದ ಜಾಗದಲ್ಲಿ ನಡೆಯುತ್ತವೆ. ಆದರೆ ಇಲ್ಲಿ ಕಡಲ ಕೊರೆತಕ್ಕೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ. ಮಳೆಗಾಲ ಬಂತು ಅಂದರೆ ಸಾಕು ಇಲ್ಲಿನ ಜನರು ಜೀವ ಕೈಯಲ್ಲಿ ಹಿಡಿದು ಜೀವನ ಮಾಡಬೇಕಾದ ಪರಿಸ್ಥಿತಿ ಇದೆ.

ಸಮುದ್ರದ ಭಾರಿ ಅಲೆಗಳಿಂದ ಉಂಟಾಗಿರುವ ಭೂ ಕೊರೆತ.

ಸಮುದ್ರದ ಭಾರಿ ಅಲೆಗಳಿಂದ ಉಂಟಾಗಿರುವ ಭೂ ಕೊರೆತ.

  • Share this:
ಕಾರವಾರ; ಪ್ರಕೃತಿಯೇ ಹಾಗೆ ಯಾವಾಗ ಬೇಕಿದರೂ ಮುನಿಸಿಕೊಳ್ಳತ್ತದೆ. ಒಮ್ಮೆ ಮುನಿಸಿಕೊಂಡರೆ ನೇರವಾಗಿ ಅದರ ಪರಿಣಾಮ ಬಿರುವುದು ಮಾನವ ಕುಲದ ಮೇಲೆ. ತನ್ನ ಸೌಂದರ್ಯದಿಂದ  ಕಣ್ಮನ ಸೆಳೆಯುವ ಪ್ರಕೃತಿ ಒಮ್ಮೊಮ್ಮೆ ಭಯಾಂಕರವಾಗಿ ಕಾಡುವುದು ಇದೆ. ಪ್ರಕೃತಿಯಲ್ಲಾದ ಏರುಪೇರಿಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರ ಈಗ ಸೌಂದರ್ಯ ಕಳೆದುಕೊಂಡಿದೆ.  ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕಡಲ ತೀರದಲ್ಲಿ ಕೊರೆತ ಉಂಟಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಮುದ್ರದ ರಭಸದ ಅಲೆಗಳಿಗೆ ಜನರ ಜೀವನ ಅಸ್ತವ್ಯಸ್ತವಾಗಿದೆ. 

ದಕ್ಷಿಣ ಕಾಶಿ ಎಂದು ಪ್ರಸಿದ್ದಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಧಾರ್ಮಿಕ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಕೂಡಾ ಹೌದು.ಇಲ್ಲಿನ ಪ್ರಕೃತಿ ಸೌದರ್ಯದ ಜತೆ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಗೋಕರ್ಣ ಮುಖ್ಯ ಕಡಲತೀರ ಈಗ ಭಾರೀ ಮಳೆಯ ಜತೆಗೆ ಕಡಲ ಅಬ್ಬರದಲ್ಲಿ ಸೌಂದರ್ಯ ಕಳೆದುಕೊಂಡಿದೆ. ಸಮುದ್ರ ತನ್ನೊಡಲೊಳಗಿದ್ದ ತ್ಯಾಜ್ಯವನ್ನು ತೀರಕ್ಕೆ ಎಸೆದು ಇನ್ನಷ್ಟು ಸಮಸ್ಯೆ ಉಂಟಾಗಿದೆ.

ಭಾರೀ ಮಳೆಯಲ್ಲಿ ಅಬ್ಬರದ ಆಳೆತ್ತರದ ಕಡಲ ಅಲೆಗಳು ಮೇಲೆದ್ದು ಈಗ ಆವಾಂತರ ಸೃಷ್ಟಿಸಿದೆ. ಕಡಲತೀರದ ಜಾಗ ಈಗ ಸಮುದ್ರವಾಗಿದೆ. ತೀರದಲ್ಲಿ ಇದ್ದ ಅಂಗಡಿ ಮುಗ್ಗಟ್ಟುಗಳನ್ನು ಸುರಕ್ಷತೆಯ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ನಿರಂತರ ಮಳೆ ಆಗುತ್ತಿರುವುದರಿಂದ ಕಡಲ ಅಬ್ಬರ ಜೋರಾಗಿದೆ. ಸಮುದ್ರ ತೀರದ ಮೇಲ್ಬಾಗದಲ್ಲಿ ಸುರಕ್ಷತೆಯ ಜಾಗದಲ್ಲಿ ಇದ್ದ ಅಂಗಡಿ ವ್ಯಾಪಾರಸ್ಥರಿಗೆ ಈಗಿನ ಅಬ್ಬರದ ಕಡಲ ಅಲೆಗಳು ಆತಂಕದ ಮನೆಗೆ ದೂಡಿದೆ.

ಸಮುದ್ರದ ಭಾರಿ ಅಲೆಗಳಿಂದ ಉಂಟಾಗಿರುವ ಭೂ ಕೊರೆತ.


ಇದನ್ನು ಓದಿ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಜಾಸ್ತಿಯಾದರೆ ಸಮುದ್ರ ದಂಡೆಯ ಜನರ ಜೀವನ ಅಸ್ತವ್ಯಸ್ತ; ಆಳೆತ್ತರದ ಅಲೆಗೆ ಬೆಚ್ಚಿಬಿದ್ದ ಜನತೆ

ಇನ್ನೂ ಈ ಕಡಲ ಕೊರೆತದ ಸಮಸ್ಯೆ ಇಂದು ನೆನ್ನೆಯದಲ್ಲ. ಕಳೆದ ಹತ್ತಾರು ವರ್ಷಗಳಿಂದ ಇದ್ದೆ ಇದೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ. ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕಡಲ ಅಲೆಗಳು ತೀರಕ್ಕೆ ಅಪ್ಪಳಿಸಿ ಇಂತಹ ಆವಾಂತರ ಸೃಷ್ಟಿಸಿದೆ. ದಿನಕ್ಕೆ ಸಾವಿರಾರು ಪ್ರವಾಸಿಗರು ಈ ಕಡಲ ತೀರಕ್ಕೆ ಆಗಮಿಸುತ್ತಾರೆ. ಪ್ರವಾಸಿಗರ ಸ್ವರ್ಗ ಎಂಬ ಪ್ರಸಿದ್ದಿ ಜತೆಗೆ ವಿವಿಧ ಧಾರ್ಮಿಕ ಕಾರ್ಯಗಳು ಕೂಡಾ ಕಡಲತೀರದ ಜಾಗದಲ್ಲಿ ನಡೆಯುತ್ತವೆ. ಆದರೆ ಇಲ್ಲಿ ಕಡಲ ಕೊರೆತಕ್ಕೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ. ಮಳೆಗಾಲ ಬಂತು ಅಂದರೆ ಸಾಕು ಇಲ್ಲಿನ ಜನರು ಜೀವ ಕೈಯಲ್ಲಿ ಹಿಡಿದು ಜೀವನ ಮಾಡಬೇಕಾದ ಪರಿಸ್ಥಿತಿ ಇದೆ.
Published by:HR Ramesh
First published: