• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಪ್ರಧಾನಿ ತೇಜೋವಧೆ ಮಾಡಲು ಹೋಗಿ ಭಾರತಕ್ಕೆ ಅಪಮಾನ; ಕಾಂಗ್ರೆಸ್ ನಾಯಕರ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ

ಪ್ರಧಾನಿ ತೇಜೋವಧೆ ಮಾಡಲು ಹೋಗಿ ಭಾರತಕ್ಕೆ ಅಪಮಾನ; ಕಾಂಗ್ರೆಸ್ ನಾಯಕರ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಪಾಲಿಕೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತಿತರ ಕೊರೋನಾ ವಾರಿಯರ್ಸ್​ಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. 3.60 ಲಕ್ಷ ಜನರಿಗೆ ಧಾರವಾಡ ಜಿಲ್ಲೆಯಲ್ಲಿ ವಿತರಿಸಲಾಗುತ್ತಿದೆ. ಕೊರೋನಾ ವಾರಿಯರ್ಸ್ ಜೊತೆಗೆ ತರಕಾರಿ ಮಾರುವ, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳಿಗೂ ಫುಡ್ ಕಿಟ್ ವಿತರಿಸಲಾಗುವುದು ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

ಮುಂದೆ ಓದಿ ...
  • Share this:

ಹುಬ್ಬಳ್ಳಿ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟೂಲ್ ಕಿಟ್ ವಿಚಾರಕ್ಕೆ ಕೇಂದ್ರ ಗಣಿ, ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಜೋಶಿ, ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಕೊರೋನಾ ವೈರಸ್ ಹುಟ್ಟಿದ್ದೇ ಚೀನಾದಲ್ಲಿ. ಆದರೆ ಕಾಂಗ್ರೆಸ್ ನಾಯಕರಾಗಲಿ, ಎಡಪಕ್ಷದವರಾಗಲಿ ಅದನ್ನು ಚೀನಾ ವೈರಸ್ ಎನ್ನಲಿಲ್ಲ. ಬದಲಿಗೆ ಮೋದಿ ವೈರಸ್ ಎಂದು ಬಿಂಬಿಸಲು ಹೊರಟಿದ್ದಾರೆ. ಪ್ರಧಾನಿ ಮೋದಿಯವರನ್ನು ತೇಜೋವಧೆ ಮಾಡೋ ಭರದಲ್ಲಿ ಕಾಂಗ್ರೆಸ್ ನಾಯಕರು ಭಾರತಕ್ಕೆ ಅಪಮಾನ ಮಾಡುತ್ತಿದ್ದಾರೆ. ಭಾರತದ ಮಾನ ಮರ್ಯಾದೆ ಹೋದರೂ ಚಿಂತೆಯಿಲ್ಲ, ಮೋದಿ ಅವರಿಗೆ ಡ್ಯಾಮೇಜ್ ಆದ್ರೆ ಸಾಕು ಅಂತಿದ್ದಾರೆ. ಕಾಂಗ್ರೆಸ್ ಈ ರೀತಿಯ ಕೀಳುಮಟ್ಟದ ರಾಜಕಾರಣ ಮಾಡಬಾರದು ಎಂದರು.


ಕೊರೋನಾವನ್ನು ಮೋದಿ ವೈರಸ್ ಅಂತ ಬಿಂಬಿಸೋ ಪ್ರಯತ್ನ ನಡೆದಿದೆ. ಇದು ಕಾಂಗ್ರೆಸ್ ಕ್ಷುಲ್ಲಕ ಮನೋಭಾವ ತೋರಿಸುತ್ತೆ. ಕಾಂಗ್ರೆಸ್ ದೇಶದಲ್ಲಿ ಯಾವ ಸ್ಥಿತಿಯಲ್ಲಿದೆ ಅನ್ನೋದನ್ನು ತಿಳಿದುಕೊಳ್ಳಬೇಕು. ಲೋಕಸಭೆ ಚಳಿಗಾಲದ ಅಧಿವೇಶನ ನಡೆದೇ ನಡೆಯುತ್ತೆ. ಇದನ್ನು ಸಂಸತ್ ನಲ್ಲಿಯೆ ಚರ್ಚಿಸಬಹುದಾಗಿತ್ತು. ಈಗ ಜನರ ಮನೋಭಾವ ಕುಗ್ಗಿಸೊ ಕೆಲಸ ಮಾಡಬಾರದಾಗಿತ್ತು. ದೇಶಕ್ಕೆ ಅಪಮಾನ ಮಾಡೋ ಕೆಲಸವನ್ನು ಕಾಂಗ್ರೆಸ್ ಮಾಡಬಾರದು ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.


ಪಿಎಂ ಕೇರ್ಸ್ ನಿಂದ ಖರೀದಿಸಿದ ವೆಂಟಿಲೇಟರ್ ಕಳಪೆಯಲ್ಲ


ಪಿಎಂ ಕೇರ್ಸ್ ನಿಂದ ಖರೀದಿಸಿರುವ ವೆಂಟಿಲೇಟರ್ ಕಳಪೆ ಎಂಬ ಆರೋಪಕ್ಕೆ ಸಚಿವ ಪ್ರಹ್ಲಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿಎಂ ಕೇರ್ಸ್ ನಿಂದ ಖರೀದಿಸಿದ ವೆಂಟಿಲೇಟರ್ ಗಳು ಬಂದು ಬಹಳ ದಿನವೇ ಆಗಿದೆ. ಪಿಎಂ ಕೇರ್ಸ್ ನಲ್ಲಿ 50 ಸಾವಿರ ವೆಂಟಿಲೇಟರ್ ಖರೀದಿಸಲಾಗಿದೆ. ಹೈ ಕ್ವಾಲಿಟಿ ವೆಂಟಿಲೇಟರ್ ಗಳನ್ನು ಪೂರೈಕೆ ಮಾಡಲಾಗಿದೆ. ಆದರೆ ಅದನ್ನು ಅಳವಡಿಸೋಕೆ, ಬಳಸಿಕೊಳ್ಳೋಕೆ ಬಂದಿಲ್ಲ ಎಂದರು.


ರಾಜ್ಯದಲ್ಲಿ ಮತ್ತು ಪಂಜಾಬ್ ನಲ್ಲಿ ಈ ರೀತಿಯಾಗಿದೆ. ಉಳಿದೆಡೆ ಪಿಎಂ ಕೇರ್ಸ್ ನಿಂದ ಖರೀದಿಸಿದ ವೆಂಟಿಲೇಟರ್ ಬಳಸಲಾಗ್ತಿದೆ. ಬಳಸೋಕೆ ಬರಲಾರದವರು ಅದು ಕಳಪೆ ಗುಣಮಟ್ಟದ್ದು ಎಂದು ದೂರೋದು ಸರಿಯಲ್ಲ. ಧಾರವಾಡ ಜಿಲ್ಲೆಗೆ ಮತ್ತಷ್ಟು ವೆಂಟಿಲೇಟರ್ ಪೂರೈಕೆ ಮಾಡಲಾಗ್ತಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚುವರಿ 50 ವೆಂಟಿಲೇಟರ್ ಕೊಡಲಾಗುತ್ತಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.


ಇದನ್ನು ಓದಿ: ಕಾಫಿನಾಡಲ್ಲೂ ಪತ್ತೆಯಾಯ್ತು ಬ್ಲ್ಯಾಕ್ ಫಂಗಸ್; ಕೊರೋನಾ ಚಿಕಿತ್ಸೆಯಲ್ಲಿರುವಾಗಲೇ ಹೊಸ ರೋಗ ಪತ್ತೆ!


ಕೊರೋನಾ ವಾರಿಯರ್ಸ್ ಗೆ ಕಿಟ್ ವಿತರಣೆ...


ಕೊರೋನಾ ವಾರಿಯರ್ಸ್ ಗಳಿಗೆ ಹುಬ್ಬಳ್ಳಿಯ ಸರ್ಕೀಟ್ ಹೌಸ್ ನಲ್ಲಿ  ಆಹಾರ ಸಾಮಗ್ರಿ ವಿತರಣೆ ಮಾಡಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಹಾರ ಕಿಟ್ ಗಳನ್ನು ವಿತರಿಸಿದರು. ಫುಡ್ ಬ್ಯಾಂಕಿಂಗ್ ನೆಟ್ ವರ್ಕ್ ಸಂಸ್ಥೆ ವತಿಯಿಂದ ಕೊರೋನಾ ವಾರಿಯರ್ಸ್ ಗೆ ಫುಡ್ ಕಿಟ್ ಗಳ ವಿತರಣೆ, ಪೌಷ್ಟಿಕ ಆಹಾರವನ್ನೊಳಗೊಂಡ ಫುಡ್ ಕಿಟ್ ಅನ್ನು ವಿತರಿಸಲಾಯಿತು.


ಪಾಲಿಕೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತಿತರ ಕೊರೋನಾ ವಾರಿಯರ್ಸ್​ಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. 3.60 ಲಕ್ಷ ಜನರಿಗೆ ಧಾರವಾಡ ಜಿಲ್ಲೆಯಲ್ಲಿ ವಿತರಿಸಲಾಗುತ್ತಿದೆ. ಕೊರೋನಾ ವಾರಿಯರ್ಸ್ ಜೊತೆಗೆ ತರಕಾರಿ ಮಾರುವ, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳಿಗೂ ಫುಡ್ ಕಿಟ್ ವಿತರಿಸಲಾಗುವುದು ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.


ವರದಿ - ಶಿವರಾಮ ಅಸುಂಡಿ

First published: